For Quick Alerts
ALLOW NOTIFICATIONS  
For Daily Alerts

ಧರ್ಮ ಮಾರ್ಗದ ಉಪದೇಶ ನೀಡುವ- ಭಗವದ್ಗೀತೆ

By Super
|

ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ಒಂದು ಮಹಾಗ್ರಂಥವಾಗಿದ್ದು ವಿಶ್ವದಲ್ಲಿ ಲಭ್ಯವಿರುವ ಕೆಲವೇ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ವಾಸ್ತವವಾಗಿ ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಈ ಗ್ರಂಥ.

ಯುದ್ಧದ ಸಮಯದಲ್ಲಿ ಅರ್ಜುನನಿಗೆ ಅತ್ಯಂತ ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು. ಏಕೆಂದರೆ ಎದುರಾಳಿಗಳು ಬೇರಾರೂ ಅಲ್ಲ, ತಮ್ಮದೇ ಸ್ವಂತ ಸಹೋದರರು. ಅವರಿಗೆ ಜೊತೆ ನೀಡುತ್ತಿರುವವರಾದರೂ ಯಾರು?

ಪಿತೃಸಮಾನರಾದ ಭೀಷ್ಮ, ಮಲತಮ್ಮನಾದ ಕರ್ಣ ಮೊದಲಾದವರು. ಈ ಪರಿಸ್ಥಿತಿಯಲ್ಲಿ ಎದೆಗುಂದಿದ ಅರ್ಜುನನಿಗೆ ಸ್ಥೈರ್ಯ ತುಂಬಲು ಸಾರಥಿಯಾಗಿದ್ದ ಕೃಷ್ಣ ಹಲವು ಪಾಠಗಳನ್ನು ಕಲಿಸುತ್ತಾನೆ.

ಈ ಮಾತುಗಳು ಸರ್ವಕಾಲಕ್ಕೂ ಸಲ್ಲುವ ವಾಣಿಗಳಾಗಿದ್ದು ಇವನ್ನು ಜೀವನದಲ್ಲಿ ಅಳವಡಿಸುವ ಮೂಲಕ ಅಂದು ಅರ್ಜುನ ಪಡೆದಿದ್ದ ಯಶಸ್ಸನ್ನು ಇಂದಿಗೂ ಯಾರೂ ಪಡೆಯಬಹುದು.

ಇವು ನಿಮ್ಮ ಒಳಗಿನ ನಿಮ್ಮನ್ನು ಎಚ್ಚರಿಸಿ ಪರಿಸ್ಥಿತಿಯನ್ನು ಎದುರಿಸಲು ಸಜ್ಜುಗೊಳಿಸುವ ಮೂಲಕ ನಿಮ್ಮನ್ನು ಗಟ್ಟಿಗೊಳಿಸುತ್ತದೆ. ಜೀವನದ ಎಲ್ಲಾ ಮಜಲುಗಳಲ್ಲಿ ಅಳವಡಿಸಬಹುದಾದ ಈ ವಾಕ್ಯಗಳಲ್ಲಿ ಪ್ರಮುಖವಾದ ಹತ್ತು ಉಪದೇಶಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ

ಈ ಜಗತ್ತಿನಲ್ಲಿ ಎಲ್ಲವೂ ನಶ್ವರ. ಅದರಲ್ಲೂ ನಿಮ್ಮ ದೇಹಕ್ಕೆ ಒಂದು ಆಯಸ್ಸು ಇದೆ. ಆದ್ದರಿಂದ ನಿಮ್ಮ ದೇಹವನ್ನು ನಿಮ್ಮ ಗುರುತಿಗಾಗಿ ಬಳಸಿಕೊಳ್ಳುವುದು ನಿಷ್ಪ್ರಯೋಜಕ. ನಿಮ್ಮ ಆತ್ಮದ ಹೊರತಾಗಿ ನಿಮ್ಮ ಎಲ್ಲವೂ ನಶ್ವರ. ಸತ್ತ ಬಳಿಕ ಈ ಜಗತ್ತಿನಲ್ಲಿ ಗಳಿಸಿದ್ದ ಏನನ್ನೂ ನಾವು ಕೊಂಡು ಹೋಗಲು ಸಾಧ್ಯವಿಲ್ಲ. ಯಾರನ್ನೂ ಜೊತೆಗೂ ಕರೆದೊಯ್ಯಲು ಸಾಧ್ಯವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ

ಆದ್ದರಿಂದ ಇಂದಲ್ಲ ನಾಳೆ ಗತಿಸಬಹುದಾದ ಯಾವುದೇ ವಸ್ತುವಿಗಾಗಿ ಹಂಬಲಿಸುವುದು ತರವಲ್ಲ. ಆತ್ಮಶುದ್ದಿ, ಉತ್ತಮ ಜೀವನ, ನಾಲ್ವರಿಗೆ ಉಪಯೋಗಕ್ಕೆ ಬರುವಂತೆ ಬದುಕುವುದು, ಇದ್ದಷ್ಟೂ ದಿನ ಆತ್ಮವಂಚನೆ ಮಾಡಿಕೊಳ್ಳದೇ ಸಂತೋಷವಾಗಿರುವುದು, ಜೀವನದ ಗುರಿಯನ್ನು ನಿಜವಾದ ಅರ್ಥದಲ್ಲಿ ಸಾಧಿಸುವುದೇ ಶ್ರೇಷ್ಠ ಎಂದು ಭಗವದ್ಗೀತೆ ತಿಳಿಸುತ್ತದೆ.

ಪಲಾಯನ ಮೂರ್ಖತನದ ಪರಮಾವಧಿಯಾಗಿದೆ

ಪಲಾಯನ ಮೂರ್ಖತನದ ಪರಮಾವಧಿಯಾಗಿದೆ

ಈ ಭೂಮಿಯ ಮೇಲೆ ಬಂದ ಪ್ರತಿ ಜೀವಿಗೂ ತನ್ನದೇ ಆದ ಜವಾಬ್ದಾರಿಗಳಿವೆ. ಅಂತೆಯೇ ಜೀವನದಲ್ಲಿ ಎದುರಾಗುವ ಸುಖದುಃಖಗಳನ್ನು ಸಮನಾಗಿ ಎದುರಿಸಬೇಕೆಂದು ಭಗವದ್ಗೀತೆ ತಿಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಲಾಯನ ಮೂರ್ಖತನದ ಪರಮಾವಧಿಯಾಗಿದೆ

ಪಲಾಯನ ಮೂರ್ಖತನದ ಪರಮಾವಧಿಯಾಗಿದೆ

ತನ್ನ ಜವಾಬ್ದಾರಿಗಳಿಂದ ಓಡಿ ಹೋಗುವವರನ್ನು ಹೇಡಿಗಳೆಂದು ಜರೆಯುವ ಮೂಲಕ ಜೀವನದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸುತ್ತದೆ.

 ಕರ್ಮದ ಬಗ್ಗೆ ಚಿಂತಿಸು ಕರ್ಮದ ಫಲ ದೇವರಿಗೆ ಬಿಡು

ಕರ್ಮದ ಬಗ್ಗೆ ಚಿಂತಿಸು ಕರ್ಮದ ಫಲ ದೇವರಿಗೆ ಬಿಡು

ನೀವು ಮಾಡುತ್ತಿರುವ ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮತ್ತು ಪೂರ್ಣವಾಗಿ ತೊಡಗಿಸಿಕೊಂಡು ನಿರ್ವಹಿಸುವುದನ್ನು ಭಗವದ್ಗೀತೆ ಬೋಧಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಕರ್ಮದ ಬಗ್ಗೆ ಚಿಂತಿಸು ಕರ್ಮದ ಫಲ ದೇವರಿಗೆ ಬಿಡು

ಕರ್ಮದ ಬಗ್ಗೆ ಚಿಂತಿಸು ಕರ್ಮದ ಫಲ ದೇವರಿಗೆ ಬಿಡು

ಇದರ ಫಲವೇನಾಗಬಹುದು ಎಂಬ ಬಗ್ಗೆ ಚಿಂತೆ ಮಾಡದೇ ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲವೇ ಬರುತ್ತದೆ ಎಂದು ತಿಳಿದು ನಿಮ್ಮ ಕೆಲಸವನ್ನು ಆದಷ್ಟು ಪರಿಪೂರ್ಣವಾಗಿ ನಿರ್ವಹಿಸಿ ಎಂಬ ಪಾಠ ಮಹತ್ವದ್ದಾಗಿದೆ.

ನಿಮ್ಮ ಆಕಾಂಕ್ಷೆಗಳನ್ನು ಹತ್ತಿಕ್ಕಿ

ನಿಮ್ಮ ಆಕಾಂಕ್ಷೆಗಳನ್ನು ಹತ್ತಿಕ್ಕಿ

ಆಸೆಗೆ ಮಿತಿಯಿಲ್ಲ. ಜೀವನದಲ್ಲಿ ಎಷ್ಟಿದ್ದರೂ ನಮಗೆ ಸಾಲದು. ಆದರೆ ನಿಮ್ಮ ಆಕಾಂಕ್ಷೆಗಳನ್ನು ಒಂದು ಮಿತಿಯೊಳಗಿರಿಸಿಕೊಳ್ಳಲು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಭಗವದ್ಗೀತೆ ಬೋಧಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಆಕಾಂಕ್ಷೆಗಳನ್ನು ಹತ್ತಿಕ್ಕಿ

ನಿಮ್ಮ ಆಕಾಂಕ್ಷೆಗಳನ್ನು ಹತ್ತಿಕ್ಕಿ

ಪ್ರಶಾಂತ ಮನಸ್ಸು ನಿಸರ್ಗವನ್ನು ಹೆಚ್ಚು ಸಮರ್ಥವಾಗಿ ಅರ್ಥೈಸಿಕೊಳ್ಳುತ್ತದೆ. ಆಸೆಗಳು ಮಿತಿಮೀರಿದಾಗ ಹತೋಟಿ ತಪ್ಪುವ ಮನಸ್ಸು ದುರಂತವನ್ನೇ ತರುತ್ತದೆ ಎನ್ನುತ್ತದೆ ಈ ಪಾಠ.

ನಿಮ್ಮ ವಿವೇಕವನ್ನು ನಿಮ್ಮ ಸ್ವಾರ್ಥ ಮುಳುಗಿಸುತ್ತದೆ

ನಿಮ್ಮ ವಿವೇಕವನ್ನು ನಿಮ್ಮ ಸ್ವಾರ್ಥ ಮುಳುಗಿಸುತ್ತದೆ

ಮನುಷ್ಯನ ವಿವೇಕವೇ ಒಂದು ದೊಡ್ಡ ಐಶ್ವರ್ಯವಾಗಿದೆ. ಸ್ವಾರ್ಥ ಮನೋಭಾವದ ಮನಸ್ಸು ಧೂಳು ಮಸುಕಿದ ಕನ್ನಡಿಯಂತಿದ್ದು ಅದರೊಳಗೆ ಏನೂ ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. ಸ್ವಾರ್ಥದ ಈ ಪದರವನ್ನು ನಿವಾರಿಸಿದಾದ ಜೀವನ ಸುಂದರವಾಗಿ ಕಾಣಿಸಿಕೊಳ್ಳುತ್ತದೆ.

ಯಾವುದರಲ್ಲಿಯೂ ಅತಿರೇಕ ಸಲ್ಲದು

ಯಾವುದರಲ್ಲಿಯೂ ಅತಿರೇಕ ಸಲ್ಲದು

ಜೀವನದಲ್ಲಿ ಸಿಗುವ ಯಾವುದೇ ವಸ್ತು ಅಥವಾ ಭೋಗವನ್ನು ಅತಿಯಾಗಿ ನೆಚ್ಚಿಕೊಳ್ಳುವ ಅತಿರೇಕ ಸಲ್ಲದು. ಯಾವುದೇ ವಿಷಯದಲ್ಲಿ ಅತಿ ಕಡಿಮೆ ಅಥವಾ ಅತಿಹೆಚ್ಚು ಬಯಕೆ ಹೊಂದದಿರಲು ಭಗವದ್ಗೀತೆ ತಿಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಯಾವುದರಲ್ಲಿಯೂ ಅತಿರೇಕ ಸಲ್ಲದು

ಯಾವುದರಲ್ಲಿಯೂ ಅತಿರೇಕ ಸಲ್ಲದು

ಉದಾಹರಣೆಗೆ ಊಟ, ನಿದ್ರೆ, ದೈಹಿಕ ಸಂತೃಪ್ತಿ, ಸವಲತ್ತುಗಳು, ಸೌಲಭ್ಯಗಳು ಮೊದಲಾದವುಗಳನ್ನು ನಿಮಗೆ ಅಗತ್ಯವಿದ್ದಷ್ಟು ಮಾತ್ರ ಪಡೆಯಲು ತಿಳಿಸುತ್ತದೆ. ಅತಿ ಹೆಚ್ಚಿನ ಅಥವಾ ಅತಿ ಕಡಿಮೆ ಪಡೆಯುವುದರಿಂದ ಜೀವನದ ಸಮತೋಲನ ತಪ್ಪಿ ನಿಸರ್ಗದಿಂದ ವಿಮುಖರಾದಂತಾಗುತ್ತದೆ.

ಕೋಪ ನಿಮ್ಮನ್ನು ದಾರಿತಪ್ಪಿಸಬಹುದು

ಕೋಪ ನಿಮ್ಮನ್ನು ದಾರಿತಪ್ಪಿಸಬಹುದು

ಅರಿಷಡ್ವರ್ಗಗಳಲ್ಲಿ ಒಂದಾಗ ಕೋಪವನ್ನು ನಿಗ್ರಹಿಸಲು ಭಗವದ್ಗೀತೆ ಒತ್ತು ನೀಡುತ್ತದೆ. ಕೋಪದ ಭರದಲ್ಲಿ ತಳೆದ ನಿರ್ಧಾರಗಳು ಬಹುತೇಕ ತಪ್ಪಾಗಿರುತ್ತವೆ.

ಕೋಪ ನಿಮ್ಮನ್ನು ದಾರಿತಪ್ಪಿಸಬಹುದು

ಕೋಪ ನಿಮ್ಮನ್ನು ದಾರಿತಪ್ಪಿಸಬಹುದು

ಕೋಪದಲ್ಲಿದ್ದಾಗ ಕಳೆದುಕೊಂಡ ವಿವೇಕ ಸೂಕ್ತ ತೀರ್ಮಾನ ಅಥವಾ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಹೋಗುತ್ತದೆ. ಜೀವನದಲ್ಲಿ ಯಶಸ್ವಿಯಾಗಿದ್ದ ವ್ಯಕ್ತಿ ಕೋಪದ ಒಂದು ಕ್ಷಣದ ತಪ್ಪು ನಿರ್ಧಾರದಿಂದ ಸಂಪೂರ್ಣವಾಗಿ ನೆಲಕಚ್ಚಲೂ ಬಹುದು.

ನಿಮ್ಮ ಭಗವಂತ ನಿಮ್ಮೊಳಗೇ ಇದ್ದಾನೆ

ನಿಮ್ಮ ಭಗವಂತ ನಿಮ್ಮೊಳಗೇ ಇದ್ದಾನೆ

ಭಗವಂತ ಎಲ್ಲೆಲ್ಲೂ ಇದ್ದಾನೆ, ಆದರೆ ನೀವು ಆರಾಧಿಸುವ ಭಗವಂತ ನಿಮ್ಮೊಳಗೇ ಇದ್ದಾನೆ. ಜಗತ್ತಿನ ಕಣಕಣಗಳಲ್ಲಿ, ಜೀವಂತ ಮತ್ತು ಜೀವವಿಲ್ಲದ ಪ್ರತಿ ವಸ್ತುವಿನಲ್ಲಿ ಭಗವಂತನಿದ್ದಾನೆ. ಜೀವನದಲ್ಲಿ ನಡೆಯುವ ಪ್ರತಿ ಕ್ರಿಯೆಯೂ ಭಗವಂತನ ಅಣತಿಯಂತೆಯೇ ನಡೆಯುತ್ತಿದೆ. ನಿಮ್ಮ ಹೃದಯದಲ್ಲಿಯೂ ಭಗವಂತನಿರುವುದರಿಂದ ನಿಮ್ಮ ಕರ್ಮ ನಿಜವಾದುದೇ ಆದರೆ ಅದರ ಫಲ ಸಿಕ್ಕೇ ಸಿಗುತ್ತದೆ. ಆದ್ದರಿಂದ ಭವಿಷ್ಯದ ಬಗ್ಗೆ ವ್ಯರ್ಥಚಿಂತನೆ ನಡೆಸಿ ಫಲವಿಲ್ಲ.

ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬೇಡಿ

ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡಬೇಡಿ

ಜಗತ್ತಿನಲ್ಲಿ ಲಕ್ಷಾಂತರ ಜನರು ಅಸುಖಿಗಳಾಗಿರಲು ಪ್ರಮುಖ ಕಾರಣ ಅವರ ಸಾಮರ್ಥ್ಯವನ್ನು ಅವರು ಅರಿಯದೇ ಇರುವುದು. ಭಗವದ್ಗೀತೆಯ ಪ್ರಕಾರ ತನ್ನ ಬಗ್ಗೆ ಅನುಮಾನವಿರುವ ವ್ಯಕ್ತಿ ಈ ಜಗತ್ತಿನಲ್ಲಿಯಾಗಲೀ ಬೇರೆ ಜಗತ್ತಿನಲ್ಲಿಯಾಗಲೀ ಸುಖವಾಗಿರಲು ಸಾಧ್ಯವಿಲ್ಲ. ಆದರೆ ಜಿಜ್ಞಾಸೆ ಅತಿ ಅಗತ್ಯವಾಗಿದ್ದು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಮೂಲವಾಗಿದೆ.

ಭಯಪಡಬೇಡಿ

ಭಯಪಡಬೇಡಿ

ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಪಾಠಗಳಲ್ಲಿ ಈ ಪಾಠ ಅತಿ ಮುಖ್ಯವಾಗಿದೆ. ಯುದ್ದದ ಸಮಯದಲ್ಲಿ ಸಾವಿಗೆ ಹೆದರದಿರಲು ಹೇಳಿದ ಕೃಷ್ಣನ ಮಾತನ್ನು ನಂಬಿ ಮುನ್ನುಗ್ಗಿದ ಅರ್ಜುನನಿಗೆ ಕಡೆಗೆ ಜಯ ಪ್ರಾಪ್ತಿಯಾಗುತ್ತದೆ.

ಭಯಪಡಬೇಡಿ

ಭಯಪಡಬೇಡಿ

ಸಾವು ದೇಹವನ್ನು ಕೊನೆಗೊಳಿಸಿ ಇನ್ನೊಂದು ಸ್ಥಿತಿಗೆ ತಲುಪಿಸುವ ಕ್ರಿಯೆಯೇ ಹೊರತು ಆತ್ಮಕ್ಕೆ ಸಾವಿಲ್ಲ. ಆದ್ದರಿಂದ ಸಾವಿಗೆ ಅಥವಾ ತನ್ನ ಏನನ್ನಾದರೂ ಕಳೆದುಕೊಳ್ಳುವ ಕಾರಣಕ್ಕೆ ಹೆದರದೇ ಮುನ್ನುಗ್ಗುವುದು ಜೀವನದ ಯಶಸ್ಸಿಗೆ ಮೂಲ ಎಂದು ಭಗವದ್ಗೀತೆ ತಿಳಿಸುತ್ತದೆ.

English summary

Lessons From Bhagavad Gita

The term 'Bhagvad Gita' literally means the 'song of the god'. This book is considered as one of the greatest spiritual teachings the world has ever seen. This book is more about a discussion that happened between Lord Krishna and Arjuna in the battlefield.
X
Desktop Bottom Promotion