For Quick Alerts
ALLOW NOTIFICATIONS  
For Daily Alerts

  ಬೇಗನೇ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆ? ಮೊದಲು ಇಂತಹ ಕೆಲಸಗಳನ್ನು ಮಾಡಿ

  |
  ಬೇಗನೆ ಉದ್ಯೋಗ ಸಿಗಬೇಕು ಎನ್ನುವವರು ಈ ಕೆಲಸಗಳನ್ನ ಮಾಡಿ | Oneindia Kannada

  ಜೀವನದಲ್ಲಿ ಉತ್ತಮ ಉದ್ಯೋಗವನ್ನು ಪಡೆಯುವ ಹಂಬಲ ಪ್ರತಿಯೊಬ್ಬರದ್ದಾಗಿರುತ್ತದೆ. ಆದರೆ ಒಮ್ಮೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲ ನಮಗೆ ದೊರೆಯುವುದಿಲ್ಲ. ಉದ್ಯೋಗ ಇಲ್ಲದೇ ಇರುವುದು, ಆ ಸ್ಥಳದಲ್ಲಿರುವ ಉದ್ಯೋಗ ಸ್ಪರ್ಧೆ, ಹೀಗೆ ಬೇರೆ ಬೇರೆ ಕಾರಣಗಳಿಂದ ನಾವು ಬಯಸಿದ ಉದ್ಯೋಗ ನಮಗೆ ದೊರೆಯದೇ ಹೋಗುತ್ತದೆ.

  ನಮ್ಮ ಜಾತಕ ಕೂಡ ಈ ನಿಟ್ಟಿನಲ್ಲಿ ಉತ್ತಮವಾಗಿದ್ದರೆ ನಮ್ಮ ವೃತ್ತಿ ಜೀವನದ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ. ಗೃಹಗಳು ಕೂಡ ಮನುಷ್ಯ ಜೀವನದ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿದ್ದು ಇವುಗಳ ಸ್ಥಾನವನ್ನು ತಿಳಿದುಕೊಂಡು ನಾವು ನಮ್ಮ ವೃತ್ತಿ ಅಭಿವೃದ್ಧಿಯನ್ನು ಮಾಡಿಕೊಳ್ಳಬಹುದಾಗಿದೆ.....

  ಕೆಲಸ ದೊರೆಯಲು ವಿಳಂಬವಾಗುತ್ತಿದ್ದರೆ

  ಕೆಲಸ ದೊರೆಯಲು ವಿಳಂಬವಾಗುತ್ತಿದ್ದರೆ

  ತಿಂಗಳ ಮೊದಲ ಸೋಮವಾರ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಬಿಳಿ ಬಟ್ಟೆಯಲ್ಲಿ ಹಾಕಿ ಮತ್ತು ಮಹಾಕಾಳಿಗೆ ಸಮರ್ಪಿಸಿ. ಋಣಾತ್ಮಕ ಅಂಶವನ್ನು ತೊಡೆದು ಹಾಕುವ ಮಾತೆ ಇವರಾಗಿದ್ದಾರೆ. ಪಾರ್ವತಿ ದೇವಿಯ ಇನ್ನೊಂದು ಅವತಾರವಾಗಿರುವ ಕಾಳಿ ಶಿವನಂತೆಯೇ ತನ್ನ ಭಕ್ತರನ್ನು ಪೊರೆಯುತ್ತಾರೆ. ನಿತ್ಯವೂ ಆಕೆಯನ್ನು ಪೂಜಿಸುವುದು ಒಳ್ಳೆಯ ಅದೃಷ್ಟವನ್ನು ತರುತ್ತದೆ ಮತ್ತು ನಿಮಗೆ ಒಳ್ಳೆಯ ಉದ್ಯೋಗ ದೊರೆಯಲು ಸಹಕಾರಿಯಾಗಿದೆ.

  ಹಕ್ಕಿಗಳಿಗೆ ಆಹಾರ ಉಣಿಸುವುದು

  ಹಕ್ಕಿಗಳಿಗೆ ಆಹಾರ ಉಣಿಸುವುದು

  ದಾನಗಳನ್ನು ಮಾಡುವುದು ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಇತರ ಧರ್ಮಗಳಲ್ಲಿ ಕೂಡ ಅತ್ಯಂತ ಶ್ರೇಷ್ಠವಾದುದಾಗಿದೆ. ಒಂದು ಆತ್ಮಕ್ಕೆ ಸಹಾಯ ಮಾಡುವುದು ನಮ್ಮನ್ನು ಸಂರಕ್ಷಿಸುತ್ತದೆ. ಅಂತೆಯೇ ಒಂದು ಆಶಿರ್ವಾದ ಸಾವಿರ ಔಷಧಿಗಳಿಗಿಂತ ಉತ್ತಮವಾದುದಾಗಿದೆ. ಅಗತ್ಯವಿರುವವರಿಗೆ ಸಹಾಯ ಮಾಡುವವರ ಮೂಲಕ ದೇವರು ತಮ್ಮ ಅಭಯ ಹಸ್ತವನ್ನು ನೀಡುತ್ತಾರೆ ಎಂದಾಗಿದೆ. ಮೂಕ ಪಕ್ಷಿಗಳು ದೇವರಿಗೆ ಪ್ರಿಯವಾದವರು. ಆದ್ದರಿಂದ ಈ ಹಕ್ಕಿಗಳಿಗೆ ಕಾಳು ಹಾಕುವುದರಿಂದ ದೇವರ ಆಶಿರ್ವಾದವನ್ನು ಕೂಡಲೇ ಪಡೆಯಬಹುದಾಗಿದೆ. ಎಲ್ಲಾ ಧಾನ್ಯಗಳನ್ನು ಮಿಶ್ರ ಮಾಡಿ ಪಕ್ಷಿಗಳಿಗೆ ಉಣಬಡಿಸಿ.

  ಹನುಮಂತನನ್ನು ಪೂಜಿಸುವುದು

  ಹನುಮಂತನನ್ನು ಪೂಜಿಸುವುದು

  ಬೇಗನೇ ಉದ್ಯೋಗ ದೊರೆಯಬೇಕು ಎಂದಾದಲ್ಲಿ ಹನುಮಂತನ ಪ್ರಾರ್ಥನೆಯನ್ನು ಮಾಡಿ. ತನ್ನ ಭಕ್ತರ ಬೇಡಿಕೆಗಳನ್ನು ಹನುಮಂತನು ಈಡೇರಿಸುತ್ತಾರೆ. ಸಾಧು ಸಂತರು ಹನುಮಂತನನ್ನು ಪೂಜಿಸುತ್ತಾರೆ ಏಕೆಂದರೆ ಹನುಮಂತ ಸ್ವಾಮಿ ಜ್ಞಾನದ ಮೂರ್ತಿಯಾಗಿದ್ದು ಏಕಾಗ್ರತೆಯನ್ನು ನೀಡುವವರಾಗಿದ್ದಾರೆ. ಹನುಮಾನ್ ಚಾಲೀಸವನ್ನು ಪಠಿಸುವುದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹನುಮಂತನನ್ನು ಪೂಜಿಸಲು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ಹಾರುತ್ತಿರುವ ಹನಮಂತನ ವಿಗ್ರಹವನ್ನು ಮನೆಯಲ್ಲಿರಿಸಿ ಅವರಿಗೆ ನಿತ್ಯವೂ ಪ್ರಾರ್ಥನೆಯನ್ನು ಸಲ್ಲಿಸಿ.

  ಶನಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು

  ಶನಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು

  ಶನಿ ದೇವರು ಹೆಚ್ಚು ಶಕ್ತಿಶಾಲಿ ದೇವರಾಗಿದ್ದಾರೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಗೆ ಅವರು ಭಕ್ತರನ್ನು ಪರೀಕ್ಷಿಸುತ್ತಾರೆ ಮತ್ತು ಶಿಕ್ಷಿಸುತ್ತಾರೆ. ಆದರೆ ಶನಿಯನ್ನು ಪೂಜಿಸುವುದರ ಮೂಲಕ ಆ ದೇವರ ಕೃಪೆಗೆ ಪಾತ್ರರಾಗಬಹುದು. ಆದ್ದರಿಂದ ಶನಿವಾರ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು ಉತ್ತಮವಾಗಿದೆ. "ಓಂ ಶಮ್ ಶನೈಶ್ವರ್ಯ ನಮಃ" ಎಂದು 108 ಬಾರಿ ಪಠಿಸಿ. ಇದರಿಂದ ನಿಮಗೆ ಒಳ್ಳೆಯ ಉದ್ಯೋಗ ಶೀಘ್ರದಲ್ಲಿಯೇ ದೊರೆಯುತ್ತದೆ.

  ಶನಿಶ್ವರ ಮಂತ್ರ

  ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ

  ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ

  ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ

  ಕೆಲವೊಂದು ಪರಿಹಾರಗಳು

  ಕೆಲವೊಂದು ಪರಿಹಾರಗಳು

  ಯಾವುದಾದರೂ ಒಳ್ಳೆಯ ಮಹತ್ವದ ಕೆಲಸಕ್ಕೆ ನೀವು ಹೋಗುತ್ತಿದ್ದೀರಿ ಎಂದಾದಲ್ಲಿ ಸಕ್ಕರೆ ಮಿಶ್ರಿತ ಮೊಸರನ್ನು ಸೇವಿಸಿ. ಅದೃಷ್ಟವನ್ನು ಪಡೆಯಲು ಹೀಗೆ ಮಾಡುವುದು ಉತ್ತಮ ಎಂದು ಭಾವಿಸಲಾಗಿದೆ. ಅಂತೆಯೇ ಮೊದಲಿಗೆ ಬಲಗಾಲನ್ನು ಇಟ್ಟು ಮನೆಯಿಂದ ಹೊರಗಡಿ ಇಡಿ ಎಂದು ಕೂಡ ಸೂಚಿಸುತ್ತಾರೆ. ಯಾವುದೇ ಉದ್ಯೋಗ ಸಂದರ್ಶನಕ್ಕೆ ಹೋಗುವ ಮೊದಲು ಈ ರೀತಿ ಮಾಡಿ ನೋಡಿ.

  ದನ ಮತ್ತು ನಾಯಿಗಳಿಗೆ ಆಹಾರ ನೀಡುವುದು

  ದನ ಮತ್ತು ನಾಯಿಗಳಿಗೆ ಆಹಾರ ನೀಡುವುದು

  ಸಂದರ್ಶನಕ್ಕೆ ಹೋಗುವ ಮುನ್ನ ದನ ಮತ್ತು ನಾಯಿಗೆ ಆಹಾರ ತಿನ್ನಿಸಿ. ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆದುಕೊಂಡು ಶೀಘ್ರವೇ ಉದ್ಯೋಗವನ್ನು ನೀವು ಪಡೆಯುತ್ತೀರಿ.

  ಗಣೇಶನನ್ನು ಮೊದಲು ಪೂಜಿಸಿ

  ಗಣೇಶನನ್ನು ಮೊದಲು ಪೂಜಿಸಿ

  ಗಣೇಶ ಗಣನಾಯಕನೂ ಹೌದು, ವಿಘ್ನನಿವಾರಕನೂ ಹೌದು. ಅಂತೆಯೇ ಯಾವುದಾದರೂ ಹೊಸದನ್ನು ಪ್ರಾರಂಭಿಸುವಾಗ ಯಾವುದೇ ವಿಘ್ನಗಳು ಬಾರದಂತೆ ಗಣೇಶನನ್ನು ಪೂಜಿಸಿಯೇ ಕಾರ್ಯಾರಂಭಗೊಳಿಸಲಾಗುತ್ತದೆ "ಓಂ ಗಂ ಗಣೇಶಾಯಃ ನಮಃ" ಅಂತೆಯೇ ಗೃಹಪ್ರವೇಶ, ಹೊಸ ವಾಹನ, ಹೊಸ ವ್ಯಾಪಾರ ಮೊದಲಾದವುಗಳ ಪ್ರಾರಂಭದ ಪೂಜೆ ಗಣೇಶನಿಗೆ ಮೀಸಲು. ಆದ್ದರಿಂದ ನಿಮ್ಮ ಉದ್ಯೋಗದ ಸಂದರ್ಶನದ ದಿನದಂದು ಗಣೇಶ ಮಂತ್ರವನ್ನು ಪಠಿಸಿ ಹೊರಡಿ. ಮಂತ್ರವೇನೂ ಕಷ್ಟದ್ದಲ್ಲ. "ಓಂ ಗಂ ಗಣೇಶಾಯಃ ನಮಃ" ಎಂದರೆ ಸಾಕು.

  ದೇವಿ ಲಕ್ಷ್ಮಿ

  ದೇವಿ ಲಕ್ಷ್ಮಿ

  ಈಕೆ ಕೇವಲ ಧನದ ದೇವತೆ ಮಾತ್ರವಲ್ಲ, ಉತ್ತಮ ಭವಿಷ್ಯ ನೀಡುವ ದೇವತೆಯೂ ಆಗಿದ್ದಾಳೆ. ಈಕೆಯನ್ನು ಒಲಿಸಿಕೊಂಡರೆ ಮನೆಗೆ ಧನಾಗಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಮನೆತನವನ್ನು ಆಧರಿಸಿ ಗುರುವಾರ ಅಥವಾ ಶುಕ್ರವಾರದಂದು ಲಕ್ಷ್ಮೀಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಸಂದರ್ಭವನ್ನು ನಿಮ್ಮ ಉದ್ಯೋಗ ಪಡೆಯಲು ಉಪಯೋಗಿಸಿ ಕೊಂಡು ಸಂದರ್ಶನ ಮುನ್ನದಿನದಲ್ಲಿ ಪ್ರಾರ್ಥಿಸುವ ಮೂಲಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.

  ದೇವಿ ಸರಸ್ವತಿ

  ದೇವಿ ಸರಸ್ವತಿ

  ವಿದ್ಯೆ, ಕಲೆ, ಸಂಗೀತ ಮೊದಲಾದವುಗಳಿಗೆ ಸರಸ್ವತಿ ದೇವಿಯನ್ನು ಆರಾಧಿಸಬೇಕು. ಇಂದು ಉದ್ಯೋಗ ಪಡೆಯಬೇಕೆಂದರೆ ವಿದ್ಯೆ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ವಿದ್ಯಾವಂತರಾಗಿ ಉದ್ಯೋಗವರಸಲು ಹೊರಡುವ ಮುನ್ನ ಸರಸ್ವತಿಯನ್ನು ಆರಾಧಿಸಿ ಬಿಳಿಯ ಹೂಗಳನ್ನು ಅರ್ಪಿಸಿ ಹೊರಡುವ ಮೂಲಕ ಮುಂದಿನ ಕಾರ್ಯಗಳು ಸುಗಮವಾಗುತ್ತವೆ. ಉದ್ಯೋಗಕ್ಕೆ ಎಲ್ಲಾ ದೇವತೆಗಳನ್ನು ಆರಾಧಿಸಲೇಬೇಕು ಎಂದೇನಿಲ್ಲ ನಿಮಗೆ ಸೂಕ್ತ ಎನಿಸಿದ ಎರಡು ದೇವತೆಗಳಿಗೆ ಪೂಜೆ ಸಲ್ಲಿಸಿದರೆ ಸಾಕು. ಇದರಿಂದ ನಿಮಗೆ ಮನಸ್ಸಿನಲ್ಲಿ ದೊರಕುವ ಬೆಂಬಲ ಮತ್ತು ನಿರಾಳತೆ ಉದ್ಯೋಗ ಪಡೆಯಲು ನೆರವಾಗುತ್ತದೆ. ಆದರೆ ದೇವರು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾರೆಯೇ ಹೊರತು ಬೇರೇನನ್ನೂ ಅಲ್ಲ. ಆದ್ದರಿಂದ ಉದ್ಯೋಗ ಪಡೆಯುವ ಮುನ್ನ ಸೂಕ್ತವಾದ ತಯಾರಿ ಮಾಡಿಕೊಂಡೇ ಹೊರಡಬೇಕು.

  English summary

  Astrological Remedies To Get A Job Soon

  Having a good job is the biggest priority for a majority of the youth today. But many a time people fail to get one despite their best efforts. When on one hand there can be many reasons, such as fewer vacancies in the sector, less preparation and high competition, on the other hand, experts on astrology say that the real reason is the unfavourable positioning of the stars and the planets in the birth chart of a person.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more