For Quick Alerts
ALLOW NOTIFICATIONS  
For Daily Alerts

Deepavali 2022: ದೀಪಾವಳಿ ಎಂದಿನಿಂದ ಆರಂಭ? 5 ದಿನಗಳ ಹಬ್ಬದ ಮಹತ್ವವೇನು?

|

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸಿ ಆರಾಧಿಸರುವ, ವಿಷ್ಣುವನ್ನು ಸ್ಮರಣೆ ಮಾಡುವ ಹಾಗೂ ವಿನಾಯಕನನ್ನು ಪೂಜಿಸಿ ಅವರನ ಕೃಪೆಗೆ ಪಾತ್ರರಾಗುವ ಭಾರತದ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. 5 ದಿನಗಳ ಸಂಭ್ರಮದ ದೀಪಾವಳಿಯು ಜಗತ್ತಿನಾದ್ಯಂತ ಹಿಂದೂ ಸಮುದಾಯದಿಂದ ಸ್ಮರಿಸುವ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಮತ್ತು ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಪ್ರತಿನಿಧಿಸುತ್ತದೆ. ಇದು ಸಂತೋಷ ಮತ್ತು ಸಾಮರಸ್ಯವನ್ನು ಸೂಚಿಸುವ ಅತ್ಯಂತ ಮಹತ್ವದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ.

ದೀಪಾವಳಿ ಹಬ್ಬವು ಒಂದೊಂದು ಪ್ರಾಂತ್ಯದಲ್ಲೂ ಒಂದೊಂದು ರೀತಿ ಆಚರಣೆ ಇದ್ದು, ಈ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ದೀಪಗಳು, ಹೂವುಗಳು, ರಂಗೋಲಿ ಮತ್ತು ಮೇಣದಬತ್ತಿಗಳಿಂದ ತಮ್ಮ ಮನೆಗಳನ್ನು ಅಲಂಕರಿಸುತ್ತಾರೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಸಮಾಧಾನಪಡಿಸಲು ಮತ್ತು ಅವಳ ಆಶೀರ್ವಾದವನ್ನು ಪಡೆಯಲು ಜನರು ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.

2022ನೇ ಸಾಲಿನಲ್ಲಿ ದೀಪಾವಳಿ ಎಂದು ಆಚರಿಸಲಾಗುತ್ತದೆ, 5 ದಿನಗಳಲ್ಲಿ ಯಾವ ದಿನದ ವಿಶೇಷ ಏನು?, ದೀಪಾವಳಿ ಹಬ್ಬ ಮಹತ್ವವೇನು ಮುಂದೆ ನೋಡೋಣ:

1. ದೀಪಾವಳಿ 2022: ಪ್ರಾರಂಭ ಮತ್ತು ಅಂತಿಮ ದಿನಾಂಕ

1. ದೀಪಾವಳಿ 2022: ಪ್ರಾರಂಭ ಮತ್ತು ಅಂತಿಮ ದಿನಾಂಕ

ದೀಪಾವಳಿಯು 5 ದಿನಗಳ ಹಬ್ಬವಾಗಿದೆ. ಈ ಹಬ್ಬವು ಧನ ತ್ರಯೋದಶಿ (ಧನತೇರಸ್‌) ಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಭಾಯ್‌ ದೂಜ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ. ದೀಪಾವಳಿಯನ್ನು ಹಿಂದೂ ತಿಂಗಳ ಕಾರ್ತಿಕದಲ್ಲಿ ವರ್ಷದ ಕರಾಳ ರಾತ್ರಿಯಲ್ಲಿ ಆಚರಿಸಲಾಗುತ್ತದೆ. ಈ ವರ್ಷದ ದೀಪಾವಳಿ ಹಬ್ಬದ ದಿನಾಂಕಗಳು ಹೀಗಿವೆ:

ದೀಪಾವಳಿ ದಿನ 1

ದೀಪಾವಳಿ ಹಬ್ಬವು 2022 ಅಕ್ಟೋಬರ್ 22ರಂದು ದ್ವಾದಶಿ ತಿಥಿಯ ದಿನ ಧನ ತ್ರಯೋದಶಿಯೊಂದಿಗೆ ಪ್ರಾರಂಭವಾಗುತ್ತದೆ.

ದೀಪಾವಳಿ ದಿನ 2

ದೀಪಾವಳಿಯ ಎರಡನೇ ದಿನ 2022 ಅಕ್ಟೋಬರ್ 23ರಂದು ತ್ರಯೋದಶಿ ತಿಥಿ ಇರುತ್ತದೆ. ಈ ದಿನವನ್ನು ಚೋಟಿ ದೀಪಾವಳಿ ಎಂದು ಆಚರಿಸಲಾಗುತ್ತದೆ. ಈ ದಿನ ಜನರು ಹನುಮಂತನನ್ನು ಪೂಜಿಸುತ್ತಾರೆ.

ದೀಪಾವಳಿ ದಿನ 3

ದೀಪಾವಳಿಯ ಮೂರನೇ ದಿನ 2022 ಅಕ್ಟೋಬರ್ 24ರಂದು ಚತುರ್ದಶಿ ತಿಥಿ ಇರುತ್ತದೆ. ಈ ದಿನ ಜನರು ನರಕ ಚತುರ್ದಶಿ, ದೀಪಾವಳಿಯನ್ನು ಆಚರಿಸುತ್ತಾರೆ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ, ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಗುರುತಿಸಲು ಅವರು ತಮ್ಮ ಮನೆಗಳನ್ನು ದೀಪಗಳಿಂದ ಬೆಳಗಿಸುತ್ತಾರೆ.

ದೀಪಾವಳಿ ದಿನ 4

ದೀಪಾವಳಿಯ ನಾಲ್ಕನೇ ದಿನ 2022 ಅಕ್ಟೋಬರ್ 25ರಂದು ಅಮವಾಸ್ಯೆಯ ತಿಥಿ ಜಾರಿಯಲ್ಲಿರುತ್ತದೆ. ಈ ದಿನ ಜನರು ದೀಪಾವಳಿಯನ್ನು ಆಚರಿಸುತ್ತಾರೆ.

ದೀಪಾವಳಿ ದಿನ 5

ದೀಪಾವಳಿಯ 5ನೇ ದಿನದಂದು 2022 ಅಕ್ಟೋಬರ್ 26ರಂದು ಪ್ರತಿಪದ ತಿಥಿ ಜಾರಿಯಲ್ಲಿರುತ್ತದೆ. ಗೋವರ್ಧನ ಪೂಜೆಯೊಂದಿಗೆ 5 ದಿನಗಳ ದೀಪಾವಳಿ ಪೂಜೆಯನ್ನು ಜನರು ಮುಕ್ತಾಯಗೊಳಿಸುತ್ತಾರೆ.

2. ದೀಪಾವಳಿ 2022: ಪೂಜೆಗೆ ಶುಭ ಸಮಯಗಳು

2. ದೀಪಾವಳಿ 2022: ಪೂಜೆಗೆ ಶುಭ ಸಮಯಗಳು

ಈ ವರ್ಷ ದೀಪಾವಳಿಯು ಅಕ್ಟೋಬರ್ 24ರಂದು ಲಕ್ಷ್ಮಿ ಪೂಜೆಯ ವಿಧಿವಿಧಾನಗಳೊಂದಿಗೆ ಪ್ರಾರಂಭವಾಗುತ್ತದೆ. ಈ ದಿನ ಪೂಜೆಗೆ ಶುಭ ಮುಹೂರ್ತ ಅಥವಾ ಶುಭ ಸಮಯಗಳು ಹೀಗಿದೆ:

ಶುಭ ಮುಹೂರ್ತ: ಸಂಜೆ 6:53 ರಿಂದ 8:16 ರವರೆಗೆ

3. ದೀಪಾವಳಿ 2022: ಪೂಜಾ ವಿಧಿ-ವಿಧಾನ

3. ದೀಪಾವಳಿ 2022: ಪೂಜಾ ವಿಧಿ-ವಿಧಾನ

ದೀಪಾವಳಿ ಸಮಯದಲ್ಲಿ ಭಕ್ತರು ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಅವರ ಆಶೀರ್ವಾದ ಪಡೆಯುತ್ತಾರೆ. ಭಕ್ತರು ಈ ಹಬ್ಬ ಸಮಯದಲ್ಲಿ ಪೂಜೆಗೆ ಮೋದಕ, ಕಜ್ಜಾಯ ಮತ್ತು ಹಲ್ವದಂತಹ ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ. ಪೂಜೆ ಮುಗಿದ ನಂತರ ದೀಪಗಳು ಮತ್ತು ಪಟಾಕಿಗಳನ್ನು ಸಿಡಿಸುತ್ತಾರೆ. ಹಿಂದೂ ನಂಬಿಕೆಗಳ ಪ್ರಕಾರ, ದೀಪಗಳನ್ನು ಬೆಳಗಿಸುವುದು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ.

4. ದೀಪಾವಳಿ 2022: ಮಹತ್ವ

4. ದೀಪಾವಳಿ 2022: ಮಹತ್ವ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನವು ರಾವಣನ ಮೇಲೆ ರಾಮನ ವಿಜಯವನ್ನು ಸೂಚಿಸುತ್ತದೆ. ಇದಲ್ಲದೆ, ಇದು ತನ್ನ ಪತ್ನಿ ಸೀತಾ ಮತ್ತು ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ಕಾಲ ವನವಾಸದಲ್ಲಿದ್ದ ನಂತರ ರಾಮನು ಅಯೋಧ್ಯೆಗೆ ಹಿಂದಿರುಗಿದ ಸಂಕೇತವಾಗಿದೆ. ಆದ್ದರಿಂದ, ಜನರು ಈ ದಿನವನ್ನು ಉತ್ಸಾಹದಿಂದ ಆಚರಿಸುತ್ತಾರೆ, ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಗುರುತಿಸುತ್ತಾರೆ.

English summary

Diwali 2022 Start and End Date, Shubh Muhurat, Puja Vidhi, History, Rituals, Significance of 5 days of deepavali

Here we are discussing about Diwali 2022 Start and End Date, Shubh Muhurat, Puja Vidhi, History, Rituals, Significance of 5 days of deepavali. Read more.
X
Desktop Bottom Promotion