For Quick Alerts
ALLOW NOTIFICATIONS  
For Daily Alerts

ಮಕ್ಕಳಾಗದೇ ಇರುವ ಸಮಸ್ಯೆಗೆ ಜ್ಯೋತಿಷ್ಯ ಶಾಸ್ತ್ರದ ಪರಿಹಾರಗಳು

|

ಮಗು ಕುಟುಂಬದ ಬೆಳಕು. ಪಾಲಕರ ಬದುಕಿನಲ್ಲಿ ಅವರೇ ನಂದಾದೀಪ. ವಂಶವನ್ನು ಬೆಳಗುತ್ತಾ, ಮುಪ್ಪಿನ ಕಾಲದಲ್ಲಿ ಜೀವನವನ್ನು ಬೆಳಗುವವರು ಅಥವಾ ಆಸರೆಯಾಗಿ ನಿಲ್ಲುವವರು ಎಂದರೆ ಮಕ್ಕಳು. ಹಾಗಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ವಿವಾಹ, ಸಂಸಾರ ಮಕ್ಕಳು ಎನ್ನುವ ವಿಷಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಮಗು ಚಿಕ್ಕವರಿರುವಾಗ ಅವರಿಗೆ ಬೇಕಾದ ಪೋಷಣೆ ಹಾಗೂ ಬೆಳವಣಿಗೆಗೆ ಅಗತ್ಯವಾದ ಸಂಗತಿಗಳನ್ನು ಒದಗಿಸಿಕೊಡುವ ಜವಾಬ್ದಾರಿ ಪಾಲಕರು ಹೊತ್ತಿರುತ್ತಾರೆ. ಅದೇ ಪಾಕಲರು ವಯಸ್ಸಾದಾಗ ಅಥವಾ ಅಸಹಾಯಕತೆಯಲ್ಲಿ ಇರುವಾಗ ಮಕ್ಕಳು ಅವರ ಜವಾಬ್ದಾರಿಗಳನ್ನು ಹೊರಬೇಕು. ಆಗಲೇ ಪ್ರತಿಯೊಬ್ಬರ ಜೀವನ ಸಾರ್ಥಕ ಎನಿಸಿಕೊಳ್ಳುವುದು.

ಹಿಂದೂ ಧರ್ಮದಲ್ಲಿ ವ್ಯಕ್ತಿಯ ಜೀವನವನ್ನು ನಾಲ್ಕು ಹಂತಗಳಲ್ಲಿ ವಿಭಾಗಿಸಲಾಗುವುದು. ಅದರಲ್ಲಿ ಗ್ರಹಸ್ತಾಶ್ರಮ ಎನ್ನುವುದು ವ್ಯಕ್ತಿಯ ಜೀವಿತದ ಅಅವಧಿಯಲ್ಲಿ ನಿರ್ವಹಿಸುವ ಬಹುಮುಖ್ಯ ಅವಧಿ ಎನ್ನಲಾಗುವುದು. ಸಂಸಾರದ ನಿರ್ವಹಣೆ ಹಾಗೂ ಸಂಸಾರದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ಹಾಗೂ ಕಾಳಜಿಯನ್ನು ನಿರ್ವಹಿಸಬೇಕಾಗುವುದು. ಅಲ್ಲದೆ ವಿವಾಹದ ನಂತರ ತನ್ನ ಕುಟುಂಬ ಎನ್ನುವುದಕ್ಕೆ ತಮ್ಮ ಮಕ್ಕಳನ್ನು ಹೊಂದುವುದು ಅವರ ಬೆಳವಣಿಗೆಗೆ ಶ್ರಮಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು.

ಮಕ್ಕಳು ಅತ್ತರೂ ಚೆಂದ, ನಕ್ಕರೂ ಚೆಂದ

ಮಕ್ಕಳು ಅತ್ತರೂ ಚೆಂದ, ನಕ್ಕರೂ ಚೆಂದ

ಮನೆಯೊಳಗೆ ಆಡುವ ಆ ಪುಟ್ಟ ಕಂದಮ್ಮಗಳ ಓಡಾಟ, ತೊದಲು ನುಡಿಗಳು, ಕುಚೇಷ್ಠೆಗಳು ಎಲ್ಲವೂ ಮನೆ ಮಂದಿಗೆ ಸಂತೋಷ ಹಾಗೂ ಹಿರಿಮೆಯನ್ನು ತಂದುಕೊಡುತ್ತವೆ. ವಂಶಕ್ಕೊಂದು ಕುಡಿ ಇದೆ ಎನ್ನುವ ಸಂತೋಷ ಅಥವಾ ತೃಪ್ತಿಯ ಭಾವನೆಯು ಸಾಕಷ್ಟು ಬಗೆಯ ನೋವುಗಳನ್ನು ಮರೆಸುತ್ತವೆ. ಜೊತೆಗೆ ತಮ್ಮ ಜೀವನ ಸಾರ್ಥಕ ಆಯಿತು ಎನ್ನುವ ನೆಮ್ಮದಿಯನ್ನು ಪಡೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಮನಸ್ಸಿನಲ್ಲಿ ತಾವು ಕ್ರಿಯಾಶೀಲರಾಗಿರಬೇಕು, ಮಕ್ಕಳಿಗಾಗಿ ಆದರೂ ದುಡಿಯಬೇಕು ಎನ್ನುವಂತಹ ಭಾವನೆ ಮೂಡಿರುತ್ತವೆ.

ಮಕ್ಕಳೇ ಇಲ್ಲ ಎಂದಾದರೆ ಅವರ ಮನಸ್ಸಿಗೆ ನೆಮ್ಮದಿಯೇ ಇಲ್ಲ!

ಮಕ್ಕಳೇ ಇಲ್ಲ ಎಂದಾದರೆ ಅವರ ಮನಸ್ಸಿಗೆ ನೆಮ್ಮದಿಯೇ ಇಲ್ಲ!

ಆದರೆ ಕೆಲವು ವ್ಯಕ್ತಿಗಳಿಗೆ ಜೀವನದಲ್ಲಿ ಸಾಕಷ್ಟು ಹಣ, ಐಶ್ವರ್ಯ ಇದ್ದು, ಮಕ್ಕಳೇ ಇಲ್ಲ ಎಂದಾದರೆ ಅವರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಜೊತೆಗೆ ತಮ್ಮ ಜೀವನದ ಅಂತ್ಯದಲ್ಲಿ ಯಾರು ನೆರವಾಗುತ್ತಾರೆ? ಯಾರು ಆಸರೆ? ಎನ್ನುವಂತಹ ಸಾಕಷ್ಟು ಪ್ರಶ್ನೆಗಳು ಮೂಡುವುದು. ಮಕ್ಕಳಿಲ್ಲ ಎನ್ನುವ ಕೊರಗಿನಿಂದಲೇ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ವೈಪರೀತ್ಯಗಳು ಉಂಟಾಗುಯವ ಸಾಧ್ಯತೆಗಳು ಇರುತ್ತವೆ. ಈ ನಿಟ್ಟಿನಲ್ಲಿಯೇ ಮಕ್ಕಳನ್ನು ಪಡೆಯಬೇಕು ಎನ್ನುವ ಹಂಬಲದಿಂದ ಅನೇಕರು ಸುಧಾರಿತ ಚಿಕಿತ್ಸೆಯ ಮೂಲಕ ಮಗುವನ್ನು ಪಡೆದುಕೊಳ್ಳಲು ಮುಂದಾಗುವರು. ಕೆಲವರಿಗೆ ದುರಾದೃಷ್ಟದ ಕಾರಣಗಳಿಂದಾಗಿ ಮಕ್ಕಳನ್ನು ಪಡೆದುಕೊಳ್ಳಲು ಕಷ್ಟವಾಗುವುದು. ಬಂಜೆ ಎನ್ನುವಂತಹ ಪಟ್ಟವನ್ನು ಸಹ ಹೊರಬೇಕಾಗುವುದು.

ಸಮಾಜದ ಜನರನ್ನು ಎದುರಿಸುವುದೇ ಕಷ್ಟ

ಸಮಾಜದ ಜನರನ್ನು ಎದುರಿಸುವುದೇ ಕಷ್ಟ

ಸಮಾಜದಲ್ಲೂ ಮಕ್ಕಳಿಲ್ಲದ ಪೋಷಕರನ್ನು ಅಪಶಕುನ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಬಾಗಿಯಾಗಲು ಅನರ್ಹರು ಎನ್ನುವಂತಹ ಧೋರಣೆಯನ್ನು ತೋರುವರು. ಜೊತೆಗೆ ಅವರಲ್ಲಿ ಇತರ ಮಕ್ಕಳನ್ನು ನೀಡಲು ಯೋಚಿಸುವರು. ಇಂತಹ ಸನ್ನಿವೇಶಗಳು ಪದೇ ಪದೇ ವೈಯಕ್ತಿಕವಾಗಿ ಉಂಟಾಗುತ್ತಿದ್ದರೆ ಸಾಕಷ್ಟು ನೋವು ಹಾಗೂ ನಿರಾಸೆಯಿಂದ ಜೀವನವನ್ನು ನಡೆಸಬೇಕಾಗುವುದು. ಅಂತಹ ಒಂದು ನಿರಾಸೆ ಅಥವಾ ನೋವಿಗೆ ಕಾರಣ ವ್ಯಕ್ತಿಯ ಕುಂಡಲಿ ಹಾಗೂ ಅದೃಷ್ಟಗಳು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕ್ಕಳಿಲ್ಲದ ವ್ಯಕ್ತಿಗಳು ಕೆಲವು ಪರಿಹಾರಗಳನ್ನು ಅನುಸರಿಸಿದರೆ ಜೀವನದಲ್ಲಿ ಮಕ್ಕಳನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುವುದು. ಕೆಲವು ಗ್ರಹಗತಿಗಳ ಪ್ರಭಾವದಿಂದ ಹಾಗೂ ಅನಾನುಕೂಲತೆಯಿಂದ ಮಕ್ಕಳನ್ನು ಪಡೆಯಲು ವಿಳಂಬ ಉಂಟಾಗುವುದು ಎಂದು ಶಾಸ್ತ್ರ ಹೇಳುವುದು.

ಇದಕ್ಕೆ ಪರಿಹಾರ ಕ್ರಮಗಳೇನು?

ಇದಕ್ಕೆ ಪರಿಹಾರ ಕ್ರಮಗಳೇನು?

ಮಕ್ಕಳನ್ನು ಪಡೆಯುವುದು ವ್ಯಕ್ತಿಯ ಜೀವನದಲ್ಲಿ ಎಷ್ಟು ಮಹತ್ತರವಾದ ಸಂಗತಿ? ಅದರಿಂದ ವೈಯಕ್ತಿಕ ಜೀವನದಲ್ಲಿ ಯಾವ ಬದಲಾವಣೆ ಉಂಟಾಗುವುದು? ಅದಕ್ಕಾಗಿ ಯಾವ ರೀತಿಯ ಮಾನಸಿಕ ಸಿದ್ಧತೆಗಳನ್ನು ಹೊಂದಿರಬೇಕು? ಗ್ರಹಗತಿಗಳಿಗೂ ಮಕ್ಕಳು ಜನಿಸುವುದಕ್ಕೂ ಎಂತಹ ಸಂಬಂಧ ಎನ್ನುವಂತಹ ವಿವಿಧ ಸಂಗತಿಗಳ ಕುರಿತು ನೀವು ತಿಳಿದುಕೊಳ್ಳಬೇಕು ಅಥವಾ ನಿಮ್ಮವರು ಯಾರಾದರೂ ಈ ರೀತಿಯ ಸಮಸ್ಯೆ ಅನುಭವಿಸುತ್ತಿದ್ದರೆ ಅವರು ಯಾವ ಬಗೆಯ ಪರಿಹಾರ ಕ್ರಮಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವಂತಹ ಕುತೂಹಲ ಹೊಂದಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಮಗು ವೈವಾಹಿಕ ಜೀವನದ ಒಂದು ಭಾಗ

ಮಗು ವೈವಾಹಿಕ ಜೀವನದ ಒಂದು ಭಾಗ

ಪ್ರತಿಯೊಂದು ಸಮಾಜ ಹಾಗೂ ಧರ್ಮದಲ್ಲಿ ಮಗುವನ್ನು ಹೊಂದುವುದು ಅಥವಾ ಅಪ್ಪ-ಅಮ್ಮ ಎನಿಸಿಕೊಳ್ಳುವುದು ಒಂದು ಪವಿತ್ರತೆ ಹಾಗೂ ಶ್ರೇಷ್ಠತೆಯನ್ನು ಸೂಚಿಸುತ್ತದೆ. ಹಾಗಾಗಿಯೇ ವೈವಾಹಿಕ ಜೀವನವನ್ನು ಆರಂಭಿಸಿದ ಮೇಳೆ ಮಕ್ಕಳನ್ನು ಪಡೆಯುವುದು ಬಹಳ ಪ್ರಮುಖವಾದ ಸಂಗತಿಯಾಗಿರುತ್ತದೆ. ವಿವಾಹವಾದ ಬಳಿಕ ಬಹುಬೇಗ ಮಗುವನ್ನು ನೀಡದ ಮಹಿಳೆಯನ್ನು ಶಾಪಗ್ರಸ್ತ ಮಹಿಳೆ, ಅಪಶಕುನ ಎನ್ನುವ ರೀತಿಯಲ್ಲಿ ಪರಿಗಣಿಸುತ್ತಾರೆ. ಕೆಲವು ಜನಾಂಗದವರು ಪುರುಷನಿಗೆ ಇನ್ನೊಂದು ವಿವಾಹ ಮಾಡುತ್ತಾರೆ ಎನ್ನಲಾಗುವುದು. ಸಮಾಜದ ಹಾಗೂ ಕುಟುಂಬದ ಭವಿಷ್ಯ ಇರುವುದು ಮನೆಯಲ್ಲಿ ಇರುವ ಮಕ್ಕಳಿಂದಲೇ ಎನ್ನುವ ನಂಬಿಕೆ ಮತ್ತು ಸತ್ಯವೇ ಕಾರಣವಾಗಿರುತ್ತದೆ. ಕೆಲವೊಮ್ಮೆ ಮಹಿಳೆ ಹಾಗೂ ಪುರುಷನಲ್ಲಿ ಇರುವಂತಹ ಆರೋಗ್ಯ ಸಮಸ್ಯೆ ಅಥವಾ ನ್ಯೂನತೆಯಿಂದಾಗಿ ಮಕ್ಕಳಾಗದೆ ಇರಬಹುದು. ಆಗ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಮಕ್ಕಳನ್ನು ಪಡೆಯಬಹುದು. ವೈದ್ಯಕೀಯ ನೆರವಿನಿಂದಲೂ ಮಕ್ಕಳನ್ನು ಪಡೆಯುವಲ್ಲಿ ವಿಫಲತೆ ಉಂಟಾಗುತ್ತಿದೆ ಎಂದಾದರೆ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗುವುದನ್ನು ಮರೆಯಬಾರದು.

Most Read: ರುದ್ರಾಕ್ಷಿ ಧಾರಣೆಯಿಂದ ಮಾಡಬಯಸುವ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರುವವು

ಮಕ್ಕಳ ಫಲವನ್ನು ನೀಡುವ ಕುಂಡಲಿಯ ಮನೆ

ಮಕ್ಕಳ ಫಲವನ್ನು ನೀಡುವ ಕುಂಡಲಿಯ ಮನೆ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕುಂಡಲಿಯಲ್ಲಿ ಒಂದು ನಿರ್ದಿಷ್ಟ ಮನೆಯು ಸಂತಾನವನ್ನು ಪ್ರತಿನಿಧಿಸುತ್ತದೆ. ಜಾತಕ ಮತ್ತು ನಿರ್ದಿಷ್ಟ ಗ್ರಹಗಳ ಸಂಯೋಜನೆಯಲ್ಲಿ ವ್ಯಕ್ತಿಯು ಸಂತಾನ ಫಲವನ್ನು ಪಡೆದುಕೊಳ್ಳುವನು. ಹಾಗಾಗಿ ವಿವಾಹದ ಪೂರ್ವದಲ್ಲಿ ಜಾತಕ ವಿಶ್ಲೇಷಣೆಯು ಬಹಳ ಮತ್ತರವಾದ ಪಾತ್ರ ನಿರ್ವಹಿಸುತ್ತದೆ. ಯಾವುದೇ ಪರಿಹಾರೋಪಾಯವನ್ನು ಕಂಡುಕೊಳ್ಳುವಾಗ ಗಂಡ ಮತ್ತು ಹೆಂಡತಿಯ ಇಬ್ಬರ ಜಾತಕದ ಪರಿಶೀಲನೆ ನಡೆಸಬೇಕು. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 5ನೇ ಮನೆಯು ಹೆರಿಗೆ, ಸಂತಾನ ಅಥವಾ ಮಕ್ಕಳ ಫಲವನ್ನು ಸೂಚಿಸುತ್ತದೆ. ಪೂರ್ವ ನಿಯೋಜಿತವಾಗಿ 5ನೇ ಮನೆಯನ್ನು ಹಿಂದಿನ ಜನ್ಮದ ಪಾಪ ಪುಣ್ಯಗಳ ಫಲಿತಾಂಶವನ್ನು ಸೂಚಿಸುತ್ತದೆ. ಹಾಗಾಗಿ ಕೆಲವೊಮ್ಮೆ ಸಂತಾನ ದೋಷಗಳನ್ನು ಸೂಚಿಸುತ್ತಿದ್ದರೆ ಮಕ್ಕಳಾಗಲು ವಿಳಂಬ ಅಥವಾ ಆಗದೆ ಇರುವ ಸಾಧ್ಯತೆಗಳು ಇರುತ್ತವೆ ಎನ್ನಲಾಗುವುದು.

ಮಕ್ಕಳನ್ನು ಪಡೆಯದೆ ಇರಲು ಇರಬಹುದಾದ ಎರಡು ಸಾಧ್ಯತೆಗಳು:

ಮಕ್ಕಳನ್ನು ಪಡೆಯದೆ ಇರಲು ಇರಬಹುದಾದ ಎರಡು ಸಾಧ್ಯತೆಗಳು:

ಪುರುಷ ಮತ್ತು ಮಹಿಳೆಯ ಜಾತಕದಲ್ಲಿ ಸರಿಯಾದ ವಿಶ್ಲೇಷಣೆಯ ನಂತರ ಎರಡು ಸಾಧ್ಯತೆಗಳನ್ನು ತೆಗೆದುಕೊಳ್ಳಬಹುದು.

*ಮೊದಲು ಪರಿಗಣಿಸಬೇಕಾದ ಸಂಗತಿಯೆಂದರೆ ಮಕ್ಕಳನ್ನು ಪಡೆಯಲು ವಿಳಂಬ ಆಗುವುದೇ ಅಥವಾ ಮಕ್ಕಳನ್ನು ಪಡೆಯುವ ಸಾಧ್ಯತೆಗಳೇ ಇಲ್ಲವೇ? ಎನ್ನುವುದು.

*ನಿಖರವಾದ ವಯಸ್ಸಿನಲ್ಲಿ ಗರ್ಭಧಾರಣೆ ಆಗದೆ ಇರುವುದು ಅಥವಾ ಮಗುವನ್ನು ಪಡೆಯಲು ದೋಷ ಹೊಂದಿರುವುದು.

Most Read: ಹಿಂದೂ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ 'ಮೌಳಿ ದಾರ' ದ ಹಿಂದಿನ ವೈಜ್ಞಾನಿಕ ಸತ್ಯಾಸತ್ಯತೆಗಳು

ಗ್ರಹಗತಿಗಳ ಪ್ರಭಾವ

ಗ್ರಹಗತಿಗಳ ಪ್ರಭಾವ

ವ್ಯಕ್ತಿ ಮಗುವನ್ನು ಪಡೆಯುವಾಗ ಗ್ರಹಗತಿಗಳ ಪ್ರಭಾವ ವ್ಯಕ್ತಿಯ ಮೇಲೆ ಹೇಗಿದೆ ಎನ್ನುವುದನ್ನು ಮೊದಲು ಪರಿಗಣಿಸಬೇಕು. ವ್ಯಕ್ತಿಯ ದಶಾ ಗುಣಗಳು ಹಾಗೂ ಗ್ರಹಗಳ ಪ್ರಭಾವ ಹೇಗಿದೆ ಎನ್ನುವುದು ಬಹಳ ಪ್ರಮುಖವಾದ ಸಂಗತಿಯಾಗಿರುತ್ತದೆ. ಅಲ್ಲದೆ ಚಂದ್ರನ ಪ್ರಭಾವವು ವ್ಯಕ್ತಿಯ ಮೇಲೆ ಹೇಗಿದೆ? ಎನ್ನುವುದು ಬಹಳ ಪ್ರಮುಖವಾದ ಸಂಗತಿಯಾಗಿರುತ್ತವೆ. ಹಾಗಾಗಿ ವ್ಯಕ್ತಿಯ ಜಾತಕವನ್ನು ಪರಿಶೀಲಿಸಿ, ನಂತರ ಅದಕ್ಕೆ ಯಾವ ಪರಿಹಾರ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಹೇಳಲಾಗುವುದು. ಕುಂಡಲಿಯ ಪ್ರಕಾರ ಯಾವ ಸಮಸ್ಯೆ ಮಗುವನ್ನು ಪಡೆಯಲು ಅಸಾಧ್ಯವಾಗುತ್ತಿದೆ ಎನ್ನುವುದನ್ನು ತೋರಿಸಿಕೊಡುವುದು.

ಪುರುಷನ ಜಾತಕದ ಪ್ರಕಾರ ಉಂಟಾಗಬಹುದಾದ ನಕಾರಾತ್ಮಕ ಕಾರಣಗಳು

ಪುರುಷನ ಜಾತಕದ ಪ್ರಕಾರ ಉಂಟಾಗಬಹುದಾದ ನಕಾರಾತ್ಮಕ ಕಾರಣಗಳು

ಪ್ರಮುಖ ಶಾಸ್ತ್ರದ ಪ್ರಕಾರ ಪುರುಷನ ಜಾತಕದಲ್ಲಿ ಕೆಲವು ತೊಂದರೆಗಳು ಅಥವಾ ದೋಷಗಳು ಸಂತಾನ ಸಮಸ್ಯೆಯನ್ನು ತೋರಿಸಿಕೊಡುವುದು. ಇದರಿಂದ ದಂಪತಿಗಳು ಮಗುವನ್ನು ಪಡೆಯಲು ಸಾಧ್ಯವಾಗದೆ ಇರಬಹುದು.

*ಜಾತಕದಲ್ಲಿರುವ 5ನೇ ಮನೆಯ ವಿಶ್ಲೇಷಣೆಯು ಗ್ರಹಗಳ ಪ್ರಭಾವಗಳಿಗೆ ಅನುಗುಣವಾಗಿ ವಿಶ್ಲೇಷಿಸಲಾಗುವುದು.

*ಲಗ್ನದಲ್ಲಿ ಮಂಗಳನ ಪ್ರಭಾವ ಇದ್ದರೆ ಅಥವಾ ಪ್ರಭಾವಕ್ಕೆ ಒಳಗಾಗಿದ್ದರೆ ಪುರುಷನು ತನ್ನ ಮೊದಲ ಮಗುವನ್ನು ಕಳೆದುಕೊಳ್ಳುತ್ತಾನೆ. ಜೊತೆಗೆ ಹೆಂಡತಿಯು ಪುನಃ ಸಂತತಿಯನ್ನು ಪಡೆಯಲು ವಿಫಲಳಾಗುತ್ತಾಳೆ.

*ಐದನೇ ಮನೆಯ ಅಧಿಪತಿಯಾದ ಚಂದ್ರನು ಪ್ರಭಲನಾಗಿರದೆ ಇದ್ದಾಗ ಮತ್ತು ಪತ್ನಿಯ ಜಾತಕದಲ್ಲಿ ಇರುವ ಐದನೇ ಮನೆಯ ಹೊಂದಾಣಿಕೆಯು ಪತಿಯ ಜಾತಕದೊಂದಿಗೆ ಸೂಕ್ತ ರೀತಿಯ ಸಂಯೋಜನೆ ಇಲ್ಲದೆ ಇದ್ದರೆ ಅಥವಾ ದೋಷವನ್ನು ತೋರಿಸಿದರೆ ಸಂತಾನ ಸಮಸ್ಯೆ ಉಂಟಾಗುವದು.

Most Read: ಜಾತಕದಲ್ಲಿ ಬೃಹಸ್ಪತಿಯ ದೋಷವಿದ್ದರೆ-ಇಲ್ಲಿದೆ ನೋಡಿ ಪರಿಹಾರಗಳು

ಸಂತಾನ ಭಾಗ್ಯ ಪಡೆಯುವುದು:

ಸಂತಾನ ಭಾಗ್ಯ ಪಡೆಯುವುದು:

* ವ್ಯಕ್ತಿಯ ಜಾತಕ ಅಥವಾ ಕುಂಡಲಿಯಲ್ಲಿ ಐದನೇ ಮನೆಯು ಗುರು ಗ್ರಹ ಇದ್ದು, ಶುಕ್ರನಿಂದಲೂ ಪ್ರಭಾವಿತವಾಗಿದ್ದರೆ ವ್ಯಕ್ತಿ ತನ್ನ 32ನೇ ವಯಸ್ಸಿನಲ್ಲಿ ಅಥವಾ 33ನೇ ವಯಸ್ಸಿನಲ್ಲಿ ಸಂತಾನವನ್ನು ಪಡೆದುಕೊಳ್ಳುವನು.

* ಜಾತಕದ 9ನೇ ಮನೆಯಲ್ಲಿ ಗುರು ಗ್ರಹವಿದ್ದು, ಲಘ್ನದಲ್ಲಿ ಶುಕ್ರನಿದ್ದರೆ ವ್ಯಕ್ತಿ ತನ್ನ 40ನೇ ವಯಸ್ಸಿನಲ್ಲಿ ಸಂತಾನವನ್ನು ಪಡೆದುಕೊಳ್ಳುವನು.

* ಐದನೇ ಮನೆ ಮತ್ತು ಐದನೇ ಮನೆಯ ಅಧಿಪತಿ ಯಾರು ಹಾಗೂ ಎಷ್ಟು ಪ್ರಭಾವದಿಂದ ಕೂಡಿದೆ ಎನ್ನುವುದರ ಆಧಾರದ ಮೇಲೆ ಸಂತಾನ ಫಲ ದೊರೆಯುವುದು. 7ನೇ ಮನೆಯು ಪತಿ ಪತ್ನಿಯ ಲೈಂಗಿಕ ಜೀವನವನ್ನು ಪ್ರತಿನಿಧಿಸುತ್ತದೆ. ಇದು ಸಹ ಸಂತಾನ ಪಡೆಯುವಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುವುದು. ಶುಕ್ರನು ಏಳನೇ ಮನೆಯಲ್ಲಿ ಉತ್ತಮ ಪ್ರಭಾವವನ್ನು ಹೊಂದಿದ್ದರೆ ಗಂಡ ಹೆಂಡತಿಯ ನಡುವೆ ಆರೋಗ್ಯಕರವಾದ ಸಂಬಂಧವನ್ನು ಸೂಚಿಸುತ್ತದೆ. ಕೆಲವು ಗ್ರಹಗಳ ಪ್ರಭಾವವು ಸಂತಾನ ಭಾಗ್ಯಕ್ಕೆ ಸಾಕಷ್ಟು ಸಂಯೋಜನೆಯನ್ನು ನೀಡುವವು.

ಪತಿ/ಪುರುಷನು ಕೆಲವು ಸಮಸ್ಯೆಗಳನ್ನು ಎದುರಿಸುವನು:

ಪತಿ/ಪುರುಷನು ಕೆಲವು ಸಮಸ್ಯೆಗಳನ್ನು ಎದುರಿಸುವನು:

* ಪುರುಷನ ಜಾತಕದಲ್ಲಿ 6, 8, 12 ಮತ್ತು 5ನೇ ಮನೆಯ ಅಧಿಪತಿಗಳು ಉತ್ತಮ ಸ್ಥಾನವನ್ನು ಪಡೆದುಕೊಳ್ಳದೆ ಇದ್ದರೆ ಅಥವಾ ಅಪಸಾಮಾನ್ಯ ರಾಶಿಗಳೊಂದಿಗೆ ಕೂಡಿದ್ದರೆ ಪುರುಷನು ಸಂತಾನ ಸಮಸ್ಯೆಯನ್ನು ಎದುರಿಸಬೇಕಾಗುವುದು.

* ಪುರುಷನ ಜಾತಕದ 5ನೇ ಮನೆಯಲ್ಲಿ ದುರ್ಬಲಗೊಂಡ ಅಥವಾ ಹಿಮ್ಮೆಟ್ಟುವ ಗ್ರಹಗಳ ಉಪಸ್ಥಿತಿ ಅಥವಾ ಪ್ರಭಾವ ಇದ್ದರೆ ಗರ್ಭಾವಸ್ಥೆಯಲ್ಲಿ ಪತ್ನಿಯು ಸಾಕಷ್ಟು ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುವುದು. ಕೆಲವೊಮ್ಮೆ ಸಾಕಷ್ಟು ನೋವಿನ ಮಾತುಗಳನ್ನು ಎದುರಿಸಬೇಕಾಗುವುದು.

* ಜಾತಕದಲ್ಲಿ 5ನೇ ಮನೆ ಮತ್ತು ಏಳನೇ ಮನೆಯು ಸೂಕ್ತ ಗ್ರಹಗಳ ಪ್ರಭಾವ ಅಥವಾ ಸಂಯೋಗವನ್ನು ಪಡೆದುಕೊಳ್ಳದೆ ಹೋದರೆ ಸಂತಾನ ಹೀನತೆ, ಹುಟ್ಟಿದ ಮಗುವಿನಲ್ಲಿ ಆರೋಗ್ಯದ ತೋದರೆ, ಅಪಸಾಮಾನ್ಯವಾದ ಮಗುವಿನ ಜನನ ಹೀಗೆ ವಿವಿಧ ಸಮಸ್ಯೆಗಳು ಎದುರಾಗುತ್ತವೆ.

Most Read: ನೋಡಿ ಇದೇ ಕಾರಣಕ್ಕೆ ಪುರುಷರು ತಂದೆ ಆಗದಿರುವುದು!

ಶನಿಯು ಉಪದ್ರವಕಾರಿ ಹಾಗೂ ನಿಧಾನ ಗತಿಯ ಸಂಚಾರವನ್ನು ಪಡೆದುಕೊಂಡಿರುತ್ತಾನೆ:

ಶನಿಯು ಉಪದ್ರವಕಾರಿ ಹಾಗೂ ನಿಧಾನ ಗತಿಯ ಸಂಚಾರವನ್ನು ಪಡೆದುಕೊಂಡಿರುತ್ತಾನೆ:

* ಮಹಿಳೆಯ ಜಾತಕದಲ್ಲಿ 5ನೇ ಮನೆಯು ಸಂತಾನದ ವಿಷಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 12 ಮತ್ತು 5ನೇ ಮನೆಯಲ್ಲಿ ಸೂಕ್ತ ಗ್ರಹಗತಿಗಳ ಪ್ರಭಾವ ಅಥವಾ ಅನುಕೂಲಕರ ರೀತಿಯಲ್ಲಿ ಇಲ್ಲ ಎಂದಾದರೆ ಖರ್ಚು, ದುಃಖ, ನಿಗೂಢ ಮನೋಭಾವ, ಆತ್ಮ ಹತ್ಯೆಯ ಭಾವನೆ ಹೀಗೆ ಅನೇಕ ಅಹಿತಕರವಾದ ಸಂಗತಿಯನ್ನು ಸೃಷ್ಟಿಸುತ್ತದೆ.

* ಐದನೇ ಮನೆಯಲ್ಲಿ ಗುರು ಸ್ಥಾನವನ್ನು ಪಡೆದುಕೊಂಡಿದ್ದರೂ, ಶನಿಯ ಪ್ರಭಾವ ಇದೆ ಎಂದಾದರೆ ಸಂತಾನ ಹೀನತೆ ಅಥವಾ ವಿಳಂಬವಾದ ಸಂತಾನವನ್ನು ಪಡೆದುಕೊಳ್ಳುವರು. ಏಕೆಂದರೆ ಶನಿಯು ಉಪದ್ರವ ಹಾಗೂ ನಿಧಾನಗತಿಯ ಪ್ರಭಾವವನ್ನು ತೋರುವ ಗ್ರಹವಾಗಿರುತ್ತಾನೆ ಎನ್ನಲಾಗುವುದು.

ಗುರುವಿನ ವಿಳಂಬವಾದ ಪ್ರಭಾವ

ಗುರುವಿನ ವಿಳಂಬವಾದ ಪ್ರಭಾವ

* ವ್ಯಕ್ತಿಯ ಜಾತಕದ ಪ್ರಕಾರ 5ನೇ ಮನೆಯಲ್ಲಿ ಗುರುವು ಪ್ರಬಲನಾಗಿದರೆ ಇದ್ದರೆ ಶುಕ್ರನ ನಿಯೋಜನೆ ಇಲ್ಲದೆ ಇರುವುದು ಮತ್ತು ಕೇತುವು ಐದನೇ ಮನೆಯಲ್ಲಿ ಕುಳಿತಿದ್ದರೆ ವಿಳಂಬವಾದ ಸಂತತಿಯನ್ನು ಸೂಚಿಸುತ್ತದೆ. ಜೊತೆಗೆ ಕೆಲವೊಮ್ಮೆ ದುಃಖ ಹಾಗೂ ಫಲವನ್ನು ನೀಡದೆ ಹೋಗುವುದು.

ಹೆರಿಗೆಯಲ್ಲಿ ಉಂಟಾಗುವ ತೊಡಕು ಹಾಗೂ ವಿಳಂಬಗಳು ಪುರುಷ ಹಾಗೂ ಮಹಿಳೆ ಇಬ್ಬರ ಜಾತಕದ ಅನ್ವಯದಂತೆ ನಡೆಯುವುದು. ಅವರ ಜಾತಕದಲ್ಲಿ ಸಂತಾನ ಫಲ ನೀಡುವ ಮನೆಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ಪ್ರಭಾವವು ಸಂತಾನ ಫಲದ ಮೇಲೆ ಗಂಭೀರವಾದ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಅಹಿತಕರವಾದ ಸಂಗತಿಗಳು ಉಂಟಾಗಿ ಮಾನಸಿಕ ನೆಮ್ಮದಿ ಹಾಳಾಗಬಹುದು. ಇಲ್ಲವೇ ದೈಹಿಕವಾಗಿಯೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಒಳಗಾಗಬಹುದು.

ಸೂಕ್ತವಾದ ತನಿಖೆ ಅಗತ್ಯ

ಸೂಕ್ತವಾದ ತನಿಖೆ ಅಗತ್ಯ

ಪೂರ್ವ ಮತ್ತು ಪಾಶ್ಚಿಮಾತ್ಯ ಜ್ಯೋತಿಷ್ಯದಲ್ಲಿ ನೀಡಲಾಗುವ ಅನೇಕ ನಿಯಮಗಳ ಸಂಖ್ಯೆಯು ಸಾಕಷ್ಟು ನಿರ್ಣಯಗಳನ್ನು ನೀಡುತ್ತವೆ. ಮಗುವಿನ ಜನನ, ಪಾಲಕರ ಸಂತಾನ ಭಾಗ್ಯ ಹಾಗೂ ದೋಷಗಳಿಗೆ ಇಂತದ್ದೇ ಎಂದು ಹೇಳುವಂತಹ ನಿರ್ದಿಷ್ಟ ಕಾರಣಗಳು ಕೆಲವೊಮ್ಮೆ ತಿಳಿಯದೇ ಹೋಗಬಹುದು. ಇಲ್ಲವೇ ಸೂಕ್ತ ರೀತಿಯ ವಿಶ್ಲೇಷಣೆ ದೊರೆಯದೆ ವಿಫಲತೆಯನ್ನು ಅನುಭವಿಸಿರಬಹುದು. ಕೆಲವೊಮ್ಮೆ ಪತಿ ಪತ್ನಿಯ ಜಾತಕದಲ್ಲಿ ಒಬ್ಬರ ಜಾತಕದಲ್ಲಿ ಉತ್ತಮ ಫಲಗಳಿವೆ ಎಂದಾದರೆ ಉತ್ತಮ ಫಲವನ್ನು ಪಡೆಯುತ್ತಾರೆ ಎಂದು ಸಹ ಹೇಳಲಾಗುವುದು. ಕೆಲವೊಮ್ಮೆ ಒಬ್ಬರ ಜಾತಕದಲ್ಲಿ ಇರುವ ದೋಷವು ಇನ್ನೊಂದು ಜಾತಕದ ಫಲವನ್ನು ದುರ್ಬಲಗೊಳಿಸುತ್ತವೆ ಎಂದು ಸಹ ಹೇಳಲಾಗುವುದು. ಹಾಗಾಗಿ ಯಾವುದೇ ಸಂಗತಿಗಳ ಬಗ್ಗೆ ಸೂಕ್ತ ನಿರ್ಣಯವನ್ನು ಅಂತಿಮವಾಗಿ ಪಡೆದುಕೊಳ್ಳುವ ಮೊದಲು ಸರಿಯಾದ ತನಿಖೆ ಅತ್ಯಗತ್ಯವಾಗಿರುತ್ತದೆ. ಸಮಸ್ಯೆ ಏನು ಎನ್ನುವುದನ್ನು ಮೊದಲು ಆವಿಷ್ಕರಿಸಿ, ಅದಕ್ಕೆ ಸೂಕ್ತವಾದ ವೈದ್ಯಕೀಯ ಪರೀಕ್ಷೆ ಹಾಗೂ ಜ್ಯೋತಿಷ್ಯದಲ್ಲಿ ಇರುವ ಪರಿಹಾರ ಕ್ರಮವನ್ನು ಕೈಗೊಳ್ಳುವುದು ಉತ್ತಮ. ಆಗ ಒಂದು ನಿರ್ದಿಷ್ಟವಾದ ಫಲಿತಾಂಶ ಅಥವಾ ನಂಬಿಕೆ ನಿಮ್ಮ ಅರಿವಿಗೆ ಬರುವುದು.

English summary

Astrological remedies for Childbirth problems

In each society, a child is a very important part of a married life. In traditional India, if a woman was not able to conceive immediately after marriage, she was cursed for not giving a heir to the family. However, things have changed over time, and educated society understands that child bearing is not only in the hands of a woman. There are certain medical reasons that can delay the pregnancy. If all the medical conditions are healthy for childbirth and still, there is a failure in pregnancy, then astrological advice should be considered.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more