Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ದುರ್ಗಾ ಪೂಜೆ ಆಚರಣೆ; ಹಿನ್ನಲೆ, ಐತಿಹ್ಯವೇನು?
ದುರ್ಗಾ ಪೂಜೆ ಅಥವ ನವರಾತ್ರಿ ಹಬ್ಬದ ಅಸಮಾನ್ಯ ಆಚರಣೆಯಾಗಿದೆ. ಈ ಹಬ್ಬವನ್ನು ನಾವು ಪ್ರತಿ ವರ್ಷವೂ ಆಚರಿಸುತ್ತೇವೆ. ಅನೇಕ ತಲೆಮಾರುಗಳಿಂದ ನಮ್ಮ ಪೂರ್ವಿಕರು ನಮಗೆ ಮೊದಲೇ ಈ ಹಬ್ಬವು ಆಚರಿಸಿಕೊಂಡು ಬಂದಿದ್ದಾರೆ. ನಮ್ಮ ಸಂಸ್ಕೃತಿಯ ಇತರ ಎಲ್ಲಾ ಪದ್ಧತಿಗಳಂತೆ ಹಬ್ಬಗಳು ಏನಾದರೊಂದು ವಿಷಯಕ್ಕೆ ಸಂಬಂಧ ಹೊಂದಿರುತ್ತವೆ. ಹಾಗೆ ವಿನಾ ಕಾರಣದಿಂದ ಏನೂ ಆಚರಿಸುವುದಿಲ್ಲ. ಆದ್ದರಿಂದ ದುರ್ಗಾಪೂಜೆಯ ಮೂಲ ಕಾರಣಗಳೇನು?
ನಮ್ಮ ಇತಿಹಾಸದಲ್ಲಿ ಪೂಜೆಯನ್ನು ಆಚರಿಸಲು ಯಾರು ಮೊದಲು ಪ್ರಾರಂಭಿಸಿದರು? ನಮ್ಮಲ್ಲಿ ಯಾವ ಲಿಖಿತ ಪುರಾವೆಗಳಿಲ್ಲವಾದರೂ ಶ್ರೀ ರಾಮನು ಮೊದಲು ದುರ್ಗಾಪೂಜೆಯನ್ನು ಆರಂಭಿಸಿದನೆಂದು ಮೌಖಿಕ ಸಂಪ್ರದಾಯದಿಂದ ಕಂಡುಬರುತ್ತದೆ.

ನವರಾತ್ರಿ ಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸುತ್ತಾರೆಂದು ಬಹಳಷ್ಟು ಜನರಿಗೆ ತಿಳಿದಿದೆ. ಮಾರ್ಚ್ ಮತ್ತು ಏಪ್ರಿಲ್ ನಡುವೆ ಬರುವ ನವರಾತ್ರಿ ಮುಖ್ಯವಾದ ಹಬ್ಬ. ಹೀಗೆ ಚೈತ್ರಮಾಸದಲ್ಲಿ ಆಚರಿಸುವ ನವರಾತ್ರಿ ಹಬ್ಬವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಆಚರಿಸುವ ಹಬ್ಬಕ್ಕಿಂತ ಮೊದಲಾಗಿದೆ. ಶ್ರೀರಾಮನು ರಾಕ್ಷಸ ರಾಜ ರಾವಣನೊಡನೆ ಯುದ್ಧಮಾಡಲು ಹೊರಡುವ ಮೊದಲು ಹೆಚ್ಚು ಜನಪ್ರಿಯತೆಗಳಿಸಿರುವ ದುರ್ಗಾ ಪೂಜೆಯನ್ನು ಪ್ರಾರಂಭಿಸಿದನು. ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ
ಶ್ರೀರಾಮನು ಲಂಕೆಯ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ದೇವಿಯ ಆಶೀರ್ವಾದ ಪಡೆಯಲು ಇಚ್ಛಿಸಿದನು. ಅದಕ್ಕಾಗಿ ಅವನು ಆರು ತಿಂಗಳು ಕಾಯುವುದಕ್ಕೆ ಇಷ್ಟಪಡಲಿಲ್ಲ. ಆದ್ದರಿಂದ ಅವನು ತಪ್ಪಾದ ಮಾಸದಲ್ಲಿ ದುರ್ಗಾ ದೇವಿಯ ಪೂಜೆಯನ್ನು ಕೈಕೊಂಡನು. ಆದ್ದರಿಂದಲೇ ಅವನು ದುರ್ಗಾಪೂಜೆಯನ್ನು ಮಾಡಿದ ಮಾಸವನ್ನು 'ಅಕಾಲ್ ಬೋಧಾನ್' ಅಥವಾ ತಪ್ಪು ಮಾಸದಲ್ಲಿ ಮಾಡಿದ ಪೂಜೆ ಎಂದು ಉಲ್ಲೇಖಿಸಲಾಗಿದೆ. ಅವನು ಪೂಜೆಯನ್ನು ಆಚರಿಸಲು ದುರ್ಗಾದೇವಿಗೆ 108 ಕಮಲ ಹೂವುಗಳನ್ನು ಅರ್ಪಿಸಿ 108 ದೀಪಗಳನ್ನು ಹಚ್ಚಿದನು.
ಶ್ರೀರಾಮನು ಪೂಜೆಮಾಡುವ ಸಮಯದಲ್ಲಿ ರಾಕ್ಷಸನೊಬ್ಬನು ಒಂದು ಕಮಲವನ್ನು ಕದ್ದುಬಿಟ್ಟನು. ಆದ್ದರಿಂದ ಪೂಜೆಯನ್ನು ಸಂಪೂರ್ಣಗೊಳಿಸಲು ಶ್ರೀರಾಮನು ಕಮಲದ ಬದಲಿಗೆ ತನ್ನ ಎರಡು ಕಣ್ಣುಗಳಲ್ಲಿ ಒಂದು ಕಣ್ಣನ್ನು ಅರ್ಪಿಸಲು ಸಿದ್ಧನಾದನು. ಆದರೆ ಅವನು ಹಾಗೆ ಮಾಡುವ ಮೊದಲೇ ದೇವಿಯು ಶ್ರೀರಾಮನ ಮುಂದೆ ಪ್ರತ್ಯಕ್ಷ್ಯಳಾಗಿ ಅವನು ಯುದ್ಧದಲ್ಲಿ ವಿಜಯಶಾಲಿಯಾಗಲೆಂದು ಹರಸಿದಳು. ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು
ನವರಾತ್ರಿಯ ಹತ್ತನೇ ದಿವಸ ಶ್ರೀರಾಮನು ರಾವಣನನ್ನು ಸಂಹರಿಸಿದನು. ಈಗಲೂ ಕೂಡ ದಸರಾ ಹಬ್ಬದ ಹತ್ತನೆಯ ದಿವಸ ಶ್ರೀರಾಮನ ಐತಿಹಾಸಿಕ ವಿಜಯವನ್ನು ಆಚರಿಸಲು ರಾವಣನ ವಿಗ್ರಹವನ್ನು ಸೃಷ್ಟಿಸಿ ಸುಡುತ್ತಾರೆ. ಆದ್ದರಿಂದ ಪೌರಾಣಿಕ ದೃಷ್ಟಿಯಿಂದ ದುರ್ಗಾ ಪೂಜೆಯ ಮೂಲವು ಲಂಕೆಯಮೇಲೆ ಮಾಡಿದ ಮಹಾ ಯುದ್ಧದಲ್ಲಿ ಅಡಗಿದೆ.



Click it and Unblock the Notifications