For Quick Alerts
ALLOW NOTIFICATIONS  
For Daily Alerts

ಶ್ರಾವಣ ಮುಗಿಯುವುದರೊಳಗೆ ಶಿವನ ಕೃಪೆಗೆ ಪಾತ್ರರಾಗಿ!

By Super
|

ಶ್ರಾವಣಮಾಸವು ಹಿಂದೂ ಪಂಚಾಂಗದಲ್ಲಿಯೇ ಅತ್ಯಂತ ಪವಿತ್ರವಾದ ಮಾಸವೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ಮಾಸದಲ್ಲಿ ಶಿವನು ಭೂಮಿಯ ಜೊತೆಗೆ ತನ್ನ ಅವಿನಾಭಾವ ಸಂಬಂಧವನ್ನು ತೋರಿದ್ದಾನೆ. ಹಾಗಾಗಿ ಈ ಮಾಸದಲ್ಲಿ ವ್ರತ ಮತ್ತು ಪೂಜೆಗಳಲ್ಲಿ ತೊಡಗಿಸಿಕೊಂಡು ಆತನನ್ನು ಆರಾಧಿಸಿದರೆ ಶಿವನ ಆಶೀರ್ವಾದ ಲಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದರಲ್ಲೂ ಶ್ರಾವಣ ಮಾಸದ ಸೋಮವಾರಗಳು ಹೆಂಗಳೆಯರ ಪಾಲಿಗೆ ಅತ್ಯಂತ ಮುಖ್ಯವಾದುದಾಗಿದೆ. ಏಕೆಂದರೆ ಇವರು ತಮಗೆ ಅನುರೂಪನಾದ ವರ ಸಿಗಲೆಂದು ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸಲೆಂದು ಶಿವನನ್ನು ಪ್ರಾರ್ಥಿಸುವ ಮಾಸ ಇದಾಗಿದೆ. ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ಶ್ರಾವಣ ಮಾಸ

ಈ ವರ್ಷದ ಶ್ರಾವಣ ಮಾಸ ಆಗಸ್ಟ್ ಒಂದರಿಂದಲೇ ಪ್ರಾರಂಭವಾಗಿದ್ದು ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಉಳಿದಿವೆ. ಈ ತಿಂಗಳಲ್ಲಿ ಶಿವನನ್ನು ಪಾರ್ಥಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಭಕ್ತರು ನಂಬುತ್ತಾರೆ. ಅಲ್ಲದೇ ಜಗದ ನಾಯಕನೂ ಶಿವನೇ ಆಗಿರುವುದರಿಂದ ಈ ಅವಧಿಯಲ್ಲಿ ನೆರವೇರಿಸುವ ಪೂಜೆ ಭಕ್ತರ ವಿಧಿಯನ್ನೇ ಬದಲಿಸಿಬಿಡಬಹುದು. ಶಿವ ಪೂಜೆಯಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ

ಈ ತಿಂಗಳಲ್ಲಿ ನಿಮ್ಮ ಪೂಜೆಗಳು ಫಲನೀಡಲು ಇವುಗಳನ್ನು ಸರಿಯಾದ ಕ್ರಮದಲ್ಲಿ ಆಚರಿಸುವುದು ಅಗತ್ಯ. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ವಿಧಿಗಳನ್ನು ಅನುಸರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ...

’ಓಂ ನಮಃ ಶಿವಾಯಃ’ ಮಂತ್ರ

’ಓಂ ನಮಃ ಶಿವಾಯಃ’ ಮಂತ್ರ

ಪ್ರತಿದಿನ 'ಓಂ ನಮಃ ಶಿವಾಯಃ' ಮಂತ್ರವನ್ನು ಬರೆದ ಇಪ್ಪತ್ತೊಂದು ಬಿಲ್ವಪತ್ರೆಯ ಎಲೆಗಳನ್ನು ಚಂದನದೊಂದಿಗೆ ಶಿವಲಿಂಗಕ್ಕೆ ಅರ್ಪಿಸಿ. ಇದರೊಂದಿಗೆ ಏಕಮುಖಿ ರುದ್ರಾಕ್ಷಿಯೊಂದನ್ನೂ ನೀಡಿ. ಇದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ.

ಗೋಮೂತ್ರವನ್ನು ಚಿಮುಕಿಸಿ

ಗೋಮೂತ್ರವನ್ನು ಚಿಮುಕಿಸಿ

ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಕಂಡುಬಂದರೆ ಶ್ರಾವಣ ಮಾಸದ ಯಾವುದಾದರೊಂದು ದಿನದಲ್ಲಿ ಗೋಮೂತ್ರವನ್ನು ಚಿಮುಕಿಸಿ. ಬಳಿಕ ಇಡಿಯ ಮನೆಯಲ್ಲಿ ಧೂಪದ ಧೂಮವನ್ನು ಇಡಿಯ ಮನೆ ಆವರಿಸುವಂತೆ ಮಾಡಿ. ಇದರಿಂದ ಮನೆಗೆ ಬಂದಿದ್ದ ಕಂಟಕಗಳು ದೂರವಾಗುತ್ತವೆ.

ವೈವಾಹಿಕ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳಿಗೆ

ವೈವಾಹಿಕ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳಿಗೆ

ಒಂದು ವೇಳೆ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಕಂಡುಬಂದರೆ ಶ್ರಾವಣ ಮಾಸದ ಪ್ರತಿದಿನ ಹಾಲಿನಲ್ಲಿ ಕೇಸರಿಯನ್ನು ಮಿಶ್ರಣ ಮಾಡಿ ಶಿವಲಿಂಗಕ್ಕೆ ಅರ್ಪಿಸಿ.

ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ

ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ

ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷಕ್ಕೆ ಎಂದೂ ಕೊರತೆಯಾಗದು.

ಸಾಧ್ಯವಾದಷ್ಟು ಸಹಾಯ ಮಾಡಿ

ಸಾಧ್ಯವಾದಷ್ಟು ಸಹಾಯ ಮಾಡಿ

ಶ್ರಾವಣ ಮಾಸದ ಎಲ್ಲಾ ದಿನಗಳಲ್ಲಿ ಅರ್ಹ ಬಡವ ಬಲ್ಲಿದರಿಗೆ ಸಾಧ್ಯವಾದ ಸಹಾಯ ಮಾಡಿ. ಇದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರದ ಕೊರತೆಯಾಗದು. ಜೊತೆಗೆ ಇದು ನಿಮ್ಮ ವಂಶಸ್ಥರ ಆತ್ಮಗಳನ್ನೂ ಸಂತೋಷ ಮತ್ತು ಶಾಂತಿಯಲ್ಲಿರಿಸುವುದು.

ಕರಿಎಳ್ಳನ್ನು ಶಿವಲಿಂಗಕ್ಕೆ ಅರ್ಪಿಸಿ

ಕರಿಎಳ್ಳನ್ನು ಶಿವಲಿಂಗಕ್ಕೆ ಅರ್ಪಿಸಿ

ಶ್ರಾವಣ ಮಾಸದ ಪ್ರತಿದಿನ ಶಿವಾಲಯಕ್ಕೆ ಭೇಟಿ ನೀಡಿ ಕರಿಎಳ್ಳನ್ನು ಶಿವಲಿಂಗಕ್ಕೆ ಅರ್ಪಿಸಿ. ಬಳಿಕ ದೇವಾಲಯದ ಆವರಣದಲ್ಲಿ ಕೊಂಚ ಹೊತ್ತು ಕುಳಿತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ.

ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ಅರ್ಪಿಸಿ

ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ಅರ್ಪಿಸಿ

ಈ ತಿಂಗಳಲ್ಲಿ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಮುಂಜಾವಿನ ವೇಳೆ ಕೆರೆ ಅಥವಾ ನದಿಪಾತ್ರದ ಬಳಿ ತೆರಳಿ ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ಅರ್ಪಿಸಿ. ಇದು ನಿಮ್ಮ ಮನೆಯಲ್ಲಿ ಧನಾಗಮನವಾಗುವಂತೆ ಮಾಡುತ್ತದೆ.

English summary

Do these 7 things without fail before the holy month of Shravan ends!

This time the holy Sawan month began from August 1. According to the religious scriptures, if people worship Lord Shiva, their wishes are fulfilled. Also because the God of tantra too is Shiva, various totkas done on this day can change people’s destiny. So, if you want your luck to accompany you further, follow these simple measures mentioned in this slide show…
Story first published: Monday, August 24, 2015, 17:59 [IST]
X
Desktop Bottom Promotion