For Quick Alerts
ALLOW NOTIFICATIONS  
For Daily Alerts

ದೀಪಾವಳಿ 2020: ಲಕ್ಷ್ಮಿ ಪೂಜೆಗೆ ಮುಹೂರ್ತ, ಪಠಿಸಬೇಕಾದ ಮಂತ್ರ, ಪೂಜೆಯ ವಿಧಾನ

|

ದೀಪಾವಳಿ ಈ ಪದ ಕೇಳಿದ ತಕ್ಷಣವೇ ಒಂದು ರೀತಿಯ ಸಂಭ್ರಮ, ಸಡಗರ. ಕಾರ್ತಿಕ ಮಾಸದ 15ನೇ ದಿನ ದೀಪಾವಳಿಯನ್ನು ಆಚರಿಸಲಾಗುವುದು. ಮನೆಯ ಸುತ್ತ ಹಣತೆ ದೀಪಗಳನ್ನು ಬೆಳಗಿ, ಹೊಸ ಬಟ್ಟೆ ಧರಿಸಿ ಲಕ್ಷ್ಮಿಯನ್ನು ಪೂಜಿಸಿ ದೀಪಾವಳಿಯ ಸಿಹಿಯನ್ನು ಸವಿಯಲಾಗುವುದು.

ಈ ಲೇಖನದಲ್ಲಿ ಲಕ್ಷ್ಮಿ ಪೂಜೆಯ ಮಹತ್ವ, ಪೂಜೆಗೆ ಮುಹೂರ್ತ, ಪೂಜೆಗೆ ಬಳಸುವ ಸಾಮಗ್ರಿ, ಪಠಿಸಬೇಕಾದ ಮಂತ್ರ ಇವುಗಳ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:

ದೀಪಾವಳಿಯಂದು ಲಕ್ಷ್ಮಿ ಪೂಜೆ

ದೀಪಾವಳಿಯಂದು ಲಕ್ಷ್ಮಿ ಪೂಜೆ

14 ವರ್ಷದ ವನವಾಸದ ಬಳಿಕ ಶ್ರೀರಾಮ ಅಯೋಧ್ಯೆಗೆ ಬಂದಾಗ ದೀಪಗಳನ್ನು ಹಚ್ಚಿ ಸ್ವಾಗತಿಸಲಾಯಿತು ಎಂದು ರಾಮಾಯಣದಲ್ಲಿ ಹೇಳಲಾಗಿದೆ. ದೀಪಾವಳಿಯಂದು ಮಹಾವಿಷ್ಣು ಲಕ್ಷ್ಮಿಯನ್ನು ಮದುವೆಯಾದ ಎಂಬ ಪೌರಾಣಿಕ ಕತೆಯೂ ಇದೆ. ಇನ್ನು ಕೆಲವರು ಲಕ್ಷ್ಮಿಯು ಕಾರ್ತಿಕ ಮಾಸದ ಹುಣ್ಣಿಮೆಯಂದು ಜನಿಸಿದಳು. ಈ ದಿನದಂದು ಲಕ್ಷ್ಮಿ ಪೂಜೆ ಮಾಡಲಾಗುವುದು ಎಂದು ಹೇಳುತ್ತಾರೆ.

ದೀಪಾವಳಿಯನ್ನು ಎಲ್ಲಾ ನೋವು, ಕಷ್ಟಗಳನ್ನು ಮರೆತು ಹೊಸ ಆಶಯದೊಂದಿಗೆ ಆಚರಿಸುತ್ತೇವೆ.

ದೀಪಾವಳಿ 2020: ಲಕ್ಷ್ಮಿ ಪೂಜೆಯ ಸಮಯ

ದೀಪಾವಳಿ 2020: ಲಕ್ಷ್ಮಿ ಪೂಜೆಯ ಸಮಯ

ಈ ವರ್ಷ ನವೆಂಬರ್‌ 14 ಅಂದರೆ ದನ್‌ತೆರೇಸ್‌ನ ಮಾರನೇಯ ದಿನ ಲಕ್ಷ್ಮಿ ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಲಕ್ಷ್ಮಿ ಪೂಜೆಯ ಮುಹೂರ್ತ ಒಂದು ಸಿಟಿಯಿಂದ ಮತ್ತೊಂದು ಸಿಟಿಗೆ ಸ್ವಲ್ಪ ಭಿನ್ನವಾಗಿರುತ್ತದೆ.

 ಲಕ್ಷ್ಮಿ ಪೂಜೆಗೆ ಮುಹೂರ್ತ

ಲಕ್ಷ್ಮಿ ಪೂಜೆಗೆ ಮುಹೂರ್ತ

ದೆಹಲಿಯಲ್ಲಿ ಸಂಜೆ 5:28ರಿಂದ 7:24ರವರೆಗೆ

ಕರ್ನಾಟಕದಲ್ಲಿ ಸಂಜೆ 5:52ರಿಂದ 7:54ರವರೆಗೆ

ಮುಂಬೈಯಲ್ಲಿ ಸಂಜೆ 6:01ರಿಂದ 8:01ರವರೆಗೆ

ಪ್ರದೋಷ ಕಾಲ: ಸಂಜೆ 05:28ರಿಂದ 8:07ರವರೆಗೆ

ವೃಷಭ ಕಾಲ: ಸಂಜೆ 5:28ರಿಂದ 7:24ರವರೆಗೆ

ಅಮವಾಸ್ಯೆ ತಿಥಿ ಪ್ರಾರಂಭ: ನವೆಂಬರ್ 14, ಮಧ್ಯಾಹ್ನ 02:17ರಿಂದ ಪ್ರಾರಂಭ

ಅಮವಾಸ್ಯೆ ತಿಥಿ ಮುಕ್ತಾಯ: ನವೆಂಬರ್‌ 15 ಬೆಳಗ್ಗೆ 10:36ಕ್ಕೆ ಮುಕ್ತಾಯ

ಲಕ್ಷ್ಮೀ ಪೂಜೆಗೆ ಬೇಕಾಗುವ ಸಾಮಾಗ್ರಿಗಳು

ಲಕ್ಷ್ಮೀ ಪೂಜೆಗೆ ಬೇಕಾಗುವ ಸಾಮಾಗ್ರಿಗಳು

  • ಓಂ ಬರೆದಿರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯ
  • ಹಣತೆಗಳು
  • ವ್ಯಾಕ್ಸ್ ಲ್ಯಾಂಪ್ಸ್
  • ಪೂಜಾ ತಟ್ಟೆ
  • ಹಾಲು * ಅಕ್ಕಿ
  • ಲಕ್ಷ್ಮೀ ಮತ್ತು ಗಣೇಶನ ಫೋಟೋ
  • ರೇಷ್ಮೆ ಬಟ್ಟೆ
  • ಸಿಹಿತಿಂಡಿಗಳು
  • ಅಗರ್‌ಬತ್ತಿ
  • ಹೂವುಗಳು
  • ಕಮಲದ ಹೂವುಗಳು
  • ನೀರಿನಿಂದ ತುಂಬಿರುವ ಕಲಶ
  • ಆರತಿ ಬೆಳಗುವ ತಟ್ಟೆ
  • ಪೂಜೆ ವಿಧಾನ

    ಪೂಜೆ ವಿಧಾನ

    • ವೃತ್ತಾಕಾರದಲ್ಲಿರುವ ಥಾಲಿಯನ್ನು ಆರಿಸಿಕೊಳ್ಳಿ
    • ಮಧ್ಯಭಾಗದಲ್ಲಿ ಸ್ವಸ್ತಿಕಾ ಚಿಹ್ನೆಯನ್ನು ಬಿಡಿಸಿ ಇದನ್ನು ಬಿಡಿಸಲು ನೀವು ಶ್ರೀಗಂಧದ ಪೇಸ್ಟ್ ಅನ್ನು ಬಳಸಿಕೊಳ್ಳಬಹುದು.
    • ಮಧ್ಯಭಾಗದಲ್ಲಿ ದೀಪವನ್ನು ಇರಿಸಿ
    • ಘಂಟೆ ಮತ್ತು ಅಗರಬತ್ತಿಯನ್ನು ಇರಿಸಿಕೊಳ್ಳಿ
    • ತಟ್ಟೆಯಲ್ಲಿ ಶಂಖವನ್ನು ಇರಿಸಿ ಬೇಕಾದಲ್ಲಿ ಖಾಲಿ ಇರುವ ಸ್ಥಳವನ್ನು ಹೂವುಗಳಿಂದ ವಿಶೇಷವಾಗಿ ದಾಸವಾಳದಿಂದ ಅಲಂಕರಿಸಿಕೊಳ್ಳಬಹುದಾಗಿದೆ.
    • ಎಲ್ಲಾ ದೀಪಗಳನ್ನು ಇರಿಸಿಕೊಳ್ಳುವುದಕ್ಕಾಗಿ ದೊಡ್ಡ ತಟ್ಟೆಯನ್ನು ಬಳಸಿ. ನಾಣ್ಯಗಳನ್ನು ಇದರಲ್ಲಿ ಇರಿಸಬಹುದು. ರೋಲಿ, ಅಕ್ಕಿ, ಹಸಿ ಹಾಲನ್ನು ಎರಡು ಭಾಗವನ್ನಾಗಿ ಮಾಡಿ. ಒಂದು ಭಾಗವನ್ನು ಪೂಜೆಗೆ ಬಳಸಬೇಕು ಇನ್ನೊಂದು ಭಾಗದಿಂದ ಪೂಜೆಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಜ್ಯೋತಿ ದೀಪಾವಳಿಯಂದು ಲಕ್ಷ್ಮೀ ಮತ್ತು ಗಣೇಶನ ಫೋಟೋಗಳನ್ನು ಬಳಸಲಾಗುತ್ತದೆ.

      ರೇಷ್ಮೆ ಬಟ್ಟೆಯು ಗಾಢವಾಗಿರಬೇಕು. ನಾಣ್ಯಗಳ ತಟ್ಟೆಯೊಂದಿಗೆ ಇದನ್ನು ಬಳಸಬೇಕು ಮತ್ತು ಪೂಜೆ ಮಾಡುವ ಪ್ರದೇಶದಲ್ಲಿ ಬಳಸಲಾಗುತ್ತದೆ. ದೀಪಾವಳಿಯಂದು ಬೆಳಗ್ಗೆ ಪೂಜೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಂಜೆ ಪೂಜೆಯನ್ನು ನಡೆಸಬೇಕು. ನಂತರ ದೀಪಾವಳಿ ಸಂಭ್ರಮ ಆಚರಿಸಿ.

      ದೀಪಾವಳಿ ವಿಶೇಷ ಮಂತ್ರ

      ದೀಪಾವಳಿ ವಿಶೇಷ ಮಂತ್ರ

      'ಓಂ ಶ್ರಿಂಗ್‌ ಹ್ರಿಂಗ್‌ ಕ್ಲಿಂಗ್‌ ಏಂಗ್‌ ಸಾಂಗ್‌ ಓಂ ಹ್ರಿಂಗ್‌ ಕಾ ಏ ಆ ಹ್ರಿಂಗ್‌ ಹಾ ಸಾ ಕಾ ಹಾ ಲಾ ಹ್ರಿಂಗ್‌ ಸಕಲ್‌ ಹ್ರಿಂಗ್‌ ಸಾಂಗ್‌ ಕ್ಲಿಂಗ್‌ ಹ್ರಿಂಗ್‌ ಶ್ರಿಂಗ್‌ ಓಂ'

      ಲಕ್ಷ್ಮೀ ದೇವಿಯನ್ನು ದೀಪಾವಳಿ ಅಮಾವಾಸ್ಯೆಯಂದು ಪೂಜೆ ಮಾಡುವ ಮೂಲಕ ಮನೆ, ವ್ಯಾಪಾರದಲ್ಲಿ ಅಭಿವೃದ್ಧಿ, ಮನ-ಮನೆಯಲ್ಲಿ ಶಾಂತಿ, ಐಶ್ವರ್ಯ ವೃದ್ಧಿ, ಯಶಸ್ಸು ಇವೆಲ್ಲಾ ಲಭಿಸುವುದು.

English summary

Diwali 2020 Laxmi Puja Vidhi, Shubh Muhurat, Puja Time, Samagri List, Mantra, Aarti In Kannada

Here are Diwali 2020 Laxmi Puja Vidhi, Shubh Muhurat, Puja Time, Samagri List, Mantra, Aarti, read on.
Story first published: Wednesday, November 11, 2020, 10:43 [IST]
X
Desktop Bottom Promotion