Just In
Don't Miss
- News
18 ವರ್ಷದ ಬಳಿಕ ಪಾಕಿಸ್ತಾನ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ ಮಹಿಳೆ
- Movies
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಕಾರ್ಯ ಪ್ರಾರಂಭಿಸಲು ಜನವರಿಯಲ್ಲಿ ಈ 6 ದಿನಗಳು ತುಂಬಾ ಶ್ರೇಷ್ಠವಾಗಿದೆ
ಸಾಮಾನ್ಯವಾಗಿ ಒಂದು ಒಳ್ಳೆಯ ಕಾರ್ಯ ಮಾಡುವಾಗ ನಾವೆಲ್ಲಾ ಒಳ್ಳೆಯ ಸಮಯ, ದಿನವೆಲ್ಲಾ ನೋಡಿ ಮಾಡುತ್ತೇವೆ, ಹೀಗೆ ಒಳ್ಳೆಯ ಘಳಿಗೆ ನೋಡಿ ಮಾಡುವುದರಿಂದ ಆ ಕಾರ್ಯ ಒಳಿತಾಗುತ್ತದೆ ಎಂಬ ನಂಬಿಕೆ. ಸಂಪ್ರದಾಯ, ಆಚರಣೆಗಳನ್ನು ನಂಬುವವರು ಇದನ್ನು ತಪ್ಪಿಸುವುದೇ ಇಲ್ಲ.
ಈ ಜನವರಿ ನಿಮ್ಮ ಮನೆಯಲ್ಲಿ ಪೂಜೆ, ಮಗುವಿನ ನಾಮಕರಣ, ಮದುವೆ, ಗೃಹ ಪ್ರವೇಶ, ಹೊಸ ಗಾಡಿ ಕೊಳ್ಳುವುದು ಹೀಗೆ ಮುಂತಾದ ಶುಭ ಕಾರ್ಯಗಳನ್ನು ಮಾಡಲು ಇಚ್ಚಿಸುವುದಾದರೆ ಅದಕ್ಕಾಗಿ ಶುಭ ಗಳಿಗೆ ನೋಡಿಯೇ ನೋಡುತ್ತೀರಿ. ಶುಭ ಸಮಯ ನೋಡಿ ನಾವು ಹೊಸ ಕಾರ್ಯಕ್ಕೆ ಕೈ ಹಾಕಿದರೆ ಅದರ ಫಲ ಸಿಗುವುದು ಎಮದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ನಾವಿಲ್ಲಿ ಜನವರಿ 2021ರಲ್ಲಿಯಾವ ದಿನ ತುಂಬಾ ಚೆನ್ನಾಗಿದೆ ಎಂಬ ಮಾಹಿತಿಯನ್ನು ನೀಡಿದ್ದೇವೆ, ಶುಭ ಕಾರ್ಯಕ್ಕೆ ಇದರಲ್ಲಿ ಒಂದು ಡೇಟ್ ನೋಡಬಹುದು.

ಜನವರಿ 9, 2021:
ಜನವರಿ 9ಕ್ಕೆ ಕೃಷ್ಣ ಪಕ್ಷ ಏಕಾದಶಿ ಇದ್ದು ಏನಾದರೂ ಹೊಸ ಮಳಿಗೆ, ಕಟ್ಟಡ ಇವೆಲ್ಲಾ ಉದ್ಘಾಟನೆಗೆ ಅತ್ಯುತ್ತಮವಾದ ದಿನವಾಗಿದೆ. ಇದು ಶನಿವಾರ ಆಗಿ ಬರುತ್ತದೆ.

ಜನವರಿ 14, 2021:
ಜನವರಿ 14ಕ್ಕೆ ಮಕರ ಸಂಕ್ರಾಂತಿ , ಈ ದಿನ ಕೂಡ ಶಾಪ್ ಓಪನಿಂಗ್‌ಗೆ ಅತ್ಯುತ್ತಮವಾಗಿದೆ. ಇನ್ನು ಹೊಸ ಗಾಡಿ ಕೊಳ್ಳುವವರು ಈ ದಿನ ಕೊಳ್ಳಬಹುದು. ಇದು ಗುರುವಾರ ಬರುತ್ತದೆ.

ಜನವರಿ 17, 2021:
ಈ ದಿನ ಶುಕ್ಲ ಪಂಚಮಿಯಾಗಿದ್ದು ಯಾವುದೇ ವ್ಯವಹಾರ ಪ್ರಾರಂಭಿಸಲು ಫಲಪ್ರದವಾದ ದಿನವಾಗಿದೆ.

ಜನವರಿ 18, 2021:
ಜನವರಿ 18ಕ್ಕೆ ಪೂರ್ವಾಭಸ್ದ್ರಾ ನಕ್ಷತ್ರವಾಗಿದ್ದು ಯಾವುದೇ ಹೊಸ ವ್ಯವಹಾರ, ಉದ್ಯಮ ಪ್ರಾರಂಭಿಸಲು ಒಳ್ಳೆಯ ದಿನವಾಗಿದೆ. ಇದು ಸೋಮವಾರ ಬರುತ್ತದೆ.

ಜನವರಿ 23, 2021:
ಕೃತ್ತಿಕಾ ನಕ್ಷತ್ರ ಯಾವುದೇ ಹೊಸ ವ್ಯವಹರಕ್ಕೆ ಕೈ ಹಾಕಲು ಹಾಗೂ ಹೊಸ ಕ್ಲೈಂಟ್ ಮೀಟ್ ಮಾಡಿ ವ್ಯವಹಾರ ಕುದುರಿಸಲು ಒಳ್ಳೆಯ ದಿನವಾಗಿದೆ.

ಜನವರಿ 31, 2021:
ಈ ದಿನ ತುಂಬಾ ಮಹತ್ವದ ದಿನ , ಅಂದರೆ ಸಂಕಷ್ಟ ಚತುರ್ಥಿ, ವಿಘ್ನ ನಿವಾರಕನನ್ನು ಮನಸ್ಸಿನಲ್ಲಿ ಧ್ಯಾನಿಸಿ ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕಲು ಶುಭ ದಿನವಾಗಿದೆ. ಇದು ಭಾನುವಾರ ಬರುತ್ತದೆ.