For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್ 2021: ಚರ್ಚ್‌ನಲ್ಲಿ ಮಿಡ್‌ನೈಟ್‌ ಮಾಸ್‌ ಆಚರಣೆಯ ವಿಶೇಷತೆ ಏನು?

|

ಕ್ರೈಸ್ತರು ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್ಮಸ್‌ ದಿನವನ್ನಾಗಿ ಆಚರಿಸಲಾಗುವುದು. ಕ್ರಿಸ್ಮಸ್‌ ಎಮದರೆ ಸಡಗರ-ಸಂಭ್ರಮ. ಈ ಹಬ್ಬವನ್ನು ಡಿಸೆಂಬರ್‌ 25ರಂದು ಆಚರಿಸಲಾಗುವುದಾದರೂ ಸಡಗರ ಹಾಗೂ ಕೆಲವೊಂದು ಆಚರಣೆಗಳು ಡಿಸೆಂಬರ್ 24 ರಾತ್ರಿಯಂದೇ ಪ್ರಾರಂಭವಾಗುವುದು. ಅದರಲ್ಲೊಂದು ಡಿಸೆಂಬರ್‌ 24ರ ಮಿಡ್‌ನೈಟ್‌ ಚರ್ಚ್‌ ಮಾಸ್. ಮಿಡ್‌ನೈಟ್‌ ಮಾಸ್‌ನ ಆಚರಣೆಯ ವಿಶೇಷತೆಯೇನು ಎಂದು ನೋಡೋಣ:

Christmas: What is Midnight Mass? Why Do People Go To Church on Christmas Eve in Kannada

ಕ್ರಿಸ್ಮಸ್‌ ಹಬ್ಬದ ಸಮಯದಲ್ಲಿ ಡಿಸೆಂಬರ್ 24ರಂದು ಮಿಡ್‌ನೈಟ್‌ ಮಾಸ್‌ ಆಚರಿಸಲಾಗುವುದು. ಈ ಮಿಡ್‌ನೈಟ್‌ ಮಾಸ್‌ ಆಚರಣೆ 12ನೇ ಶತಮಾನದಿಂದ ಜನಪ್ರಿಯವಾಯಿತು. ರೋಮನ್ ಕ್ಯಾಥೋಲಿಕ್‌ ಚರ್ಚ್‌, ಆಂಗ್ಲಿಕನ್ ಕಮ್ಯೂನಿಯನ್ ಮತ್ತು ಲುಥೇರಿಯ್ನ್‌ ಚರ್ಚ್‌ಗಳಲ್ಲಿ ಮಿಡ್‌ನೈಟ್‌ ಮಾಸ್‌ ಆಚರಿಸಲಾಗುವುದು. ಕ್ರಿಸ್ಮಸ್‌ ದಿನದಂದು 3 ಮಾಸ್‌ ಆಚರಣೆಗೆ ಅನುಮತಿಯಿದೆ. ಮೊದಲ ಮಾಸ್‌ ಮಧ್ಯರಾತ್ರಿಯಲ್ಲಿ, ನಂತರ ಮುಂಜಾನೆ ಬಳಿಕ ಬೆಳಗ್ಗೆ ಮಾಸ್‌ ನಡೆಸಲಾಗುವುದು.

ಈ ಮಾಸ್‌ನಲ್ಲಿ ಯೇಸುಕ್ರಿಸ್ತನ ಕುರಿತ ಹಾಡುಗಳನ್ನು ಹಾಡಲಾಗುವುದು. ರೋಮನ್ ಕ್ಯಾಥೋಲಿಕ್ ಕಾಲದಿಂದಲೇ ಮಿಡ್‌ನೈಟ್‌ ಮಾಸ ಆಚರಿಸಲಾಗುತ್ತಿದೆ. 2009ರಿಂದ ಮಿಡ್‌ನೈಟ್‌ ಬದಲಿಗೆ ರಾತ್ರಿ 10 ಗಂಟೆಗೆ ಆವರಿಸುವಂತೆ ಪೋಪ್‌ ಸೂಚಿಸಿರುವುದರಿಂದ ಈಗ ಚರ್ಚ್‌ಗಳಲ್ಲಿ ರಾತ್ರಿ 10 ಗಂಟೆಗೆ ಮಾಸ್‌ ಆಚರಣೆ ಮಾಡಲಾಗುವುದು.

ಮಿಡ್‌ನೈಟ್‌ ಮಾಸ್‌ನಲ್ಲಿ ಯೇಸುವನ್ನು ಸ್ತುತಿಸುತ್ತಾ ಅವನ ಬರುವಿಕೆಗಾಗಿ ಕಾಯುತ್ತಾ ಸಂಭ್ರಮದಲ್ಲಿರುತ್ತಾರೆ.

English summary

Christmas: What is Midnight Mass? Why Do People Go To Church on Christmas Eve in Kannada

Christmas 2021: What is Midnight Mass? Why Do People Go To Church on Christmas Eve in Kannada, Read on....
Story first published: Friday, December 24, 2021, 15:25 [IST]
X
Desktop Bottom Promotion