For Quick Alerts
ALLOW NOTIFICATIONS  
For Daily Alerts

ಶ್ರಾವಣ ಸೋಮವಾರ ಈ 6 ವಸ್ತು ಮನೆಗೆ ತಂದರೆ ಒಳಿತಾಗುವುದು

|

ಶಿವಪೂಜೆಗೆ ಶ್ರಾವಣ ಮಾಸ ತುಂಬಾ ಸೂಕ್ತವಾದ ಮಾಸವಾಗಿದೆ. ಈ ಮಾಸದಲ್ಲಿ ಭಕ್ತಿಯನ್ನು ಶಿವನ ಆರಾಧನೆ ಮಾಡಿದರೆ ಕಷ್ಟಗಳು ದೂರವಾಗುವುದು, ಬಯಸಿದ್ದೆಲ್ಲಾ ನೆರವೇರುತ್ತದೆ ಎಂಬುವುದು ಶಿವ ಭಕ್ತರ ಅಚಲ ನಂಬಿಕೆ.

ಶ್ರಾವಣ ಮಾಸದಲ್ಲಿ ಬರುವ ಸೋಮವಾರ ತುಂಬಾ ವಿಶೇಷವಾದದ್ದು. ಈ ದಿನ ಉಪವಾಸವಿದ್ದು ವ್ರತ ಮಾಡುತ್ತಾರೆ, ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡಲಾಗುವುದು. ಶಿವನಿಗೆ ಪ್ರಿಯವಾದ ಬಿಲ್ವೆಪತ್ರೆ ಎಲೆಗಳನ್ನು ಅರ್ಪಿಸಲಾಗುವುದು.

ಶಿವನಿಗೆ ಶ್ರಾವಣ ಮಾಸವೆಂದರೆ ಏಕೆ ಪ್ರೀತಿ ಎಂಬುವುದಕ್ಕೂ ಒಂದು ಕತೆಯಿದೆ. ಶಿವನು ದಕ್ಷ ಮಹಾರಾಜನ ಮಗಳಾದ ಸತಿಯನ್ನು ಮದುವೆಯಾಗುತ್ತಾನೆ. ಆದರೆ ದಕ್ಷನಿಗೆ ಮಗಳನ್ನು ಶಿವನಿಗೆ ಮದುವೆ ಮಾಡುವುದು ಇಷ್ಟವಿರಲಿಲ್ಲ. ಬೂದಿ ಮೈಗೆ ಮೆತ್ತಿದ ಶಿವನನ್ನು ಕಂಡರೆ ಆತನಿಗೆ ಇಷ್ಟವಿರಲಿಲ್ಲ. ಹೀಗಿರಲು ಆತ ಯಜ್ಞ ಮಾಡುತ್ತಾನೆ. ಆ ಯಜ್ಞಕ್ಕೆ ಶಿವ ಹಾಗೂ ಸತಿಯನ್ನು ಬಿಟ್ಟು ಮೂರು ಲೋಕದಿಂದ ಎಲ್ಲರನ್ನೂ ಆಹ್ವಾನಿಸುತ್ತಾನೆ.

ಸತಿ ಆಹ್ವಾನ ಇಲ್ಲದಿದ್ದರೂ ಯಜ್ಞಕ್ಕೆ ಬಂದು ತಂದೆಯ ಅವಮಾನದ ಮಾತುಗಳಿಗೆ ಗುರಿಯಾಗುತ್ತಾಳೆ. ಇದರಿಂದ ನೊಂದು ಬೆಂಕಿಯಲ್ಲಿ ದಹಿಸಿ ಪ್ರಾಣ ಕಳೆದುಕೊಳ್ಳುತ್ತಾಳೆ. ಮುಂದಿನ ಜನ್ಮದಲ್ಲಿ ಸತಿ ಪಾರ್ವತಿಯಾಗಿ ಜನಿಸಿ ಶಿವನನ್ನು ಒಲಿಸಿಕೊಳ್ಳಲು ಶ್ರಾವಣ ಮಾಸದಲ್ಲಿ ಕಠಿಣ ತಪಸ್ಸು ಮಾಡುತ್ತಾಳೆ. ಆದ್ದರಿಂದಲೇ ಶಿವನಿಗೆ ಶ್ರಾವಣ ಮಾಸವೆಂದರೆ ಬಲು ಪ್ರಿಯ.

ಆದ್ದರಿಂದ ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳಲು ಪೂಜೆ ವ್ರತ ಮಾಡಲಾಗುವುದು. ಸೋಮವಾರ ಶಿವ ಪೂಜೆ ಮಾಡುವುದರಿಂದ ಉತ್ತಮ ಫಲ ಸಿಗುವುದು. ಅಲ್ಲದೆ ಈ ದಿನ ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಶುಭ ಉಂಟಾಗುವುದು.

ಇಲ್ಲಿ ನಾವು ಶ್ರಾವಣ ಸೋಮವಾರ ಯಾವ ವಸ್ತುಗಳನ್ನು ತಂದರೆ ಒಳ್ಳೆಯದೆಂದು ಹೇಳಲಾಗಿದೆ ನೋಡಿ:

 ಭಸ್ಮ

ಭಸ್ಮ

ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಒಂದು ಭಸ್ಮ, ಇದನ್ನು ಸೋಮವಾರ ಖರೀದಿ ಮಾಡಿ ಶಿವನ ಮೂರ್ತಿ ಬಳಿ ಇಡುವುದರಿಂದ ಒಳಿತು ಉಂಟಾಗುವುದು. ಇದನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಕೂಡ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಭಸ್ಮ ಮನಸ್ಸನ್ನು ಶಾಂತವಾಗಿ ಇಡುತ್ತದೆ.

ರುದ್ರಾಕ್ಷಿ

ರುದ್ರಾಕ್ಷಿ

ರುದ್ರಾಕ್ಷಿ ಎಂಬ ಪದವು ರುದ್ರ ಹಾಗೂ ಅಕ್ಷಿ ಎಂಬ ಎರಡು ಪದಗಳಿಂದ ಸಂಯೋಜನೆಗೊಂಡ ಸಂಸ್ಕೃತ ಪದವಾಗಿದೆ. ರುದ್ರ ಅಂದರೆ ಶಿವ, ಅಕ್ಷಿ ಅಂದರೆ ಕಣ್ಣುಗಳು, ರುದ್ರಾಕ್ಷಿ ಎಂದರೆ ಶಿವನ ಕಣ್ಣುಗಳು ಎಂದು ಅರ್ಥ.

ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆ ಧರಿಸುವುದು ಒಳ್ಳೆಯದು, ಇನ್ನು ಜಪದಲ್ಲಿ ಕೂಡ ರುದ್ರಾಕ್ಷಿ ಮಾಲೆ ಬಳಸಲಾಗುವುದು.

ಶ್ರಾವಣ ಸೋಮವಾರ ರುದ್ರಾಕ್ಷಿ ತಂದು ದೇವರ ಕೋಣೆಯಲ್ಲಿಡಿ.

ಗಂಗಾಜಲ

ಗಂಗಾಜಲ

ಗಂಗಾಜಲ ತುಂಬಾ ಪುಣ್ಯವಾಗಿದ್ದು, ಇದನ್ನು ಪೂಜೆಗೆ ಮುಂಚೆ ಸಿಂಪಡಿಸಿ ಪೂಜಾ ಸ್ಥಳವನ್ನು ಸ್ವಚ್ಛ ಮಾಡಲಾಗುವುದು. ಗಂಗಾಜಲ ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿ ಹೆಚ್ಚುವುದು. ಈ ಗಂಗಾಜಲ ತಂದು ಶ್ರಾವಣ ಸೋಮವಾರ ಅಡುಗೆ ಮನೆಯಲ್ಲಿಡಿ. ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುವುದು, ಸುಖ, ಶಾಂತಿ, ನೆಮ್ಮದಿ ನೆಲೆಸುವುದು.

ಬೆಳ್ಳಿಯ ಜೋಡಿ ಸರ್ಪ

ಬೆಳ್ಳಿಯ ಜೋಡಿ ಸರ್ಪ

Image Courtesy

ಹಾವನ್ನೇ ಹಾರವನ್ನಾಗಿ ಮಾಡಿಕೊಂಡಿರುವವನು ಶಿವ. ಆದ್ದರಿಂದ ಮನೆಯಲ್ಲಿರುವ ಎಲ್ಲಾ ಬಗೆಯ ವಾಸ್ತು ದೋಷ ನಿವಾರಿಸಲು ಬೆಳ್ಳಿಯ ಜೋಡಿ ಸರ್ಪದ ಅಚ್ಚನ್ನು ತಂದು ಮನೆಯ ಮುಖ್ಯ ದ್ವಾರದ ಕೆಳಗಿಡಿ.

ತಾಮ್ರದ ಲೋಟದಲ್ಲಿ ನೀರು

ತಾಮ್ರದ ಲೋಟದಲ್ಲಿ ನೀರು

ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಿಶ್ವಾಸವಿದ್ದರೆ ಮಾತ್ರ ಅಂಥ ಮನೆಯಲ್ಲಿ ಸುಖ, ಸಂತೋಷ, ನೆಮ್ಮದಿ ಇರುತ್ತದೆ. ಇದಕ್ಕಾಗಿ ಮನೆಯ ಸದಸ್ಯರು ಒಟ್ಟಾಗಿ ಹೆಚ್ಚು ಸಮಯ ಕಳೆಯುವ ಕೋಣೆಯಲ್ಲಿ (ಹಾಲ್‌ನಲ್ಲಿ) ತಾಮ್ರದ ಲೋಟದಲ್ಲಿ ನೀರಿಡಿ.

ಡಮರುಗ

ಡಮರುಗ

ಶಿವನ ಕೈಯಲ್ಲಿ ಡಮರುಗ ಇರುತ್ತದೆ. ಶ್ರಾವಣ ಸೋಮವಾರ ಮಕ್ಕಳ ಕೋಣೆಯಲ್ಲಿ ಡಮರುಗ ಇಟ್ಟರೆ ಇದರಿಂದ ಯಾವುದೇ ನಕಾರಾತ್ಮಕ ಶಕ್ತಿ ಮಕ್ಕಳ ಮೇಲೆ ಪ್ರಭಾವ ಬೀರದಂತೆ ಕಾಪಾಡಬಹುದು. ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ.

English summary

Things to Bring Home On Shravan Somwar

Shravan is a month of lord shiva, shravan somwar is very special in Shravan month. On Sharvan somwar bring these things to home.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X