For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ ಶಾಸ್ತ್ರ: ಶನಿವಾರದಂದು ಈ ಏಳು ವಸ್ತುಗಳನ್ನು ಮನೆಗೆ ತರಬೇಡಿ!

By Arshad
|
Do not bring these 7 items to home on Saturday | BoldSky Kannada

ಭಾರತೀಯ ಮತ್ತು ಪಾಶ್ಚಾತ್ಯ ಹಸ್ತಸಾಮುದ್ರಿಕರ ಪ್ರಕಾರ ವ್ಯಕ್ತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರವಾದ ಪ್ರಭಾವ ಬೀರುತ್ತವೆ. ಇದಕ್ಕೆ ಈ ಗ್ರಹಗಳ ಗುರುತ್ವಶಕ್ತಿ ಹಾಗೂ ಸೂಸುವ ವಿಕಿರಣದ ಅಲೆಗಳೇ ಕಾರಣ. ಈ ವಿಕಿರಣದ ಅಲೆಗಳು ಭಿನ್ನ ಬಣ್ಣಗಳು ಹಾಗೂ ಭಿನ್ನ ಅಂಗಗಳ ಮೇಲೆ ಭಿನ್ನವಾಗಿ ಪ್ರತಿಕ್ರಿಯಿಸುತ್ತವೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿಗ್ರಹದ ಪಾತ್ರವಿದೆ ಎಂದು ಹಸ್ತಸಾಮುದ್ರಿಕರು ಹೇಳಿದರೆ ಇದಕ್ಕೆ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ನಿಮಗೆ ಅತ್ಯಗತ್ಯ. ಅದರಲ್ಲೂ ಶನಿಕಾಟವನ್ನು ಅನುಭವಿಸುವವರು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು.

'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

ಶನಿದೇವ ಅಥವಾ ಶನಿಗ್ರಹಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳಿದ್ದು ಇದರಲ್ಲಿ ಪ್ರಮುಖವಾದುದೆಂದರೆ ಶನಿವಾರದಂದು ಕೆಲವು ವಸ್ತುಗಳನ್ನು ಕೊಳ್ಳಬಾರದು ಅಥವಾ ಮನೆಗೆ ತರಬಾರದು ಎಂದು ಹಸ್ತಸಾಮುದ್ರಿಕರು ಅಭಿಪ್ರಾಯ ಪಡುತ್ತಾರೆ. ಇದನ್ನು ಮೀರಿದರೆ ಆರೋಗ್ಯ ಕೆಡುವುದು ಹಾಗೂ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

ಬದನೇಕಾಯಿ

ಬದನೇಕಾಯಿ

ಶನಿವಾರದಂದು ಬದನೇಕಾಯಿಯನ್ನು ಕೊಳ್ಳಲೂಬಾರದು, ತಿನ್ನಲೂಬಾರದು. ಅಲ್ಲದೇ ಶನಿವಾರದಂದ ಕಾಳುಮೆಣಸನ್ನೂ ಕೊಳ್ಳಬಾರದು ಹಾಗೂ ಈ ದಿನ ಶನಿವ್ರತವನ್ನು ಆಚರಿಸುವುದು ಒಳ್ಳೆಯದು.

ಶನಿವಾರದಂದು ಉಪ್ಪು ಕೊಳ್ಳಬೇಡಿ..!

ಶನಿವಾರದಂದು ಉಪ್ಪು ಕೊಳ್ಳಬೇಡಿ..!

ಶನಿವಾರದಂದು ಉಪ್ಪನ್ನು ಕೊಳ್ಳುವುದು ಆರ್ಥಿಕ ನಷ್ಟಕ್ಕೆ ಆಹ್ವಾನ ಎಂದು ಜ್ಯೋತಿಷ್ಯಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಬದಲಿಗೆ ಈ ದಿನ ಹತ್ತಿರದ ಮಂದಿರ ಅಥವಾ ಆರಾಧನಾ ಸ್ಥಳಕ್ಕೆ ಉಪ್ಪನ್ನು ದಾನ ಮಾಡಬೇಕು.

ಹೊಸ ವಾಹನವನ್ನು ಶನಿವಾರ ಕೊಳ್ಳಲೇಬಾರದು!

ಹೊಸ ವಾಹನವನ್ನು ಶನಿವಾರ ಕೊಳ್ಳಲೇಬಾರದು!

ಶನಿವಾರದಂದು ಕಬ್ಬಿಣವನ್ನು ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಕೊಳ್ಳಬಾರದು. ಅದರಲ್ಲೂ ಹೊಸ ವಾಹನವನ್ನು ಶನಿವಾರ ಕೊಳ್ಳಲೇಬಾರದು. ಏಕೆಂದರೆ ಇದರಿಂದ ಅಪಘಾತವಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ ಎಂದು ಜ್ಯೋತಿಷ್ಯಾಸ್ತ್ರಜ್ಞರು ಎಚ್ಚರಿಸುತ್ತಾರೆ.

ಬೇಳೆ

ಬೇಳೆ

ಬೇಳೆಯೂ ಶನಿದೇವನಿಗೆ ಸಂಬಂಧಪಟ್ಟಿದ್ದು ಶನಿವಾರದಂದು ಕೊಳ್ಳಬಾರದು. ಆದ್ದರಿಂದ ಬೇಳೆಯನ್ನು ಕೊಳ್ಳದಿರುವುದೇ ಉತ್ತಮ. ಬದಲಿಗೆ ಬೇಳೆಯನ್ನು ಬೇಯಿಸಿ ತಯಾರಿಸಿದ ಆಹಾರವನ್ನು ಬಡವರಿಗೆ ದಾನ ಮಾಡಬೇಕು ಅಥವಾ ಕಾಗೆಗಳಿಗೆ ಆಹಾರಧಾನ್ಯಗಳನ್ನು ತಿನ್ನಲು ನೀಡಬೇಕು.

ಕಪ್ಪು ಬಣ್ಣ ಬಟ್ಟೆ

ಕಪ್ಪು ಬಣ್ಣ ಬಟ್ಟೆ

ಕಪ್ಪು ಬಣ್ಣ ನಿಮ್ಮ ಇಷ್ಟದ ಬಣ್ಣವಾಗಿರಬಹುದು. ಆದರೆ ಒಂದು ವೇಳೆ ನಿಮ್ಮ ಗ್ರಹಗತಿಯಲ್ಲಿ ಶನಿಯ ಪ್ರಭಾವವಿದ್ದರೆ ಶನಿವಾರ ಮಾತ್ರ ಕಪ್ಪುಬಣ್ಣದ ಬಟ್ಟೆಗಳನ್ನು ಕೊಳ್ಳಲು ಹೋಗಬಾರದು. ಇದರಿಂದ ದುರಾದೃಷ್ಟವನ್ನು ಆಹ್ವಾನಿಸಿದಂತಾಗುತ್ತದೆ.

ಸಾಸಿವೆ

ಸಾಸಿವೆ

ಶನಿವಾರ ಸಾಸಿವೆಯನ್ನೂ ಕೊಳ್ಳಬಾರದು, ಬದಲಿಗೆ ಬಡವರಿಗೆ ದಾನ ನೀಡಬೇಕು. ಅಲ್ಲದೇ ಶನಿಯ ವಿಗ್ರಹದ ಮೇಲೂ ಕೊಂಚ ಚಿಮುಕಿಸಬೇಕು. ಇದರಿಂದ ಶುಭಸಮಾಚಾರಗಳು ಆಗಮಿಸುತ್ತವೆ.

ಮರದಿಂದ ಮಾಡಿದ ಪೀಠೋಪಕರಣ

ಮರದಿಂದ ಮಾಡಿದ ಪೀಠೋಪಕರಣ

ಒಂದು ವೇಳೆ ಮನೆಗೆ ಮರದಿಂದ ಮಾಡಿದ ಪೀಠೋಪಕರಣಗಳನ್ನು ಕೊಳ್ಳುವುದಿದ್ದರೆ ಶನಿವಾರ ಮಾತ್ರ ಕೊಳ್ಳುವುದಾಗಲೀ, ಅಥವಾ ವಿತರಣೆಯನ್ನು ಪಡೆಯುವುದಾಗಲೀ ಮಾಡಬೇಡಿ.

ನಿಮ್ಮ ರಾಶಿಯ ಮೇಲೆ ಶನಿಯ ಪ್ರಭಾವ ಹೀಗಿದೆ ನೋಡಿ....

English summary

Avoid Purchasing These Common Items On A Saturday!

There are certain items related to Shani Dev or planet Saturn, which according to astrology, a person should not bring home or buy on a Saturday. Otherwise it may lead to bad health or financial losses. Read on to know what they are...
Story first published: Tuesday, June 20, 2017, 8:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more