Just In
- 6 hrs ago
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- 6 hrs ago
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- 9 hrs ago
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- 12 hrs ago
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
Don't Miss
- Sports
ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Movies
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜ್ಯೋತಿಷ್ಯ ಪರಿಹಾರ: ನಿಮ್ಮ ಸರ್ವ ಸಮಸ್ಯೆಗಳ ಪರಿಹಾರಕ್ಕೆ ಲವಂಗವನ್ನು ದೇವರಿಗೆ ಹೀಗೆ ಅರ್ಪಿಸಿ
ಭಾರತೀಯ ಮಸಾಲೆ ಪದಾರ್ಥದಲ್ಲಿ ಪ್ರಮುಖ ಪಾತ್ರ ವಹಿಸುವ, ಅಡುಗೆಗೆ ತನ್ನದೇ ಆದ ರುಚಿಯನ್ನು ನೀಡುವ ಆಹಾರ ಪದಾರ್ಥ ಲವಂಗ. ಆದರೆ ಈ ಲವಂಗವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಲವಂಗದ ಬಳಕೆಯನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲವಾರು ಸಮಸ್ಯೆಗಳ ನಿವಾರಣೆಗೆ ವಿಭಿನ್ನ ರೀತಿಯಲ್ಲಿ ಬಳಸುವ ಕ್ರಮವಿದೆ.
ಜ್ಯೋತಿಷ್ಯದ ಪ್ರಕಾರ, ಲವಂಗವನ್ನು ಈ ರೀತಿ ಬಳಸುವುದರಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತದೆ, ಎಲ್ಲೊ ಸಿಲುಕಿದ್ದ ಹಣ ಯಾವುದೋ ರೂಪದಲ್ಲಿ ಹಿಂತಿರುತ್ತದೆ, ರಾಹು-ಕೇತುವಿನ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ ಸೇರಿದಂತೆ ಒಟ್ಟಾರೆ ಹಲವರು ಸಮಸ್ಯೆಗಳಿಗೆ ಲವಂಗವನ್ನು ಶಕ್ತಿಯ ವಾಹಕವೆಂದು ಪರಿಗಣಿಸಲ್ಪಟ್ಟಿದೆ. ನಿಮ್ಮ ಅದೃಷ್ಟವನ್ನು ಬದಲಾಯಿಸಲು ಮತ್ತು ನಿಮ್ಮ ಕನಸುಗಳನ್ನು ಪೂರೈಸಲು ಲವಂಗವನ್ನು ಪರಿಹಾರವಾಗಿ ಪ್ರಯತ್ನಿಸಬಹುದು. ಈ ಜ್ಯೋತಿಷ್ಯಾಸ್ತ್ರದ ಆಚರಣೆಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲದಿದ್ದರೂ ಅನೇಕ ವರ್ಷಗಳಿಂದ ಜನರು ಅವುಗಳನ್ನು ಪ್ರಯತ್ನಿಸುತ್ತಿದ್ದಾರೆ ಮತ್ತು ಯಶಸ್ವಿಯಾಗುತ್ತಿದ್ದಾರೆ. ನಿಮಗೂಯಾವುದೇ ಕ್ಷೇತ್ರದಲ್ಲಿನ ಯಶಸ್ಸಿಗಾಗಿ ಹೀಗೆ ಮಾಡಿ ನೋಡಿ:

ರಾಹು-ಕೇತುಗಳು ಕೆಟ್ಟ ದೃಷ್ಟಿ ಕೊನೆಗೊಳ್ಳುತ್ತವೆ
ನೀವು ರಾಹು-ಕೇತುಗಳಿಂದ ತೊಂದರೆಗೊಳಗಾಗಿದ್ದರೆ ಮತ್ತು ಜಾತಕದಲ್ಲಿ ಅವರ ಸ್ಥಾನವು ಅನುಕೂಲಕರವಾಗಿಲ್ಲದಿದ್ದರೆ, ನೀವು ಶನಿವಾರದಂದು ಲವಂಗವನ್ನು ದಾನ ಮಾಡಬೇಕು. ಯಾರೂ ಲವಂಗವನ್ನು ತೆಗೆದುಕೊಳ್ಳದಿದ್ದರೆ, ನೀವು ಅವುಗಳನ್ನು ಶಿವಲಿಂಗಕ್ಕೂ ಅರ್ಪಿಸಬಹುದು. ನೀವು ಇದನ್ನು 40 ದಿನಗಳವರೆಗೆ ನಿರಂತರವಾಗಿ ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ ಮತ್ತು ಅವರ ದುಷ್ಪರಿಣಾಮಗಳು ಸಹ ಕೊನೆಗೊಳ್ಳುತ್ತವೆ.

ನಿಮ್ಮ ಹಣ ನಿಮಗೆ ಮತ್ತೆ ಹಿಂತಿರುತ್ತದೆ
ನಿಮ್ಮ ಹಣ ಎಲ್ಲೋ ಯಾರ ಬಳಿಯೋ ಸಿಕ್ಕಿಹಾಕಿಕೊಂಡರೆ ಮತ್ತು ಯಾರಾದರೂ ಮತ್ತೆ ಹಿಂತಿರುಹಿಸಲು ಹಿಂಜರಿಯುತ್ತಿದ್ದರೆ, ಅಮವಾಸ್ಯೆ ಅಥವಾ ಹುಣ್ಣಿಮೆಯ ರಾತ್ರಿ 11 ಅಥವಾ 21 ಲವಂಗವನ್ನು ಕರ್ಪೂರದಿಂದ ಸುಟ್ಟುಹಾಕಿ. ಲವಂಗದೊಂದಿಗೆ ಕರ್ಪೂರವನ್ನು ಸುಡುವುದರಿಂದ ನಿಮ್ಮ ಹಣ ನಿಮಗೆ ಹಿಂತಿರುಗುವ ಸಾಧ್ಯತೆ ಹೆಚ್ಚು. ಅಲ್ಲದೆ, ಲಕ್ಷ್ಮಿ ದೇವಿಯನ್ನು ಧ್ಯಾನಿಸಿ ಮತ್ತು ನಿಮ್ಮ ಸಮಸ್ಯೆಯನ್ನು ಅವಳಿಗೆ ಭಕ್ತಯಿಂದ ತಿಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಹಣ ಪಡೆಯುತ್ತೀರಿ ಮತ್ತು ಹಣವನ್ನು ಪಡೆಯುವ ಮಾರ್ಗವನ್ನು ಸಹ ನಿಮಗೆ ಗೋಚರಿಸುತ್ತದೆ.

ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ
ನೀವು ಸಂದರ್ಶನಕ್ಕೆ ಹೋಗುತ್ತಿದ್ದರೆ ಅಥವಾ ಯಾವುದಾದರೂ ಕೆಲಸಕ್ಕಾಗಿ ಹೊರಗಡೆ ಹೋಗುತ್ತಿದ್ದರೆ ಮತ್ತು ಅದು ಪೂರ್ಣಗೊಳ್ಳಬೇಕೆಂದು ನೀವು ಬಯಸಿದರೆ, ಮನೆಯಿಂದ ಹೊರಡುವಾಗ ಎರಡು ಲವಂಗವನ್ನು ಬಾಯಿಗೆ ಹಾಕಿಕೊಳ್ಳಿ ಮತ್ತು ಕೆಲವು ಲವಂಗವನ್ನು ಕೆಲಸದ ಸ್ಥಳದಲ್ಲಿ ಎಸೆಯಿರಿ. ಇದರ ನಂತರ, ನಿಮ್ಮ ಇಷ್ಟದೇವನನ್ನು ಧ್ಯಾನಿಸಿ ಮತ್ತು ಕೆಲಸ ಯಶಸ್ವಿಯಾಗಲು ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ನಿಮ್ಮ ಕೆಲಸ ಮತ್ತು ಸಂದರ್ಶನ ಖಂಡಿತ ಯಶಸ್ವಿಯಾಗುತ್ತದೆ.

ಕಠಿಣ ಪರಿಶ್ರಮದ ಫಲಕ್ಕಾಗಿ ಹೀಗೆ ಮಾಡಿ
ಕಷ್ಟಪಟ್ಟು ಕೆಲಸ ಮಾಡಿದರೂ ಫಲ ಸರಿಯಾಗಿ ಸಿಗದಿದ್ದರೆ ಮಂಗಳವಾರ ಹನುಮಂತ ಮೂರ್ತಿಯ ಮುಂದೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ ಅದರಲ್ಲಿ ಎರಡು ಲವಂಗ ಹಾಕಿ. ಇದರ ನಂತರ ಹನುಮಾನ್ ಚಾಲೀಸಾವನ್ನು ಪಠಿಸಿ ಮತ್ತು ಆರತಿ ಮಾಡಿದ ನಂತರ, ಹನುಮಂತನಿಗೆ ನಿಮ್ಮ ಸಮಸ್ಯೆಯನ್ನು ತಿಳಿಸಿ. ಇದನ್ನು 21 ಮಂಗಳವಾರ ಸತತವಾಗಿ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಮತ್ತೆ ಶುಭ ಪ್ರಾರಂಭವಾಗುತ್ತವೆ.

ಲಕ್ಷ್ಮಿ ದೇವಿಗೆ ಲವಂಗ ಹೀಗೆ ಅರ್ಪಿಸಿ
ತಂತ್ರ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ತಾಯಿಗೆ ಪ್ರತಿದಿನ ಎರಡು ಲವಂಗವನ್ನು ಗುಲಾಬಿ ಹೂವುಗಳೊಂದಿಗೆ ಅರ್ಪಿಸಿ. ಪ್ರತಿದಿನ ಸಾಧ್ಯವಾಗದಿದ್ದರೆ, ಶುಕ್ರವಾರ ಹಾಗೆ ಮಾಡಿ. ಇದಲ್ಲದೆ, 5 ಲವಂಗಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅವುಗಳನ್ನು ಬೀರುಗಳಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಪುನರುತ್ಥಾನ ಉಂಟಾಗಿ ಧನ ಮಾರ್ಗದ ಹಾದಿ ತೆರೆದುಕೊಳ್ಳುತ್ತದೆ.

ನಿಮ್ಮ ಕೆಲಸ ಹಾಳಾಗುತ್ತಿದ್ದರೆ ಹೀಗೆ ಮಾಡಿ
ನಿಮ್ಮ ಯಾವುದೇ ಕೆಲಸಗಳು ಪದೇ ಪದೇ ಹಾಳಾಗುತ್ತಿದ್ದರೆ ಅಥವಾ ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದರೆ ಪ್ರತಿ ಶನಿವಾರದಂದು ಮೂರು ಅಥವಾ ನಾಲ್ಕು ಲವಂಗವನ್ನು ಎಣ್ಣೆಯ ದೀಪದಲ್ಲಿ ಸುಟ್ಟು ನಂತರ ಮನೆಯ ಕತ್ತಲೆಯ ಮೂಲೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನೆಯ ಸದಸ್ಯರು ಆರೋಗ್ಯವಾಗಿರುತ್ತಾರೆ. ಅಲ್ಲದೆ, ನಿಮ್ಮ ಕಾರ್ಯಗಳು ಕ್ರಮೇಣ ಪ್ರಾರಂಭವಾಗುತ್ತವೆ.