Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೀಪಾವಳಿ 2020: ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ ಯಾವಾಗ?
2020ರ ನವೆಂಬರ್ 14ರಂದು ನಮ್ಮೆಲ್ಲರ ನೆಚ್ಚಿನ ಹಬ್ಬ ದೀಪಾವಳಿಯ ಸಡಗರ. ಅಂಧಕಾರವನ್ನು ತೊಲಗಿಸಿ, ಬೆಳಕನ್ನು ಮೂಡಿಸುವ ಹಬ್ಬ. ಬದುಕಿಲ್ಲಿರುವ ಕಷ್ಟ, ಅಂಧಕಾರ ಎಲ್ಲಾ ತೊಲಗಿ ದೀಪಾವಳಿಯ ಬೆಳಕಿನಂತೆಯೇ ಬಾಳಲ್ಲಿ ಬೆಳಕು ಮೂಡಲಿ ಎಂಬ ಸಂಕೇತವಾಗಿ ಬೆಳಕಿನ ಹಬ್ಬವನ್ನು ಆಚರಿಸಲಾಗುವುದು.

ಈ ವರ್ಷ ದೀಪಾವಳಿ ಹಬ್ಬವನ್ನು ಆಚರಿಸುವ ಶುಭ ಗಳಿಗೆ ಮುಹೂರ್ತದ ಬಗ್ಗೆ ನೋಡೋಣ ಬನ್ನಿ:

ದೀಪಾವಳಿ: ನವೆಂಬರ್ 14, ಶನಿವಾರ
ಲಕ್ಷ್ಮಿ ಪೂಜೆ ಮುಹೂರ್ತ: ಸಂಜೆ 5:28ರಿಂದ 7:24ರವರೆಗೆ
ಪ್ರದೂಷ ಕಾಲ: ಸಂಜೆ 5:28ರಿಂದ 8:07ರವರೆಗೆ
ವೃಷಭ ಕಾಲ: ಸಂಜೆ 5:28ರಿಂದ 7:24ರವರೆಗೆ
ಅಮವಾಸ್ಯೆ ತಿಥಿ ಪ್ರಾರಂಭ: ಮಧ್ಯಾಹ್ನ 2:17ರಿಂದ ಪ್ರಾರಂಭ
ಅಮವಾಸ್ಯೆ ತಿಥಿ ಮುಕ್ತಾಯ: ನವೆಂಬರ್ 15, ಬೆಳಗ್ಗೆ 10:36ಕ್ಕೆ

ನಿಶ್ಚಿತ ಕಾಲ ಮುಹೂರ್ತ
ಲಕ್ಷ್ಮಿ ಪೂಜೆ ಮುಹೂರ್ತ : ನವೆಂಬರ್14, ರಾತ್ರಿ 11:59ರಿಂದ ಮಧ್ಯರಾತ್ರಿ 12:35ರವರೆಗೆ
ಮಹಾ ನಿಶ್ಚಿತ ಕಾಲ: ನವೆಂಬರ್ 14, 11:39ರಿಂದ ರಾತ್ರಿ 12:32ರವರೆಗೆ
ಸಿಂಹ ಕಾಲ: ನವೆಂಬರ್ 14, 11:59ರಿಂದ ರಾತ್ರಿ 2:46ರವರೆಗೆ
ಅಮವಾಸ್ಯೆ ತಿಥಿ ಪ್ರಾರಂಭ: ನವೆಂಬರ್ 14 ರಂದು 2:17ಕ್ಕೆ
ಅಮವಾಸ್ಯೆ ತಿಥಿ ಮುಕ್ತಾಯ: ನವೆಂಬರ್ 15, 10:36ಕ್ಕೆ

ಲಕ್ಷ್ಮಿ ಪೂಜೆಗೆ ಮುಹೂರ್ತ
ಮಧ್ಯಾಹ್ನದ ಮೇಲೆ (ಚರಾ, ಲಭಾ, ಅಮೃತ) : ನವೆಂಬರ್ 14, 2:17ರಿಂದ, ಸಂಜೆ 4:07ರವರೆಗೆ
ಸಂಜೆ ಮುಹೂರ್ತ, (ಲಭಾ): ಸಂಜೆ 5:28ರಿಂದ ಸಂಜೆ 7:7ರವರೆಗೆ
ರಾತ್ರಿ ಮುಹೂರ್ತ (ಶುಭ, ಅಮೃತ, ಚಾರ): ರಾತ್ರಿ 8:47ರಿಂದ ರಾತ್ರಿ 1:45ರವರೆಗೆ
ಮುಂಜಾನೆ ಪೂಜೆ: ನವೆಂಬರ್ 15 ಬೆಳಗ್ಗೆ 5:04ರಿಂದ , 06:44ರವರೆಗೆ

ದೀಪಾವಳಿ ಆಚರಣೆ
ದೀಪಾವಳಿ ಹಬ್ಬಕ್ಕೆ ಮುಂಚೆಯೇ ಮನೆಯನ್ನು ಸ್ವಚ್ಛ ಮಾಡಿ ಅಲಂಕಾರ ಮಾಡಲಾಗುವುದು. ಆ ದಿನ ಲೈಟ್ಸ್ ಹಾಗೂ ರಂಗೋಲಿ, ಹೂಗಳಿಂದ ಮನೆಗಳನ್ನು ಅಲಂಕರಿಸಲಾಗುವುದು. ಲಕ್ಷ್ಮಿ ಸಂಪತ್ತು ನೀಡುವ ತಾಯಿ, ಈಕೆಯನ್ನು ಪೂಜಿಸಿ ಮನೆಮಂದಿಯೆಲ್ಲಾ ಸಿಹಿ ಹಂಚಿ ಸಂಭ್ರಮ ಪಡುವವರು.



Click it and Unblock the Notifications
