For Quick Alerts
ALLOW NOTIFICATIONS  
For Daily Alerts

ದೀಪಾವಳಿ 2022: ಸೂರ್ಯಗ್ರಹಣದ ದಿನ ಅ. 25 ಲಕ್ಷ್ಮಿ ಪೂಜೆ, ವ್ರತ ಮಾಡಬಹುದೆ?

|

ಭಾರತದ ಸಂಪ್ರದಾಯವನ್ನು ವಿಜೃಂಭಿಸುವ, ಬೆಳಕಿನ ಹಬ್ಬ ಎಂದೇ ವಿಶ್ವಾದ್ಯಂತ ಪ್ರಖ್ಯಾತಿ ಪಡೆದ ಹಬ್ಬ ದೀಪಾವಳಿ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ವಿವಾಹದ ಆಚರಣೆಯೇ ದೀಪಾವಳಿ. ಅಲ್ಲದೆ, ಲಕ್ಷ್ಮಿ ದೇವಿಯು ಕಾರ್ತಿಕ ಅಮಾವಾಸ್ಯೆಯ ದಿನದಂದು ಜನಿಸಿದ ಕಾರಣ ಅವಳ ಜನ್ಮ ದಿನದ ವಿಶೇಷ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವುದು ಹಿಂದಿನಿಂದಲೂ ಬಂದ ಪದ್ಧತಿ.

123

ಆದರೆ 2022ನೇ ಸಾಲಿನಲ್ಲಿ ವಿಶೇಷವಾಗಿ ಈ ಕಾರ್ತಿಕ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ ಬಂದಿರುವುದು ವಿಶೇಷ. ಹಲವರಿಗೆ ಗ್ರಹಣ ಇರುವ ದಿನ ಲಕ್ಷ್ಮಿ ಪೂಜೆ ಮಾಡಬಹುದೇ, ಇಲ್ಲವೇ ಎಂಬ ಗೊಂದಲ ಇರುತ್ತದೆ. ಈ ಬಗ್ಗೆ ವೈದಿಕ ಜ್ಯೋತಿಷ್ಯರು ಏನನ್ನುತ್ತಾರೆ ಮುಂದೆ ನೋಡೋಣ:

ದೀಪಾವಳಿ ಯಾವ ದಿನ ಯಾವ ಪೂಜೆ?

ದೀಪಾವಳಿ ಯಾವ ದಿನ ಯಾವ ಪೂಜೆ?

ದೀಪಾವಳಿ 2022ನೇ ಸಾಲಿನಲ್ಲಿ 23ರಂದು ಧನತ್ರಯೋದಶಿ, 24 ನರಕ ಚತುರ್ದಶಿ, 25 ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ 26ರಂದು ಬಲಿಪಾಡ್ಯಮಿ ದೀಪಾವಳಿ ಹೀಗೆ ನಾಲ್ಕು ದಿನಗಳ ಸಾಲು ಹಬ್ಬ ಇದೆ.

ಸೂರ್ಯಗ್ರಹಣದ ದಿನ ಹಬ್ಬ ಅಶುಭವೇ?

ಸೂರ್ಯಗ್ರಹಣದ ದಿನ ಹಬ್ಬ ಅಶುಭವೇ?

ಖಂಡಗ್ರಾಸ ಸೂರ್ಯಗ್ರಹಣವು 2022ನೇ ಸಾಲಿನಲ್ಲಿ ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆಯ ರಾತ್ರಿ ಅಕ್ಟೋಬರ್ 25ರಂದು ಮಂಗಳವಾರ ಸಂಭವಿಸುತ್ತಿದೆ. ಈ ದಿನ ನೆನಪಿಡಬೇಕಾದ ಅಂಶವೆಂದರೆ, ಯಾವುದೇ ಗ್ರಹಣ ಬಂದರೂ ಚಿಂತೆ ಪಡುವ ಅಗತ್ಯವಿಲ್ಲ. ಇದು ಸಿದ್ಧಿಗಳ ದೊಡ್ಡ ಹಬ್ಬವಾದ್ದರಿಂದ ಋಷಿಮುನಿಗಳು ಇದನ್ನು ಸಿದ್ಧಿಕಾಲ ಎಂದು ಹೆಸರಿಸಿದ್ದಾರೆ. ಗ್ರಹಣದ ಸಮಯದಲ್ಲಿ, ಭಗವಾನ್ ಶ್ರೀ ರಾಮನು ಗುರು ವಶಿಷ್ಠರಿಂದ ಮತ್ತು ಶ್ರೀ ಕೃಷ್ಣ ಗುರು ಸಂದೀಪನಿಂದ ದೀಕ್ಷೆ ಪಡೆದರು. ಸೂರ್ಯಾಸ್ತದ ನಂತರ ಸೂರ್ಯಗ್ರಹಣವು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರುವುದಿಲ್ಲ ಎಂದು ಹೇಳಲಾಗುತ್ತದೆ.

ಸೂರ್ಯ ಗ್ರಹಣದ ದಿನ ಲಕ್ಷ್ಮಿ ಪೂಜೆ/ವ್ರತ ಮಾಡಬಹುದೆ?

ಸೂರ್ಯ ಗ್ರಹಣದ ದಿನ ಲಕ್ಷ್ಮಿ ಪೂಜೆ/ವ್ರತ ಮಾಡಬಹುದೆ?

ವೈದಿಕ ಜ್ಯೋತಿಷ್ಯದ ಪ್ರಕಾರ ಅಕ್ಟೋಬರ್‌ 24ರಂದು ನರಕ ಚತುರ್ದಶಿ ಇದ್ದು ಇಂದೇ ಹಬ್ಬ ಅಚರಿಸುವುದು ಶುಭ, ಮಂಗಳವಾರ ಗ್ರಹಣ ಇರುವುದರಿಂದ ಲಕ್ಷ್ಮಿ ಪೂಜೆ, ವ್ರತ ಯಾವುದನ್ನು ಮಾಡಬಾರದು ಎನ್ನಲಾಗುತ್ತದೆ, ಅದರೆ ಈ ದಿನ ಅಶುಭ ಎಂದಲ್ಲ. ಇಂದು ಸಂಜೆವರೆಗೂ ಗ್ರಹಣ ಇರುವುದರಿಂದ ಪೂಜೆ ಅಥವಾ ವ್ರತದ ಪ್ರಯೋಜನ ಸಿಗುವುದಿಲ್ಲ ಎನ್ನಲಾಗುತ್ತದೆ. ಕೇದಾರೇಶ್ವರ ನೋಮು ಅಥವಾ ದೀಪಾವಳಿ ನೋಮು ಮಾಡುವವರು ನಂತರದ ದಿನ ಬುಧವಾರ ಮಾಡುವುದು ಉತ್ತಮ ಎಂದು ವೈದಿಕ ಜ್ಯೋತಿಷ್ಯರು ಹೇಳುತ್ತಾರೆ.

ಆದರೆ, ಗ್ರಹಣದ ಸಮಯದಲ್ಲಿ ದೈವ ಸ್ಮರಣೆ, ವಿಷ್ಣು ಸಹಸ್ರನಾಮ, ಮಂತ್ರ ಪಠಣೆ ಮಾಡುವುದು ಸಕಾರಾತ್ಮಕತೆಯನ್ನು ತುಂಬುತ್ತದೆ ಎನ್ನಲಾಗುತ್ತದೆ.

ದೀಪಾವಳಿಯಂದು ಸೂರ್ಯ ಗ್ರಹಣ ವೈಜ್ಞಾನಿಕ ನಂಬಿಕೆ

ದೀಪಾವಳಿಯಂದು ಸೂರ್ಯ ಗ್ರಹಣ ವೈಜ್ಞಾನಿಕ ನಂಬಿಕೆ

ಹಿಂದಿನಿಂದಲೂ ನಡೆದುಕೊಂಡು ಪದ್ಧತಿಯಂತೆ ಸಾಮಾನ್ಯವಾಗಿ ಪ್ರತಿ ವರ್ಷ ದೀಪಾವಳಿ ಲಕ್ಷ್ಮಿ ಪೂಜೆಯು ಅಮವಾಸ್ಯೆಯ ಸಮಯದಲ್ಲಿ ನಡೆಯುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ, ಸೂರ್ಯ ಗ್ರಹಣವು ಅಮಾವಾಸ್ಯೆಯ ದಿನದಂದು ಮಾತ್ರವೇ ಸಂಭವಿಸುತ್ತದೆ. ಆದ್ದರಿಂದ, ದೀಪಾವಳಿ ಪೂಜೆಯ ದಿನದಂದು ಸೂರ್ಯ ಗ್ರಹಣವು ಆಗಾಗ್ಗೆ ಬೀಳುವುದರಲ್ಲಿ ಆಶ್ಚರ್ಯವೇನಿಲ್ಲ. ಆದ್ದರಿಂದ ಈ ದೀಪಾವಳಿಯಲ್ಲಿ ಸೂರ್ಯ ಗ್ರಹಣ ಸಂಭವಿಸಿರುವುದು ಆಚ್ಚರಿಯೇನಲ್ಲ. ಅದೂ ಅಲ್ಲದೆ ಆದ ದಿನ ಸೂರ್ಯ ಗ್ರಹಣವು ಭೂಮಿಯ ಮೇಲ್ಮೈಯ ಒಂದು ಸಣ್ಣ ಭಾಗದಲ್ಲಿ ಮಾತ್ರ ಕಾಣುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸೂರ್ಯ ಗೋಚರಿಸಿದರೆ ಮಾತ್ರ ಗ್ರಹಣವೇ?

ಸೂರ್ಯ ಗೋಚರಿಸಿದರೆ ಮಾತ್ರ ಗ್ರಹಣವೇ?

ಭಾರತದಲ್ಲಿನ ಹೆಚ್ಚಿನ ಪಂಡಿತರು ಮತ್ತು ಜ್ಯೋತಿಷಿಗಳು ಸೂರ್ಯನು ಗೋಚರಿಸದಿದ್ದರೆ ಯಾವುದೇ ಸೂರ್ಯ ಗ್ರಹಣ ಆಚರಣೆಗಳು ನಡೆಯಬಾರದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಸೂರ್ಯ ಗ್ರಹಣ ಸ್ವಲ್ಪ ಗೋಚರಿಸಿದರೂ ಪ್ರತಿಯಾಗಿ ಆ ದಿನ ಭಾರತದಲ್ಲಿ ಯಾವುದೇ ಹಬ್ಬದ ಯಾವುದೇ ಪೂಜಾ ವಿಧಿಗಳು ನಡೆಯಬಾರದು ಎಂದಿದ್ದಾರೆ. ರಾತ್ರಿಯಲ್ಲಿ ಸೂರ್ಯಗ್ರಹಣ ಮತ್ತು ಹಗಲಿನಲ್ಲಿ ಚಂದ್ರಗ್ರಹಣ ಸಂಭವಿಸಿದರೆ ಶುದ್ಧ ಸ್ನಾನ ಅಥವಾ ದಾನ ಧರ್ಮಗಳ ಅಗತ್ಯವಿಲ್ಲ.

ಕೆಲವು ವೈದಿಕರ ಪ್ರಕಾರ ಸಂಜೆ ನಂತರ ಲಕ್ಷ್ಮಿ ಪೂಜೆ ಮಾಡಬಹುದು!

ಕೆಲವು ವೈದಿಕರ ಪ್ರಕಾರ ಸಂಜೆ ನಂತರ ಲಕ್ಷ್ಮಿ ಪೂಜೆ ಮಾಡಬಹುದು!

ಗ್ರಹಣ ಎನ್ನುವುದು ಭೌಗೋಳಿಕ ಕ್ರಿಯೆಯಾಗಿದ್ದು, ದೀಪಾವಳಿ ಲಕ್ಷ್ಮಿ ಪೂಜೆಯನ್ನು ಅಮವಾಸ್ಯೆಯ ದಿನವೇ ಮಾಡುವುದರಿಂದ ಈ ದಿನ ಸಂಜೆಯ ನಂತರ ಶುದ್ಧವಾಗಿ ಪೂಜೆ ಮಾಡಬಹುದು ಎಂದು ಕೆಲವು ವೈದಿಕರು ಹೇಳುತ್ತಾರೆ. ಸೂರ್ಯ ಗ್ರಹಣದ ದಿನ ಪ್ರದೋಷದ ಸಮಯದಲ್ಲಿ, ಸೂರ್ಯಾಸ್ತದ ನಂತರ ಲಕ್ಷ್ಮಿ ಪೂಜೆಯನ್ನು ಮಾಡಲು ಉತ್ತಮ ಸಮಯ. ಸೂರ್ಯ ದೇವರು ಸ್ಥಳದಲ್ಲಿಲ್ಲದ ಕಾರಣ, ಗ್ರಹಣ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುವುದು ಸಹ ಕಾರ್ಯಸಾಧ್ಯವಲ್ಲ, ಅದ್ದರಿಂದ ಸಂಜೆಯ ನಂತರ ಮಾಡುವುದು ಉತ್ತಮ.

ಪ್ರದೋಷದ ಸಮಯದಲ್ಲಿ ಮುಸ್ಸಂಜೆಯ ನಂತರ ಲಕ್ಷ್ಮಿ ಪೂಜೆಯನ್ನು ನಡೆಸಲಾಗುತ್ತದೆ. ಆದ್ದರಿಂದ, ಸೂತಕ ಪ್ರಾರಂಭವಾಗುವ ಮೊದಲು ಇದನ್ನು ಸಾಮಾನ್ಯವಾಗಿ ಮಾಡಬಹುದು, ಏಕೆಂದರೆ ಹೆಚ್ಚಿನ ಪ್ರದೇಶಗಳಲ್ಲಿ, ಸೂರ್ಯೋದಯದ ನಂತರ ಮರುದಿನ ಪ್ರದೋಷ ಮತ್ತು ಸೂರ್ಯ ಗ್ರಹಣದ ಆರಂಭದ ನಡುವೆ ಸುಮಾರು ಹನ್ನೆರಡು ಗಂಟೆಗಳ ವಿರಾಮ ಇರುತ್ತದೆ.

English summary

Diwali 2022 Solar Eclipse: Can you perform Lakshmi Puja during Surya Grahan in Kannada

Here we are discussing about Diwali 2022 Solar Eclipse: Can you perform Lakshmi Puja during Surya Grahan in Kannada. Read more.
X
Desktop Bottom Promotion