For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ 2019: ಕೃಷ್ಣನ ಸ್ಮರಣೆಯಿಂದ ಕಷ್ಟ ಕಾರ್ಪಣ್ಯ ತ್ವರಿತ ಪರಿಹಾರ

By manu
|

ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ಪ್ರಾಮುಖ್ಯ ಹಬ್ಬ. ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ. ಹಿಂದೂ ಪಂಚಾಂಗದ ಭಾದ್ರಪದ ತಿಂಗಳ ಕೃಷ್ಣ ಪಕ್ಷದಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ. 2019ರಲ್ಲಿ ಆಗಸ್ಟ್ 24ರ ಶನಿವಾರದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು.

ಜನ್ಮಾಷ್ಟಮಿಯ ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ. ನಾವು ಹಲವಾರು ರೀತಿಯ ಕೋಪ, ದುರಾಸೆ, ಭಾಂದವ್ಯ ಮತ್ತು ನೋವಿನಿಂದ ಆವರಿಸಿಕೊಂಡಿರುತ್ತೇವೆ. ಆದರೆ ದೇವರು ಜನ್ಮ ತಾಳಿದಾಗ ಕತ್ತಲೆಯು ದೂರವಾಗುತ್ತದೆ ಮತ್ತು ಪ್ರಾಪಂಚಿಕ ಸುಖಗಳ ಎಲ್ಲಾ ಸರಪಳಿಗಳಿಂದ ಬಿಡುಗಡೆಯಾಗುತ್ತೇವೆ.

ಶ್ರೀಕೃಷ್ಣ ರಾಸಲೀಲೆಗೆ ಸಂಬಂಧಪಟ್ಟ ಅಚ್ಚರಿಯ ಕಥೆಗಳು

ನಿಮ್ಮ ಜೀವನದಲ್ಲಿ ಕಷ್ಟಗಳೇ ಹೆಚ್ಚಿದ್ದು ಸುಖ, ನೆಮ್ಮದಿ ಇಲ್ಲವಾಗಿದ್ದರೆ ಈ ದಿನ ನಿಮಗೆ ಶುಭವಾಗಲಿದೆ. ಇದಕ್ಕಾಗಿ ಈ ದಿನ ಎಂಟು ಉಪಾಯಗಳು ಅಥವಾ ವಿಧಿಗಳನ್ನು ನೆರವೇರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ ಜೀವನದ ಕಷ್ಟಗಳಿಗೆ ಸುಲಭ ಪರಿಹಾರ ದೊರಕುತ್ತದೆ.

ತಂತ್ರಶಾಸ್ತ್ರದ ಪ್ರಕಾರ ಜೀವನದ ಯಾವುದಾದರೂ ಮಹತ್ವದ ಕೋರಿಕೆಯನ್ನು ಈಡೇರಿಸಲು ನಾಲ್ಕು ರಾತ್ರಿಗಳು ಶುಭವಾಗಿವೆ. ಅವುಗಳೆಂದರೆ ಕಾಳರಾತ್ರಿ, ಆಹೋರಾತ್ರಿ, ದಾರುಣರಾತ್ರಿ ಮತ್ತು ಮೋಹರಾತ್ರಿ ಅಥವಾ ಜನ್ಮಾಷ್ಟಮಿ. ಈ ನಾಲ್ಕು ದಿನಗಳಲ್ಲಿ ನಡೆಸುವ ಉಪಾಯಗಳು ಹೆಚ್ಚಿನ ಫಲ ನೀಡುತ್ತವೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ನೀಡುತ್ತದೆ..

ವೇತನದಲ್ಲಿ ವೃದ್ಧಿಗಾಗಿ

ವೇತನದಲ್ಲಿ ವೃದ್ಧಿಗಾಗಿ

ಒಂದು ವೇಳೆ ಹಲವು ಪ್ರಯತ್ನಗಳ ಬಳಿಕವೂ ನಿಮ್ಮ ವೇತನ ಅಥವಾ ಸಂಪಾದನೆಯಲ್ಲಿ ವೃದ್ಧಿ ಕಾಣದೇ ಇದ್ದರೆ, ಸಿಗಬೇಕಿದ್ದ ಭಡ್ತಿ ಸಿಗದೇ ಇದ್ದರೆ ಜನ್ಮಾಷ್ಟಮಿಯಂದು ಏಳು ಕನ್ಯೆಯರನ್ನು ಮನೆಗೆ ಆಹ್ವಾನಿಸಿ ಅವರಿಗೆ ಖೀರು (ಹಾಲಿನ ಸಿಹಿ ಖಾದ್ಯ) ತಿನ್ನಿಸಬೇಕು. ಇದೇ ರೀತಿ ಮುಂದಿನ ಐದು ಶುಕ್ರವಾರಗಳಂದು ಸತತವಾಗಿ ಏಳು ಕನ್ಯೆಯರಿಗೆ ಖೀರು ತಿನ್ನಿಸುವುದರಿಂದ ವೇತನದಲ್ಲಿ ಹೆಚ್ಚಳ ಕಂಡುಬರುತ್ತದೆ.

ಇಷ್ಟಾರ್ಥ ಸಿದ್ಧಿಗಾಗಿ

ಇಷ್ಟಾರ್ಥ ಸಿದ್ಧಿಗಾಗಿ

ಈ ಜನ್ಮಾಷ್ಟಮಿಯ ದಿನದಿಂದ ಪ್ರಾರಂಭವಾಗುವಂತೆ ಸತತವಾಗಿ ಇಪ್ಪತ್ತೇಳು ದಿನಗಳ ಕಾಲ ನಿಮ್ಮ ಮನೆದೇವರ ದೇವಾಲಯಕ್ಕೆ ಕಾಯಿ ಮತ್ತು ಬಾದಾಮಿ ಅರ್ಪಿಸಿ. ಇದರಿಂದ ನಿಮ್ಮ ಜೀವನದ ಮಹತ್ವದ ಬಯಕೆ ಅಥವಾ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ.

ಆರ್ಥಿಕ ಮುಗ್ಗಟ್ಟು ನೀಗಿಸಲು

ಆರ್ಥಿಕ ಮುಗ್ಗಟ್ಟು ನೀಗಿಸಲು

ಒಂದು ವೇಳೆ ಬಹಳ ಸಮಯದಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೆ ಜನ್ಮಾಷ್ಟಮಿಯ ದಿನದಂದು ಮುಂಜಾನೆಯೇ ಸ್ನಾನ ಮಾಡಿ ರಾಧಾ-ಕೃಷ್ಣರ ದೇವಾಲಯವನ್ನು ಭೇಟಿ ಮಾಡಿ ಹಳದಿ ಎಲೆಗಳ ಮಾಲೆಯನ್ನು ದೇವರಿಗೆ ಅರ್ಪಿಸಿ ಭಕ್ತಿಯಿಂದ ಬೇಡಿಕೊಳ್ಳಿ.

ಸಾಮಾಜಿಕ ವಲಯದಲ್ಲಿ ಗುರುತಿಸಲ್ಪಡಲು

ಸಾಮಾಜಿಕ ವಲಯದಲ್ಲಿ ಗುರುತಿಸಲ್ಪಡಲು

ಒಂದು ವೇಳೆ ನಿಮ್ಮ ಇರುವಿಕೆಯನ್ನೇ ಸಮಾಜ ಗುರುತಿಸದಿದ್ದಲ್ಲಿ ಅಥವಾ ಕಡಿಮೆಯಾಗಿದ್ದಲ್ಲಿ ಚಂದನ, ಕುಂಕುಮ ಮತ್ತು ಗುಲಾಬಿ ನೀರನ್ನು ಬೆರೆಸಿದ ಲೇಪವನ್ನು ಹಣೆಯ ಮೇಲೆ ಜನ್ಮಾಷ್ಟಮಿಂದು ಇಡಿಯ ದಿನ ಧರಿಸಿ.

ಸಾಲಮುಕ್ತರಾಗಲು

ಸಾಲಮುಕ್ತರಾಗಲು

ಒಂದು ವೇಳೆ ಬಹಳ ಸಮಯದಿಂದ ಸಾಲದ ಬಾಧೆಯಲ್ಲಿ ಮುಳುಗಿದ್ದರೆ ಮತ್ತು ಇದರಿಂದ ಬೇಗನೇ ಹೊರಬರಲು ಉತ್ಸುಕರಾಗಿದ್ದರೆ ಜನ್ಮಾಷ್ಟಮಿಯಂದು ನಿಮ್ಮ ಊರಿನ ಅರಳಿ ಮರಕ್ಕೆ ಸುತ್ತು ಹಾಕಿ ಬಾವಿಯ ನೀರನ್ನು ಮರದ ಬುಡದ ಸುತ್ತಲೂ ಸುರಿಯಿರಿ.

ನಿಮ್ಮ ಕೆಲಸಗಳು ಕಾರ್ಯಗತಗೊಳ್ಳಲು

ನಿಮ್ಮ ಕೆಲಸಗಳು ಕಾರ್ಯಗತಗೊಳ್ಳಲು

ಯಾವುದಾದರೂ ಕೆಲಸದಲ್ಲಿ ಕೆಲಸಮಯದಿಂದ ವ್ಯಸ್ತರಾಗಿದ್ದು ಯಾವುದೇ ಫಲ ಕಂಡುಬರದೇ ಇದ್ದಲ್ಲಿ ಜನ್ಮಾಷ್ಠಮಿಯ ದಿನದಂದು ಬಾಳೆಯ ಒಂದು ಕಂದನ್ನು ನೆಟ್ಟು ಇದನ್ನು ಬೆಳೆಯುವಲ್ಲಿ ಮುತುವರ್ಜಿ ವಹಿಸಿ. ಬಾಳೆಯ ಕಂದು ಚಿಗುರಿ ಗಿಡವಾಗುವಷ್ಟರಲ್ಲಿ ನಿಮ್ಮ ಕೆಲಸಗಳೂ ಕಾರ್ಯಗತಗೊಳ್ಳುತ್ತವೆ.

ನಿಮ್ಮ ಸಂಪತ್ತಿನ ವೃದ್ಧಿಗಾಗಿ

ನಿಮ್ಮ ಸಂಪತ್ತಿನ ವೃದ್ಧಿಗಾಗಿ

ಜನ್ಮಾಷ್ಠಮಿಯ ದಿನದಂದು ಕೃಷ್ಣದೇವರಿಗೆ ವೀಳೆಯದೆಲೆಯನ್ನು ಅರ್ಪಿಸಿ. ಇದು ನಿಮ್ಮ ಸಂಪತ್ತನ್ನು ವೃದ್ಧಿಗೊಳಿಸಲು ನೆರವಾಗುತ್ತದೆ.

ಧನವೃದ್ಧಿಗಾಗಿ

ಧನವೃದ್ಧಿಗಾಗಿ

ನಿಮ್ಮ ಬಳಿ ಈಗಾಗಲೇ ನ್ಯಾಯಮಾರ್ಗದಲ್ಲಿ ದುಡಿದ ಧನವಿದ್ದರೆ ಇದರ ವೃದ್ಧಿಗಾಗಿ ನಿಮ್ಮ ತಿಜೋರಿಯೊಳಗೆ ಗಂಧದ ತುಂಡಿನ ಮೇಲೆ 'ಶ್ರೀ' ಎಂದು ಬರೆದು ಜನ್ಮಾಷ್ಟಮಿಯಂದು ಹಣದೊಡನಿಡಿ. ಶೀಘ್ರವೇ ನಿಮ್ಮ ಧನ ವೃದ್ಧಿಯಾಗಲು ತೊಡಗುತ್ತದೆ.

English summary

Do these things without fail on Janmashtami

if you are fed up with the never ending problems in your life and are unable to find any solutions for them, then do these 8 important upays (measures) on the day of Janmashtami (September 5). As per Tantra Shastra, for the fulfillment of any accomplishment, the ‘4 striya’ are extremely important. These are – Kaalratri, Ahoratri, Daarunratri and the fourth one is Mohratri or Janmashtami. The upays done on these 4 days are extremely beneficial.Click on this slide show to these upays
X
Desktop Bottom Promotion