Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಗಣಪತಿ ದೇವರ ವಿವಿಧ ಹೆಸರುಗಳು ಯಾವುದು?
ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು... ಭಾರತದ ಪ್ರತಿಯೊಂದು ಭಾಗ ಹಾಗೂ ಮನೆಗಳಲ್ಲಿ ಗಣೇಶ ದೇವರ ಆರಾಧನೆ ನಡೆಯುತ್ತದೆ. ವಿಘ್ನ ವಿನಾಶಕನಾಗಿರುವ ಗಣೇಶ ದೇವರನ್ನು ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಪೂಜಿಸಲಾಗುತ್ತದೆ.
ಗಣೇಶನನ್ನು ಸಾಮಾನ್ಯವಾಗಿ ಗಣಪತಿ, ವಿಘ್ನೇಶ್ವರ ಅಥವಾ ಗಜಮುಖನೆಂದು ಕರೆಯಲಾಗುತ್ತದೆ. ಗಣೇಶ ಹೆಸರು ಸಂಸ್ಕೃತದ ಗಣ(ಅರ್ಥ ಗುಂಪು, ಗುಣಿಸುವುದು) ಮತ್ತು ಇಶಾ(ದೇವರು) ಎನ್ನುವುದರಿಂದ ಬಂದಿದೆ.
ಗಣೇಶನಿಗೆ 108 ಹೆಸರುಗಳಿವೆ ಮತ್ತು ಪ್ರತಿಯೊಂದು ಅವತಾರವನ್ನು ಭಾರತದೆಲ್ಲೆಡೆ ಪೂಜಿಸಲಾಗುತ್ತದೆ. ಗಣೇಶ ಸಹಸ್ರನಾಮದಿಂದ ಬರುವ ಪ್ರತಿಯೊಂದು ಹೆಸರುಗಳಗೆ ತನ್ನದೇ ಆದ ಅರ್ಥವಿದೆ ಮತ್ತು ಇದು ಗಣೇಶನ
ವಿವಿಧ ರೂಪಗಳನ್ನು ಸೂಚಿಸುತ್ತದೆ. ಗಣಪತಿಯ 108 ಹೆಸರುಗಳು ನಿಮಗೆ ತಿಳಿದಿರಲು ಸಾಧ್ಯವಿಲ್ಲ. ಗಣೇಶ ದೇವರ ಹೆಸರಿನ ಪಟ್ಟಿ ಇಲ್ಲಿದೆ. ಗಣೇಶ ದೇವರ ಕೆಲವೊಂದು ಸಾಮಾನ್ಯ ಹೆಸರುಗಳು
ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

ಗಣಪತಿ
ಇದು ಗಣೇಶ ದೇವರ ಸಾಮಾನ್ಯ ಹೆಸರುಗಳಲ್ಲಿ ಒಂದಾಗಿದೆ. ಗಣಪತಿ ಎಂದರೆ ಎಲ್ಲಾ ಗಣ(ದೇವರು)ಗಳ ದೇವರೆಂದು ಅರ್ಥ.

ಗಜಾನನ
ಗಣೇಶ ದೇವರಿಗೆ ಆನೆಯ ತಲೆಯಿರುವ ಕಾರಣ ಈ ಹೆಸರಿನಿಂದ ಅವರನ್ನು ಕರೆಯಲಾಗುತ್ತದೆ.

ಮಂಗಳಮೂರ್ತಿ
ಇದು ಗಣೇಶ ದೇವರ ಮತ್ತೊಂದು ಹೆಸರು. ಇದರರ್ಥ ಮಂಗಳವನ್ನುಂಟುಮಾಡುವ ದೇವರು. ಮಂಗಳಮೂರ್ತಿಯನ್ನು ಧನಾತ್ಮಕತೆ ಮತ್ತು ಅದೃಷ್ಟಕ್ಕಾಗಿ ಪೂಜಿಸಲಾಗುತ್ತದೆ.

ವಕ್ರತುಂಡ
ಆನೆ ತಲೆಯನ್ನು ಹೊಂದಿರುವ ದೇವರನ್ನು ವಕ್ರತುಂಡನೆಂದು ಕರೆಯುತ್ತಾರೆ. ಬಾಗಿದ ಸೊಂಡಿಲು ಎಂದು ಇದರರ್ಥ.

ಸಿದ್ದಿದಾತ ಮತ್ತು ಸಿದ್ದಿವಿನಾಯಕ
ಗಣೇಶ ದೇವರ ಈ ಎರಡು ಹೆಸರುಗಳು ಸಂತೋಷ ದಯಪಾಲಿಸುವವನೆಂದರ್ಥ.

ವಿನಾಯಕ
ಗಣೇಶ ದೇವರನ್ನು ವಿನಾಯಕೆಂದೂ ಕರೆಯುತ್ತಾರೆ. ಎಲ್ಲದರ ದೇವ ಮತ್ತು ವಿಘ್ನ ನಿವಾರಕನೆಂದರ್ಥ.

ಏಕದಂತ
ಗಣೇಶ ದೇವರ ಮೂರ್ತಿಯನ್ನು ತುಂಬಾ ಹತ್ತಿರದಿಂದ ಗಮನಿಸಿದರೆ ಕೇವಲ ಒಂದು ದಂತವಿರುವುದು ಕಾಣುತ್ತದೆ. ಇದರಿಂದಾಗಿ ಗಣೇಶ ದೇವರನ್ನು ಏಕದಂತನೆಂದು ಕರೆಯುತ್ತಾರೆ.

ನಂದನ
ಶಿವನ ಮಗನಾಗಿರುವ ಕಾರಣದಿಂದ ಗಣೇಶ ದೇವರನ್ನು ನಂದನನೆಂದು ಕರೆಯುತ್ತಾರೆ.

ಓಂಕಾರ
ಶಿವ ದೇವರನ್ನು ಓಂ ಮಂತ್ರದಿಂದ ಜಪಿಸಲಾಗುತ್ತದೆ. ಕೆಲವು ಭಕ್ತರ ಪ್ರಕಾರ ಗಣೇಶ ದೇವರು ಶಿವನ ಒಂದು ಭಾಗ. ಇದರಿಂದ ಆತನನ್ನು ಓಂಕಾರನೆಂದು ಕರೆಯುತ್ತಾರೆ.

ಪಿತಾಂಬರ
ಗಣೇಶ ದೇವರನ್ನು ಪಿತಾಂಬರನೆಂದು ಕರೆಯಲಾಗುತ್ತದೆ. ಗಣೇಶ ದೇವರ ದೇಹವು ಹಳದಿಯಾಗಿರುವುದು ಇದಕ್ಕೆ ಕಾರಣ.

ಪ್ರಥಮೇಶ್ವರ
ಹಿಂದೂ ಪಂಚಾಂಗದ ಪ್ರಕಾರ ಗಣೇಶ ಚತುರ್ಥಿಯನ್ನು ಮೊದಲ ಹಬ್ಬವಾಗಿ ಆಚರಿಸಲಾಗುತ್ತದೆ. ಎಲ್ಲಾ ದೇವರಿಗೆ ಪ್ರಥಮವಾಗಿರುವ ಕಾರಣ ಅವನನ್ನು ಪ್ರಥಮೇಶ್ವರ ಎಂದು ಕರೆಯಲಾಗುತ್ತದೆ.

ಯಜ್ಞಕಾಯ
ಗಣೇಶ ದೇವರನ್ನು ಪೂಜಿಸದೆ ಯಾವುದೇ ಪೂಜೆ ಅಥವಾ ಹವನವು ಪೂರ್ಣಗೊಳ್ಳುವುದಿಲ್ಲ. ಯಜ್ಞಕಾಯನೆಂದರೆ ಎಲ್ಲಾ ಪವಿತ್ರ ಹಾಗೂ ಆದ್ಯಾತ್ಮಿಕ ಅಪರ್ಣೆಗಳನ್ನು ಸ್ವೀಕರಿಸುವ ದೇವರು ಎಂದರ್ಥ.



Click it and Unblock the Notifications