For Quick Alerts
ALLOW NOTIFICATIONS  
For Daily Alerts

ಚಾಣಕ್ಯ ನೀತಿ: ಇಂತಹ ಸ್ಥಳದಲ್ಲಿ ಜನರು ಎಂದಿಗೂ ವಾಸಿಸಬಾರದು!

|

ಚಾಣಕ್ಯ ಎನ್ನುವ ಹೆಸರೇ ಬುದ್ಧಿವಂತಿಕೆ ಎನ್ನುವುದನ್ನು ಸಂಕೇತಿಸುತ್ತದೆ. ಚಾಣಕ್ಯ ಎನ್ನುವ ಆ ದಿವ್ಯ ವ್ಯಕ್ತಿಯ ನೀತಿಗಳು ಹಾಗೂ ತತ್ವವು ಜೀವನದ ಕಡುಸತ್ಯವನ್ನು ತೆರೆದಿಡುವುದು. ಚಾಣಕ್ಯ ಬರೆದ ಉಲ್ಲೇಖ ಹಾಗೂ ಸಂಕಲನಗಳು ಜನರಿಗೆ ಸ್ಫೂರ್ತಿಯನ್ನು ನೀಡುವುದು. ಜೊತೆಗೆ ಜೀವನದ ಅರ್ಥವನ್ನು ತಿಳಿಸುವುದರ ಮೂಲಕ ವರ್ತನೆಯು ಹೇಗಿರಬೇಕು ಎನ್ನುವುದನ್ನು ಹೇಳಿಕೊಡುವುದು. ಕೆಲವೊಮ್ಮೆ ಜೀವನದಲ್ಲಿ ಬೇಸತ್ತಿರುವಾಗ ಅಥವಾ ಮನಸ್ಸು ಚಂಚಲತೆಯನ್ನು ಅನುಸರಿಸುತ್ತಿದ್ದರೆ ಚಾಣಕ್ಯನ ಆದರ್ಶ ಚಿಂತನೆಗಳನ್ನು ಒಮ್ಮೆ ನೆನೆದರೆ ಅಥವಾ ಓದಿದರೆ ಸಾಕು ಮನಸ್ಸಿಗೊಂದು ಬಗೆಯ ಸಾಂತ್ವನ ದೊರೆಯುವುದು. ನಿರಾಳತೆಯ ಚಿತ್ತವು ನಮ್ಮನ್ನು ಪುನಃ ಚೈತನ್ಯ ಶೀಲರನ್ನಾಗಿ ಮಾಡುವುದು.

ಶಿಕ್ಷಣ, ಕುಟುಂಬ, ಪ್ರೇಮ, ಜೀವನ, ವೃತ್ತಿ, ಸ್ನೇಹ, ಸಂಬಂಧ ಸೇರಿದಂತೆ ಎಲ್ಲಾ ಚಿಂತನೆಗಳಲ್ಲೂ ಪ್ರಾವಿಣ್ಯರು ಪ್ರಚಂಡ ಬುದ್ಧಿವಂತನೂ ಆಗಿದ್ದು, ಜೀವನಕ್ಕೆ ಬೆಳಕಿನ ಮಾರ್ಗದರ್ಶನವನ್ನು ನೀಡುತ್ತದೆ. ಕೆಲವೊಂದು ವಿಷಯದಲ್ಲಿ ನಾವು ಮೋಹ ಹಾಗೂ ಆಸೆಗೆ ಒಳಗಾಗುತ್ತೇವೆ. ಆ ಮೋಹ ಮತ್ತು ಆಸೆಯು ಜೀವನದ ಹಾದಿಯನ್ನೇ ತಪ್ಪಿಸಿಬಿಡುತ್ತವೆ ಎಂದು ಸಲಹೆ ನೀಡುವನು. ಚಾಣಕ್ಯ ನೀತಿಯ ಪ್ರಕಾರ ಜೀವನದಲ್ಲಿ ಸಾಕಷ್ಟು ಬಾರಿ ತಪ್ಪು ದಾರಿಯನ್ನು ನಾವು ತುಳಿದಿರುತ್ತೇವೆ. ಆ ದಾರಿಯಿಂದ ಹೊರ ಬರುವುದು ಅಥವಾ ಆ ದಾರಿಗೆ ಹೋಗುವ ಮೊದಲೇ ಹೇಗೆ ಎಚ್ಚೆತ್ತುಕೊಳ್ಳಬೇಕು ಎನ್ನುವುದನ್ನು ಸುಂದರವಾಗಿ ಹಾಗೂ ಸರಳ ರೀತಿಯಲ್ಲಿ ಹೇಳಿದ್ದಾನೆ.

ಸಂಬಂಧವನ್ನು ಬೆಸೆದುಕೊಳ್ಳುವುದು ಮನೆ

ಸಂಬಂಧವನ್ನು ಬೆಸೆದುಕೊಳ್ಳುವುದು ಮನೆ

ಮನೆ ಎನ್ನುವುದು ಮನುಷ್ಯನಿಗೊಂದು ಆಶ್ರಯ ತಾಣ.ಮನೆಯಲ್ಲಿ ಇರುವ ವ್ಯಕ್ತಿಗಳು ಹಾಗೂ ಅವರ ಅಭಿಪ್ರಾಯ ಚಿಂತನೆಗಳೆಲ್ಲವೂ ಹೊಂದಾಣಿಕೆ ಹಾಗೂ ಪ್ರೀತಿಯಿಂದ ಇದ್ದರೆ ಅದು ಜೀವನದಲ್ಲಿ ಸ್ವರ್ಗದ ಅನುಭವ ನೀಡುವುದು. ಜೀವನದಲ್ಲಿ ನಮ್ಮದು ನಮ್ಮವರು ಎನ್ನುವ ಸಂಬಂಧವನ್ನು ಬೆಸೆದು ಕೊಳ್ಳುವುದು ಮನೆ ಎನ್ನುವ ನಾಲ್ಕು ಗೋಡೆಯ ಮಧ್ಯದಲ್ಲಿ. ಜೊತೆಗೆ ಆ ಮನೆಯು ಯಾವ ಸ್ಥಳ? ಯಾವ ಊರು? ಯಾವ ದೇಶ? ಎನ್ನುವುದು ಸಹ ಪ್ರಮುಖವಾದ ಸಂಗತಿ ಯಾಗಿರುತ್ತದೆ ಎಂದು ಹೇಳುತ್ತಾನೆ. ಹೌದು, ವಾಸ ಮಾಡಲು ಯಾವುದು ಯೋಗ್ಯವಲ್ಲದ ಜಾಗ? ಎನ್ನುವುದರ ಬಗ್ಗೆ ಚಾಣಕ್ಯನು ಸಾಕಷ್ಟು ಚಿಂತನೆಗಳನ್ನು ಮತ್ತು ಜ್ಞಾನವನ್ನು ಹೊಂದಿದ್ದನು. ಅದರ ಕುರಿತು ಜನರಿಗೂ ತಿಳಿ ಹೇಳಿದ್ದಾನೆ. ಹಾಗಾದರೆ ವಾಸದ ಬಗ್ಗೆ ಚಾಣಕ್ಯನ ನೀತಿ ಏನನ್ನು ಸಾರುವುದು? ಎನ್ನುವುದನ್ನು ಈ ಲೇಖನದ ಮುಂದಿನ ಭಾಗ ಸಂಕ್ಷಿಪ್ತವಾಗಿ ಪರಿಚಯಿಸುವುದು.

 ಚಾಣಕ್ಯ ಬಗ್ಗೆ ಕಿರು ಪರಿಚಯ

ಚಾಣಕ್ಯ ಬಗ್ಗೆ ಕಿರು ಪರಿಚಯ

ಭಾರತದ ಬುದ್ಧಿವಂತ ಎಂದಾಕ್ಷಣ ಹೆಚ್ಚಿನವರ ಮನದಲ್ಲಿ ಮೂಡುವ ಮೊದಲ ಚಿತ್ರವೆಂದರೆ ಚಾಣಕ್ಯನದ್ದು. ಆ ಕಾಲ ದಲ್ಲಿಯೇ ತನ್ನ ವಿಚಾರಗಳಿಂದ ಖ್ಯಾತನಾಗಿದ್ದ ಚಾಣಕ್ಯ ಭಾರತ ಕಂಡ ಓರ್ವ ಅಪ್ರತಿಮ ಅರ್ಥಶಾಸ್ತ್ರಜ್ಞ. ಚಾಣಕ್ಯನ ನೀತಿಗಳು ಎಂದೇ ಜನ ಜನಿತವಾಗಿರುವ ಈತನ ಮಾತುಗಳು ಸರ್ವಕಾಲಕ್ಕೂ ಸಲ್ಲುವಂತಹದ್ದಾಗಿವೆ. ಚಂದ್ರಗುಪ್ತ ಮೌರ್ಯನ ಖ್ಯಾತಿಯಲ್ಲಿ ಚಾಣಕ್ಯನ ವಿಚಾರಧಾರೆ ಇರುವ ಕಾರಣವೇ ಚಂದ್ರಗುಪ್ತ ಮೌರ್ಯನ ಹೆಸರೂ ಇತಿಹಾಸದಲ್ಲಿ ಪ್ರಖರಗೊಂಡಿದೆ. ಮೌರ್ಯ ಸಾಮ್ರಾಜ್ಯ ಕಟ್ಟಲು ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಚಂದ್ರಗುಪ್ತನನ್ನು ಗಾದಿಯ ಮೇಲೆ ಕೂರಿಸಲು ಚಾಣಕ್ಯ ಹೆಣೆದ ತಂತ್ರ ಮತ್ತು ದೂರದೃಷ್ಟಿ ಎಂದಿಗೂ ಸಲ್ಲುವಂತಹದ್ದಾಗಿದೆ. ಚಂದ್ರಗುಪ್ತನ ಕಾಲದಲ್ಲಿ ಆತನ ಸಾಮ್ರಾಜ್ಯ ನಾಲ್ಕೂ ಕಡೆ ಆಗಾಧವಾಗಿ ವಿಸ್ತರಿಸಲು ಚಾಣಕ್ಯಕ ಬುದ್ಧಿ ಮತ್ತೆಯೇ ಪ್ರಮುಖ ಕಾರಣವಾಗಿದೆ.

ಯಾಸ್ಮಿನ್ ದೇಶೆ ನಾ ಸಮ್ಮಾನೋ

ಯಾಸ್ಮಿನ್ ದೇಶೆ ನಾ ಸಮ್ಮಾನೋ

ಎಲ್ಲಿ ವ್ಯಕ್ತಿಗೆ ಗೌರವ ಇರುವುದಿಲ್ಲವೋ ಆ ದೇಶದಲ್ಲಿ ವ್ಯಕ್ತಿ ನೆಲೆಸುವುದು ಉತ್ತಮವಲ್ಲ. ವ್ಯಕ್ತಿ ವಾಸಿಸುತ್ತಿರುವ ಸ್ಥಳದಲ್ಲಿ ಅಥವಾ ದೇಶದಲ್ಲಿ ಗೌರವ ಅಥವಾ ಪೂಜ್ಯತೆ ದೊರೆಯದೆ ಇದ್ದರೆ ಅಲ್ಲಿ ಅವನು ವೃತ್ತಿಯ ಜೀವನ ಅಥವಾ ವೈಯಕ್ತಿಕ ಜೀವನ ನಡೆಸಲು ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುವುದು. ಅಂತಹ ಸ್ಥಳದಲ್ಲಿ ವ್ಯಕ್ತಿ ವೃತ್ತಿ ಜೀವನವನ್ನು ನಿರ್ವಹಿಸಿದರೂ ಅವನ ಬಗ್ಗೆ ಯಾರೂ ನಂಬಿಕೆ ಹೊಂದಿರುವುದಿಲ್ಲ. ಜೊತೆಗೆ ಅವನೊಂದಿಗೆ ವ್ಯವಹಾರವನ್ನು ಮುಂದುವರಿಸುವುದಿಲ್ಲ ಎಂದು ಹೇಳಲಾಗುವುದು. ಅಂತಹ ಸ್ಥಳದಲ್ಲಿ ಸ್ಥಳೀಯರು ನೀಡುವ ಅಗೌರವದಿಂದ ವ್ಯಕ್ತಿಯ ವಿಶ್ವಾಸ ದುರ್ಬಲಗೊಳ್ಳುತ್ತದೆ. ಅದು ಅವನ ವೈಯಕ್ತಿಕ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುವುದು.

ನಾ ವೃತ್ತೀರ್ಣ: ಆದಾಯ ಇಲ್ಲದೇ ಇರುವಲ್ಲಿ

ನಾ ವೃತ್ತೀರ್ಣ: ಆದಾಯ ಇಲ್ಲದೇ ಇರುವಲ್ಲಿ

ವ್ಯಕ್ತಿ ತಾನು ವಾಸಿಸುವ ಸ್ಥಳದಲ್ಲಿ ಉತ್ತಮ ಆದಾಯವನ್ನು ಹೊಂದಿರಬೇಕು. ಯಾವ ಸ್ಥಳದಲ್ಲಿ ವ್ಯಕ್ತಿ ಆದಾಯವನ್ನು ಹೊಂದಿರುವುದಿಲ್ಲವೋ ಅಂತಹ ಸ್ಥಳದಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಆದಾಯದ ಮೂಲ ಇಲ್ಲದ ಪ್ರದೇಶದಲ್ಲಿ ಎಂದಿಗೂ ವಾಸಿಸಬಾರದು. ಅಂತಹ ಸ್ಥಳದಲ್ಲಿ ಬದುಕುವುದು ಅಥವಾ ಜೀವನ ನಡೆಸುವುದು ಬಹಳ ಕಷ್ಟದ ಸಂಗತಿ ಯಾಗುವುದು. ಆದಾಯ ಇಲ್ಲದ ಸ್ಥಳದಲ್ಲಿ ಉದ್ಯೋಗವು ಇರುವುದಿಲ್ಲ, ಗೌರವವೂ ದೊರೆಯುವುದಿಲ್ಲ, ಜೊತೆಗೆ ಸ್ವಂತ ಆಹಾರವನ್ನು ಪಡೆಯಲು ಸಹ ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾನೆ.

Most Read: ಹೊಸತನ್ನು ಪ್ರಾರಂಭಿಸುವ ಮುನ್ನ 'ಚಾಣಕ್ಯ ನೀತಿ' ಪಾಲಿಸಿ....

ನಾ ಚಾ ಬಾಂಧವ: ಬಂಧುಗಳು ಹಾಗೂ ಸ್ನೇಹಿತರು ಇಲ್ಲದೆ ಇರುವಲ್ಲಿ

ನಾ ಚಾ ಬಾಂಧವ: ಬಂಧುಗಳು ಹಾಗೂ ಸ್ನೇಹಿತರು ಇಲ್ಲದೆ ಇರುವಲ್ಲಿ

ನಾವು ಇರುವ ಸ್ಥಳದಲ್ಲಿ ನಮ್ಮವರು ಎನ್ನುವ ಬಂಧುಗಳು ಹಾಗೂ ಸ್ನೇಹಿತರು ಇರಬೇಕು. ಯಾವ ಸ್ಥಳದಲ್ಲಿ ನಮ್ಮವರು ಎನ್ನುವ ಬಂಧುಗಳು ಅಥವಾ ಸ್ನೇಹಿತರು ಇರುವುದಿಲ್ಲವೋ ಅಂತಹ ಸ್ಥಳದಲ್ಲಿ ಅಗತ್ಯಕ್ಕೆ ಬೇಕಾದಾಗ ಯಾವ ವ್ಯಕ್ತಿಯ ಸಹಾಯವೂ ದೊರೆಯದು. ನಮ್ಮವರು ಅಥವಾ ಸ್ನೇಹಿತರು ಇಲ್ಲದ ಜೀವನದಲ್ಲಿ ಸಂತೋಷವು ದೊರೆಯದು. ಜೊತೆಗೆ ಬೇಕೆನಿಸಿದಾಗ ಯಾರ ಸಹಾಯವೂ ದೊರೆಯದೆ ಕಷ್ಟಕ್ಕೆ ಒಳಗಾಗಬೇಕಾಗುವುದು.

ನಾ ಚಾ ವಿದ್ಯಾ ಗಮೌಪಸ್ತಿ

ನಾ ಚಾ ವಿದ್ಯಾ ಗಮೌಪಸ್ತಿ

ಎಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿ ವಾಸವು ಅನುಚಿತವಾದದ್ದು. ಮಾಹಿತಿಗಳು ಅಥವಾ ಅಗತ್ಯ ಸಂಗತಿಗಳ ಸಮಾಚಾರ ದೊರೆಯುವುದಿಲ್ಲವೋ ಅಂತಹ ಸ್ತಳದಲ್ಲಿ ವಾಸ ಮಾಡುವುದು ಯೋಗ್ಯವಲ್ಲ. ಜೀವನ ಸಾಗುತ್ತಿದ್ದಂತೆ ನಿತ್ಯವೂ ಹೊಸ ಮಾಹಿತಿ ಹಾಗೂ ಕಲಿಕೆಯು ನಿರಂತರವಾಗಿರಬೇಕು. ಯಾವ ಸ್ಥಳದಲ್ಲಿ ಅವುಗಳೆಲ್ಲಾ ಲಭ್ಯವಾಗುವುದಿಲ್ಲವೋ ಅಂತಹ ಸ್ಥಳದಲ್ಲಿ ವಾಸಮಾಡಬಾರದು ಎಂದು ಚಾಣಕ್ಯ ಹೇಳಿದ್ದಾನೆ. ಅಂತಹ ಸ್ಥಳದಲ್ಲಿ ವಾಸಿಸುವುದರಿಂದ ಜೀವನವು ಅರ್ಥವಿಲ್ಲದೆ ಹೋಗುವುದು. ಹಾಗಾಗಿಯೇ ಜೀವನ ನಡೆಸಲು ಈ ನಾಲ್ಕು ಪ್ರಮುಖ ಸಂಗತಿಗಳು ಅತ್ಯವಶ್ಯಕ. ಎಲ್ಲಿ ಈ ಎಲ್ಲಾ ವಿಷಯದಲ್ಲಿ ಅನುಕೂಲತೆ ಇದೆಯೋ ಅಲ್ಲಿ ಉತ್ತಮ ಜೀವನ ಹಾಗೂ ನೆಮ್ಮದಿ ದೊರೆಯುವುದು. ಅಗತ್ಯ ಸಂಗತಿಗಳು ಇಲ್ಲದಂತಹ ಸ್ಥಳದಲ್ಲಿ ಎಂದಿಗೂ ವಾಸಿಸಬಾರದು ಎಂದು ಚಾಣಕ್ಯ ಹೇಳಿದ್ದಾನೆ.

English summary

As per the Chanakya Niti- People Should Never Stay In These Places

Chanakya has been a great source of inspiration for his followers always. His quotes written down keep on providing all the needed help at critical times to many. The compilation of guidelines written down for all age groups and sections of the society showcase the pros and cons of various options available to a person under different situations.
Story first published: Saturday, February 2, 2019, 17:14 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X