For Quick Alerts
ALLOW NOTIFICATIONS  
For Daily Alerts

ತೆಂಗಿನಕಾಯಿಂದ ಮಾಡುವ ಪರಿಹಾರಗಳು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರಬಹುದು

|

ತೆಂಗಿನಕಾಯಿ ಧಾರ್ಮಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತವಾದ ಫಲ ಎಂದು ಹೇಳಲಾಗುವುದು. ಮನುಷ್ಯನಿಗೆ ಉತ್ತಮ ಆರೋಗ್ಯ ಕಲ್ಪಿಸುವಂತಹ ಶಕ್ತಿಯನ್ನು ಪಡೆದುಕೊಂಡಿದೆ. ಧಾರ್ಮಿಕವಾಗಿಯೂ ಅದ್ಭುತ ಶ್ರೇಯಸ್ಸನ್ನು ನೀಡುವ ಈ ತೆಂಗಿನಕಾಯನ್ನು ಶ್ರೀಫಲ ಎಂದು ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಸಂಪತ್ತಿನ ಫಲ, ದೈವ ಸ್ವರೂಪಿ, ಪವಿತ್ರ ಎಂದು ಪರಿಗಣಿಸಲಾಗಿದೆ. ನಿತ್ಯದ ಪೂಜೆ ಪುನಸ್ಕಾರಗಳಿಗೆ ಹಾಗೂ ಆಹಾರಗಳ ತಯಾರಿಕೆಗೆ ತೆಂಗಿನಕಾಯನ್ನು ಬಳಸಲಾಗುತ್ತದೆ. ಇದರಿಂದ ಪೂಜೆಯು ಪರಿಪೂರ್ಣವಾಗುವುದು. ದಕ್ಷಿಣ ಭಾರತದಲ್ಲಿ ತೆಂಗಿನ ಬೆಳೆಯು ಹೇರಳವಾಗಿರುವುದರಿಂದ ಅದರ ಬಳಕೆ ಹಾಗೂ ಅದರೊಂದಿಗಿನ ಭಾವನೆಗಳು ಅತ್ಯಂತ ಮಹತ್ವದಿಂದ ಕೂಡಿವೆ.

ತೆಂಗಿನಕಾಯಿಯನ್ನು ಪೂಜ್ಯ ಸ್ಥಾನದಲ್ಲಿ ಇಡಲಾಗಿದೆ. ಇದನ್ನು ದೇವರಿಗೆ ಅರ್ಪಿಸುವುದರಿಂದ ನಾವು ನಮ್ಮ ಭವಿಷ್ಯದಲ್ಲಿ ಸಾಕಷ್ಟು ಸಕಾರಾತ್ಮಕ ಫಲಗಳನ್ನು ಪಡೆದುಕೊಳ್ಳಬಹುದು. ಒಂದು ಪುಟ್ಟ ಫಲವಾದ ತೆಂಗಿನಕಾಯಿ ಧಾರ್ಮಿಕ ನಂಬಿಕೆಗಳೊಂದಿಗೆ ನಮ್ಮ ಮನಸ್ಸನ್ನು ತಿಳಿಗೊಳಿಸುತ್ತದೆ. ಜೊತೆಗೆ ಶ್ರೇಷ್ಠವಾದ ಶಕ್ತಿಯೊಂದಿಗೆ ಮನೆಯ ಅಭಿವೃದ್ಧಿ ಹಾಗೂ ಸಮೃದ್ಧಿಯನ್ನು ಹೆಚ್ಚಿಸುವುದು. ಹಾಗಾಗಿಯೇ ಹಿಂದೂ ಧರ್ಮದಲ್ಲಿ ತೆಂಗಿನ ಕಾಯಿಯ ಬಳಕೆ ಇಲ್ಲದೆ ಯಾವುದೇ ದೇವತಾ ಕಾರ್ಯ ಪೂರ್ಣಗೊಳ್ಳದು. ಯಾವ ಪ್ರದೇಶದಲ್ಲಿ ತೆಂಗಿನ ಬೆಳೆಯ ಅಭಾವ ಇರುತ್ತದೆಯೋ ಅಂತಹ ಸ್ಥಳದಲ್ಲಿ ಅದರ ಬಳಕೆ ಕಡಿಮೆಯಾಗಿರುತ್ತದೆ. ಆದರೆ ತೆಂಗಿನ ಕಾಯಿಯ ಶ್ರೇಷ್ಠತೆ ಕಡಿಮೆಯಾಗಿರುವುದಿಲ್ಲ.

Coconut

ನಿತ್ಯ ದೇವರಿಗೆ ಹಣ್ಣು ಮತ್ತು ತೆಂಗಿನಕಾಯಿಯ ನೈವೇದ್ಯ ಮಾಡಿದರೆ ನೂರು ಕೆ.ಜಿ ಅನ್ನ ನೈವೇದ್ಯ ಮಾಡಿದಷ್ಟು ಪುಣ್ಯ ಲಭಿಸುವುದು ಎನ್ನಲಾಗುತ್ತದೆ. ಕೆಲವೊಮ್ಮೆ ದೈವ ಶಕ್ತಿಯನ್ನು ತೆಂಗಿನ ಕಾಯಿ ಕಳಸದಲ್ಲಿ ಆಹ್ವಾನಿಸಲಾಗುವುದು. ಇದರಿಂದ ಮನೆಯಲ್ಲಿ ಹಾಗೂ ಸುತ್ತಲಿನ ಪರಿಸರದಲ್ಲಿ ಸಕಾರಾತ್ಮಕ ಶಕ್ತಿ ನೆಲೆಗೊಳ್ಳುವುದು. ನೀವು ನಿತ್ಯದ ಪೂಜೆಯಲ್ಲಿ ತೆಂಗಿನ ಕಾಯಿ ಬಳಸುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು. ಅವುಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಲೇಖನದ ಮುಂದಿನ ಭಾಗದಲ್ಲಿ ಪರಿಶೀಲಿಸಿ.

1. ತೆಂಗಿನ ಕಾಯಿ ಜೀವನವನ್ನು ಹೇಗೆ ಉತ್ತಮಗೊಳಿಸುತ್ತದೆ?

1. ತೆಂಗಿನ ಕಾಯಿ ಜೀವನವನ್ನು ಹೇಗೆ ಉತ್ತಮಗೊಳಿಸುತ್ತದೆ?

ತೆಂಗಿನಕಾಯಲ್ಲಿ ಸಾಕಷ್ಟು ಧನಾತ್ಮಕ ಶಕ್ತಿ ಅಡಕವಾಗಿರುತ್ತವೆ. ಶುಭ ಕಾರ್ಯಗಳಲ್ಲಿ ದೈವ ಶಕ್ತಿಯನ್ನು ಆಹ್ವಾನಿಸುವುದು, ದೈವ ಸಂಕಲ್ಪದಿಂದ ಮನೆಯೊಳಗೆ ಪ್ರವೇಶಿಸಿದರೆ ಮನೆಯ ವಾತಾವರಣವನ್ನು ಸಕಾರಾತ್ಮಕ ಶಕ್ತಿಯಿಂದ ಶುದ್ಧಗೊಳಿಸುತ್ತದೆ. ಜೊತೆಗೆ ಮನೆಯಲ್ಲಿ ದೈವ ಶಕ್ತಿ ಉಳಿಯುವಂತೆ ಪ್ರೇರೇಪಿಸುವುದು. ಇದರ ಬಳಕೆಯಿಂದ ಜೀವನದಲ್ಲಿ ವಿಭಿನ್ನ ಬಗೆಯಲ್ಲಿ ಶುಭ ಹಾಗೂ ಸಮೃದ್ಧಿಯನ್ನು ಪಡೆದುಕೊಳ್ಳಬಹುದು.

2. ನಿಮ್ಮ ಗೆಲುವಿಗಾಗಿ

2. ನಿಮ್ಮ ಗೆಲುವಿಗಾಗಿ

ನೀವು ಯಾವುದಾದರೂ ಪಂದ್ಯ ಅಥವಾ ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ, ಮನೆಯಲ್ಲಿ ತೆಂಗಿನಕಾಯಿಯನ್ನು ಬಳಸಿ ಒಂದು ಪೂಜೆಯನ್ನು ಮಾಡಿ. ಮನೆಯಿಂದ ಹೊರಬರುವಾಗ ಕೆಂಪು ಹೂವನ್ನು ತೆಂಗಿನ ಕಾಯಿಗೆಯ ಮೇಲೆ ಇಟ್ಟು ಪೂಜೆ ಮಾಡಿ. ಮನೆಯಿಂದ ಹೊರಡುವಾಗ ಆ ಹೂವನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಆಗ ಖಂಡಿತವಾಗಿಯೂ ನೀವು ಗೆಲುವನ್ನು ಪಡೆದುಕೊಳ್ಳುವಿರಿ. ಸಕಾರಾತ್ಮಕ ಶಕ್ತಿಯು ನಿಮಗೆ ಆಶೀರ್ವಾದ ನೀಡುವುದು.

3. ಕೆಟ್ಟ ಕಣ್ಣುಗಳ ತೊಡಕು ನಿವಾರಿಸಲು

3. ಕೆಟ್ಟ ಕಣ್ಣುಗಳ ತೊಡಕು ನಿವಾರಿಸಲು

ನಿಮ್ಮ ಮನೆಯವರ ಮೇಲೆ ಅಥವಾ ನಿಮ್ಮ ಆಪ್ತರ ಮೇಲೆ ಕೆಟ್ಟ ದೃಷ್ಟಿಗಳ ಪ್ರಭಾವ ಬೀರಿದ್ದರೆ, ಮಂಗಳವಾರ ಒಂದು ತೆಂಗಿನ ಕಾಯಿಗೆ ಕೆಂಪು ಬಟ್ಟೆಯನ್ನು ಸುತ್ತಿ. ದೃಷ್ಟಿಯಾದ ವ್ಯಕ್ತಿಗೆ ಬಟ್ಟೆ ಸುತ್ತಿದ ಆ ತೆಂಗಿನ ಕಾಯಿಯಿಂದ ಏಳು ಬಾರಿ ಸುಳಿಯಿರಿ. ನಂತರ ಆ ತೆಂಗಿನ ಕಾಯನ್ನು ಹನುಮಂತ ದೇವರ ಪಾದದ ಹತ್ತಿರ ಇರಿಸಿ, ಸಮಸ್ಯೆಗಳು ನಿವಾರಣೆಯಾಗುವುದು.

 4. ಕೆಲಸವನ್ನು ಸುಗಮವಾಗಿ ನಿರ್ವಹಿಸಲು

4. ಕೆಲಸವನ್ನು ಸುಗಮವಾಗಿ ನಿರ್ವಹಿಸಲು

ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಆದರೆ ಕೆಲವು ಬಾರಿ ಪ್ರತಿಯೊಂದು ಕೆಲಸ ಮಾಡುವಾಗಲೂ ಅತಿಯಾಗಿ ತೊಂದರೆ ಹಾಗೂ ಅಡೆತಡೆಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ ತೆಂಗಿನ ಕಾಯನ್ನು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಇರಿಸಿ. ನಂತರ ಬೆಳಿಗ್ಗೆ ಆ ತೆಂಗಿನಕಾಯನ್ನು ಗಣೇಶನ ದೇವಸ್ಥಾನದಲ್ಲಿ ಇತರ ಹಣ್ಣು ಹಂಪಲುಗಳ ಜೊತೆಗೆ ಅರ್ಪಿಸಿ. ಆಗ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತವೆ.

5. ಪದೇ ಪದೇ ತೊಂದರೆಗಳು ಎದುರಾದರೆ

5. ಪದೇ ಪದೇ ತೊಂದರೆಗಳು ಎದುರಾದರೆ

ಜೀವನದಲ್ಲಿ ನೀವು ಪದೇ ಪದೇ ತೊಂದರೆಗಳನ್ನು ಎದುರಿಸುತ್ತಿದ್ದರೆ ಈ ರೀತಿಯ ಕ್ರಮವನ್ನು ಅನುಸರಿಸಿ. ಒಂದು ತೆಂಗಿನ ಕಾಯಿಗೆ ಕೆಂಪು ದುಪ್ಪಟ್ಟವನ್ನು ಸುತ್ತಿ, ಕೆಲವು ಕೆಂಪು ಹೂವುಗಳನ್ನು ಮತ್ತು ಕರ್ಪೂರದ ಉಂಡೆಯನ್ನು ದೇವಿಗೆ ಅರ್ಪಿಸಿ. ಪ್ರತಿ ದಿನ ದೇವಿಯ ಆರಾಧನೆ ಮತ್ತು ಪ್ರಾರ್ಥನೆಯನ್ನು ಮಾಡಿ. ತೊಂದರೆಗಳು ನಿವಾರಣೆಯಾಗುತ್ತವೆ.

 6. ಬಡತನ ನಿವಾರಣೆಗೆ

6. ಬಡತನ ನಿವಾರಣೆಗೆ

ತೀವ್ರವಾದ ಬಡತನದಿಂದ ಬಳಲುತ್ತಿದ್ದರೆ ಪ್ರತಿ ಶುಕ್ರವಾರ ತೆಂಗಿನಕಾಯಿಯನ್ನು ಇಟ್ಟು ದೇವಿ ಮಹಾಲಕ್ಷ್ಮಿಯಲ್ಲಿ ಪ್ರಾರ್ಥಿಸಿಕೊಳ್ಳಿ. ನಂತರ ಆ ತೆಂಗಿನ ಕಾಯಿಯನ್ನು ಲಾಕರ್ ಅಥವಾ ನಿಮ್ಮ ದುಡ್ಡಿನ ಪೆಟ್ಟಿಗೆಯಲ್ಲಿ ಇಡಿ. ಹೀಗೆ ಮಾಡುವುದರಿಂದ ಬಡತನವು ನಿಧಾನವಾಗಿ ನಿವಾರಣೆ ಹೊಂದುವುದು.

 7. ಆರ್ಥಿಕ ಬಿಕ್ಕಟ್ಟು

7. ಆರ್ಥಿಕ ಬಿಕ್ಕಟ್ಟು

ಹಣಕಾಸಿನ ಬಿಟ್ಟಕ್ಕನ್ನು ಅನುಭವಿಸುತ್ತಿದ್ದರೆ ಪ್ರತಿ ಮಂಗಳವಾರ ತೆಂಗಿನ ಕಾಯನ್ನು ತೆಗೆದುಕೊಂಡು ಆಂಜನೇಯ ದೇವಸ್ಥಾನಕ್ಕೆ ಹೋಗಿ. ತೆಂಗಿನ ಕಾಯಿಯ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯಲು ಆಂಜನೇಯನ ಮೂರ್ತಿಗೆ ಇದ್ದ ಸಿಂಧೂರವನ್ನು ಬಳಸಿ. ನಂತರ ಅಲ್ಲಿಯೇ ಕುಳಿತು ಹನುಮಾನ್ ಚಾಲೀಸ್ ಅನ್ನು ಓದಿ. ಹೀಗೆ 8 ವಾರಗಳ ಕಾಲ ಮುಂದುವರಿಸಿ. ಆರ್ಥಿಕ ಬಿಕ್ಕಟ್ಟು ಕಡಿಮೆಯಾಗುವುದು.

8. ವ್ಯವಹಾರದಲ್ಲಿ ತೊಂದರೆ

8. ವ್ಯವಹಾರದಲ್ಲಿ ತೊಂದರೆ

ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೆ, ಪ್ರತಿ ಗುರುವಾರ ಒಂದೂವರೆ ಮೀಟರ್ ಹಳದಿ ಬಟ್ಟೆಯನ್ನು ತೆಗೆದುಕೊಂಡು, ಅದರಲ್ಲಿ ಸಿಹಿ ತಿಂಡಿ ಹಾಗೂ ತೆಂಗಿನ ಕಾಯನ್ನು ಸುತ್ತಿ, ವಿಷ್ಣು ದೇವಸ್ಥಾನಕ್ಕೆ ಅರ್ಪಿಸಿ. ಇದು ನಿಮ್ಮ ತೊಂದರೆಯನ್ನು ನಿವಾರಿಸುವುದು. ವ್ಯವಹಾರದಲ್ಲಿ ಯಶಸ್ಸು ಸಿಗಲು ಅನುವುಮಾಡಿಕೊಡುವುದು.

9. ಶನಿ ದೇವರಿಗೆ ಆರಾಧಿಸಿ

9. ಶನಿ ದೇವರಿಗೆ ಆರಾಧಿಸಿ

ನಿಮ್ಮ ಕುಂಡಲಿಯಲ್ಲಿ ಶನಿ ದೋಷ ಅಥವಾ ಶನಿ ದುರ್ಬಲನಾಗಿದ್ದರೆ, ಪ್ರತಿ ಶನಿವಾರ ಗಂಗಾ ಮತ್ತು ಯಮುನಾ ನದಿ ನೀರಿನಲ್ಲಿ ತೆಂಗಿನಕಾಯನ್ನು ಮುಳುಗಿಸಿ. ಹಾಗೆ ಮಾಡುವಾಗ "ಓಂ ರಾಮದುತಾಯ ನಮಃ" ಎಂದು ಮಂತ್ರವನ್ನು ಪಠಿಸಿ. ಆಗ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಕ್ರಮವನ್ನು ಸತತವಾಗಿ 7 ಬಾರಿ ಮಾಡಿ. ಆಗ ಶನಿಯಿಂದಾಗುವ ತೊಂದರೆಗಳು ನಿವಾರಣೆಯಾಗುತ್ತವೆ. ಹನುಮಂತ ದೇವರ ಆಶೀರ್ವಾದವೂ ದೊರೆಯುವುದು.

10. ಕಾಳ ಸರ್ಪದೋಷ

10. ಕಾಳ ಸರ್ಪದೋಷ

ಕಾಳ ಸರ್ಪ ದೋಷ ಇದ್ದರೆ ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುವುದು. ಅಂತಹ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ ಒಣಗಿದ ತೆಂಗಿನಕಾಯಿ(ಕೊಬ್ಬರಿ) ಮತ್ತು ಕಂಬಳಿಯನ್ನು ಬಡವರಿಗೆ ದಾನ ಮಾಡಬೇಕು. ಈ ಕ್ರಮದಿಂದ ದೋಷದ ಪರಿಣಾಮ ಕಡಿಮೆಯಾಗುವುದು. ಜೀವನದಲ್ಲಿ ಚೇತರಿಕೆಯನ್ನು ಸಹ ಪಡೆದುಕೊಲ್ಳುವಿರಿ.

11. ಉತ್ತಮ ಅದೃಷ್ಟವನ್ನು ಪಡೆಯಲು

11. ಉತ್ತಮ ಅದೃಷ್ಟವನ್ನು ಪಡೆಯಲು

ಅದೃಷ್ಟಕ್ಕಾಗಿ ನೀವು ಯಾವುದೇ ಪವಿತ್ರ ನದಿಯಲ್ಲಿ ತೆಂಗಿನ ಕಾಯನ್ನು ಮುಳುಗಿಸಬಹುದು ಅಥವಾ ನದಿ ನೀರಿನಲ್ಲಿ ತೆಂಗಿನಕಾಯನ್ನು ಬಿಡಬಹುದು. ಹೀಗೆ ಮಾಡುವ ಮೊದಲು ನೀವು ನಿಮ್ಮ ಮನೆ ದೇವರ ಪ್ರಾರ್ಥನೆ ಹಾಗೂ ಕುಟುಂಬದವರ ಬಗ್ಗೆ ಚಿಂತನೆ ನಡೆಸಿ ಮಾಡಬೇಕು. ಆಗ ಉತ್ತಮ ಫಲ ಲಭಿಸುವುದು. ಸಕಾರಾತ್ಮಕವಾದ ಅದೃಷ್ಟಗಳು ನಿಮ್ಮ ಪಾಲಿಗೆ ಒಲಿದು ಬರುತ್ತವೆ.

12. ಮೂರು ಕಣ್ಣಿನ ತೆಂಗಿನ ಕಾಯಿ

12. ಮೂರು ಕಣ್ಣಿನ ತೆಂಗಿನ ಕಾಯಿ

ತೆಂಗಿನ ಕಾಯಲ್ಲಿ ಕಣ್ಣುಗಳು ಇರುವುದು ಸಾಮಾನ್ಯ. ಅದು ಕೆಲವೊಂದು ತೆಂಗಿನಕಾಯಲ್ಲಿ ಎರಡು, ಒಂದು ಮತ್ತು ಮೂರು ಇರುತ್ತವೆ. ಮೂರು ಕಣ್ಣಿನ ತೆಂಗಿನಕಾಯಿ ಸಾಮಾನ್ಯವಾಗಿರುತ್ತದೆ. ಈ ತೆಂಗಿನಕಾಯಿಯೇ ಹೆಚ್ಚು ಶುಭಕರವಾದದ್ದು. ದೇವರಲ್ಲಿ ಪ್ರಾರ್ಥನೆ ಮಾಡಲು, ದೇವರಿಗೆ ಅರ್ಪಿಸಲು ಹಾಗೂ ಕಳಸ ಇಡಲು ಮೂರು ಕಣ್ಣಿನ ತೆಂಗಿನ ಕಾಯನ್ನೇ ಬಳಸಬೇಕು. ಇದನ್ನು ಶಿವನ ಪ್ರತಿ ರೂಪ ಎಂದು ಸಹ ಪರಿಗಣಿಸಲಾಗುತ್ತದೆ.

13. ಲಕ್ಷ್ಮಿಯ ಅವತಾರ

13. ಲಕ್ಷ್ಮಿಯ ಅವತಾರ

ಮೂರು ಕಣ್ಣುಗಳಿರುವ ತೆಂಗಿನ ಕಾಯಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿದೆ. ಅದು ಲಕ್ಷ್ಮಿಯ ಅವತಾರವೂ ಹೌದು. ದೀಪಾವಳಿ ಹಬ್ಬದಂದು ಮೂರು ಕಣ್ಣಿನ ತೆಂಗಿನಕಾಯಿಯೊಂದಿಗೆ ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಆಗ ನೀವು ಎಂದಿಗೂ ಹಣದ ಬಿಕ್ಕಟ್ಟನ್ನು ಎದುರಿಸುವುದಿಲ್ಲ. ಲಕ್ಷ್ಮಿ ದೇವಿಯು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಳು.

14. ಇತರ ಉಪಯೋಗಗಳು

14. ಇತರ ಉಪಯೋಗಗಳು

ಮೂರು ಕಣ್ಣಿನ ತೆಂಗಿನಕಾಯಿ ಅಥವಾ ಏಕಶಿ ತೆಂಗಿನಕಾಯಿಯನ್ನು ಶನಿವಾರದಂದು ಬೆಲ್ ಮೆಟಲ್ ತಟ್ಟೆಯಲ್ಲಿ ಇರಿಸಿ, ದೇವರಲ್ಲಿ ಮನದಿಂಗಿತ ಬಯಕೆಯನ್ನು ಪ್ರಾರ್ಥಿಸಿಕೊಳ್ಳಬೇಕು. ಭಕ್ತಿಯಿಂದ ದೇವರ ಆರಾಧನೆ ಹಾಗೂ ಪ್ರಾರ್ಥನೆ ಮಾಡುವುದರಿಂದ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ ಎಂದು ಹೇಳಲಾಗುವುದು.

15. ಗರ್ಭಿಣಿಯರ ಪ್ರಾರ್ಥನೆ

15. ಗರ್ಭಿಣಿಯರ ಪ್ರಾರ್ಥನೆ

ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಸಾಕಷ್ಟು ಧನಾತ್ಮಕ ಚಿಂತನೆ ಹಾಗೂ ಪ್ರಾರ್ಥನೆಯನ್ನು ಕೈಗೊಳ್ಳಬೇಕು. ಇವರು ದೇವರ ಪ್ರಾರ್ಥನೆ, ಪೂಜೆ ಅಥವಾ ವಿಶೇಷ ಸೇವೆಯನ್ನು ಸಲ್ಲಿಸುವಾಗ ಏಕಶಿ ತೆಂಗಿನಕಾಯನ್ನು ಇಟ್ಟು ಪ್ರಾರ್ಥಿಸಬೇಕು. ಆಗ ದೇವರು ಅವಳ ಸುಲಭ ಹೆರಿಗೆಗೆ ಆಶೀರ್ವಾದ ಮಾಡುವನು. ಹುಟ್ಟುವ ಮಗುವು ಸಹ ಅತ್ಯಂತ ಬುದ್ಧಿವಂತ ಮಗುವಾಗುವುದು.

16. ಮಹಿಳೆಯರು ತೆಂಗಿನಕಾಯನ್ನು ಒಡೆಯುವುದಿಲ್ಲ

16. ಮಹಿಳೆಯರು ತೆಂಗಿನಕಾಯನ್ನು ಒಡೆಯುವುದಿಲ್ಲ

ದೇವಾಲಯಗಳಲ್ಲಿ ಹಾಗೂ ದೇವರ ಮೂರ್ತಿಯ ಎದುರು ಮಹಿಳೆಯರು ಸಾಮಾನ್ಯವಾಗಿ ತೆಂಗಿನ ಕಾಯನ್ನು ಒಡೆಯುವುದಿಲ್ಲ. ಏಕೆಂದರೆ ತೆಂಗಿನ ಕಾಯಿ ಒಂದು ಬೀಜ, ಮರ ಹಾಗೂ ಜೀವದ ಸಂಕೇತ. ಒಂಬತ್ತು ತಿಂಗಳುಗಳ ಕಾಲ ತನ್ನ ಹೊಟ್ಟೆಯಲ್ಲೂ ಒಂದು ಮಗುವನ್ನು ಜೋಪಾನ ಮಾಡಿ, ಜೀವ ನೀಡುವಳು. ಅಂತಹವಳು ತೆಂಗಿನ ಕಾಯನ್ನು ಒಡೆಯಬಾರದು. ಅದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು ಎಂದು ಪರಿಗಣಿಸಲಾಗುತ್ತದೆ.

17. ತೆಂಗಿನ ಕಾಯಿ ಒಡೆಯುವುದು

17. ತೆಂಗಿನ ಕಾಯಿ ಒಡೆಯುವುದು

ತೆಂಗಿನಕಾಯಿ ಸಕಾರಾತ್ಮಕ ಶಕ್ತಿಯನ್ನು ಒಳಗೊಂಡಿರುವ ಪವಿತ್ರವಾದ ಫಲ. ಇದು ಹೊರ ಭಾಗದಲ್ಲಿ ಅತ್ಯಂತ ಗಟ್ಟಿಯಾದ ಹಾಗೂ ಒಳ ಭಾಗದಲ್ಲಿ ಮೃದುವಾದ ರಚನೆಯನ್ನು ಪಡೆದುಕೊಂಡಿದೆ. ಈ ಒಂದು ಪವಿತ್ರ ಫಲವನ್ನು ದೇವರಿಗೆ ಅರ್ಪಿಸುವಾಗ ಎಲ್ಲೆಲ್ಲೋ ಒಡೆಯ ಬಾರದು. ಮೊದಲು ತೆಂಗಿನ ಕಾಯನ್ನು ತೊಳೆದು, ನಂತರ ದೇವರ ಮುಂದೆಯೇ ಒಡೆಯಬೇಕು. ಒಡೆದಾಗ ಅದರಲ್ಲಿ ಇರುವ ನೀರನ್ನು ದೇವರ ಪಾದಕ್ಕೆ ಅರ್ಪಿಸಬೇಕು. ಅರ್ಪಿಸುವಾಗ ದೇವರ ಪ್ರಾರ್ಥನೆಯನ್ನು ಮಾಡಬೇಕು. ಆಗಲೇ ನೀವು ದೇವರಿಗೆ ಅರ್ಪಿಸುವ ತೆಂಗಿನಕಾಯಿಯ ಫಲ ನಿಯಮ ಬದ್ಧವಾಗಿ ಪೂರ್ಣಗೊಳ್ಳುವುದು.

 18. ಹೋಮ-ಹವನಗಳ ಪೂಜೆಯಲ್ಲಿ

18. ಹೋಮ-ಹವನಗಳ ಪೂಜೆಯಲ್ಲಿ

ವಿಶೇಷ ಪೂಜೆ ಹಾಗೂ ಶುಭ ಸಮಾರಂಭಗಳ ಸಂದರ್ಭದಲ್ಲಿ ಹೋಮ-ಹವನಗಳನ್ನು ಕೈಗೊಳ್ಳಲಾಗುವುದು. ಆ ಸಮಯದಲ್ಲೂ ಹೋಮಕ್ಕೆ ತೆಂಗಿನಕಾಯಿಯ ಅರ್ಪಣೆ ಮಾಡಲಾಗುವುದು. ಇದರಿಂದ ಸುತ್ತಲ ಪರಿಸರ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಯಾಗುವುದು. ನಮ್ಮ ಜೀವನ ಹಾಗೂ ಕೆಲಸ ಕಾರ್ಯಗಳಲ್ಲೂ ಸಕಾರಾತ್ಮಕ ಬದಲಾವಣೆ ಮತ್ತು ಯಶಸ್ಸು ದೊರೆಯುವುದು. ನೀವು ನಿಮ್ಮ ಜೀವನದಲ್ಲಿ ಸಮಸ್ಯೆಯಿಂದ ಪಾರಾಗಲು ಸೂಕ್ತ ಜ್ಯೋತಿಷ್ಯಿಗಳ ಸಲಹೆ ಹಾಗೂ ಮಾರ್ಗದರ್ಶನಗಳ ಮೂಲಕ ಕ್ರಮವನ್ನು ಕೈಗೊಳ್ಳಿ. ಇವುಗಳೊಂದಿಗೆ ಸಂತೋಷದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

English summary

Coconut Remedies Can Bring You Health, Wealth and Prosperity

A coconut is considered to very auspicious in Hindu mythology --- on every special occasion, a coconut is made use of; whether it is entering into a new house or a "havan" at home, a coconut is always considered auspicious --- here are different ways through which a coconut can make your life better.
X
Desktop Bottom Promotion