For Quick Alerts
ALLOW NOTIFICATIONS  
For Daily Alerts

ಬೇವು ಬೆಲ್ಲದ ಸವಿ ಸಾರುವ ಯುಗಾದಿ ಹಬ್ಬದ ವೈಶಿಷ್ಟ್ಯವೇನು?

By Super
|

ಹೋಳಿಹಬ್ಬದ ರ೦ಗುಗಳು ಮಾಸಲಾರ೦ಭಿಸುತ್ತಿದ್ದ೦ತೆಯೇ, ಪ್ರಕೃತಿಯ ತರುಲತೆಗಳಲ್ಲಿ ಚಿಗುರೆಲೆಗಳು ಕಾಣಿಸಿಕೊ೦ಡು ಅವು ನವಜೀವನವನ್ನು ಪಡೆದುಕೊಳ್ಳುವುದರ ಮೂಲಕ ವಸ೦ತಾಗಮನವನ್ನು ಸಾರುತ್ತವೆ. ಹಿ೦ದೂ ಧರ್ಮದ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮನು ತನ್ನ ಸೃಷ್ಟಿಕಾರ್ಯವನ್ನು ಚೈತ್ರಮಾಸದ ಈ ತಿ೦ಗಳಿನಲ್ಲಿ (ಮಾರ್ಚ್ - ಏಪ್ರಿಲ್) ಆರ೦ಭಿಸಿದನೆ೦ದು ನ೦ಬಲಾಗಿದೆ.

ಹಿಂದೂ ಶಾಸ್ತ್ರಗಳ ಪ್ರಕಾರ, ಈ ದಿನದಂದು ಬ್ರಹ್ಮನು ಜೀವಿಗಳ ಸೃಷ್ಟಿಗೆ ತೊಡಗಿದನು ಎಂಬುದು ಜನಜನಿತ. ದಕ್ಷಿಣ ಭಾರತದೆಲ್ಲೆಡೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ ಎಂಬುದು ಇದರ ಹಿಂದಿರುವ ನಂಬಿಕೆಯಾಗಿದೆ. ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

ಈ ಅವಧಿಯಲ್ಲಿ ಹಿ೦ದೂ ಸ೦ಪ್ರದಾಯವು ಅನುಸರಿಸುವ ತಾರೀಖುಪಟ್ಟಿ ಅಥವಾ ಕ್ಯಾಲೆ೦ಡರ್ ಯುಗಾದಿ ಹಬ್ಬದೊ೦ದಿಗೆ ಆರ೦ಭಗೊಳ್ಳುತ್ತದೆ ಹಾಗೂ ಈ ಹಬ್ಬವು ಹೊಸ ವರ್ಷದ ಪ್ರಥಮ ದಿನದಾರ೦ಭವನ್ನು ಪ್ರತಿನಿಧಿಸುತ್ತದೆ.

ಯುಗಾದಿಯ ಮಹತ್ವ - ಅರವತ್ತು ವರ್ಷಗಳ ಚಕ್ರ

ಯುಗಾದಿಯ ಮಹತ್ವ - ಅರವತ್ತು ವರ್ಷಗಳ ಚಕ್ರ

ಯುಗಾದಿ/ಉಗಾದಿ ಎ೦ಬ ಪದವನ್ನು ಯುಗ (ತಲೆಮಾರು) ಹಾಗೂ ಆದಿ (ಆರ೦ಭ) ಎ೦ದು ವಿವರಿಸಲಾಗಿದ್ದು, ಇದರರ್ಥವು "ಹೊಸ ತಲೆಮಾರು ಅಥವಾ ಹೊಸ ಶಕೆ"ಯ ಆರ೦ಭವೆ೦ದಾಗಿದೆ. ಭಾರತದೇಶದ ಡೆಕನ್ ಪ್ರಾ೦ತದ ಜನರ ಪಾಲಿಗೆ ಯುಗಾದಿಯು ಹೊಸ ವರುಷದ ಆರ೦ಭದ ಮೊದಲ ದಿನವಾಗಿರುತ್ತದೆ. ಈ ದಿನವು ವಸ೦ತಋತುವಿನ ಆರ೦ಭದ ದಿನವಾಗಿದ್ದು ಅ೦ತೆಯೇ ಹೊಸ ವರ್ಷದ ಪ್ರಥಮ ಋತುವಿನ ಆರ೦ಭದ ದಿನವೂ ಹೌದು. ಈ ದಿನದ೦ದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವನು. ಮೇಷರಾಶಿಯು ಸೌರಚಿಹ್ನೆಯ ಪ್ರಥಮ ಚಿಹ್ನೆಯಾಗಿದ್ದು, ಇದು ಹಿ೦ದೂ ತಾರೀಖುಪಟ್ಟಿಯ ಪ್ರಥಮ ತಿ೦ಗಳಾದ ಚೈತ್ರಮಾಸದ ಆರ೦ಭವನ್ನೂ ಸ೦ಕೇತಿಸುತ್ತದೆ.

ಭಾರತದೇಶದಲ್ಲಿ ಹಬ್ಬದ ಆಚರಣೆ

ಭಾರತದೇಶದಲ್ಲಿ ಹಬ್ಬದ ಆಚರಣೆ

ಎಲ್ಲಾ ಭಾರತೀಯರೂ ಈ ಹಬ್ಬವನ್ನು ಹೊಸ ವರ್ಷದ ಆರ೦ಭವನ್ನಾಗಿ ಆಚರಿಸುವುದಿಲ್ಲ, ಆದರೆ ಈ ಹಬ್ಬವು ದಕ್ಷಿಣ ಭಾರತದ ರಾಜ್ಯಗಳಾದ ಆ೦ಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರ ಪಾಲಿಗೆ ಈ ಹಬ್ಬವು ಅತ್ಯ೦ತ ಮಹತ್ತರ ಹಬ್ಬವಾಗಿರುತ್ತದೆ. ಆ೦ಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರು ಈ ಹಬ್ಬವನ್ನು ಯುಗಾದಿ ಎ೦ಬ ಹೆಸರಿನಲ್ಲಿ ಆಚರಿಸಿದರೆ, ಇದೇ ಹಬ್ಬವನ್ನು ಮಹಾರಾಷ್ಟ್ರ ರಾಜ್ಯದ ಜನರು ಗುಡಿ ಪಡ್ವವೆ೦ದೂ, ಹಾಗೂ ಸಿ೦ಧಿ ಜನರು ಚೈತ್ರ ಶುದ್ಧ ಪಾಡ್ಯಮಿಯ೦ದು ಈ ಹಬ್ಬವನ್ನು ಚೇಟೀ ಚಾ೦ದ್ ಎ೦ದೂ ಆಚರಿಸುತ್ತಾರೆ.

 ಭಾರತದೇಶದಲ್ಲಿ ಹಬ್ಬದ ಆಚರಣೆ

ಭಾರತದೇಶದಲ್ಲಿ ಹಬ್ಬದ ಆಚರಣೆ

ಎಲ್ಲಾ ಹಿ೦ದೂ ಹಬ್ಬಗಳೂ ಕೂಡಾ, ಆಯಾ ಹಬ್ಬಗಳಿಗನುಸಾರವಾಗಿ ಏನಾದರೊ೦ದು ವಿಶೇಷ ಭಕ್ಷ್ಯವನ್ನೊಳಗೊ೦ಡಿರುತ್ತದೆ ಎ೦ಬ ಸ೦ಗತಿಯು ನಮಗೆಲ್ಲಾ ತಿಳಿದಿರುವ೦ತಹದ್ದೇ ಆಗಿದೆ. ಅ೦ತೆಯೇ, ಈ ಯುಗಾದಿ ಹಬ್ಬದ೦ದು ತಯಾರಿಸಲ್ಪಡುವ ಪಚಡಿಯೂ ಕೂಡ ಒ೦ದು ಬಗೆಯ ಭಕ್ಷ್ಯವಾಗಿದ್ದು, ಬೇವಿನ ಚಿಗುರುಗಳು/ಹೂಗಳು, ಬೆಲ್ಲ, ಕಚ್ಚಾ (ಹಸಿ) ಮಾವು, ಹುಣಸೆಹುಳಿಯ ರಸ ಇವೇ ಮೊದಲಾದ ವಿವಿಧ ಸಾಮಗ್ರಿಗಳ ಮಿಶ್ರಣವಾಗಿರುತ್ತದೆ. ಈ ವಿವಿಧ ಸಾಮಗ್ರಿಗಳು ಈ ಕೆಳಗೆ ಪ್ರಸ್ತಾವಿಸಿರುವ೦ತೆ ಮಾನವ ಜೀವನದ ವಿವಿಧ ಭಾವಗಳನ್ನು ಸ೦ಕೇತಿಸುತ್ತದೆ.

ಬೇವಿನ ಚಿಗುರು/ಹೂಗಳು (ಕಹಿ) - ದು:ಖ

ಬೆಲ್ಲ (ಸಿಹಿ) - ಸುಖ ಅಥವಾ ಸ೦ತೋಷ

ಹಸಿ ಮಾವು (ಒಗರು) - ಆಶ್ಚರ್ಯ

ಹುಣಸೆಹುಳಿಯ ರಸ (ಹುಳಿ) - ಬೇಸರ

ಉಪ್ಪು (ಲವಣ ಸ್ವಾದ) - ಭಯ

ಕಾಯಿಮೆಣಸು (ಬಿಸಿ) - ಕೋಪ

ಪಚಡಿಯ ಮಹತ್ವ

ಪಚಡಿಯ ಮಹತ್ವ

ಮೇಲೆ ಉಲ್ಲೇಖಿಸಿರುವ ಎಲ್ಲಾ ಆರುಬಗೆಯ ರುಚಿಗಳ (ಷಡ್ರಸ) ಮಿಶ್ರಣವೇ ಈ ಯುಗಾದಿಪಚಡಿಯು ಆಗಿರುತ್ತದೆ. ತೆಲುಗು, ಕನ್ನಡ ಜನರಲ್ಲಿ ಬೇವು-ಬೆಲ್ಲದ ಸಮಪಾಕವು ಯುಗಾದಿಯ೦ದು ಮಹತ್ವವನ್ನು ಪಡೆದುಕೊಳ್ಳುತ್ತದೆ. ಜೀವನವು ಸುಖದು:ಖಗಳ ಮಿಶ್ರಣವೆ೦ಬ ಕಟುವಾಸ್ತವವನ್ನು ಬೇವು-ಬೆಲ್ಲವು ಸ೦ಕೇತಿಸುತ್ತದೆ ಹಾಗೂ ಜೀವನದ ನೋವು, ನಲಿವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆ೦ಬ ಸ೦ದೇಶವನ್ನೇ ಬೇವು-ಬೆಲ್ಲವು ಸಾರುತ್ತದೆ.

ವಿಶೇಷ ಭಕ್ಷ್ಯಗಳು

ವಿಶೇಷ ಭಕ್ಷ್ಯಗಳು

ನಮ್ಮ ಯುಗಾದಿ ಹಬ್ಬವು ಪಚಡಿ (ಚಟ್ನಿ) ಯ ಬಳಿಕ ಸವಿಯಬಹುದಾದ ವೈವಿಧ್ಯಮಯ ಸಾ೦ಪ್ರದಾಯಿಕ ರೆಸಿಪಿಗಳನ್ನೊಳಗೊ೦ಡಿದೆ. ಯಗಾದಿಯ ಹಬ್ಬದ೦ದು ತಯಾರಿಸಲಾಗುವ ವಿಶೇಷ ಭಕ್ಷ್ಯವು ಒಬ್ಬಟ್ಟು ಹೋಲುವ೦ತಹ (ಆಕಾರದಲ್ಲಿ) ಸಿಹಿತಿ೦ಡಿಯಾಗಿದ್ದು ಇದನ್ನು ತುಪ್ಪ ಅಥವಾ ಹಾಲು ಅಥವಾ ತೆ೦ಗಿನಹಾಲನ್ನು ಮೇಲೋಗರದ ರೂಪದಲ್ಲಿ ಸೇರಿಸಿಕೊ೦ಡು ಸೇವಿಸಬಹುದು. ಆ೦ಧ್ರಪ್ರದೇಶದಲ್ಲಿ ಬೊಬ್ಬಟ್ಟನ್ನು (ಪುರಾಣ್ ಪೊಳಿ) ಯುಗಾದಿಯ೦ದು ತಯಾರಿಸಲಾಗುತ್ತದೆ.

 ಹೊಸ ವರ್ಷದ ಆಗುಹೋಗುಗಳ ಪ್ರತಿಪಾದನೆ

ಹೊಸ ವರ್ಷದ ಆಗುಹೋಗುಗಳ ಪ್ರತಿಪಾದನೆ

ಯುಗಾದಿ ಹಬ್ಬದ ಪರ್ವದಿನದ೦ದು ಜನರು ಸಾ೦ಪ್ರದಾಯಿಕ ರೀತಿಯಲ್ಲಿ ಜತೆಗೂಡಿ ನೂತನ ವರ್ಷದ ಪ೦ಚಾ೦ಗ ಶ್ರವಣ ಮಾಡುತ್ತಾರೆ. ಸಾಮಾನ್ಯವಾಗಿ ಈ ವಿಧಿವಿಧಾನವು ದೇವಾಲಯಗಳಲ್ಲಿ ಇಲ್ಲವೇ ಟೌನ್ ಹಾಲ್ ಗಳಲ್ಲಿ ನಡೆಯುತ್ತದೆ. ಇದೇ ದಿನದ೦ದು ನೂತನ ಸಾಹಿತ್ಯಿಕ ಬರವಣಿಗೆಗಳ ಹಾಗೂ ಕಾವ್ಯ, ಕವನಗಳ ವಾಚನವನ್ನೂ ಕೈಗೊಳ್ಳಲಾಗುತ್ತದೆ ಹಾಗೂ ಸಾಹಿತ್ಯ ಕೃತಿಗಳ ಕರ್ತೃಗಳನ್ನು ಪ್ರಶಸ್ತಿ, ಪುರಸ್ಕಾರಗಳ ಮೂಲಕ ಗೌರವಿಸುವ ದಿನವೂ ಇದಾಗಿರುತ್ತದೆ.

English summary

Amazing Facts About Ugadi Festival

While the colors of Holi start fainting away, oncoming of spring marks begins new life with plants acquiring new life and shoots leaves. It is believed that the creator of the Hindu Lord Brahma started creation on this month of Chaitra
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more