Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಭಾದ್ರಪದ ಮಾಸ 2021: ಈ ತಿಂಗಳಿನಲ್ಲಿವೆ ವಿಶೇಷ ಹಬ್ಬಗಳು ಹಾಗೂ ವ್ರತಗಳು
ಹಿಂದೂ ಕನ್ನಡ ಪಂಚಾಂಗದ ಪ್ರಕಾರ ಭಾದ್ರಪದ ಮಾಸ 6ನೇ ತಿಂಗಳಾಗಿದೆ. ನಮ್ಮಲ್ಲಿ ಬಾದ್ರಪದ ಮಾಸ ಸೆಪ್ಟೆಂಬರ್ 7ಕ್ಕೆ ಪ್ರಾರಂಭವಾಗಿದೆ. ಅಕ್ಟೋಬರ್ 6ಕ್ಕೆ ಮುಕ್ತಾಯವಾಗುವುದು. ಮಹಾಲಯ ಶ್ರಾದ್ಧ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಿ ಸೆಪ್ಟೆಬರ್ 28ರವರೆಗೆ ಇರಲಿದೆ.

ಈ ತಿಂಗಳಿನಲ್ಲಿ ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಸೆಪ್ಟೆಂಬರ್ 9, 10ರಂದು ಅದ್ಧೂರಿಯಾಗಿ ನಡೆಯಿತು. ಇದಾದ ಬಳಿಕ ಭಾದ್ರಪದ ಮಾಸದಲ್ಲಿ ಇನ್ನೂ ಅನೇಕ ವಿಶೇಷ ದಿನಗಳಿವೆ, ಆ ವಿಶೇಷ ದಿನಗಳಾವುವು, ಅದರ ಮಹತ್ವವೇನು ಎಂದು ನೋಡೋಣ ಬನ್ನಿ:

ಭಾದ್ರಪದಲ್ಲಿ ಪ್ರದೋಷ ಉಪವಾಸ
ಪ್ರದೋಷ: ಸೆಪ್ಟೆಂಬರ್ 18
ಪ್ರದೋಷ- ಅಕ್ಟೋಬರ್ 4

ಭಾದ್ರಪದದಲ್ಲಿ ಏಕಾದಶಿ
ಪರಿವರ್ತಿನಿ ಏಕಾದಶಿ: ಸೆಪ್ಟೆಂಬರ್ 17
ಇಂದಿರಾ ಏಕಾದಶಿ: ಅಕ್ಟೋಬರ್ 2

ಸಂಕಷ್ಟರ ಚತುರ್ಥಿ ವ್ರತ
ಗಣೇಶನಿಗೆ ಭಾದ್ರಪದಲ್ಲಿ ಮೀಸಲಾಗಿರುವ ಮತ್ತೊಂದು ದಿನವೆಂದರೆ ಸಂಕಷ್ಟರ ಚತುರ್ಥಿ 24, 2021
ಚಂದ್ರೋದಯ: ರಾತ್ರಿ 8:43ಕ್ಕೆ

ಭಾದ್ರಪದ ಮಾಸದ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ
ಶುಕ್ಲ ಪಕ್ಷ 2021: ಸೆಪ್ಟೆಂಬರ್ 7-ಸೆಪ್ಟೆಂಬರ್ 20
ಕೃಷ್ಣ ಪಕ್ಷ 2021: ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6. ಇದೇ ಸಮಯದಲ್ಲಿ ಪಿತೃ ಪಕ್ಷ ಇರುವುದು.

ಭಾದ್ರಮಾಸದ ಪೂರ್ಣಿಮೆ ಹಾಗೂ ಮಹಾಲಯ ಶ್ರಾದ್ಧ
* ಹುಣ್ಣಿಮೆ ಸೆಪ್ಟೆಂಬರ್ 20, 2021
ಮಹಾಲಯ ಶ್ರಾದ್ಧ ಪ್ರಾರಂಭ ಸೆಪ್ಟೆಂಬರ್ 21
ಭಾದ್ರಪದ ಮಾಸದಲ್ಲಿ ಅಮವಾಸ್ಯೆ
ಅಕ್ಟೋಬರ್ 6
ಈ ಮಹಾಲಯ ಅಮವಾಸ್ಯೆಯನ್ನು ಸರ್ವ ಪಿತೃ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು.

ಭಾದ್ರಪದ ಮಾಸದಲ್ಲಿ ಇನ್ನು ಬರಲಿರುವ ವಿಶೇಷ ದಿನಾಂಕಗಳು
ಸೆಪ್ಟೆಂಬರ್ 17: ವಾಮನ ಜಯಂತಿ
ಸೆಪ್ಟೆಂಬರ್ ಚತುರ್ದಶಿ: ಸೆಪ್ಟೆಂಬರ್ 17
ಪಿತೃಪಕ್ಷ : ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6
ಕಲಾಷ್ಟಮಿ: ಸೆಪ್ಟೆಂಬರ್ 29
ಅವಿಧಾವ ನವಮಿ: ಸೆಪ್ಟೆಂಬರ್ 30
ಮಹಾಲಯ ಶ್ರಾದ್ಧ: ಅಕ್ಟೋಬರ್ 6
ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 23ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 20ಕ್ಕೆ ಮುಗಿಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಲ್ಲಿ ಒಂದೇ ಅವಧಿಯಾಗಿದೆ.



Click it and Unblock the Notifications
