For Quick Alerts
ALLOW NOTIFICATIONS  
For Daily Alerts

ಆಶ್ಚರ್ಯಗೊಳಿಸುವ 'ಕ್ರಿಸ್‌ಮಸ್‌ ಹಬ್ಬದ' ಇಂಟರೆಸ್ಟಿಂಗ್ ಸಂಗತಿಗಳು

By Jaya Sumramanya
|

ಡಿಸೆಂಬರ್ ಮಾಸ ಬಂತೆಂದರೆ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮನೆಮಾಡಿರುತ್ತದೆ. ಕ್ರಿಸ್‌ಮಸ್ ಹಬ್ಬದಲ್ಲಿ ಸಾಂತಾಕ್ಲಾಸ್‌ಗೆ ವಿಶೇಷ ಸ್ಥಾನವಿದೆ. ಕೆಂಪು ಉಡುಗೆಯನ್ನು ತೊಟ್ಟುಕೊಂಡು ಕೈಯಲ್ಲಿ ಉಡುಗೊರೆಗಳನ್ನು ಹಿಡಿದುಕೊಂಡು ಹಿಮಸಾಂಗದ ಮೇಲೇರುತ್ತಾ ಸಾಂತಾ ಮನೆಮನೆಗೆ ಭೇಟಿ ನೀಡಿ ಉಡುಗೊರೆಗಳನ್ನು ಹಂಚುತ್ತಾರೆ ಎಂಬ ಕಲ್ಪನೆ ಇದೆ. ಕ್ರಿಸ್‌ಮಸ್ ಹಬ್ಬದ ವಿಶೇಷ: ಮೂರು ಬಣ್ಣಗಳ ಮಹತ್ವ

ಮಕ್ಕಳಂತೂ ಸಾಂತಾ ಖಂಡಿತವಾಗಿಯೂ ಬಂದು ತಮಗೆ ಉಡುಗೊರೆಗಳನ್ನು ನೀಡಿ ಹೋಗುತ್ತಾರೆ ಎಂದೇ ಭಾವಿಸುತ್ತಾರೆ. ಹೀಗೆ ಕ್ರಿಸ್‌ಮಸ್‌ ಹಬ್ಬದಲ್ಲಿ ಸಂಭ್ರಮ, ಸಂತೋಷ, ಕುಟುಂಬದ ಸಮ್ಮಿಲನ ಹೀಗೆ ಎಲ್ಲವೂ ಮೇಳೈಸಿರುತ್ತದೆ. ತದ ನಂತರ ಬರುವ ಹೊಸ ವರ್ಷಕ್ಕೂ ಕ್ರಿಸ್‌ಮಸ್ ಹಬ್ಬ ಮುನ್ನುಡಿಯನ್ನು ಬರೆಯಲಿದೆ.

ಕ್ರಿಸ್‌ಮಸ್ ಅನ್ನು ಡಿಸೆಂಬರ್ 25 ರಂದು ಆಚರಿಸುತ್ತಾರೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಆದರೆ ಜೂಲಿಯನ್ ಕ್ಯಾಲೆಂಡರ್‌ ಪ್ರಕಾರ ಕ್ರಿಸ್‌ಮಸ್ ಅನ್ನು ಜನವರಿ 7 ರಂದು ಆಚರಿಸಲಾಗುತ್ತದೆ. ಕ್ಯಾಥೊಲಿಕ್ ಚರ್ಚ್‌ಗಳಲ್ಲಿ ಇದೇ ದಿನಾಂಕದಂದೇ ಹಬ್ಬವನ್ನು ಆಚರಿಸುತ್ತಾರೆ. ಅಂತೆಯೇ ಹಬ್ಬವನ್ನು ಆಚರಿಸುವಾಗ ಕೂಡ ಹೆಚ್ಚಿನ ಬದಲಾವಣೆಗಳಿದ್ದು ಆ ಮಾರ್ಪಾಡುಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳಲಿದ್ದೇವೆ. ಸಾಂತಾ ಕ್ಲಾಸ್ ಕುರಿತು ಕುತೂಹಲಕಾರಿ ಅಂಶಗಳು

ಕ್ರಿಸ್‌ಮಸ್‌ನಂದು ಮುಂಜಾನೆ ಚರ್ಚ್‌ಗೆ ಹೋಗುವುದು, ದೇವರನ್ನು ಪ್ರಾರ್ಥನೆ ಮಾಡುವುದು, ಸಾಂತಾ ನೀಡಿರುವ ಉಡುಗೊರೆಗಳನ್ನು ತೆರೆದು ನೋಡುವುದು, ಹೀಗೆ ಸಂಪೂರ್ಣ ದಿನ ಆನಂದದಿಂದ ಕಳೆಯುವುದಾಗಿದೆ. ಅದಾಗ್ಯೂ ಕ್ರಿಸ್‌ಮಸ್ ಕುರಿತ ಮತ್ತಷ್ಟು ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದು, ಅದೇನು ಎಂಬುದನ್ನು ನೋಡೋಣ....

ಬಲೆಯಿಂದ ಹೊದ್ದ ಕ್ರಿಸ್‌ಮಸ್ ಮರ

ಬಲೆಯಿಂದ ಹೊದ್ದ ಕ್ರಿಸ್‌ಮಸ್ ಮರ

ಈ ಆಚರಣೆ ಉಕ್ರೇನ್‌ನಲ್ಲಿದೆ. ಒಮ್ಮೆ ಬಡ ಮಹಿಳೆ ಕ್ರಿಸ್‌ಮಸ್ ಸಿಂಗಾರಕ್ಕಾಗಿ ದುಡ್ಡಿಲ್ಲದೆ ಚಿಂತೆಗೊಳಗಾಗಿದ್ದಳು. ಆದರೆ ಆಕೆಯ ಮಕ್ಕಳು ಮರುದಿನ ಬೆಳಗ್ಗೆ ಕ್ರಿಸ್‌ಮಸ್ ಮರವನ್ನು ನೋಡಿದಾಗ, ಮರ ಬಲೆಯಿಂದ ಆವೃತವಾಗಿತ್ತು. ಮತ್ತು ಅದರ ಮೇಲೆ ಬೆಳಕು ಬಿದ್ದಾಗ ಅದು ಚಿನ್ನ ಹಾಗೂ ಬೆಳ್ಳಿಯಿಂದ ಹೊಳೆಯುತ್ತಿತ್ತು.

ಸ್ವಾದಭರಿತ ಕ್ರಿಸ್‌ಮಸ್ ತಿನಿಸುಗಳು

ಸ್ವಾದಭರಿತ ಕ್ರಿಸ್‌ಮಸ್ ತಿನಿಸುಗಳು

ಬಿಸಿಬಿಸಿಯಾದ ಟರ್ಕಿ, ಹಣ್ಣಿನ ಕೇಕ್, ಜೆಲ್ಲಿ ಪುಡ್ಡಿಂಗ್ ಮೊದಲಾದ ಸಿಹಿತಿನಿಸುಗಳನ್ನು ಕ್ರಿಸ್‌ಮಸ್‌ನಂದು ತಯಾರಿಸುತ್ತೇವೆ. ಕ್ರಿಸ್‌ಮಸ್‌ನಂದು, ನೀವು ಟ್ಯೂರನ್‌ ಅನ್ನು ಸೇವಿಸಿದ್ದೀರಾ? ಇದೊಂದು ಸ್ಪ್ಯಾನಿಶ್ ತಿನಿಸಾಗಿದ್ದು, ಮೊಟ್ಟೆ, ಬದಾಮಿ, ಸಕ್ಕರೆ ಮತ್ತು ಜೇನಿನಿಂದ ತಯಾರಿಸುತ್ತಾರೆ. ಈ ರೆಸಿಪಿ 16 ಶತಮಾನ ಹಳೆಯದಾಗಿದ್ದು ಕ್ರಿಸ್‌ಮಸ್‌ನಂದು ಮಾತ್ರವೇ ಇದನ್ನು ಸಿದ್ಧಪಡಿಸಿ ಉಣಬಡಿಸುತ್ತಾರೆ. ಕ್ರಿಸ್‌ಮಸ್‌ಗಾಗಿ ನೀರೂರಿಸುವ ಕೇಕ್ ಖಾದ್ಯಗಳು

ಉಡುಗೊರೆಗಳನ್ನು ನೀಡುವುದು

ಉಡುಗೊರೆಗಳನ್ನು ನೀಡುವುದು

ಕ್ರಿಸ್‌ಮಸ್‌ನಂದು ಮುಂಜಾನೆ ಸಾಂತಾನಿಂದ ಉಡುಗೊರೆಗಳನ್ನು ಪಡೆಯುವುದೆಂದರೆ ಅದೊಂದು ಅದ್ಭುತ ಕ್ಷಣವಾಗಿದೆ. ಇದು ಕ್ರಿಸ್ತನೇ ತನ್ನ ಮಕ್ಕಳಿಗಾಗಿ ಕಳುಹಿಸುವ ಉಡುಗೊರೆಯಾಗಿದೆ ಎಂದೇ ಭಕ್ತರು ಭಾವಿಸುತ್ತಾರೆ. ಉಡುಗೊರೆಗಳನ್ನು ನೀಡುವವರು ಮತ್ತು ಅದನ್ನು ಸ್ವೀಕರಿಸುವವರು ಪರಸ್ಪರ ಪ್ರೀತಿಯನ್ನು ಹೊಂದಿದ್ದಾರೆ ಮತ್ತು ಇದು ಸಂತಸದಿಂದ ಕೂಡಿದೆ ಎಂಬ ಭಾವನೆಯಾಗಿದೆ.

ಕ್ರಿಸ್‌ಮಸ್ ಮರವನ್ನು ಅಲಂಕರಿಸುವುದು

ಕ್ರಿಸ್‌ಮಸ್ ಮರವನ್ನು ಅಲಂಕರಿಸುವುದು

ಪಾಗನ್ ಕಸ್ಟಮ್‌ಗಳಿಂದ ಕ್ರಿಸ್‌ಮರ ಮರವನ್ನು ಅಲಂಕರಿಸುವ ಪದ್ಧತಿ ಚಾಲನೆಯಲ್ಲಿದೆ. ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ ಇದು ಜೀವನವನ್ನು ನೆನಪಿಸುತ್ತದೆ . ಆದ್ದರಿಂದಲೇ ಈ ಮರವನ್ನು ಜನರು ಮೇಣದ ಬತ್ತಿ ಮತ್ತು ಇತರ ಅಲಂಕಾರ ವಸ್ತುಗಳಿಂದ ಅಲಂಕರಿಸುತ್ತಾರೆ.

ರಿಂಗಿಂಗ್ ಬೆಲ್ಸ್

ರಿಂಗಿಂಗ್ ಬೆಲ್ಸ್

ಇದೂ ಕೂಡ ಪಾಗನ್ ಆಚರಣೆಯಿಂದ ಬಂದಿರುವಂತಹ ಕ್ರಮವಾಗಿದೆ. ಚಳಿಗಾಲದಲ್ಲಿ ಶೀತ ಮತ್ತು ಸೂರ್ಯನ ಬೆಳಕು ಕಡಿಮೆ ಇದ್ದ ಸಂದರ್ಭದಲ್ಲಿ ದುಷ್ಟ ಶಕ್ತಿಗಳು ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಈ ಸಮಯದಲ್ಲಿ ಬೆಲ್‌ಗಳನ್ನು ರಿಂಗ್ ಮಾಡುವುದು ಅವುಗಳನ್ನು ದೂರ ಓಡಿಸುತ್ತವೆ ಎಂದಾಗಿದೆ. ಕ್ರಿಸ್‌ಮಸ್ ಹಬ್ಬವು ಭರವಸೆ, ಉತ್ತಮ ಆಚರಣೆ ಮತ್ತು ಸಂತಸದ ಪ್ರತೀಕವಾಗಿದೆ.

ಸಂಪ್ರದಾಯ ಬದ್ಧ ಭೋಜನ

ಸಂಪ್ರದಾಯ ಬದ್ಧ ಭೋಜನ

ಹೆಚ್ಚಿನ ದೇಶಗಳಲ್ಲಿ, ವಿಶೇಷ ದಿನಗಳಂದು ಜನರು ಸಾಂಪ್ರದಾಯಿಕ ಔತಣ ಕೂಟಗಳನ್ನು ಸಿದ್ಧಪಡಿಸುತ್ತಾರೆ. ಪೋಲೆಂಡ್‌ನಲ್ಲಿ, ಇದನ್ನು ವಿಗಿಲಿಯಾ ಎಂಬುದಾಗಿ ಕರೆಯುತ್ತಾರೆ ಮತ್ತು ಇದು ಮುಂಬರುವ ವರ್ಷದ ಸಂತಸವನ್ನು ತಿಳಿಸುತ್ತದೆ. ಇಟಲಿಯಲ್ಲಿ, ಜನರು ಏಳು ಮೀನುಗಳು ಮತ್ತು ಮಸೂರವನ್ನು ಸೇವಿಸುತ್ತಾರೆ ಮತ್ತು ಮುಂಬರುವ ವರ್ಷದಲ್ಲಿ ಅವರ ಸಂಪತ್ತು ಮತ್ತು ಅದೃಷ್ಟವನ್ನು ಖಾತ್ರಿಪಡಿಸುತ್ತದೆ ಎಂದಾಗಿದೆ.

ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಕ್ರಿಸ್‌ಮಸ್‌ನಂದು ಜನರು ಆಚರಿಸುವ ಸಂಪ್ರದಾಯಗಳು ಇವುಗಳಾಗಿವೆ. ಆಚರಣೆಗಳು ಪದ್ಧತಿಗಳು ಏನೇ ಆಗಿದ್ದರೂ ಕ್ರಿಸ್‌ಮಸ್ ಅರ್ಥ ಸಂತಸದಿಂದಿರುವುದು ಮತ್ತು ಎಲ್ಲೆಡೆ ಸಂತಸವನ್ನು ಹಂಚಿಕೊಳ್ಳುವುದಾಗಿದೆ.

English summary

Customs Followed During Christmas

Christmas means attending the Church in the morning, praying to God, opening gifts kept by Santa Claus and rejoicing the whole day with your dear ones. From the appearance of Santa Claus to getting gifts, every occasion has its own significance. Let’s find out which customs and traditions are followed during Christmas:
X