For Quick Alerts
ALLOW NOTIFICATIONS  
For Daily Alerts

ಸರ್ಪ ದೋಷ ಸಹಿತ ಎಲ್ಲಾ ಸಮಸ್ಯೆಗಳನ್ನು ಕರಗಿಸುತ್ತದೆ 'ಕರ್ಪೂರ'!

By Hemanth Amin
|
ಸರ್ಪ ದೋಷಕ್ಕೆ ಕರ್ಪೂರದ ಪರಿಹಾರ ಹಾಗು ಅದರಿಂದ ಆಗುವ ಪ್ರಯೋಜನಗಳು

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರ ಪೂಜೆಗೆ ಪ್ರತಿನಿತ್ಯವು ಭಜನೆ, ಆರತಿ ಹಾಗೂ ಮಂತ್ರಪಠಣ ನಡೆಯುತ್ತಲಿರುವುದು. ಇದಕ್ಕಾಗಿ ಹಲವಾರು ರೀತಿಯ ಪವಿತ್ರ ವಸ್ತುಗಳನ್ನು ಪೂಜೆಯ ವೇಳೆ ಬಳಸಿಕೊಳ್ಳುವರು. ಪೂಜಾ ಕಾರ್ಯಗಳಿಗೆ ಬಳಸುವಂತಹ ಪ್ರತಿಯೊಂದು ವಸ್ತುವೂ ತನ್ನದೇ ಆಗಿರುವ ಪಾವಿತ್ರ್ಯತೆ ಹೊಂದಿದೆ ಎಂದು ಹೇಳಲಾಗುತ್ತದೆ.

ನಾವು ಶ್ರೀಗಂಧದ ಲೇಪವನ್ನು ಹಣೆಗೆ ಹಚ್ಚಿಕೊಂಡಾಗ ನಮಗೆ ತುಂಬಾ ಶಾಂತ ಹಾಗೂ ಆರಾಮದ ಭಾವನೆ ಯಾಗುವುದು. ಇದರಿಂದಾಗಿ ನಾವು ಪೂಜೆಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದು. ಗಂಟೆ, ಜಾಗಟೆ ಮತ್ತು ಶಂಖನಾದವು ನಕಾರಾತ್ಮಕ ಶಕ್ತಿಯನ್ನು ದೂರವಿರುವುದು. ಅದೇ ರೀತಿಯಲ್ಲಿ ಕರ್ಪೂರವು ತುಂಬಾ ಪ್ರಾಮುಖ್ಯವಾದದ್ದು. ಕರ್ಪೂರವನ್ನು ತುಂಬಾ ಪವಿತ್ರ ವಸ್ತುವಿನಂತೆ ಬಳಸುವುದು ಹೇಗೆ ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಹಿಂದುಗಳಲ್ಲಿ ಕರ್ಪೂರದ ಪ್ರಾಮುಖ್ಯತೆ

ನಕಾರಾತ್ಮಕ ಶಕ್ತಿ ಒದ್ದೋಡಿಸುವುದು

ನಕಾರಾತ್ಮಕ ಶಕ್ತಿ ಒದ್ದೋಡಿಸುವುದು

ಪೂಜೆಯ ಬಳಿಕ ಆರತಿ ವೇಳೆ ಕರ್ಪೂರವನ್ನು ಹಚ್ಚಿಡಲಾಗುತ್ತದೆ. ಇದು ಎಲ್ಲಾ ನಕಾರಾತ್ಮಕ ಶಕ್ತಿ ಮತ್ತು ಅಶುದ್ಧತೆಯನ್ನು ವಾತಾವರಣದಿಂದ ದೂರ ಮಾಡುವುದೆಂದು ನಂಬಲಾಗಿದೆ.

ಕಾಲಸರ್ಪದೋಷ ಮತ್ತು ಪಿತೃದೋಷಕ್ಕೆ ಪರಿಹಾರ

ಕಾಲಸರ್ಪದೋಷ ಮತ್ತು ಪಿತೃದೋಷಕ್ಕೆ ಪರಿಹಾರ

ಜನ್ಮಕುಂಡಲಿಯಲ್ಲಿ ಗೃಹಗಳು ಸರಿಯಾದ ಸ್ಥಾನದಲ್ಲಿ ಇಲ್ಲದೆ ಇರುವ ಕಾರಣದಿಂದಾಗಿ ಕೆಲವರಿಗೆ ಕಾಲಸರ್ಪದೋಷ, ಪಿತೃ ದೊಷ ಇತ್ಯಾದಿ ಕಂಡುಬರುವುದು. ಇದಕ್ಕೆ ಕಾರಣವಾಗಿರುವಂತಹ ಗ್ರಹಗಳನ್ನು ಸಮಾಧಾನಪಡಿಸಲು ಕರ್ಪೂರವು ನೆರವಾಗುವುದು. ಮನೆಯಲ್ಲಿ ನೀವು ಬೆಣ್ಣೆಯಲ್ಲಿ ಮೂರು ಸಲ ಕರ್ಪೂರವನ್ನು ಅದ್ದಿಕೊಂಡು ಹಚ್ಚಿಕೊಳ್ಳಿ. ಇದು ನಕಾರಾತ್ಮಕ ಪರಿಣಾಮ ಕಡಿಮೆ ಮಾಡುವುದು. ಒಂದು ತುಂಡು ಕರ್ಪೂರವನ್ನು ಶೌಚಾಲಯದಲ್ಲಿ ಇಟ್ಟರೆ ಇದು ತುಂಬಾ ಪರಿಣಾಮಕಾರಿ.

ಸರ್ಪ ದೋಷ ನಿವಾರಣೆಗೆ ಸೂಕ್ತ ಪರಿಹಾರ

ಸರ್ಪ ದೋಷ ನಿವಾರಣೆಗೆ ಸೂಕ್ತ ಪರಿಹಾರ

ಸರ್ಪ ದೋಷ ನಿವಾರಣೆಗೆ ಸೂಕ್ತ ಪರಿಹಾರ ಕ್ರಮವೆಂದರೆ ಸರ್ಪಶಾಂತಿಯನ್ನು ಮಾಡಿಸುವುದು. ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪದೋಷಕ್ಕೆ ಸಂಬಂಧಿಸಿದ ಸರ್ಪ ಸಂಸ್ಕಾರ, ಅಶ್ಲೇಷ ಬಲಿ, ನಾಗ ದೇವರ ಪ್ರತಿಷ್ಠಾಪನಾ ಕೆಲಸ ಸೇರಿದಂತೆ ಎಲ್ಲಾ ಬಗೆಯ ಪರಿಹಾರೋಪಾಯಗಳನ್ನು ಮಾಡಿಕೊಡುತ್ತಾರೆ. ನಾಗದೇವರ ಪ್ರತಿಷ್ಠಾನವನ್ನು ಪವಿತ್ರ ನಾಗ/ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿರ್ವಹಿಸಬಹುದು. ಅದಕ್ಕಾಗಿ ಅಲ್ಲಿರುವ ಅರ್ಚಕರು ಹೇಳುವ ಮಾರ್ಗವನ್ನು ಅನುಸರಿಸಬೇಕಷ್ಟೆ. ಕರ್ನಾಟಕ ರಾಜ್ಯದಲ್ಲಿರುವ ಘಾಟಿ ಸುಬ್ರಹ್ಮಣ್ಯದಲ್ಲೂ ಸರ್ಪದೋಷಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಗಳನ್ನು ಮಾಡಿಸಿಕೊಡುತ್ತಾರೆ. ಅಲ್ಲಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ಹಾಗೂ ವಿಶೇಷ ಹರಕೆಯನ್ನು ನಡೆಸಿಕೊಡಬಹುದು. ಮಂಗಳೂರಿನ ಸಮೀಪವಿರುವ ಕಡುಪು ದೇಗುಲ. ಇಲ್ಲಿರುವ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವು ಕ್ರ್ರಿ.ಶ ಕಾಲದಿಂದಲೂ ಇರುವ ಪುರಾತನ ದೇಗುಲ ಎಂಬ ನಂಬಿಕೆಯಿದೆ. ತಿರುತಣಿ, ಪಳನಿ, ತಿರುಚೆಂಡೂರ್, ತಿರುಪಾರಕುಂಡ್ರಮ್, ಸ್ವಾಮಿ ಮಲೈ, ಪಜಮಿದಿರ್ಚೋಲೈ, ತಿರುನಾಗೇಶ್ವರಂ, ನಾಗರ್ಕೋಯಿಲ್ ತಮಿಳುನಾಡಿನಲ್ಲಿದೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿ. ಈ ಪವಿತ್ರ ಕ್ಷೇತ್ರದಲ್ಲಿ ನಾಗ ದೇವತೆಗೆ ಸೂಕ್ತ ಪೂಜೆ ಪರಿಹಾರ ಕಾರ್ಯಗಳನ್ನು ಮಾಡಿಸಬಹುದು.

ಸರ್ಪ ದೋಷ ನಿವಾರಣ ಮಂತ್ರವನ್ನು ದಿನಾ ಪಠಿಸಿ

ಸರ್ಪ ದೋಷ ನಿವಾರಣ ಮಂತ್ರವನ್ನು ದಿನಾ ಪಠಿಸಿ

ಸರ್ಪ ದೋಷ ಇದ್ದವರು ನಿತ್ಯವೂ ಈ ಕೆಳಗಿನ ಶ್ಲೋಕವನ್ನು 108 ಬಾರಿ ಹೇಳಬೇಕು. ಆಗ ದೋಷ ಮುಕ್ತರಾಗಬಹುದು. "ಅಂತಾವೋ ವಾಸುಕೀ ಸೇಷಾಃ ಪದ್ಮನಾಭ ಅಸ್ಕಾ ಕಂಬಲಃ

ಸಂಖಾಪಾಲೋ ದಾರಾರಾಯಸ್ತ್ರಾಃ ತಕ್ಷಕ ಕಾಲೀಯಾಸ್ತಥಾಃ

ಯೇತಾನೀ ನವನಾಮಾನಿ ನಾಗಾನಾಮ್ಕ ಮಹಾತ್ಮನಾಮ್

ಸಾಯಂಕಾಲೇ ಪಾಥೆಟ್ ನಿತ್ಯಂ ಪ್ರಾತಕ್ಕಾಲೇ ವಿಶೇಷಿತಃ

ತಸ್ಯ ವಿಶಾಭಯಂ ನಾಸ್ತಿ ಸರ್ವತ್ರ ವಿಜಯ ಭವೇತ್"

ದೇವರ ಆಶೀರ್ವಾದಕ್ಕಾಗಿ

ದೇವರ ಆಶೀರ್ವಾದಕ್ಕಾಗಿ

ಸೂರ್ಯಾಸ್ತದ ವೇಳೆ ಕರ್ಪೂರವನ್ನು ಹಚ್ಚುವುದರಿಂದ ದೇವರನ್ನು ಓಲೈಸಬಹುದು ಎಂದು ನಂಬಲಾಗಿದೆ. ಇದರಿಂದ ಭಕ್ತರಿಗೆ ಸದ್ಗುಣ ಹಾಗು ಸಂಪತ್ತು ಪ್ರಾಪ್ತಿಯಾಗುವುದು. ಸಂಜೆ ಪ್ರಾರ್ಥನೆ ವೇಳೆ ಕರ್ಪೂರ ಹಚ್ಚಿಡಬೇಕು. ಇದರಿಂದ ಮನೆಯಲ್ಲಿ ದಿನವಿಡಿ ಬಂದಿರುವ ನಕಾರಾತ್ಮಕ ಶಕ್ತಿಗಳು ದೂರವಾಗುವುದು ಮತ್ತು ಮನೆಯಲ್ಲಿ ಶಾಂತಿ ನೆಲೆಸುವುದು

ಅಪಘಾತ ಕಡಿಮೆ ಮಾಡುವುದು

ಅಪಘಾತ ಕಡಿಮೆ ಮಾಡುವುದು

ಕರ್ಪೂರ ಹಚ್ಚಿಡುವುದರಿಂದ ಅಪಘಾತದಿಂದ ಬರುವಂತಹ ಅನಿರೀಕ್ಷಿತ ಸಾವನ್ನು ತಡೆಯಬಹುದು. ಪ್ರತಿನಿತ್ಯ ಹನುಮಾನ್ ಚಾಲೀಸ್ ಹೇಳಿ. ಬಳಿಕ ಕರ್ಪೂರ ಹಚ್ಚಿಡಿ. ಇದು ಸಾಧ್ಯವಿಲ್ಲವೆಂದಾದರೆ ಮಲಗುವ ಮೊದಲು ನೀವು ಕರ್ಪೂರ ಹಚ್ಚಿಡಿ. ಇದರಿಂದ ಅಪಘಾತದ ಸಾಧ್ಯತೆಯು ತುಂಬಾ ಕಡಿಮೆಯಾಗುವುದು.

ದುಸ್ವಪ್ನಗಳು ಬರದಂತೆ ತಡೆಯುವುದು

ದುಸ್ವಪ್ನಗಳು ಬರದಂತೆ ತಡೆಯುವುದು

ನಿಮಗೆ ಪದೇ ಪದೇ ದುಸ್ವಪ್ನಗಳು ಬರುತ್ತಲಿದ್ದರೆ ಆಗ ಕರ್ಪೂರ ಹಚ್ಚಿಡುವುದರಿಂದ ಇದನ್ನು ದೂರ ಮಾಡಬಹುದು. ಕರ್ಪೂರವು ವಾತಾವರಣದಲ್ಲಿರುವ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಿವಾರಿಸುವುದು.

ಕರ್ಪೂರದಿಂದ ಶ್ರೀಮಂತರಾಗಿ!

ಕರ್ಪೂರದಿಂದ ಶ್ರೀಮಂತರಾಗಿ!

ಇದೆಲ್ಲದರ ಹೊರತಾಗಿ ಕರ್ಪೂರದಿಂದ ನೀವು ಶ್ರೀಮಂತರಾಗಬಹುದು. ಒಂದು ಗುಲಾಬಿ ತೆಗೆದುಕೊಳ್ಳಿ ಮತ್ತು ಇದರಲ್ಲಿ ಒಂದು ಸಣ್ಣ ಕರ್ಪೂರ ಹಚ್ಚಿಡಿ. ಈ ಹೂವನ್ನು ದುರ್ಗಾ ದೇವಿಯ ಪಾದಕ್ಕೆ ಅರ್ಪಿಸಿ. 43 ದಿನಗಳ ಕಾಲ ಪ್ರತಿನಿತ್ಯ ಹೀಗೆ ಮಾಡಿದರೆ ಸಂಪತ್ತು ಪ್ರಾಪ್ತಿಯಾಗುವುದು. ದೇವಿಗೆ ಸಂಬಂಧಿಸಿದ್ದಾಗಿರುವ ಕಾರಣದಿಂದ ಇದನ್ನು ನವರಾತ್ರಿ ವೇಳೆ ನೀವು ಮಾಡಬಹುದು.

ವಾಸ್ತುದೋಷ ನಿವಾರಣೆ

ವಾಸ್ತುದೋಷ ನಿವಾರಣೆ

ಮನೆ ಅಥವಾ ಕಟ್ಟಡವನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡದೆ ಇದ್ದರೆ ಆಗ ನಿಮಗೆ ವೈಯಕ್ತಿಕ ಹಾಗೂ ವೃತ್ತಿಪರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದನ್ನು ವಾಸ್ತುದೋಷವೆಂದು ಕರೆಯುವರು. ವಾಸ್ತು ಪ್ರಕಾರ ಸರಿಯಾಗಿ ಕಟ್ಟದೆ ಇರುವ ಕೋಣೆಯಲ್ಲಿ ಕರ್ಪೂರವನ್ನಿಟ್ಟರೆ ಆಗ ವಾಸ್ತು ದೋಷವು ನಿವಾರಣೆಯಾಗುವುದು.

ಜನ್ಮ ಕುಂಡಲಿಯಲ್ಲಿರುವ ಇತರ ದೋಷಗಳ ನಿವಾರಣೆ ಮಾಡುವುದು

ಜನ್ಮ ಕುಂಡಲಿಯಲ್ಲಿರುವ ಇತರ ದೋಷಗಳ ನಿವಾರಣೆ ಮಾಡುವುದು

ನೀವು ಸ್ನಾನ ಮಾಡುವಾಗ ಕರ್ಪೂರ ತೈಲಕ್ಕೆ ಸ್ವಲ್ಪ ಮಲ್ಲಿಗೆ ಎಣ್ಣೆ ಹಾಕಿಕೊಂಡ ನೀರನ್ನು ಸ್ನಾನ ಮಾಡಿದರೆ ತುಂಬಾ ಲಾಭಕಾರಿ. ಶನಿವಾರದಂದು ಈ ರೀತಿ ನೀವು ಸ್ನಾನ ಮಾಡಿದರೆ ಆಗ ರಾಹು, ಕೇತು ಮತ್ತು ಶನಿದೋಷವು ನಿವಾರಣೆಯಾಗುವುದು.

ಸಂಬಂಧ ಸುಧಾರಣೆಗೆ ಕರ್ಪೂರ ನೆರವಾಗುವುದು

ಸಂಬಂಧ ಸುಧಾರಣೆಗೆ ಕರ್ಪೂರ ನೆರವಾಗುವುದು

ಕೋಣೆಯ ಒಂದು ಮೂಲೆಯಲ್ಲಿ ಕರ್ಪೂರದ ಎರಡು ತುಂಡುಗಳನ್ನು ಇಟ್ಟುಕೊಂಡರೆ ಆಗ ದಂಪತಿಯ ಸಂಬಂಧವು ಸೌಹಾರ್ದಯುತವಾಗಿರುವುದು. ವಾಗ್ವಾದ ಮತ್ತು ತಪ್ಪು ತಿಳುವಳಿಕೆಯನ್ನು ಈ ತಂತ್ರದಿಂದ ನಿವಾರಣೆ ಮಾಡಬಹುದು.

ಅತಿಯಾಗಿ ಖರ್ಚಾಗುವುದನ್ನು ತಡೆಯುವುದು

ಅತಿಯಾಗಿ ಖರ್ಚಾಗುವುದನ್ನು ತಡೆಯುವುದು

ಜನ್ಮ ಕುಂಡಲಿಯಲ್ಲಿ ಗ್ರಹಗತಿಗಳ ದೋಷದಿಂದಾಗಿ ಕೆಲವು ವ್ಯಕ್ತಿಗಳ ಜೀವನದಲ್ಲಿ ಖರ್ಚು ಎನ್ನುವುದು ಅತಿಯಾಗಿರುವುದು. ಇದರಿಂದ ಸಂಪತ್ತು ಕರಗುತ್ತಾ ಹೋಗುವುದು. ಇದಕ್ಕೆ ಪರಿಹಾರವೆಂದರೆ ರಾತ್ರಿ ಊಟವಾದ ಬಳಿಕ ಅಡುಗೆ ಕೋಣೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಕರ್ಪೂರ ಮತ್ತು ಲವಂಗ ಸುಡಬೇಕು. ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಇದನ್ನು ಮಾಡಬೇಕು.

English summary

As Per Astrology These Are The Benefits Of Camphor

The daily worship that the Hindus perform includes a number of sacred items. It is believed that each of these has a religious significance in Hinduism. For example, the sandalwood paste that is worn as a tilak on the forehead keeps the wearer calm and relaxed, due to which he is able to concentrate well during the puja. Similarly, the sound and the vibrations of the bell keep negative energy at bay. Camphor, too, is one amongst these items. Today, we have brought to you the information about the various ways that camphor is used as a sacred item.
X
Desktop Bottom Promotion