For Quick Alerts
ALLOW NOTIFICATIONS  
For Daily Alerts

ಆಯುಧ ಪೂಜೆ 2021: ಇದರ ಮಹತ್ವವೇನು, ಶುಭ ಮುಹೂರ್ತ ಯಾವಾಗ?

|

ನವರಾತ್ರಿಯಲ್ಲಿ ಆಯುಧಪೂಜೆಗೆ ತುಂಬಾನೇ ಪ್ರಾಮುಖ್ಯತೆ ಇದೆ. ನವರಾತ್ರಿಯ ಒಂಭತ್ತನೇ ದಿನ ಅಂದರೆ ನವಮಿಯೆಂದು ಆಯುಧ ಪೂಜೆಯನ್ನು ಆಚರಿಸಲಾಗುವುದು.

ಭಾರತೀಯ ಸಂಪ್ರದಾಯದಲ್ಲಿ ಈ ವಿಶೇಷ ದಿನದಂದು ಮನೆಯಲ್ಲಿರುವ ಆಯುಧ, ಕೆಲಸದ ಉಪಕರಣಗಳು, ಗಾಡಿಯನ್ನು ಪೂಜಿಸಲಾಗುವುದು. ಕೃಷಿಗೆ ಬಳಸುವ ಸಲಕರಣೆಗಳು, ಕಾರ್ಖನೆಯಲ್ಲಿ ಬಳಸುವ ಉಪಕರಣಗಳನ್ನು ಪೂಜಿಸಲಾಗುವುದು.

 ಆಯುಧ ಪೂಜೆ ಯಾವ ವಸ್ತುಗಳಿಗೆ ಮಾಡಲಾಗುವುದು?

ಆಯುಧ ಪೂಜೆ ಯಾವ ವಸ್ತುಗಳಿಗೆ ಮಾಡಲಾಗುವುದು?

ನಾವು ಏನು ವೃತ್ತಿ ಮಾಡುತ್ತೇವೋ ಆ ವಸ್ತುಗಳನ್ನು ಪೂಜಿಸಲಾಗುವುದು. ಆಯುಧಪೂಜೆಯಲ್ಲಿ ಸಲ್ಲಿಸುವ ಪೂಜೆ ಅದೊಂದು ಭಾವನೆಯಾಗಿದೆ, ಕೃಷಿಕನಿಗೆ ಗುದ್ದಲಿ, ಪಿಕಾಸು ಇಂಥ ವಸ್ತುಗಳು ಪ್ರಮುಖವಾದರೆ ಡ್ರೈವರ್‌ಗೆ ತನ್ನ ಹೊಟ್ಟೆ ತುಂಬುವ ಗಾಡಿ ಮೇಲೆ ಪ್ರೀತಿ ಹೆಚ್ಚು, ಟೈಲರಿಂಗ್ ಮಾಡುವವನ ಹೊಟ್ಟೆ ತುಂಬಿಸುವ ಕಾರ್ಯ ಮೆಷಿನ್, ಅದೇ ಉದ್ಯಮಿ ಬೆಳೆಯಬೇಕೆಂದರೆ ಕಾರ್ಖಾನೆಗಳಲ್ಲಿರುವ ಮೆಷಿನ್‌ಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು.

ಆದ್ದರಿಂದ ಆಯುಧ ಪೂಜೆಯ ದಿನ ಜನರು ನಮ್ಮನ್ನು ಸಾಕಿ ಸಲುಹುವ ಉಪಕರಣಗಳಿಗೆ ಪ್ರೀತಿಯಿಂದ ಪೂಜೆ ಸಲ್ಲಿಸುತ್ತಾರೆ.

ಹಿಂದಿನ ಕಾಲದಲ್ಲಿ ಯುದ್ಧಕ್ಕೆ ಬಳಸುವ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು .

 ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆ

ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆ

ದುರ್ಗೆಯು ಚಾಮುಂಡಿಯ ಅವತಾರವನ್ನು ತಾಳಿ ದುಷ್ಟನಾದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಆತನನ್ನು ಸಂಹರಿಸಲು ಬಳಸಿದ ಆಯುಧಗಳನ್ನು ಹಾಗೆಯೇ ಭೂಲೋಕದಲ್ಲಿ ಬಿಟ್ಟು ಹೋದಳು, ಆ ಆಯುಧಗಳನ್ನು ತಂದು ಪೂಜಿಸಲಾಯಿತು, ಅಲ್ಲಿಂದ ಆಯುಧ ಪೂಜೆ ಶುರುವಾಯಿತು ಎಂಬ ಪೌರಾಣಿಕ ಕತೆಯಿದೆ.

ಆಧ್ಯಾತ್ಮಿಕ ಭಾವನೆ ಮೂಡಿಸುವ ಆಯುಧ ಪೂಜೆ

ಆಧ್ಯಾತ್ಮಿಕ ಭಾವನೆ ಮೂಡಿಸುವ ಆಯುಧ ಪೂಜೆ

ನಾವು ಬಳಸುವ ವಸ್ತುಗಳನ್ನು ಪೂಜೆ ಮಾಡುತ್ತೇವೆ, ಜೊತೆಗೆ ಆ ದಿನ ನಾವು ಅವುಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅಲ್ಲದೆ ನಮ್ಮ ಮನಸ್ಸು ಕೂಡ ಶುದ್ಧವಾಗುತ್ತದೆ, ದುಷ್ಟರ ವಿರುದ್ಧ ಹೋರಾಡಿ ವಿಜಯಿಸಿದ ದಿನವನ್ನು ವಿಜಯದಶಮಿಯೆಂದು ಆಚರಿಸಲಾಗುವುದು. ದುರ್ಗೆಯನ್ನು ಪೂಜಿಸುವಾಗ ನಮ್ಮ ಮನಸ್ಸು ಕೂಡ ಶುದ್ಧವಾಗಿರಬೇಕು.

 ಆಯುಧ ಪೂಜೆ ಯಾವಾಗ?

ಆಯುಧ ಪೂಜೆ ಯಾವಾಗ?

ಈ ವರ್ಷ ಆಯುಧ ಪೂಜೆಯನ್ನು ಅಕ್ಟೋಬರ್‌ 14ರಂದು ಆಚರಿಸಲಾಗುವುದು.

ಆಯುಧ ಪೂಜೆ ಯಾವಾಗ ಮಾಡಬೇಕು?

ಮಧ್ಯಾಹ್ನ 2:04ರಿಂದ 2:51ರ ಅವಧಿಯಲ್ಲಿ ಪೂಜೆ ಸಲ್ಲಿಸಬೇಕು.

 ಹೇಗೆ ಆಚರಿಸಲಾಗುವುದು?

ಹೇಗೆ ಆಚರಿಸಲಾಗುವುದು?

ನವಮಿಯೆಂದು ಮನೆಯಲ್ಲಿ ಚಿಕ್ಕ ಉಪಕರಣದಿಂದ ಹಿಡಿದು ಮನೆಯಲ್ಲಿರುವ ಗಾಡಿಗಳಿಗೂ ಪೂಜೆಯನ್ನು ಸಲ್ಲಿಸಲಾಗುವುದು. ಕುಂಕುಮ ಹಚ್ಚಿ, ನಂತರ ಆರತಿ ಎತ್ತಲಾಗುವುದು. ಗಾಡಿಯಿದ್ದರೆ ಅದರ ಮುಂದೆ ಕುಂಕುಮ ತುಂಬಿದ ಕುಂಬಳಕಾಯಿ ಒಡೆಯಲಾಗುವುದು.

ಆಯುಧ ಪೂಜೆಯಲ್ಲಿ ಅಡಿಕೆ-ವೀಳ್ಯೆದೆಲೆ, ಅವಲಕ್ಕಿ, ಬೂದುಕೂಂಬಳಕಾಯಿ, ನಿಂಬೆಹಣ್ಣು, ಬಾಳೆಹಣ್ಣು, ಕಬ್ಬುಗಳು, ಕಾಯಿತುರಿ, ಕರ್ಪೂರ, ಅಗರಬತ್ತಿ, ಸಿಹಿ ತಿನಿಸುಗಳು ಈ ಸಾಮಗ್ರಿಗಳು ಬೇಕಾಗುವುದು.

English summary

Ayudha Pooja 2021 Date, Puja Vidhi, Mantra, Subha Muhurtha, History and Significance

Ayudha Pooja 2020 Date, Puja Vidhi, mantra, Subha Mhurta, History and Significance, Have a look.
X
Desktop Bottom Promotion