For Quick Alerts
ALLOW NOTIFICATIONS  
For Daily Alerts

ಅನಾಚಾರ ಮಾಡಿದರೂ ದುರ್ಯೋಧನ ಸ್ವರ್ಗಕ್ಕೆ ಹೋಗಲು ಕಾರಣವೇನು?

|

ಹಿಂದೂ ಧರ್ಮದಲ್ಲಿ ಅನ್ಯಾಯ, ಪಾಪ ಮಾಡಿದರೆ ಅಂತಹ ವ್ಯಕ್ತಿಗಳು ನರಕಕ್ಕೆ ಹಾಗೂ ಒಳ್ಳೆಯ ಕರ್ಮಗಳನ್ನು ಹಾಗೂ ದಾನಗಳನ್ನು ಮಾಡಿರುವಂತಹ ಜನರು ಸ್ವರ್ಗಕ್ಕೆ ಹೋಗುವರು ಎನ್ನುವ ಮಾತಿದೆ. ಇದನ್ನು ಒಳ್ಳೆಯ ಕರ್ಮ ಮತ್ತು ಕೆಟ್ಟ ಕರ್ಮ ಎಂದು ಕೇಳಬಹುದು. ಅಥವಾ ಪಾಪ ಮತ್ತು ಪುಣ್ಯ. ಒಳ್ಳೆಯ ಕರ್ಮವೆಂದರೆ ಅದು ಬೇರೆಯವರ ಒಳ್ಳೆಯದಕ್ಕಾಗಿ, ಯಾವುದೇ ದುರುದ್ದೇಶವಿಲ್ಲದೆ ಮಾಡಿರುವಂತಹದ್ದು. ಕೆಟ್ಟ ಕರ್ಮ ಅಥವಾ ಪಾಪವೆಂದರೆ ಅದು ಬೇರೆಯವರಿಗೆ ಅನ್ಯಾಯ ಅಥವಾ ನೋವು ಮಾಡುವುದು. ಇದು ದುರುದ್ದೇಶದಿಂದ ಕೂಡಿರುವುದು. ಇದರಿಂದಾಗಿ ಇಲ್ಲಿ ಉದ್ದೇಶವು ಎಲ್ಲಾ ಕರ್ಮಗಳ ಲೆಕ್ಕಾಚಾರ ಮಾಡುವುದು. ಇದರ ಪರಿಣಾಮವಾಗಿ ಸ್ವರ್ಗ ಅಥವಾ ನರಕವನ್ನು ನೀಡಲಾಗುವುದು.

ಪಾಪ ಮಾಡಿರುವಂತಹ ವ್ಯಕ್ತಿಗಳನ್ನು ನರಕಕ್ಕೆ ಕಳುಹಿಸಲಾಗುತ್ತದೆ ಮತ್ತು ಪುಣ್ಯ ಮಾಡಿರುವಂತಹ ವ್ಯಕ್ತಿಗಳನ್ನು ಸಾವಿನ ಬಳಿಕ ಸ್ವರ್ಗಕ್ಕೆ ಕಳುಹಿಸಲಾಗುವುದು ಎನ್ನುವುದು ಹಿಂದೂ ಧರ್ಮಿಯರು ನಂಬಿಕೆ. ಸಾವಿನ ಬಳಿಕ ಆ ವ್ಯಕ್ತಿಯು ಎಲ್ಲಿಗೆ ಹೋಗುತ್ತಾನೆ ಎನ್ನುವುದನ್ನು ನಿರ್ಧರಿಸುವುದು ಯಮರಾಜ. ಅಂದರೆ ಸಾವಿನ ದೇವತೆ. ಈ ಕಾರಣದಿಂದಾಗಿ ಯಾವಾಗಲೂ ಪುಣ್ಯ ಹಾಗೂ ಪಾಪದ ಬಗ್ಗೆ ಹೋರಾಟವು ನಡೆಯುತ್ತಲೇ ಇರುತ್ತದೆ.

Duryodhan

ಯಾರು ಗೆಲುವು ಪಡೆಯುತ್ತಾರೋ ಅವು ಮುನ್ನಡೆಯುವರು. ಇದರಲ್ಲಿ ಒಂದು ದೊಡ್ಡ ಹೋರಾಟವೆಂದರೆ ಅದು ಮಹಾಭಾರತ. ಇದರ ಅಂತಿಮ ಸಾರಾಂಶವೆಂದರೆ ಕೌರವರನ್ನು ಅಂತಿಮವಾಗಿ ನರಕಕ್ಕೆ ಕೊಂಡೊಯ್ಯಲಾಯಿತು. ಆದರೆ ಒಬ್ಬ ಕೌರವನಿಗೆ ಸ್ವರ್ಗದಲ್ಲಿ ಜಾಗ ಸಿಕ್ಕಿದೆ ಎಂದು ಹೇಳಲಾಗಿದೆ. ಸಾವಿನ ಬಳಿಕ ದುರ್ಯೋದನನು ಸ್ವರ್ಗಕ್ಕೆ ಹೋಗಿದ್ದಾನೆ ಎಂದು ನಂಬಲಾಗಿದೆ. ಪಾಂಡವರನ್ನು ನ್ಯಾಯಧರ್ಮಿಯರು ಮತ್ತು ಕೌರವರನ್ನು ಅಧರ್ಮಿಯರು ಎಂದು ಕರೆಯಲಾಗುತ್ತದೆ. ಹೀಗೆ ಇದ್ದರೂ ತುಂಬಾ ಅನಾಚಾರ ಮಾಡಿರುವ ದುರ್ಯೋಧನನು ಸ್ವರ್ಗಕ್ಕೆ ಹೋಗಲು ಕಾರಣವೇನು? ಇದು ಹೇಗೆ ನಡೆಯಿತು? ಮುಂದೆ ಓದುತ್ತಾ ಸಾಗಿ...

ಆತ ತುಂಬಾ ಉದಾರಿ ಮತ್ತು ಪರಿಗಣಿಸಲ್ಪಟ್ಟ ರಾಜ

ಆತ ತುಂಬಾ ಉದಾರಿ ಮತ್ತು ಪರಿಗಣಿಸಲ್ಪಟ್ಟ ರಾಜ

ದುರ್ಯೋಧನ ತುಂಬಾ ವಿನಯಶೀಲ, ಒಳ್ಳೆಯ ಮತ್ತು ತನ್ನ ರಾಜ್ಯದಲ್ಲಿ ನ್ಯಾಯದ ರಾಜನಾಗಿದ್ದ. ಇದು ಮಾತ್ರ ಆತನ ಪರವಾಗಿ ಇರುವುದಲ್ಲ. ಒಂದು ಘಟನೆಯು ಆತನ ಸಾಮರ್ಥ್ಯ ಮತ್ತು ಸಾಧನೆಯನ್ನು ಒಬ್ಬ ಯಶಸ್ವಿ ರಾಜನೆಂದು ಸಾಬೀತು ಮಾಡಿದೆ. ಪುರಾಣಗಳ ಪ್ರಕಾರ, ದುರ್ಯೋಧನನು ಯುದ್ಧದ ಬಳಿಕ ಸಾಯಬೇಕಿತ್ತು ಮತ್ತು ಕೃಷ್ಣನು ಆತನ ಬದಿಯಲ್ಲಿ ಕುಳಿತ್ತಿದ್ದ. ಆತ ಕೃಷ್ಣನಲ್ಲಿ ಈ ರೀತಿಯಾಗಿ ಹೇಳುತ್ತಾನೆ..``ನಾನು ಯಾವಾಗಲೂ ಒಳ್ಳೆಯ ರಾಜನಾಗಿದ್ದೆ ಮತ್ತು ನಾನು ಈಗ ಸಾಯುತ್ತೇನೆ ಮತ್ತು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತೇನೆ. ಆದರೆ ಓ ಕೃಷ್ಣ ನೀನು ಮಾತ್ರ ದುಃಖದಲ್ಲಿರುವೆ.'' ತನ್ನ ಮಾತನ್ನು ಮುಗಿಸುತ್ತಾ ಇರುವಂತೆ ದುರ್ಯೋಧನನ ಮೇಲೆ ಪುಷ್ಪವೃಷ್ಟಿ ಆಯಿತು. ಆತ ಹೇಳಿರುವುದು ನಿಜವೆಂದು ಈ ಘಟನೆಯಿಂದ ತಿಳಿದುಬರುವುದು.

Most Read: ಸ್ವಾರಸ್ಯಕರ-ರೋಚಕ ಕಥಾನಕಗಳ ಭಂಡಾರ 'ಮಹಾಭಾರತ'

ವಿನಯಶೀಲ, ಅರ್ಥ ಮಾಡಿಕೊಳ್ಳುವ ಮತ್ತು ಸರಳ ವ್ಯಕ್ತಿತ್ವದವ

ವಿನಯಶೀಲ, ಅರ್ಥ ಮಾಡಿಕೊಳ್ಳುವ ಮತ್ತು ಸರಳ ವ್ಯಕ್ತಿತ್ವದವ

ದುರ್ಯೋಧನನಿಗೆ ಕರ್ಣ ತುಂಬಾ ಆಪ್ತ ಹಾಗೂ ನಂಬಿಕಸ್ಥ ಸ್ನೇಹಿತನಾಗಿದ್ದ. ಈ ಮೂಲಕವಾಗಿ ಕರ್ಣನು ದುರ್ಯೋಧನನ ಪತ್ನಿಯ ಸ್ನೇಹಿತನೂ ಆದ. ಒಮ್ಮೆ ದುರ್ಯೋಧನ ಇಲ್ಲದೆ ಇರುವ ಸಮಯದಲ್ಲಿ ಕರ್ಣನು ದುರ್ಯೋಧನನ ಪತ್ನಿಯ ಜತೆಗೆ ಪಗಡೆಯಾಟ ಆಡುತ್ತಲಿದ್ದ. ದುರ್ಯೋಧನನ ಪತ್ನಿಯ ಮುಖವು ಬಾಗಿಲಿನ ಕಡೆಗೆ ಇದ್ದರೆ, ಕರ್ಣನ ಬೆನ್ನು ಬಾಗಿಲಿನ ಬದಿಗಿತ್ತು. ಕರ್ಣ ಮುನ್ನಡೆಯಲ್ಲಿದ್ದ ಮತ್ತು ದುರ್ಯೋಧನನ ಪತ್ನಿಯು ಸೋತಳು. ಇದೇ ವೇಳೆ ದುರ್ಯೋಧನ ಕೂಡ ಅಲ್ಲಿಗೆ ಬಂದ. ಕೋಣೆಯ ಒಳಗಡೆ ತಮಗಿಂತ ಹಿರಿಯರು ಬಂದಾಗ ಎದ್ದು ನಿಂತು ಗೌರವ ಸಲ್ಲಿಸುವುದು ಆ ದಿನಗಳಲ್ಲಿ ಇದ್ದ ಸಂಪ್ರದಾಯವಾಗಿತ್ತು. ಇಲ್ಲಿ ದುರ್ಯೋಧನನು ಒಬ್ಬ ಪತಿಗಿಂತಲೂ ರಾಜ ಎನ್ನುವುದು ಮುಖ್ಯವಾಗಿತ್ತು. ರಾಜ ಬರುತ್ತಿರುವಂತೆ ರಾಣಿ ಕೂಡ ಎದ್ದು ನಿಂತಳು. ಆದರೆ ಸೋಲುವ ಭೀತಿಯಿಂದಾಗಿ ಆಕೆ ಎದ್ದು ಹೋಗಲು ಪ್ರಯತ್ನಿಸುತ್ತಿದ್ದಾಳೆಂದು ಕರ್ಣನು ಭಾವಿಸಿದ. ಆತ ಆಕೆಯ ಅಲಂಕಾರಿಕ ವಸ್ತವನ್ನು ಹಿಡಿಯಲು ಪ್ರಯತ್ನಿಸಿದ, ಈ ವೇಳೆ ಅದರ ದಾರವು ತುಂಡಾಗಿ ಕೆಳಗೆ ಬಿತ್ತು. ಆದರೆ ರಾಜನಾಗಿರುವವನಿಗೆ ಇಲ್ಲಿ ನಡೆದಿರುವಂತಹ ವಿಚಾರವು ತಿಳಿಯದೆ ಕೋಪಗೊಂಡು ಪ್ರತಿಕ್ರಿಯಿಸಬಹುದಿತ್ತು. ಆದರೆ ದುರ್ಯೋಧನ ಮಾತ್ರ ತುಂಬಾ ಶಾಂತವಾಗಿ ಪ್ರತಿಕ್ರಿಯೆ ನೀಡಿದ. ನಾನು ಅಲಂಕಾರವನ್ನು ಎತ್ತಿಕೊಂಡು ಅದನ್ನು ಮತ್ತೊಮ್ಮೆ ಹೊಲಿಸಿಕೊಡಲೇ ಎಂದು ಕೇಳುವನು. ರಾಜನಿಗೆ ತನ್ನ ಪತ್ನಿ ಹಾಗೂ ಸ್ನೇಹಿತನ ಮೇಲೆ ನಂಬಿಕೆ ಇದ್ದದ್ದು ಮಾತ್ರವಲ್ಲದೆ, ಆತ ತುಂಬಾ ಸರಳ ವ್ಯಕ್ತಿಯು ಆಗಿದ್ದ.

ಆತ ಪಕ್ಷಾತೀತವಾಗಿದ್ದ ವ್ಯಕ್ತಿ

ಆತ ಪಕ್ಷಾತೀತವಾಗಿದ್ದ ವ್ಯಕ್ತಿ

ಹೆಚ್ಚಿನವರಿಗೆ ಕರ್ಣನು ಕುಂತಿಯ ಮಗ ಎಂದು ತಿಳಿದಿರಲಿಲ್ಲ. ದುರ್ಯೋಧನನಿಗೆ ಕೂಡ ಕರ್ಣನು ಶೂದ್ರ ಜನಾಂಗಕ್ಕೆ ಸೇರಿದವ ಎಂದು ತಿಳಿದಿತ್ತು. ಇದರಿಂದಾಗಿ ಕರ್ಣನು ಯಾವಾಗಲೂ ಹೀಯಾಳಿಸಲ್ಪಡುತ್ತಿದ್ದನು ಮತ್ತು ಜಾತೀಯವಾದಕ್ಕೆ ಬಲಿಯಾಗುತ್ತಿದ್ದ. ತನ್ನ ಸ್ವಯಂವರದಲ್ಲಿ ಕರ್ಣನು ಭಾಗಿಯಾಗಲು ಬಯಸಿದಾಗ ದ್ರೌಪತಿ ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ಆದರೆ ಈ ವೇಳೆ ದುರ್ಯೋಧನ ಮಾತ್ರ ಕರ್ಣನ ಬೆಂಬಲಕ್ಕೆ ನಿಂತ. ಒಬ್ಬ ಯೋಧ, ಸನ್ಯಾಸಿ ಮತ್ತು ತತ್ವಜ್ಞಾನಿಗೆ ಯಾವುದೇ ರೀತಿಯ ಜಾತಿ ಅಥವಾ ಮೂಲವು ಇರುವುದಿಲ್ಲವೆಂದು ದುರ್ಯೋಧನನು ಹೇಳುವನು. ಅವರು ಶ್ರೇಷ್ಠರಾಗಿ ಹುಟ್ಟಿರುವುದು ಮಾತ್ರವಲ್ಲದೆ, ಶ್ರೇಷ್ಠರಾಗಿರುವರು. ಇದರಿಂದ ದುರ್ಯೋಧನನಿಗೆ ಜಾತಿ ಪಂಗಡಗಳಲ್ಲಿ ಯಾವುದೇ ನಂಬಿಕೆ ಇರಲಿಲ್ಲ ಮತ್ತು ಆತ ಸಮಾನತೆಯನ್ನು ನಂಬಿಕೊಂಡಿದ್ದ ಎಂದು ಇಲ್ಲಿ ತಿಳಿದುಬರುವುದು.

Most Read: ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ ಅಚ್ಚರಿಯ ಚಿಹ್ನೆಗಳು!

ದುರ್ಯೋಧನನು ತನ್ನ ಮಾವ ಶಕುನಿಯ ದುರುದ್ದೇಶಕ್ಕೆ ದಾಳವಾಗಿ ಬಳಸಲ್ಪಟ್ಟ

ದುರ್ಯೋಧನನು ತನ್ನ ಮಾವ ಶಕುನಿಯ ದುರುದ್ದೇಶಕ್ಕೆ ದಾಳವಾಗಿ ಬಳಸಲ್ಪಟ್ಟ

ಇದೇ ರೀತಿಯಾಗಿ ದುರ್ಯೋಧನನು ಒಳ್ಳೆಯ ರಾಜ, ಸ್ನೇಹಿತ, ಪತಿ, ಒಳ್ಳೆಯ ವ್ಯಕ್ತಿ ಎನ್ನುವದನ್ನು ಹಲವಾರು ಘಟನೆಗಳಿಂದ ಸಾಬೀತು ಮಾಡಬಹುದು. ಅದಾಗ್ಯೂ, ದುರ್ಯೋಧನನ ಮಾವ ಶಕುನಿಯಿಂದಾಗಿ ಆತನಿಗೆ ತುಂಬಾ ಕೆಟ್ಟವ ಎನ್ನುವ ಹೆಸರು ಬಂತು. ಶಕನಿಯ ಒಳಗಡೆ ಕುದಿಯುತ್ತಿದ್ದ ದ್ವೇಷಾಗ್ನಿಯಿಂದಾಗಿ ದೃತರಾಷ್ಟ್ರನ ಸಂಪೂರ್ಣ ಸಾಮ್ರಾಜ್ಯವನ್ನು ಧ್ವಂಸ ಮಾಡಬೇಕೆಂದು ಬಯಸಿದ್ದ. ಶಕನಿಯು ತನ್ನ ಹಗೆ ತೀರಿಸಿಕೊಳ್ಳಲು ದುರ್ಯೋಧನನನ್ನು ಕೈಗೊಂಬೆಯಾಗಿ ಮಾಡಿಕೊಳ್ಳುತ್ತಾನೆ. ತನ್ನ ಮಾವ ಶಕುನಿ ಮೇಲೆ ಇಟ್ಟಿರುವಂತಹ ಅತಿಯಾದ ನಂಬಿಕೆಯಿಂದಾಗಿ ದುರ್ಯೋಧನನಿಗೆ ಈ ಪರಿಸ್ಥಿತಿ ಬಂದಿದೆ ಎಂದು ಹೇಳಲಾಗುತ್ತದೆ. ಸಾವಿನ ಬಳಿಕ ಸ್ವರ್ಗದಲ್ಲಿ ಪಾಂಡವರು ದುರ್ಯೋಧನನ್ನು ಕಂಡು ಅಚ್ಚರಿಗೊಂಡು ಯಮರಾಜನಲ್ಲಿ ಆತ ಇಲ್ಲಿಗೆ ಬಂದಿರುವುದು ಹೇಗೆ ಎಂದು ಪ್ರಶ್ನಿಸುವರು. ಆತ ನರಕದಲ್ಲಿ ತನ್ನ ಪಾಪಗಳಿಗೆ ತಕ್ಕ ಶಿಕ್ಷೆ ಅನುಭವಿಸಿದ್ದಾನೆ ಮತ್ತು ಪುಣ್ಯದ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಾನೆ ಎಂದು ಯಮನು ಹೇಳುವನು.

English summary

Did Duryodhan go to heaven?

Hindu philosophies say that the doer of Punya or good Karma is sent to heaven and the other who has earned Paap or evil Karma is sent to hell. However, Duryodhana, the eldest of the Kauravas, is believed to have been sent to heaven after his death. What could have been the reasons? Were his sins forgiven, or had he served his share of punishment?
X
Desktop Bottom Promotion