For Quick Alerts
ALLOW NOTIFICATIONS  
For Daily Alerts

2019ರಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನ, ಮುಹೂರ್ತಗಳು-ಇಲ್ಲಿದೆ ಫುಲ್ ಡಿಟೇಲ್ಸ್

|

ತನ್ನದೇ ಆಗಿರುವಂತಹ ಒಂದು ಮನೆ ಬೇಕು ಎನ್ನುವ ಕನಸು ಪ್ರತಿಯೊಬ್ಬರಲ್ಲೂ ಇರುವುದು. ಸರ್ಕಾರ ಕೂಡ ಈ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಮನೆ ನಿರ್ಮಾಣವಾಗಬೇಕೆಂಬ ಯೋಜನೆಗಳನ್ನು ತಂದಿದೆ. ಅದರೊಂದಿಗೆ ಮನೆ ಕಟ್ಟಿಕೊಳ್ಳುವವರಿಗೆ ಸುಲಭವಾಗಿ ಸಾಲ ಸಿಗುವಂತಹ ಮಾಡಲಾಗುತ್ತಿದೆ. ತಲೆ ಮೇಲೊಂದು ಸೂರು ಇದ್ದರೆ ಆಗ ನೆಮ್ಮದಿಯಿಂದ ನಿದ್ದೆ ಮಾಡಬಹುದು ಎನ್ನುವ ಮಾತಿದೆ. ಏನೇ ಆಗಲಿ ಪ್ರತಿಯೊಬ್ಬರಿಗೂ ಮನೆಕಟ್ಟುವ ಭಾಗ್ಯ ಸಿಗಲಿ. ಹಿಂದೂ ಧರ್ಮದಲ್ಲಿ ಹೊಸ ಮನೆಯನ್ನು ಕಟ್ಟಿದ ಬಳಿಕ ಅದರಲ್ಲಿ ವಾಸಕ್ಕೆ ತೆರಳುವ ಮೊದಲು ಗೃಹ ಪ್ರವೇಶ ಎನ್ನುವುದನ್ನು ಮಾಡಲಾಗುತ್ತದೆ.

ಗೃಹ ಪ್ರವೇಶದ ವೇಳೆ ಹಲವಾರು ರೀತಿಯ ಪೂಜೆ ಹಾಗು ವಿಧಿವಿಧಾನಗಳನ್ನು ಅನುಸರಿಸಿಕೊಂಡು ಹೋಗಲಾಗುತ್ತದೆ. ಯಾಕೆಂದರೆ ಮುಂದೆ ಈ ಮನೆಯಲ್ಲಿ ಸಂಪೂರ್ಣ ಜೀವನ ಇರಬೇಕಾದ ಕಾರಣ ಯಾವುದೇ ರೀತಿಯ ಸಂಕಷ್ಟಗಳು, ಸಮಸ್ಯೆಗಳು ಹಾಗೂ ದುಷ್ಟಶಕ್ತಿಗಳ ಕಣ್ಣು ಬೀಳದೆ ಇರಲಿ ಎನ್ನುವುದು ಇದರ ಹಿಂದಿನ ಉದ್ದೇಶವಾಗಿದೆ. ಗೃಹ ಪ್ರವೇಶ ಮಾಡಬೇಕಿದ್ದರೆ ಆಗ ಒಂದು ಶುಭ ಮುಹೂರ್ತವನ್ನು ಹುಡುಕಬೇಕು. ಅದಕ್ಕಾಗಿ ಒಂದು ಶುಭ ದಿನ ಹಾಗೂ ಮುಹೂರ್ತ ಹುಡುಕಿದರೆ ಒಳ್ಳೆಯದು.

Griha Pravesh

ಗ್ರಹಗತಿಗಳ ಚಲನೆ ಹಾಗೂ ಪಂಚಾಂಗವನ್ನು ನೋಡಿಕೊಂಡು ಜ್ಯೋತಿಷಿಗಳು ನಿಮಗೆ ಗೃಹ ಪ್ರವೇಶದ ದಿನವನ್ನು ನೀಡುವರು. ಅದಾಗ್ಯೂ, ಇಂದಿನ ದಿನಗಳಲ್ಲಿ ಹೆಚ್ಚಿನವರು ಜ್ಯೋತಿಷಿ ಬಳಿಕ ಹೋಗುವ ಬದಲು ಇಂಟರ್ನೆಟ್ ನಲ್ಲಿ ಹುಡುಕಾಡುವುದೇ ಹೆಚ್ಚು ಎನ್ನಬಹುದು. 2019ರಲ್ಲಿ ಗೃಹ ಪ್ರವೇಶಕ್ಕೆ ಇರುವಂತಹ ಶುಭ ದಿನ ಹಾಗೂ ಮುಹೂರ್ತದ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದು ನಿಮಗೆ ಹೊಂದಾಣಿಕೆ ಆಗುವುದು ಎನ್ನುವ ನಂಬಿಕೆಯು ನಮಗಿದೆ. (ಜನವರಿ, ಎಪ್ರಿಲ್, ಜುಲೈ, ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಗೃಹ ಪ್ರವೇಶಕ್ಕೆ ಯಾವುದೇ ಶುಭ ದಿನಗಳು ಇಲ್ಲ.)

ಫೆಬ್ರವರಿ 2019ರಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಗಳು

ಫೆಬ್ರವರಿ 2019ರಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಗಳು

ಫೆಬ್ರವರಿ 9, ಶನಿವಾರ 12.26 ಗಂಟೆಯಿಂದ ಫೆ.10ರ ಬೆಳಗ್ಗೆ 7.08 ಗಂಟೆ ತನಕ. ತಿಥಿ ಪಂಚಮಿ , ಉತ್ತರ ಭಾದ್ರಪದ ಮತ್ತು ರೇವತಿ ನಕ್ಷತ್ರ

ಫೆಬ್ರವರಿ 14, ಗುರುವಾರ- ಫೆ.14ರ 2.54 ಗಂಟೆಯಿಂದ ಫೆ. 15ರ ಬೆಳಗ್ಗೆ 7.04ರ ತನಕ. ತಿಥಿ ದಶಮಿ, ರೋಹಿಣಿ ಮತ್ತು ಮೃಗಶಿರಾ ನಕ್ಷತ್ರ

ಫೆಬ್ರವರಿ 15, 2019, ಶುಕ್ರವಾರ ಬೆಳಗ್ಗೆ 7.04 ರಿಂದ ಫೆ. 15ರ ರಾತ್ರಿ 8.53ರ ತನಕ. ದಶಮಿ-ಏಕಾದಶಿ ತಿಥಿ, ರೋಹಿಣಿ ಮತ್ತು ಮೃಗಶಿರಾ ನಕ್ಷತ್ರ.

ಫೆಬ್ರವರಿ 21, 2019, ಗುರುವಾರ- ಬೆಳಗ್ಗೆ 6.59ರಿಂದ ಫೆ.22ರ 2.27 ಗಂಟೆ ತನಕ. ತಿಥಿ ದ್ವಿತೀಯ ತೃತೀಯ, ಉತ್ತರ ಪಾಲ್ಗುಣಿ ನಕ್ಷತ್ರ.

ಫೆಬ್ರವರಿ 23, 2019, ಶನಿವಾರ-ಫೆ.23ರ ಬೆಳಗ್ಗೆ 8.11ರಿಂದ ಫೆ.23ರ ರಾತ್ರಿ 10.48ರ ತನಕ. ತಿಥಿ ಪಂಚಮಿ, ಚೈತ್ರಾ ನಕ್ಷತ್ರ.

ಫೆಬ್ರವರಿ 25, 2019 ಸೋಮವಾರ-ಫೆ.25ರ ರಾತ್ರಿ 10-09ರಿಂದ ಫೆ.26 ಬೆಳಗ್ಗೆ 4.47 ತನಕ. ತಿಥಿ ಸಪ್ತಮಿ, ಅನುರಾಧ ನಕ್ಷತ್ರ.

Most Read: ಗೃಹ ಪ್ರವೇಶವನ್ನು ಮಾಡುವ ವಿಧಾನ ಹೇಗೆ?

ಮಾರ್ಚ್ 2019ರಲ್ಲಿ ಗೃಹ ಪ್ರವೇಶದ ದಿನಾಂಕಗಳು

ಮಾರ್ಚ್ 2019ರಲ್ಲಿ ಗೃಹ ಪ್ರವೇಶದ ದಿನಾಂಕಗಳು

ಮಾರ್ಚ್ 2, 2019 ಶನಿವಾರ-ಮಾ.2ರ ಬೆಳಗ್ಗೆ 6.50ರಿಂದ ಬೆಳಗ್ಗೆ11.04 ತನಕ. ತಿಥಿ- ಏಕದಶಿ, ನಕ್ಷತ್ರ-ಉತ್ತರಾಷಾಢ.

ಮಾರ್ಚ್ 7, 2019, ಗುರುವಾರ-ರಾತ್ರಿ 11.44ರಿಂದ ಮಾರ್ಚ್ 8ರ ಬೆಳಗ್ಗೆ 6.43ರ ತನಕ. ತಿಥಿ-ದ್ವಿತೀಯ, ನಕ್ಷತ್ರ-ಬಾಧ್ರಪದ.

ಮಾರ್ಚ್ 8, 2019, ಶುಕ್ರವಾರ-ಬೆಳಗ್ಗೆ 6.43 ಗಂಟೆಯಿಂದ ಮಾರ್ಚ್ 9ರ ಬೆಳಗ್ಗೆ 6.42 ಗಂಟೆ ತನಕ. ತಿಥಿ-ದ್ವಿತೀಯ-ತೃತೀಯ, ನಕ್ಷತ್ರ ಭಾದ್ರಪದ ಮತ್ತು ರೇವತಿ.

ಮಾರ್ಚ್ 9, 2019 ಶನಿವಾರ ಬೆಳಗ್ಗೆ 6.42ರಿಂದ ಮಾರ್ಚ್ 10ರ ಬೆಳಗ್ಗೆ 1.43 ಗಂಟೆ ತನಕ. ತಿಥಿ-ತೃತೀಯ, ನಕ್ಷತ್ರ- ರೇವತಿ.

ಮಾರ್ಚ್ 13, 2019, ಬುಧವಾರ- ಬೆಳಗ್ಗೆ 6.37 ಗಂಟೆಯಿಂದ ಮಾರ್ಚ್ 14ರ ಬೆಳಗ್ಗೆ 4.23 ಗಂಟೆ ತನಕ. ತಿಥಿ-ಸಪ್ತಮಿ, ನಕ್ಷತ್ರ- ರೋಹಿಣಿ.

ಮಾರ್ಚ್ 21, 2019, ಗುರುವಾರ ಬೆಳಗ್ಗೆ 7.12ರಿಂದ 1.34ರ ತನಕ. ತಿಥಿ- ಪ್ರತಿಪಾದ, ನಕ್ಷತ್ರ-ಉತ್ತರ ಪಾಲ್ಗುಣಿ.

ಮಾರ್ಚ್ 22, 2019, ಶುಕ್ರವಾರ, ಬೆಳಗ್ಗೆ 11.07ರಿಂದ ಮಾರ್ಚ್ 23ರ ಬೆಳಗ್ಗೆ 6.26ರ ತನಕ. ತಿಥಿ-ದ್ವಿತಿಯ-ತೃತೀಯ, ನಕ್ಷತ್ರ-ಚೈತ್ರಾ.

ಮಾರ್ಚ್ 25, 2019, ಸೋಮವಾರ, ಬೆಳಗ್ಗೆ 7.04ರಿಂದ ಮಾರ್ಚ್ 25ರ ರಾತ್ರಿ 8 ಗಂಟೆ ತನಕ. ತಿಥಿ- ಪಂಚಮಿ, ನಕ್ಷತ್ರ-ಅನುರಾಧ.

ಮಾರ್ಚ್ 29, 2019, ಶುಕ್ರವಾರ ಮಾರ್ಚ್ 30ರ 00.48 ಗಂಟೆಯಿಂದ ಬೆಳಗ್ಗೆ 6.18 ಗಂಟೆ ತನಕ. ತಿಥಿ-ದಶಮಿ, ನಕ್ಷತ್ರ-ಉತ್ತರಾಷಾಢ.

ಮಾರ್ಚ್ 30, 2019, ಶನಿವಾರ-ಬೆಳಗ್ಗೆ 6.18ರಿಂದ ಸಂಜೆ 3.39 ತನಕ. ತಿಥಿ-ದಶಮಿ, ನಕ್ಷತ್ರ-ಉತ್ತರಾಷಾಢ.

ಮೇ 2019ರಲ್ಲಿ ಗೃಹ ಪ್ರವೇಶದ ದಿನಾಂಕಗಳು

ಮೇ 2019ರಲ್ಲಿ ಗೃಹ ಪ್ರವೇಶದ ದಿನಾಂಕಗಳು

6 ಮೇ, 2019, ಸೋಮವಾರ, ಮಧ್ಯಾಹ್ನ 4.37ರಿಂದ ಮೇ 7ರ ಬೆಳಗ್ಗೆ 5.40ತ ತನಕ. ತಿಥಿ-ತೃತೀಯ, ನಕ್ಷತ್ರ-ರೋಹಿಣಿ.

16 ಮೇ, 2019, ಗುರುವಾರ-ಬೆಳಗ್ಗೆ 8.15ರಿಂದ ಮೇ 17ರ ಬೆಳಗ್ಗೆ 5.17ರ ತನಕ. ತಿಥಿ-ತ್ರಯೋದಶಿ, ನಕ್ಷತ್ರ-ಚೈತ್ರಾ.

ಮೇ 23, 2019, ಗುರುವಾರ-ಬೆಳಗ್ಗೆ 5.31ರಿಂದ ಮೇ 24ರ ಬೆಳಗ್ಗೆ 4.18ರ ತನಕ. ತಿಥಿ-ಪಂಚಮಿ, ನಕ್ಷತ್ರ-ಉತ್ತರಾಷಾಢ.

ಮೇ29, 2019, ಬುಧವಾರ, ಬೆಳಗ್ಗೆ 5.29ರಿಂದ ಮೇ 30ರ ಸಂಜೆ 5.28ರ ತನಕ. ತಿಥಿ-ದಶಮಿ-ಏಕಾದಶಿ, ನಕ್ಷತ್ರ-ಉತ್ತರ ಭಾದ್ರಪದ ಮತ್ತು ರೇವತಿ.

ಮೇ 30, 2019, ಗುರುವಾರ, ಬೆಳಗ್ಗೆ 5.28ರಿಂದ ಸಂಜೆ 4.38ರ ತನಕ. ತಿಥಿ-ಏಕಾದಶಿ, ನಕ್ಷತ್ರ-ರೇವತಿ.

ಜೂನ್ 2019ರಲ್ಲಿ ಗೃಹ ಪ್ರವೇಶಕ್ಕೆ ಕೆಲವು ದಿನಾಂಕಗಳು

ಜೂನ್ 2019ರಲ್ಲಿ ಗೃಹ ಪ್ರವೇಶಕ್ಕೆ ಕೆಲವು ದಿನಾಂಕಗಳು

12, ಜೂನ್ 2019, ಬುಧವಾತ ಬೆಳಗ್ಗೆ 11.52ರಿಂದ ಜೂನ್ 13ರ ಬೆಳಗ್ಗೆ 5.27ರ ತನಕ. ತಿಥಿ-ದಶಮಿ-ಏಕಾದಶಿ, ನಕ್ಷತ್ರ- ಚೈತ್ರಾ.

13, ಜೂನ್ 2019, ಗುರುವಾರ, ಬೆಳಗ್ಗೆ 5.27ರಿಂದ ಬೆಳಗ್ಗೆ 10.56ರ ತನಕ, ತಿಥಿ-ಏಕಾದಶಿ, ನಕ್ಷತ್ರ-ಚೈತ್ರಾ.

15, ಜೂನ್ 2019, ಶನಿವಾರ, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.33ರ ತನಕ. ತಿಥಿ-ತ್ರಯೋದಶಿ. ನಕ್ಷತ್ರ-ಅನುರಾಧ.

19, ಜೂನ್, 2019, ಬುಧವಾರ, ಮಧ್ಯಾಹ್ನ 1.30ರಿಂದ ಜೂನ್ 20ರ ಬೆಳಗ್ಗೆ 5.28ರ ತನಕ. ತಿಥಿ-ದ್ವಿತೀಯ-ತೃತೀಯ, ನಕ್ಷತ್ರ-ಉತ್ತರಾಷಾಢ.

20, ಜೂನ್ 2019, ಗುರುವಾರ, ಬೆಳಗ್ಗೆ 5.28ರಿಂದ ಮಧ್ಯಾಹ್ನ 3.40ತ ತನಕ. ತಿಥಿ-ತೃತೀಯ, ನಕ್ಷತ್ರ- ಉತ್ತರಾಷಾಢ.

Most Read: ವಾಸ್ತು ಪ್ರಕಾರ- ಗೃಹ ಪ್ರವೇಶ ಮಾಡುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳು

ಅಕ್ಟೋಬರ್ ತಿಂಗಳಲ್ಲಿ ಗೃಹ ಪ್ರವೇಶದ ದಿನಾಂಕಗಳು

ಅಕ್ಟೋಬರ್ ತಿಂಗಳಲ್ಲಿ ಗೃಹ ಪ್ರವೇಶದ ದಿನಾಂಕಗಳು

30, ಅಕ್ಟೋಬರ್ 2019 ಬುಧವಾರ, ಬೆಳಗ್ಗೆ 6.35ರಿಂದ ರಾತ್ರಿ 10 ಗಂಟೆ ತನಕ. ತಿಥಿ-ತೃತೀಯ, ನಕ್ಷತ್ರ-ಅನುರಾಧ.

ನವಂಬರ್ 2019ರಲ್ಲಿ ಗೃಹ ಪ್ರವೇಶದ ದಿನಾಂಕಗಳು.

ನವಂಬರ್ 2019ರಲ್ಲಿ ಗೃಹ ಪ್ರವೇಶದ ದಿನಾಂಕಗಳು.

2, ನವಂಬರ್ 2019, ಶನಿವಾರ ಬೆಳಗ್ಗೆ 1.31ರಿಂದ ನವಂಬರ್ 3ರ ಬೆಳಗ್ಗೆ 6.38ರ ತನಕ. ತಿಥಿ- ಸಪ್ತಮಿ, ನಕ್ಷತ್ರ ಉತ್ತರಾಷಾಢ.

9, ನವಂಬರ್ 2019, ಶಣಿವಾರ- ಮಧ್ಯಾಹ್ನ 2.39ರಿಂದ ನ.10ರ ಬೆಳಗ್ಗೆ 6.43ರ ತನಕ. ತಿಥಿ-ತ್ರಯೋದಶಿ, ನಕ್ಷತ್ರ-ರೇವತಿ.

13, ನವಂಬರ್ 2019, ಬುಧವಾರ- ರಾತ್ರಿ 10.02ರಿಂದ ನ.14ರ ಬೆಳಗ್ಗೆ 6.47ರ ತನಕ. ತಿಥಿ-ದ್ವಿತೀಯ, ನಕ್ಷತ್ರ-ರೋಹಿಣಿ.

14, ನವಂಬರ್ 2019, ಗುರುವಾರ, ಬೆಳಗ್ಗೆ 6.47 ಗಂಟೆಯಿಂದ ನ.15ರ ಬೆಳಗ್ಗೆ 6.47ರ ತನಕ. ತಿಥಿ-ದ್ವಿತೀಯ-ತೃತೀಯ, ನಕ್ಷತ್ರ-ರೋಹಿಣಿ-ಮೃಗಶಿರಾ.

15, ನವಂಬರ್ 2019, ಶುಕ್ರವಾರ, ಬೆಳಗ್ಗೆ 6.47ರಿಂದ ರಾತ್ರಿ 7.46ರ ತನಕ. ತಿಥಿ-ತೃತೀಯ. ನಕ್ಷತ್ರ ಮೃಗಶಿರಾ

21, ನವಂಬರ್ 2019, ಗುರುವಾರ ರಾತ್ರಿ 6.30ರಿಂದ ನ.22ರ ಬೆಳಗ್ಗೆ 6.53ರ ತನಕ. ತಿಥಿ-ದಶಮಿ, ನಕ್ಷತ್ರ ಉತ್ತರ ಫಾಲ್ಗುಣಿ.

22, ನವಂಬರ್ 2019, ಶುಕ್ರವಾರ ಬೆಳಗ್ಗೆ 6.53ರಿಂದ ಸಂಜೆ 4.42ರ ತನಕ. ತಿಥಿ-ದಶಮಿ-ಏಕಾದಶಿ. ನಕ್ಷತ್ರ- ಉತ್ತರ ಫಾಲ್ಗುಣಿ.

30, ನವಂಬರ್ 2019, ಶನಿವಾರ-ಸಂಜೆ 6.05ರಿಂದ ಡಿಸೆಂಬರ್ 1ರ ಬೆಳಗ್ಗೆ 7 ಗಂಟೆ ತನಕ. ತಿಥಿ-ಪಂಚಮಿ, ನಕ್ಷತ್ರ-ಉತ್ತರಾಷಾಢ.

ಡಿಸೆಂಬರ್ 2019ರಲ್ಲಿ ಇರುವ ಗೃಹ ಪ್ರವೇಶದ ದಿನಾಂಕಗಳು

ಡಿಸೆಂಬರ್ 2019ರಲ್ಲಿ ಇರುವ ಗೃಹ ಪ್ರವೇಶದ ದಿನಾಂಕಗಳು

6, ಡಿಸೆಂಬರ್ 2019, ಶುಕ್ರವಾರ- ಬೆಳಗ್ಗೆ 7.04ರಿಂದ ಡಿ.7ರ ಬೆಳಗ್ಗೆ 7.05 ರ ತನಕ. ತಿಥಿ-ದಶಮಿ, ನಕ್ಷತ್ರ ಉತ್ತರ ಭಾದ್ರಪದ ಮತ್ತು ರೇವತಿ.

7, ಡಿಸೆಂಬರ್ 2019, ಶನಿವಾರ-ಬೆಳಗ್ಗೆ 7.05ರಿಂದ ಡಿಸೆಂಬರ್ 8ರ ಬೆಳಗ್ಗೆ 1.29ರ ತನಕ. ತಿಥಿ-ಏಕಾದಶಿ, ನಕ್ಷತ್ರ-ರೇವತಿ.

12, ಡಿಸೆಂಬರ್ 2019, ಗುರುವಾರ-ಬೆಳಗ್ಗೆ 10.42ರಿಂದ ಡಿಸೆಂಬರ್ 13ರ ಬೆಳಗ್ಗೆ 6.19ರ ತನಕ. ತಿಥಿ-ಪ್ರತಿಪಾದ, ನಕ್ಷತ್ರ-ಮೃಗಶಿರಾ.

English summary

Auspicious Dates For Griha Pravesh In 2019

A few years back, people had to meet and take the advise of an astrologer, before deciding on Griha Pravesh or the house warming ceremony dates. It is said that one should check the auspiciousness of times before enterning a new house. However, Internet has made it all this so easy when such information is just a click away for the people today.
X
Desktop Bottom Promotion