For Quick Alerts
ALLOW NOTIFICATIONS  
For Daily Alerts

ನವೆಂಬರ್ 13, ಧನ್‌ತೆರೇಸ್‌: ಈ ದಿನದಂದು ಏಕೆ ಚಿನ್ನಕೊಳ್ಳಬೇಕು ಅಂತಾರೆ?

|

ಚಿನ್ನ ಎನ್ನುವುದು ಒಂದು ಸಂಪತ್ತು, ಇದನ್ನು ಲಕ್ಷ್ಮಿಯೆಂದು ಪೂಜಿಸಲಾಗುವುದು. ವಿಶೇಷ ದಿನಗಳಲ್ಲಿ ಚಿನ್ನ ಖರೀದಿ ಮಾಡುವುದು ಶುಭವೆಂದು ಹೇಳಲಾಗುವುದು. ಅದರಂತೆಯೇ ಅಕ್ಷಯ ತೃತೀಯ, ಮಕರ ಸಂಕ್ರಾಂತಿ, ನವರಾತ್ರಿ, ಹಾಗೂ ಧನ್‌ತೆರೇಸ್ ಅಥವಾ ದಂತೆರೇಸ್ ದಿನದಂದು ಹೆಚ್ಚಿನವರು ಚಿನ್ನವನ್ನು ಖರೀದಿ ಮಾಡುತ್ತಾರೆ.

ದೀಪಾವಳಿಗೆ ಮನೆಯನ್ನು ಸ್ವಚ್ಛ ಮಾಡಿ ಹಿಂದಿನ ದಿನ ಧನ್‌ತೆರೇಸ್ ಆಚರಿಸಲಾಗುವುದು. ಈ ವರ್ಷ ನವೆಂಬರ್‌ 13ರಂದು ದನ್‌ತೆರೇಸ್ ಆಚರಿಸಲಾಗುವುದು. ಈ ದಿನ ಚಿನ್ನ, ಬೆಳ್ಳಿ ಹಾಗೂ ಹೊಸ ಪಾತ್ರೆಗಳನ್ನು ಕೊಳ್ಳುವುದರಿಂದ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದಾಗಿ ಈ ದಿನ ಚಿನ್ನವನ್ನು ಖರೀದಿ ಮಾಡುತ್ತಾರೆ.

ಧನ್‌ ತೆರೇಸ್ ದಿನ ಚಿನ್ನವನ್ನು ಏಕೆ ಖರೀದಿ ಮಾಡುತ್ತಾರೆ ಎಂಬುವುದರ ಹಿಂದೆ ಪೌರಾಣಕ ಕತೆಯಿದೆ.ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,

ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು

ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋ ಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.

ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

 ಪೌರಾಣಿಕ ಕತೆ

ಪೌರಾಣಿಕ ಕತೆ

ಒಂದು ಕಾಲದಲ್ಲಿ ಹಿಮಾ ಎಂಬ ಹೆಸರಿನ ರಾಜನಿದ್ದ, ಅವನ ಮಗನಿಗೆ 16 ವರ್ಷ ಮಾತ್ರ ಆಯುಸ್ಸು ಇತ್ತು. ಆತ ಮದುವೆಯಾಗುತ್ತೇನೆ. ಜ್ಯೋತಿಷಿಗಳು ಆತ ಮದುವೆಯಾದ ನಾಲ್ಕನೇ ದಿನ ಹಾವು ಕಚ್ಚಿ ಸಾಯುವುದಾಗಿ ಹೇಳುತ್ತಾರೆ. ಇದನ್ನು ತಿಳಿದ ರಾಜ ಹಾಗೂ ರಾಜನ ಮಗನನ್ನು ಮದುವೆಯಾದ ತುಂಬಾ ಚಿಂತೆ ಮಾಡುತ್ತಾರೆ.

ರಾಜಕುಮಾರನನ್ನು ಮದುವೆಯಾದ ರಾಜಕುಮಾರಿ ಪತಿಯನ್ನು ಹೇಗಾದರೂ ಮಾಡಿ ಬದುಕಿಸಬೇಕೆಂದು ನಿರ್ಧರಿಸುತ್ತಾಳೆ. ಆಕೆ ಅರಮನೆಯಲ್ಲಿರುವ ಅಷ್ಟೂ ಚಿನ್ನಾಭರಣಗಳನ್ನು ಸಂಗ್ರಹಿಸುತ್ತಾಳೆ. ಅದನ್ನು ಮುಖ್ಯದ್ವಾರದ ಬಳಿ ಇಟ್ಟು ರಾಜಕುಮಾರನಿಗೆ ನಿದ್ದೆ ಮಾಡದಂತೆ ಸೂಚಿಸಿ ಆತನ ಜೊತೆಯೇ ಕೂರುತ್ತಾಳೆ. ಆತನಿಗೆ ನಿದ್ದೆ ಬಾರದಿರಲು ಸುಂದರವಾದ ಕತೆಗಳನ್ನು ಹೇಳುತ್ತಾಳೆ.

 ರಾಜ ಕುಮಾರನ ಪ್ರಾಣ ತೆಗೆಯಲು ಬಂದ ಯಮ

ರಾಜ ಕುಮಾರನ ಪ್ರಾಣ ತೆಗೆಯಲು ಬಂದ ಯಮ

ಇತ್ತ ರಾಜಕುಮಾರನ ಪ್ರಾಣ ತೆಗೆಯಲು ಯಮ ಹಾವಿನ ರೂಪದಲ್ಲಿ ಬರುತ್ತಾನೆ. ಮುಖ್ಯದ್ವಾರದ ಬಳಿ ಬಂದಾಗ ಚಿನ್ನದ ಹೊಳಪಿನಿಂದಾಗಿ ಹಾವಿಗೆ ಕಣ್ಣು ತೆರೆಯಲು ಸಾಧ್ಯವಾಗುವುದಿಲ್ಲ, ಅಲ್ಲದೆ ರಾಜಕುಮಾರಿ ಹೇಳುತ್ತಿರುವ ಸುಂದರ ಕತೆಗಳನ್ನು ಕೇಳುತ್ತಾ ಹಾವು ತಾನು ಬಂದು ಕಾರ್ಯ ಮರೆತು ಕತೆ ಕೇಳುತ್ತಾನೆ. ಹೀಗೆ ಬೆಳಕು ಹರಿಯುತ್ತದೆ, ಯಮನಿಗೆ ನಿರ್ಧರಿಸಿದ ಸಮಯದಲ್ಲಿ ಪ್ರಾಣವನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹೀಗೆ ರಾಜಕುಮಾರನ ಪ್ರಾಣ ಉಳಿಯುತ್ತದೆ.

ಹೀಗೆ ಧನ್‌ತೆರೇಸ್ ಎಂಬ ಸಂಪ್ರದಾಯ ಆಚರಣೆಗೆ ಬಂದಿತ್ತು ಎಂದು ಹೇಳಲಾಗುತ್ತದೆ.

ಧನ್‌ತೆರೇಸ್‌ನ ದಿನ ಪೂಜೆ

ಧನ್‌ತೆರೇಸ್‌ನ ದಿನ ಪೂಜೆ

ಧನ್‌ತೆರೇಸ್ ದಿನ ಮನೆ ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚಿ, ಚಿನ್ನವನ್ನು ಇಟ್ಟು ಪೂಜಿಸುತ್ತಾರೆ. ಈ ದೀಪವನ್ನು ಯಮ ದೀಪವೆಂದು ಕರೆಯುತ್ತಾರೆ. ಹೀಗೆ ದೀಪ ಹಚ್ಚಿ ಇಡುವುದರಿಂದ ಯಮ ಹಾಗೂ ಲಕ್ಷ್ಮಿ ಕೃಪೆ ನಮ್ಮ ಮೇಲೆ ಇರುತ್ತದೆ, ಮನೆಗೆ ಒಳಿತಾಗುತ್ತದೆ.

ಧನ್‌ತೆರೇಸ್ ಏನು ಮಾಡಬಾರದು?

ಧನ್‌ತೆರೇಸ್ ಏನು ಮಾಡಬಾರದು?

  • ದಂತೆರೇಸ್ ದಿನ ಗಿಫ್ಟ್ ಕೊಡುವುದು, ತಗೊಳುವುದು ಮಾಡಬಾರದು.
  • ಸ್ಟಿಲ್ ಹಾಗೂ ಕಬ್ಬಿಣದ ವಸ್ತುಗಳನ್ನು ಕೊಳ್ಳಬಾರದು
  • ಕೊಂಡ ಪಾತ್ರೆಗಳನ್ನು ಖಾಲಿ ಕೊಂಡೊಯ್ಯಬಾರದು, ಏನಾದರೂ ಹಾಕಿ ಕೊಂಡಯ್ಯಬೇಕು.
  • ಈ ದಿನ ವಾಹನಗಳನ್ನು ಕೊಳ್ಳಬಾರದು.
  • ಈ ದಿನ ಎಣ್ಣೆಯನ್ನು ಸ್ವಲ್ಪ ಬಳಸಬೇಕು.
  • ಕಪ್ಪು ಬಣ್ಣದ ಉಡುಪು ಧರಿಸಬೇಡಿ.
English summary

Dhanteras 2020 ; Here's Why People Buy Gold and Other Valuables on the Auspicious Day

Dhanteras 2020: Here's Why People Buy Gold and Other Valuables on the Auspicious Day
X