For Quick Alerts
ALLOW NOTIFICATIONS  
For Daily Alerts

ಆಷಾಢ ಶುಕ್ರವಾರ: ಯಾವ ಶುಕ್ರವಾರ ಯಾವ ದೇವಿಯ ಆರಾಧನೆ ಮಾಡಬೇಕು?

|

ಆಷಾಢ ಮಾಸ ಕರ್ನಾಟಕದಲ್ಲಿ ಜುಲೈ 11-ಆಗಸ್ಟ್ 8ರವರೆಗೆ ಇದೆ. ಆದರೆ ಕರ್ನಾಟಕದ ಕೆಲವು ಕಡೆ ಅಂದ್ರೆ ಕೊಡಗು, ಮಂಗಳೂರು ಕಡೆ ಆಷಾಢ ಜುಲೈ 17ರಿಂದ ಪ್ರಾರಂಭವಾಗಿ ಆಗಸ್ಟ್‌ 16ರವರೆಗೆ ಇರುತ್ತದೆ. ಆಗಸ್ಟ್‌ 17ರಿಂದ ಶ್ರಾವಣ ಪ್ರಾರಂಭ.

ನಿಮಗೆ ಆಷಾಢ ಜುಲೈ 11ರಿಂದ ಪ್ರಾರಂಭವಾಗಲಿ ಅಥವಾ ಜುಲೈ 17ರಿಂದ ಪ್ರಾರಂಭವಾಗಲಿ ಈ ವರ್ಷ 4 ಆಷಾಢ ಶುಕ್ರವಾರ ಸಿಗುವುದು. ಈ ನಾಲ್ಕು ಆಷಾಢ ಶುಕ್ರವಾರ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠ ಎಂದು ಹೇಳಲಾಗುವುದು.

ಆಷಾಢ ಮಾಸದಲ್ಲಿ ದೇವಿ ಶಕ್ತಿಗಳನ್ನು ಆರಾಧಿಸಲಾಗುವುದು. ಈ ತಿಂಗಳಿನಲ್ಲಿ ದೇವಿಯ ಶಕ್ತಿ ಭೂಮಿಯ ಮೇಲೆ ಅಧಿಕವಿರುತ್ತದೆ, ಇದರಿಂದಾಗಿ ದೇವಿಯನ್ನು ಆರಾಧಿಸುವುದರಿಂದ ಅನೇಕ ಪ್ರಯೋಜನಗಳು ಸಿಗುವುದು.

ಆಷಾಢ ಮಾಸದ ನಾಲ್ಕು ವಾರಗಳಲ್ಲಿ ದೇವಿಯ ಯಾವ ಸ್ವರೂಪ ಆರಾಧಿಸಲಾಗುವುದು ಎಂಬ ಮಾಹಿತಿ ಇಲ್ಲಿದೆ.

ಆಷಾಢ ಮೊದಲನೇ ಶುಕ್ರವಾರ: ಸ್ವರ್ಣಾಂಬಿಕ ದೇವಿಯ ಆರಾಧನೆ

ಆಷಾಢ ಮೊದಲನೇ ಶುಕ್ರವಾರ: ಸ್ವರ್ಣಾಂಬಿಕ ದೇವಿಯ ಆರಾಧನೆ

ಆಷಾಢ ಮಾಸದ ಮೊದಲನೇ ಶುಕ್ರವಾರ ಸ್ವರ್ಣಾಂಬಿಕ ದೇವಿಯನ್ನು ಆರಾಧಿಸಲಾಗುವುದು. ಇದು ಪಾರ್ವತಿಯ ಒಂದು ರೂಪವಾಗಿದೆ. ಸ್ವರ್ಣಾಂಬಿಕ ದೇವಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಐಶ್ವರ್ಯ ವೃದ್ಧಿಸುವುದು.

ಆಷಾಢ 2ನೇ ಶುಕ್ರವಾರ: ಕಾಳಿ ದೇವಿಯ ಆರಾಧನೆ

ಆಷಾಢ 2ನೇ ಶುಕ್ರವಾರ: ಕಾಳಿ ದೇವಿಯ ಆರಾಧನೆ

ಕಾಳಿ ಸ್ವರೂಪವನ್ನು ಆರಾಧಿಸುವುದರಿಂದ ಜ್ಞಾನ ಹೆಚ್ಚುವುದು, ಬುದ್ಧಿ ಶಕ್ತಿ ಹೆಚ್ಚುವುದು. ವಿದ್ಯಾರ್ಥಿಗಳು, ಅಧ್ಯಯನ ಮಾಡುವವರು ಒಳ್ಳೆಯ ಫಲ ಕಾಣಬಹುದು.

ಆಷಾಢ 3ನೇ ಶುಕ್ರವಾರ: ಕಾಳಿಂಕಾಂಬ ದೇವಿಯ ಆರಾಧನೆ

ಆಷಾಢ 3ನೇ ಶುಕ್ರವಾರ: ಕಾಳಿಂಕಾಂಬ ದೇವಿಯ ಆರಾಧನೆ

ಪಾರ್ವತಿ ದೇವಿಯ ಈ ಅವತಾರವನ್ನು ಆರಾಧಿಸುವುದರಿಂದ ದೇವಿಯು ಧೈರ್ಯ ಹಾಗೂ ಆರೋಗ್ಯ ನೀಡಿ ಕರುಣಿಸುತ್ತಾಳೆ.

ಆಷಾಢ 4ನೇ ಶುಕ್ರವಾರ: ಕಾಮಾಕ್ಷಿ ದೇವಿ ಆರಾಧನೆ ಹಾಗೂ ಲಕ್ಷ್ಮಿ ಪೂಜೆ

ಆಷಾಢ 4ನೇ ಶುಕ್ರವಾರ: ಕಾಮಾಕ್ಷಿ ದೇವಿ ಆರಾಧನೆ ಹಾಗೂ ಲಕ್ಷ್ಮಿ ಪೂಜೆ

ಶಿವ ಶಕ್ತಿಯ ಸ್ವರೂಪವಾದ ಕಾಮಾಕ್ಷಿ ದೇವಿಯನ್ನು ಆರಾಧಿಸಲಾಗುವುದು. ಇನ್ನು ಕೊನೆಯ ಆಷಾಢ ಶುಕ್ರವಾರದಂದು ಲಕ್ಷ್ಮಿಯನ್ನು ಕೂಡ ಆರಾಧನೆ ಮಾಡಲಾಗುವುದು. ಈ ದಿನ ಲಕ್ಷ್ಮಿಯು ನಮ್ಮ ಬೇಡಿಕೆಗಳನ್ನು ಆಲಿಸುತ್ತಾಳೆ, ಮಹಿಳೆಯರು ಭಕ್ತಿಯಿಂದ ಪೂಜೆ ಮಾಡಿ ಬೇಡಿಕೊಂಡರೆ ಅವರ ಇಷ್ಟಾರ್ಥಗಳು ನೆರವೇರುವುದು, ಕುಟುಂಬ ನೆಮ್ಮದಿ, ಸಂತೋಷ, ಐಶ್ಚರ್ಯ ಕರುಣಿಸುವಳು.

ಹೀಗೆ ಆಷಾಢ ಶುಕ್ರವಾರ ತುಂಬಾ ಪ್ರಮುಖವಾಗಿದ್ದು ಈ ದಿನ ವ್ರತ ಮಾಡುವವರು ದೇವಿ ಮೂರ್ತಿಯನ್ನು ಅಲಂಕರಿಸಿ, ಮಂತ್ರಗಳನ್ನು ಪಠಿಸಿ ಪೂಜೆ ಮಾಡುತ್ತಾರೆ, ನಂತರ ದೇವಿಗೆ ನೈವೇದ್ಯ ಅರ್ಪಿಸಿ, ಮುತ್ತೈದೆಯರನ್ನು ಕರೆದು ಅವರಿಗೆ ತಾಂಬೂಲ ನೀಡಲಾಗುವುದು.

English summary

Asadha Month Each Friday dedicated to these goddess

Asadha month each friday dedicated to these goddess, read on..........
Story first published: Thursday, July 15, 2021, 22:40 [IST]
X
Desktop Bottom Promotion