For Quick Alerts
ALLOW NOTIFICATIONS  
For Daily Alerts

ವಿಷ್ಣುವಿನಲ್ಲಿ ಐಕ್ಯವಾದ ದೇವರ ಮೊಸಳೆ: ದೇವರಿಗಿಟ್ಟ ನೈವೇದ್ಯ ಮಾತ್ರ ಸೇವಿಸುತ್ತಿದ್ದ' ಸಸ್ಯಾಹಾರಿ ಮೊಸಳೆ'!

|

ದೇವರಿಗೆ ಇಟ್ಟ ಪ್ರಸಾದವನ್ನೇ ತಿಂದು ಜೀವಿಸುತ್ತಿದ್ದ ದೇವರ ಮೊಸಳೆ ಎಂದು ಪ್ರಖ್ಯಾತಿಯನ್ನು ಪಡೆದಿದ್ದ 'ಬಬಿಯಾ' ಮೊಸಳೆ ದೇವರ ಪಾದ ಸೇರಿದೆ.

Babiya crocodile death

ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಾಲಯದಲ್ಲಿ ಸುಮಾರು 70ಕ್ಕೂ ಅಧಿಕ ವರ್ಷಗಳಿಂದ ಇದ್ದ ಸಸ್ಯಾಹಾರಿ ಮೊಸಳೆ ಇಹಲೋಕ ತ್ಯಜಿಸಿದೆ. ಶ್ರೀ ವಿಷ್ಣುವಿನಲ್ಲಿ ಐಕ್ಯವಾಗಿದೆ.

ಅನಂತಪುರದ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಮೊಸಳೆ

ಅನಂತಪುರದ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಮೊಸಳೆ

ಕಾಸರಗೋಡು ಜಿಲ್ಲೆಯ ಕುಂಬ್ಳೆಯ ಬದಿಯಡ್ಕ ಮಾರ್ಗವಾಗಿ ಸಾಗುವಾಗ ಅನಂತಪದ್ಮನಾಭ ಸ್ವಾಮಿ ದೇವಾಲಯ ಸಿಗುತ್ತದೆ. ಈ ದೇವಾಲಯ ವಿಶಾಲವಾದ ಕೆರೆಯ ಮಧ್ಯ ಇರುವುದರಿಂದ ಇದನ್ನು ಸರೋವರ ಕ್ಷೇತ್ರ ಅನಂತಪುರ ಎಂದು ಕೂಡ ಕರೆಯಲಾಗುವುದು.

ಈ ದೇವಾಲಯಕ್ಕೆ ಹೋದರೆ 5 ತಲೆಯ ಸರ್ಪದ ಮೇಲೆ ಕುಳಿತ ಅನಂತಪದ್ಮನಾಭ ಸ್ವಾಮಿಯ ವಿಗ್ರಹವಿದೆ. ಅಲ್ಲಿಯ ಸರೋವರದ ತಿಳಿನೀರಿನಲ್ಲಿ ಈ ಸಸ್ಯಾಹಾರಿ ಮೊಸಳೆ ವಾಸವಿತ್ತು. ಇದನ್ನು ಬಬಿಯಾ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಅನಂತಪದ್ಮನಾಭನಿಗೆ ಪೂಜೆ ಸಲ್ಲಿಸಿದ ಬಳಿಕ ಪೂಜಾರಿ ಬಂದು ಬಬಿಯಾ ಅಂತ ಕೂಗಿದರೆ ಸಾಕು ಈ ಮೊಸಳೆ ಬಂದು ಆ ನೈವೇದ್ಯವನ್ನು ಸೇವಿಸುತ್ತಿತ್ತು.

ಅಚ್ಚರಿಗೆ ಕಾರಣವಾಗಿದ್ದ ಸಸ್ಯಾಹಾರಿ ಮೊಸಳೆ

ಅಚ್ಚರಿಗೆ ಕಾರಣವಾಗಿದ್ದ ಸಸ್ಯಾಹಾರಿ ಮೊಸಳೆ

ಮೊಸಳೆಗಳು ಮಾಂಸಾಹಾರಿಗಳು, ಆದ್ದರಿಂದಲೇ ಅವುಗಳಿರುವ ನೀರಿಗೆ ಯಾವುದೇ ಪ್ರಾಣಿ ಇಳಿದರೂ ಉಳಿಗಾಲವಿಲ್ಲ, ಆನೆಯನ್ನು ಕೂಡ ಎಳೆದೊಯ್ಯುವ ಸಾಮರ್ಥ್ಯ ಮೊಸಳೆಗಿದೆ. ಆದರೆ ಈ ಸರೋವರದಲ್ಲಿರುವ ಮೊಸಳೆ ನಿರುಪದ್ರವಿ. ಇದು ಇದುವರೆಗೆ ಯಾರಿಗೂ ತೊಂದರೆಕೊಟ್ಟ ಉದಾಹರಣೆಯಿಲ್ಲ. ಪೂಜಾರಿ ಕೊಟ್ಟ ನೈವೇದ್ಯ ಮಾತ್ರ ತಿಂದು ಬದುಕುತ್ತಿತ್ತು. ದೇವರ ಶಕ್ತಿಯ ಅನೇಕ ಚಮತ್ಕಾರಗಳ ಬಗ್ಗೆ ಕೇಳುತ್ತೇವೆ, ಅಂಥ ದೈವಿಕ ಚಮತ್ಕಾರಕ್ಕೆ ಒಂದು ಉದಾಹರಣೆ ಈ ಸಸ್ಯಾಹಾರಿ ಮೊಸಳೆ.

ಕೆಲ ವರ್ಷಗಳ ಹಿಂದೆ ಈ ದೇವಾಲಯ ಬಳಿ ಬಬಿಯಾ ಬಂದು ಭಕ್ತರಲ್ಲಿ ಅಚ್ಚರಿ ಮೂಡಿಸಿತ್ತು. ಆಗ ಅಲ್ಲಿಯ ಅರ್ಚಕರು ಅದರ ಹಣೆ ಮುಟ್ಟಿ ಚಂದನದ ತಿಲಕವನ್ನು ಇಟ್ಟಿದ್ದರು.

ಈ ಸರೋವರಕ್ಕೆ ಈ ಮೊಸಳೆ ಹೇಗೆ ಬಂತು ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ ಸುಮಾರು 70 ವರ್ಷಗಳಿಂದಲೂ ಇಲ್ಲಿಯೇ ಇದೆ ಎಂದು ಹೇಳಲಾಗುತ್ತಿದೆ.

 ಈ ಹಿಂದೆ ಬ್ರಿಟಿಷ್‌ ಅಧಿಕಾರಿಯೊಬ್ಬ ಮೊಸಳೆ ಕೊಂದಿದ್ದಕ್ಕೆ ತಕ್ಕಶಾಸ್ತಿಯಾಗಿತ್ತು

ಈ ಹಿಂದೆ ಬ್ರಿಟಿಷ್‌ ಅಧಿಕಾರಿಯೊಬ್ಬ ಮೊಸಳೆ ಕೊಂದಿದ್ದಕ್ಕೆ ತಕ್ಕಶಾಸ್ತಿಯಾಗಿತ್ತು

ಅನಂತಪು ದೇವಾಸ್ಥಾನದಲ್ಲಿ ಮೊಸಳೆ ಇರುವ ಸುದ್ದಿ ಕೇಳಿದ ಬ್ರಿಟಿಷ್ ಅಧಿಕಾರಿ ಅದನ್ನು ಕೊಲ್ಲಬೇಕೆಂದು ತೀರ್ಮಾನಿಸುತ್ತಾನೆ. ಅವನು ಮೊಸಳೆಯನ್ನು ಕೊಲ್ಲಲು ಅಲ್ಲಿಗೆ ಬಂದು ಬಬಿಯಾ ಎಂದು ಕೂಗಿದಾಗ ಮೊಸಳೆ ಹೊರಬರುತ್ತದೆ, ಅದಕ್ಕೆ ಗುಂಡಿಕ್ಕಿ ಕೊಲ್ಲುತ್ತಾನೆ, ಅದಾಗಿ ಸ್ವಲ್ಪ ದಿನಗಳಲ್ಲಿ ಆತ ಹಾವು ಕಚ್ಚಿ ಸಾವನ್ನಪ್ಪಿದ ಎಂದು ಅಲ್ಲಿಯ ಜನರು ಹೇಳುತ್ತಾರೆ. ಆ ಮೊಸಳೆ ಸಾವನ್ನಪ್ಪಿದ ಕೆಲವು ದಿನಗಳಲ್ಲಿ ಅಲ್ಲಿ ಮತ್ತೊಂದು ಮೊಸಳೆ ಕಾಣಿಸಿತು, ಅದನ್ನೂ ಬಬಿಯಾ ಎಂದು ಕರೆಯಲಾರಂಭಿಸಿದರು.

ಅನಂತಪದ್ಮನಾಭನಲ್ಲಿ ಐಕ್ಯವಾದ ಮೊಸಳೆ

ಅನಂತಪದ್ಮನಾಭನಲ್ಲಿ ಐಕ್ಯವಾದ ಮೊಸಳೆ

ಈ ಮೊಸಳೆ ಅನಂತಪದ್ಮನಾಭನನ್ನು ಕಾವಲು ಕಾಯುತ್ತಿದೆ ಎಂಬ ನಂಬಿಕೆ ಜನರಲ್ಲಿದೆ. ಈ ಅನಂತ ಪದ್ಮನಾಭ ದೇವಾಲಯಕ್ಕೂ ಕೇರಳದ ಅನಂತ ಪದ್ಮನಾಭ ದೇವಾಲಯಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಇದೀಗ ದೇವರ ಮೊಸಳ ವಿಷ್ಣುವಿನ ಪಾದ ಸೇರಿದ್ದು ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಮೊಸಳೆ ಕಂಡು ಬರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಜನರು ದೇವರ ಮೊಸಳೆಗೆ ವಿದಾಯ ಹೇಳುತ್ತಿದ್ದಾರೆ.

English summary

Babiya crocodile at Anandapadmanabha Swamy temple passes away; Know interesting facts in kannada

Babiya only vegetarian' temple crocodile loves to eat at Sri Anandapadmanabha Swamy temple passes away; Know interesting facts in Kannada.
Story first published: Monday, October 10, 2022, 13:16 [IST]
X
Desktop Bottom Promotion