For Quick Alerts
ALLOW NOTIFICATIONS  
For Daily Alerts

ಶೂನ್ಯ ಮಾಸವಾದ ಧನುರ್ಮಾಸ ಶುಭ ಕಾರ್ಯಕ್ಕೆ ಶ್ರೇಷ್ಠವಲ್ಲ, ಪೂಜೆಗೆ ಶ್ರೇಷ್ಠ ಏಕೆ?

|

ಹಿಂದೂ ಪಂಚಾಂಗದ ಪ್ರಕಾರ ಇದೀಗ ಮಾರ್ಗಶಿರ ಮಾಸ. ಇದನ್ನು, ಸೌರಮಾನದ ಪ್ರಕಾರ ಧನುರ್ಮಾಸ (ಧನುರ್ ಮಾಸ) ಎಂದು ಕೂಡ ಕರೆಯಲಾಗುವುದು . ಮರಗಟ್ಟುವ ಕೊರೆಯುವ ಚಳಿಯಲ್ಲಿ ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ ಪೂಜೆಯನ್ನು ಮಾಡುತ್ತಾ ಈ ಮಾಸದ ಆಚರಣೆ ಮಾಡಲಾಗುವುದು. 9ನೇ ಮಾಸವಾದ ಇದನ್ನು ಶೂನ್ಯ ಮಾಸವೆಂದು ಕೆಲವರು ಹೇಳಿದರೆ ಇನ್ನು ಇದನ್ನು ಶ್ರೇಷ್ಠ ಮಾಸವೆಂದು ಮತ್ತೆ ಕೆಲವರು ಹೇಳುತ್ತಾರೆ. ಆದ್ದರಿಂದ ಈ ಮಾಸದ ಕುರಿತು ಹಲವರಿಗೆ ಗೊಂದಲಗಳಿವೆ.

Dhanurmasam, The Zero Month, Is Not Great For Auspicious Work, Why Is It Great For Puja?

ನಾವಿಲ್ಲಿ ಧನುರ್ಮಾಸವನ್ನು ಏಕೆ ಶೂನ್ಯ ಮಾಸವೆಂದು ಹೇಳಲಾಗುವುದು, ಯಾವ ಕಾರ್ಯಕ್ಕೆ ಈ ಮಾಸ ಶ್ರೇಷ್ಠ ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ.

ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆ

ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆ

ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ಈ ತಿಂಗಳು ಡಿಸೆಂಬರ್ 15ಕ್ಕೆ ಸೂರ್ಯನು ಧನು ರಾಶಿಗೆ ಸಂಚರಿಸುತ್ತಿದ್ದಾನೆ. ವೇದ, ಪುರಾಣಗಳಲ್ಲಿ ಈ ಮಾಸವನ್ನು ದೈವೀ ಕಾರ್ಯಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆ. ಈ ಮಾಸದಲ್ಲಿ ದೇವಾಲಯಗಳಲ್ಲಿ ಪೂಜೆಗಷ್ಟೇ ಮೀಸಲಿರಿಸಲಾಗಿದೆ. ಈ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡಲಾಗುವುದು. ಕೃಷ್ಣನಿಗೂ ಇದು ಪ್ರಿಯವಾದ ಮಾಸವಾಗಿದೆ.

ಧನುರ್ಮಾಸದಲ್ಲಿ ಮಾಡುವ ಪೂಜೆಗಳಿಗೆ ಸಿಗುವುದು ವಿಶೇಷ ಫಲ

ಧನುರ್ಮಾಸದಲ್ಲಿ ಮಾಡುವ ಪೂಜೆಗಳಿಗೆ ಸಿಗುವುದು ವಿಶೇಷ ಫಲ

ಹಿಂದೂ ಪಂಚಾಗದಲ್ಲಿ ಕಾಲವನ್ನು ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ವಿಭಾಗಿಸಲಾಗಿದೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿಗೆ ಎಂದು ಹೇಳಲಾಗುವುದು. ಮಾರ್ಗಶಿರ ಮಾಸ/ ಧನುರ್‌ ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ. ಈ ಕಾರಣದಿಂದ ದೇವತೆಗಳಿಗೆ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಸಿಗಲಿದೆ.

ಶುಭ ಕಾರ್ಯಕ್ಕೆ ಶ್ರೇಷ್ಠವಲ್ಲ ಏಕೆ?

ಶುಭ ಕಾರ್ಯಕ್ಕೆ ಶ್ರೇಷ್ಠವಲ್ಲ ಏಕೆ?

ನಾಮಕರಣ, ವಿವಾಹ ಮೊದಲಾದ ಶುಭ ಮುಹೂರ್ತಗಳಿಗೆ ಈ ಮಾಸ ಶ್ರೇಷ್ಠವಲ್ಲ, ಈ ಮಾಸವನ್ನು ದೇವಾಲಯದಲ್ಲಿ ಪೂಜೆಗಷ್ಏ ಮೀಸಲಿರಿಸಲಾಗಿದೆ, ಆದ್ದರಿಂದ ಧನುರ್‌ ಮಾಸದಲ್ಲಿ ಮದುವೆ ಮುಂತಾದ ಶುಭ ಕಾರ್ಯ ಮಾಡಲಾಗುವುದಿಲ್ಲ, ಆದ್ದರಿಂದ ಇದನ್ನು ಶೂನ್ಯ ಮಾಸವೆಂದು ಕರೆಯಲಾಗುವುದು. ಈ ಮಾಸದಲ್ಲಿ ಬೆಳಗ್ಗೆ ತಣ್ಣೀರು ಸ್ನಾನ ಮಾಡಿ, ಇಷ್ಟ ದೇವರನ್ನು ಪ್ರಾರ್ಥಿಸುವುದರಿಂದ ಒಳ್ಳೆಯ ಫಲ ಸಿಗುವುದು.

ಸಂತಾನ ಭಾಗ್ಯಕ್ಕಾಗಿ ಸುಬ್ರಹ್ಮಣ್ಯನಿಗೆ ಪೂಜೆ

ಸಂತಾನ ಭಾಗ್ಯಕ್ಕಾಗಿ ಸುಬ್ರಹ್ಮಣ್ಯನಿಗೆ ಪೂಜೆ

ಈ ಮಾಸದಲ್ಲಿ ಅಮಾವಾಸ್ಯೆಯ 6 ದಿನಗಳ ನಂತರ ಚಂಪ ಷಷ್ಟಿಯನ್ನು ಆಚರಿಸಲಾಗುತ್ತದೆ. ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ...... ಚಂಪ ಷಷ್ಠಿ ಡಿಸೆಂಬರ್ 20ರಂದು ನಡೆಯಲಿದೆ.

English summary

Dhanurmasam, The Zero Month, Is Not Great For Auspicious Work, Why Is It Great For Puja?

Here we explain Dhanurmasam, the zero month, is not great for auspicious work, why is it great for puja? read on.
Story first published: Monday, December 14, 2020, 17:09 [IST]
X
Desktop Bottom Promotion