ಭಗವಾನ್ ಶಿವನ 12 ಪವಿತ್ರ ಜ್ಯೋತಿರ್ಲಿಂಗಗಳ ಮಹಿಮೆ....

By: Jaya subramanya
Subscribe to Boldsky

ಹಿಂದೂ ಸಂಪ್ರದಾಯದಲ್ಲಿ ಶಿವನನ್ನು ಆರಾಧಿಸುವ ಭಕ್ತರೇ ಹೆಚ್ಚು. ತ್ರಿಮೂರ್ತಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಶಿವನನ್ನು ವಿನಾಶದ ದೇವರು ಎಂಬುದಾಗಿ ಕೂಡ ಕರೆಯುತ್ತಾರೆ. ಲಿಂಗ ರೂಪದಲ್ಲಿ ಭಕ್ತರಿಂದ ಪೂಜೆಗೆ ಅರ್ಹರಾಗಿರುವ ಶಿವನು ಅನೇಕ ಹೆಸರುಗಳಿಂದ ಭಕ್ತರ ಮನೋಭಿಲಾಷೆಗಳನ್ನು ಪೂರೈಸುತ್ತಾರೆ. ಲಿಂಗ ರೂಪಗಳಲ್ಲಿ ಆರಾಧನೆಗೆ ಒಳಪಡುವ ಶಿವನನ್ನು 12 ಜ್ಯೋತಿರ್ಲಿಂಗಗಳಿಂದ ದೇಶದ ನಾನಾ ಕಡೆ ಪೂಜಿಸುತ್ತಾರೆ. ತ್ರಿಮೂರ್ತಿಗಳ ಒಡೆಯ ಪರಶಿವನ ನಾನಾ ರೂಪಗಳ ಅವತಾರ

ಶಿವಭಕ್ತರು ಜ್ಯೋತಿರ್ಲಿಂಗಗಳನ್ನು ಪೂಜಿಸಿದರೆ ಮಾತ್ರವೇ ಸದ್ಗತಿ ಎಂಬುದು ಭಕ್ತರ ನಂಬಿಕೆಯಾಗಿದೆ. ಆದರೆ ಎಲ್ಲಾ ಲಿಂಗಗಳನ್ನು ಒಮ್ಮೆಲೇ ಭೇಟಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಒಮ್ಮೆಗೆ ಎರಡು ಲಿಂಗಗಳನ್ನು ಭೇಟಿ ಮಾಡಿ ಪೂಜಿಸುವುದು ಸಾಮಾನ್ಯವಾಗಿದೆ. ಆದರೆ 12 ಜ್ಯೋತಿರ್ಲಿಂಗಗಳನ್ನು ತಮ್ಮ ಜೀವಿತಾವಧಿಯಲ್ಲಿ ಭಕ್ತರು ಸಂಧಿಸಬೇಕು ಎಂಬುದು ಪುರಾಣಗಳಲ್ಲಿ ಉಲ್ಲೇಖಗೊಂಡಿದೆ. ಮುಕ್ಕಣ್ಣ ಶಿವನ ಮೂರನೆಯ ಕಣ್ಣಿನ ರೋಚಕ ಕಹಾನಿ...

ಈ ಜ್ಯೋತಿರ್ಲಿಂಗಗಳನ್ನು ದ್ವಾದಶ ಲಿಂಗಗಳು ಎಂದೂ ಕರೆಯುತ್ತಾರೆ. ದೇವರು ಈ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದು ಮತ್ತು ಲಿಂಗ ರೂಪಗಳಲ್ಲಿ ತಮ್ಮ ಅಸ್ತಿತ್ವವನ್ನು ಅಲ್ಲಿ ಮಾಡಿಕೊಂಡಿದ್ದಾರೆ ಎಂಬ ವದಂತಿಯೂ ಇದೆ. ಹನ್ನೆರಡು ಲಿಂಗಗಳನ್ನು ಭೇಟಿಮಾಡಿದ ಭಕ್ತರು ಜನನ ಮರಣ ಚಕ್ರದಿಂದ ಮುಕ್ತರಾಗುತ್ತಾರೆ. ಮೋಕ್ಷವನ್ನು ಪಡೆದುಕೊಂಡು ಶಿವನನ್ನು ಸಂಧಿಸುತ್ತಾರೆ.

ಈ ಜ್ಯೋತಿರ್ಲಿಂಗವು ಲಿಂಗ ರೂಪದಲ್ಲಿದ್ದು, ದಿವ್ಯವಾದ ಬೆಳಕು 'ಜ್ಯೋತಿ' ಯನ್ನು ಒಳಗೊಂಡಿದೆ. ಈ ಜ್ಯೋತಿಯನ್ನು ಎಲ್ಲರಿಗೂ ನೋಡಲಾಗುವುದಿಲ್ಲ. ಹೆಚ್ಚಿನ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಸತ್ಯ ಭಕ್ತರಿಗೆ ಮಾತ್ರವೇ ಇದನ್ನು ತಲುಪಲು ಸಾಧ್ಯ. ಸಾಕ್ಷಾತ್ ಶಿವನ ಸ್ವರೂಪ ರುದ್ರಾಕ್ಷಿ ಮಾಲೆಯ ಮಹತ್ವ

12 ಜ್ಯೋತಿರ್ಲಿಂಗಗಳನ್ನು ಸಂಸ್ಕೃತ ಶ್ಲೋಕದಲ್ಲಿ ಹೀಗೆ ವಿವರಿಸಲಾಗಿದೆ:

ಸೌರಾಷ್ಟ್ರೆ ಸೋಮನಾಥ್ಮಚ ಶ್ರಿಶೈಲೆ ಮಲ್ಲಿಕಾರ್ಜುನಂ

ಉಜ್ಜಯಿನ್ಯ ಮಹಾಕಾಲಂ ಓಂಕಾರ ಮಾಮಲ್ಲೆಶ್ವರಂ

ಪರಾಲಯಂ ವೈದ್ಯನಾಥಂಚ ದಕಿನ್ಯಂ ಭೀಮಾ ಶಂಕರಂ

ಸೇತು ಬಂಧಹೇತು ರಮೇಶಂ, ನಾಗೇಶಂ ದರುಕಾವನೆ

ವರನ್ಯಾಸಂತು ವಿಶ್ವೇಶಂ ತ್ರಯಂಬಕಂ ದರುಕಾವ್ನೆ

ಹಿಮಾಲಯತೆ ಕೇದಾರಂ, ಗ್ರಿಷ್ನೆಶಮಚಾ ಶಿವಾಲಯೆ

ಇತನಿ ಜ್ಯೋತಿರ್ಲಿಂಗಾನಿ, ಸಾಯಂ ಪ್ರಾಥಃ ಪತೇನ್ನರ

ಸಪ್ತಜನ್ಮ ಕೃತಂ ಪಾಪಂ, ಸ್ಮರನೇನ ವಿನಾಶಯಾತ್

ಬೆಳಗ್ಗಿನ ಜಾವದಲ್ಲಿ 12 ಜ್ಯೋತಿರ್ಲಿಂಗಗಳಲ್ಲಿರುವ ಶಿವನ್ನು ಆರಾಧಿಸಿದಲ್ಲಿ ಮತ್ತು ನೆನಪು ಮಾಡಿಕೊಂಡಲ್ಲಿ ಅವರು ತಮ್ಮ ಏಳು ಜನ್ಮಗಳಲ್ಲಿ ಮಾಡಿರುವ ಪಾಪವನ್ನು ಕಳೆದುಕೊಂಡಂತೆ ಎಂದಾಗಿದೆ. ಇಂದಿನ ಲೇಖನದಲ್ಲಿ ಜ್ಯೋತಿರ್ಲಿಂಗಗಳ ಮಹತ್ವವನ್ನು ಅರಿತುಕೊಳ್ಳೋಣ.....

ಸೋಮೇಶ್ವರ ಜ್ಯೋತಿರ್ಲಿಂಗ

ಸೋಮೇಶ್ವರ ಜ್ಯೋತಿರ್ಲಿಂಗ

ಸೋಮನಾಥ ದೇವಸ್ಥಾನ ಎಂಬುದಾಗಿ ಇದನ್ನು ಕರೆಯಲಾಗಿದೆ ಮತ್ತು ಪಾಟ್ನಾದ ಪ್ರಭಾಸ್‌ನಲ್ಲಿದೆ. ಗುಜಾರತ್‌ನ ದ್ವಾರಕಾದಲ್ಲಿ ಇನ್ನೊಂದು ಲಿಂಗವಿದ್ದು ಇದನ್ನು ನಾಗೇಶ್ವರ ಜ್ಯೋತಿರ್ಲಿಂಗವೆಂದು ಕರೆಯಲಾಗಿದೆ.

ಇದನ್ನು ಯಾವಾಗ ನಿರ್ಮಿಸಲಾಯಿತು?

ಇದನ್ನು ಯಾವಾಗ ನಿರ್ಮಿಸಲಾಯಿತು?

ಜ್ಯೋತಿರ್ಲಿಂಗಗಳಲ್ಲಿ ಇದು ಪ್ರಥಮ ಎಂದೆನಿಸಿದ್ದು ಇದನ್ನು 7 ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಶತಮಾನಗಳಾದ್ಯಂತ ದೇವಸ್ಥಾನವನ್ನು ಕೆಡವಿ ಹಲವಾರು ಬಾರಿ ನಿರ್ಮಿಸಲಾಗಿದೆ. ಪ್ರಸ್ತುತ ದೇವಸ್ಥಾನವನ್ನು ಭಾರತಕ್ಕೆ ಸ್ವಾತಂತ್ರ ಬಂದ ನಂತರ ನಿರ್ಮಿಸಲಾಗಿದೆ.

ಈ ಹೆಸರು ಹೇಗೆ ಬಂದಿದೆ?

ಈ ಹೆಸರು ಹೇಗೆ ಬಂದಿದೆ?

ಸ್ಕಂದ ಪುರಾಣದಲ್ಲಿ ಸೋಮಾನಾಥನನ್ನು ವಿವರಿಸಲಾಗಿದ್ದು ಪ್ರಭಾಸ ಕಂದದ ಅಧ್ಯನಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಪ್ರಭಾಸದಲ್ಲಿರುವ ಶಿವಲಿಂಗವನ್ನು ಕಾಲಭೈರವ ಶಿವಲಿಂಗವೆಂದು ಕರೆಯಲಾಗಿದೆ. ಚಂದ್ರನು ಇದನ್ನು ಪೂಜಿಸುತ್ತಿದ್ದನು. ಚಂದ್ರ ದೇವರನ್ನು 'ಸೋಮನಾಥ' ಎಂದು ಕರೆಯಲಾಗಿದ್ದು ಮಹಾಭಾರತದಲ್ಲಿ ಕೂಡ ಚಂದ್ರನು ಶಿವನನ್ನು ಆರಾಧಿಸಿರುವುದರ ಕುರಿತು ದಂತಕಥೆಗಳಿವೆ.

ಇದನ್ನು ಜ್ಯೋತಿರ್ಲಿಂಗವೆಂದು ಏಕೆ ಕರೆಯಲಾಗಿದೆ?

ಇದನ್ನು ಜ್ಯೋತಿರ್ಲಿಂಗವೆಂದು ಏಕೆ ಕರೆಯಲಾಗಿದೆ?

ಸ್ಪರ್ಶ ಲಿಂಗವು ಉರಿಯುತ್ತಿರುವ ಕಿರಣದಂತೆ ಗೋಚರಿಸಿದೆ. ಜ್ಯೋತಿರ್ಲಿಂಗವು ಮುಂಜಾನೆ ರಿಗ್ವೇದದಂತೆ ಕಂಡರೆ, ಮಧ್ಯಾಹ್ನದಲ್ಲಿ ಯಜುರ್ ವೇದದಂತೆ ಕಂಡಿದೆ, ಸಂಜೆಯ ವೇಳೆ ಸಾಮವೇದದಂತೆ ಕಂಡರೆ ರಾತ್ರಿಯಲ್ಲಿ ಅಥರ್ವ ವೇದದಂತೆ ಕಾಣುತ್ತದೆ.

ಲಿಂಗದ ನಿರ್ಮಾಣ

ಲಿಂಗದ ನಿರ್ಮಾಣ

ಲಿಂಗದ ವಿವರಣೆ" ಸ್ಪರ್ಶವು ಲಿಂಗವು ಮೊಟ್ಟೆಯ ಗಾತ್ರದಲ್ಲಿದ್ದು ಸೂರ್ಯನಂತೆ ಪ್ರಕಾಶಮಾನವಾಗಿದೆ. ಇದು ಅಂತರ್ಭೂಮಿಯಲ್ಲಿದ್ದು ಯಾರಿಗೂ ಕಾಣಲಾಗುವುದಿಲ್ಲ.

ಈ ಜ್ಯೋತಿರ್ಲಿಂಗದ ಹಿಂದಿರುವ ದಂತಕಥೆ

ಈ ಜ್ಯೋತಿರ್ಲಿಂಗದ ಹಿಂದಿರುವ ದಂತಕಥೆ

ದಕ್ಷ ಪ್ರಜಾಪತಿಯು 27 ಕುವರಿಯರಾಗಿದ್ದಾರೆ ಎಂಬಲ್ಲಿಂದ ಈ ಕಥೆ ಆರಂಭವಾಗುತ್ತದೆ. ಚಂದ್ರನು ಅವರನ್ನು ವಿವಾಹವಾಗುತ್ತಾನೆ. ಆದರೆ ಚಂದ್ರ ದೇವನು ಪತ್ನಿಯರಲ್ಲಿ ರೋಹಿಣಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದನು ಮತ್ತು ಉಳಿದವರನ್ನು ತಿರಸ್ಕರಿಸುತ್ತಿದ್ದನು. ಇದರಿಂದ ಕುಪಿತಗೊಂಡ ದಕ್ಷನು ಚಂದ್ರ ದೇವರನನ್ನು ಶಪಿಸುತ್ತಾನೆ. ಇದು ಚಂದ್ರನ ಒಂದು ಬದಿಯ ಮರೆಯಾದ ಮುಖವನ್ನು ತೋರಿಸುತ್ತದೆ. ಶಾಪಕ್ಕೊಳಗಾದ ಚಂದ್ರನು ಪ್ರಭಾಸ ಪಟ್ಟಣಕ್ಕೆ ಹೋಗುತ್ತಾನೆ ಮತ್ತು ಸೋಮೇಶ್ವರದ ಸ್ಪರ್ಶ ಲಿಂಗವನ್ನು ಪೂಜಿಸುತ್ತಾನೆ: ಶಿವ ದೇವರು ಪ್ರತ್ಯಕ್ಷಗೊಂಡು ಅವನನ್ನು ಆಶಿರ್ವದಿಸುತ್ತಾರೆ. ಶಾಪವನ್ನು ಸಂಪೂರ್ಣವಾಗಿ ತೊಡಯಲು ಸಾಧ್ಯವಿಲ್ಲ ಬದಲಿಗೆ ಅದನ್ನು ಮಾರ್ಪಡಿಸಬಹುದು ಎಂದಾಗಿ ಹೇಳುತ್ತಾರೆ. ಇದರ ಫಲವಾಗಿ ಚಂದ್ರನು ಅರ್ಧ ಕತ್ತಲೆ ಮತ್ತು ಅರ್ಧ ಬೆಳಕನ್ನು ಹೊಂದಿದ್ದಾರೆ.

ಜ್ಯೋತಿರ್ಲಿಂಗದ ಪೌರಾಣಿಕ ಮಹತ್ವ

ಜ್ಯೋತಿರ್ಲಿಂಗದ ಪೌರಾಣಿಕ ಮಹತ್ವ

ಬ್ರಹ್ಮ ದೇವರು, ಬ್ರಹ್ಮಶಿಲೆಯನ್ನು ಸ್ಥಾಪಿಸಿದವರಾಗಿದ್ದು, ಇಲ್ಲಿ ರಚಿತವಾಗಿರುವ ಪ್ರಥಮ ದೇವಸ್ಥಾನವೇ ಇದಾಗಿದೆ.

ಇಲ್ಲಿ ನಡೆಯುವ ಪ್ರಖ್ಯಾತ ಹಬ್ಬಗಳು

ಇಲ್ಲಿ ನಡೆಯುವ ಪ್ರಖ್ಯಾತ ಹಬ್ಬಗಳು

ಸೋಮೇಶ್ವರ ಜ್ಯೋತಿರ್ಲಿಂಗದಲ್ಲಿ ಮಹಾ ಶಿವರಾತ್ರಿಯನ್ನು ಹೆಚ್ಚು ಮುಖ್ಯವಾಗಿ ಆಚರಿಸಲಾಗುತ್ತದೆ. ಸೋಮನಾಥ ಮಹೇದೊ ಜಾತ್ರೆಯನ್ನು ಇಲ್ಲಿ ನಡೆಸಲಾಗುತ್ತದೆ. ಶಿವನ ಪುತ್ರನಾದ ಕಾರ್ತಿಕೇಯನ ಜನ್ಮದಿನವನ್ನಾಗಿ ಈ ಜಾತ್ರೆಯನ್ನು ನಡೆಸಲಾಗುತ್ತದೆ. ಕಾರ್ತಿಕೇಯನಿಗೆ ಅರ್ಪಿಸುವ ಸಲುವಾಗಿ ನಾಟ್ಯಗಳು, ಸಂಗೀತ ಕಾರ್ಯಕ್ರಮಗಳನ್ನು ಭಕ್ತರು ನಡೆಸುತ್ತಾರೆ.

English summary

Details About The Jyothirlingas; And The First Jyotirlinga – Someshwar

Take a look at the important temples of jyotirlingas of lord shiva. Also read to know the story of the first jyotirlingas of lord shiva.
Story first published: Thursday, February 16, 2017, 23:14 [IST]
Subscribe Newsletter