ಶಬರಿಮಲೆಯ ಅಯ್ಯಪ್ಪ ದೇವಾಲಯದ ರೋಚಕ ಸಂಗತಿಗಳು

By: Deepu
Subscribe to Boldsky

ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಂಡೊಡನೆ ಭಕ್ತರ ಮನದಲ್ಲಿ ಭಕ್ತಿಯ ಪ್ರವಾಹವೇ ಹರಿದು ಹೋಗುತ್ತಿರುತ್ತದೆ. ಸ್ವಾಮಿಯೇ ಶರಣಂ ಅಯ್ಯಪ್ಪಾ ಎಂದು ದೀನವಾಗಿ ಕೂಗುವ ಭಕ್ತರ ಕರೆಗೆ ಅಯ್ಯಪ್ಪ ಸ್ವಾಮಿ ಕಿವಿಗೊಡದೇ ಇರಲಾರರು ಎಂಬಂತಹ ಭಕ್ತಿಯ ಸೆಲೆ ಅಲ್ಲಿ ಉದ್ಭವವಾಗಿರುತ್ತದೆ.

ತಿಂಗಳುಗಳ ಕಾಲ ವ್ರತಾಧಾರಿಗಳಾಗಿ ಸ್ವಾಮಿಯ ಸೇವೆಯನ್ನು ಮಾಡಿದ್ದಕ್ಕೆ ಸಾರ್ಥಕವಾಯಿತು ಎಂಬ ತೃಪ್ತಿ ಮನದಲ್ಲಿ ಮೂಡುತ್ತದೆ. ಶಬರಿಮಲೆ ಎಂದ ಒಡನೆ ಎಲ್ಲರಿಗೂ ಅಯ್ಯಪ್ಪ ಸ್ವಾಮಿಯ ಹೆಸರು ತಟ್ಟನೆ ಮನಸ್ಸಿನಲ್ಲಿ ಹಾದು ಹೋಗುವುದು ಖಂಡಿತ. ಹೌದು ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಈ ಪವಿತ್ರ ಯಾತ್ರಾ ಸ್ಥಳವು ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ. 

ಅಯ್ಯಪ್ಪ ಸ್ವಾಮಿ ದೇವರ ಜನ್ಮದ ಹಿಂದಿರುವ ರಹಸ್ಯವೇನು?

ಈ ಯಾತ್ರ ಸ್ಥಳವು ವರ್ಷದ ಅಂದರೆ ಮಲಯಾಳಂ ಕ್ಯಾಲೆಂಡರ್ ಪ್ರಕಾರ ನವೆಂಬರ್ ತಿಂಗಳಿಂದ ಹಿಡಿದು ಡಿಸೆಂಬರ್, ಜನವರಿಯ ನಾಲ್ಕನೇ ವಾರದವರೆಗೆ (ಕಾರ್ತಿಕ ಮಾಸದ ಸಮಯದಿಂದ ಹಿಡಿದು ಮಕರ ಸಂಕ್ರಾಂತಿಯವರೆಗೆ) ಅತ್ಯಂತ ಚಟುವಟಿಕೆಗಳಿಂದ ಕೂಡಿರುವ ಸ್ಥಳವಾಗಿರುತ್ತದೆ. ಭಕ್ತಾಧಿಗಳು ಮಾಲಾಧಾರಿಗಳಾಗಿ, 41 ದಿನಗಳ ವ್ರತವನ್ನು ಆಚರಿಸುತ್ತ ಅಯ್ಯಪ್ಪನ ಆರಾಧನೆ ಮಾಡುವುದು ಇಲ್ಲಿನ ವಿಶೇಷ. ಈ ಬೆಟ್ಟವು ರಾಮಾಯಣದಲ್ಲಿ ಬರುವ ಶಬರಿಗೆ ಸೇರಿದ ಬೆಟ್ಟವೆಂಬ ಕಾರಣಕ್ಕಾಗಿ ಇದನ್ನು ಶಬರಿಮಲೆ ಎಂದು ಕರೆಯಲಾಗುತ್ತದೆ. ಬನ್ನಿ ಶಬರಿಮಲೆಯ ಇನ್ನಷ್ಟು ರೋಚಕ ಸಂಗತಿಗಳನ್ನು ಮುಂದೆ ಓದಿ... 

ಶಿವ ಮತ್ತು ವಿಷ್ಣುವಿನ ಮಿಲನ

ಶಿವ ಮತ್ತು ವಿಷ್ಣುವಿನ ಮಿಲನ

ಮಹಿಷಿಯು ದೇವಲೋಕಕ್ಕೆ ಬಂದು ಹಾನಿಯುಂಟು ಮಾಡಿದಾಗ ಎಲ್ಲಾ ದೇವದೇವತೆಗಳು ವಿಷ್ಣು ಮತ್ತು ಶಿವನಿಂದ ನೆರವು ಪಡೆಯಲು ತೆರಳುತ್ತಾರೆ. ಈ ವೇಳೆ ವಿಷ್ಣು ಒಂದು ಯೋಜನೆ ರೂಪಿಸುತ್ತಾನೆ. ಸಮುದ್ರ ಮಂಥನದ ವೇಳೆ ರಾಕ್ಷಸರು ಅಮೃತವನ್ನು ಕುಡಿಯುವುದನ್ನು ತಪ್ಪಿಸಲು ವಿಷ್ಣು, ಮೋಹಿನಿ ರೂಪವನ್ನು ಧರಿಸಿದ್ದ. ವಿಷ್ಣು ಮತ್ತೆ ಮೋಹಿನಿಯ ರೂಪ ತಳೆದರೆ ಆಗ ಶಿವನೊಂದಿಗಿನ ಮಿಲನದಿಂದ ದೈವಿಕ ಮಗುವನ್ನು ಪಡೆಯಬಹುದು. ಇದರಿಂದ ದುರ್ಗೆಯ ಶಕ್ತಿಯೊಂದಿಗೆ ಮಹಿಷಿಯನ್ನು ಮಣಿಸಬಹುದು ಎನ್ನುತ್ತಾನೆ. ಕೊನೆಗೆ ಅಯ್ಯಪ್ಪ ದೇವರು ಶಿವ ಮತ್ತು ಮೋಹಿನಿ(ವಿಷ್ಣುವಿನ ನಾರಿ ರೂಪ)ಯ ಕೂಡುವಿಕೆಯಿಂದ ಹುಟ್ಟಿದವ. ಬ್ರಹ್ಮ ದೇವರಿಂದ ವರವನ್ನು ಪಡೆದು ಭೂಲೋಕಕ್ಕೆ ಕಂಠಕವಾಗಿದ್ದ ಮಹಿಷಿಯ ವಧೆಗಾಗಿ ಅಯ್ಯಪ್ಪ ಹುಟ್ಟಿದ್ದ ನಂತರ ಇದೇ ಸ್ಥಳದಲ್ಲಿ ಧ್ಯಾನಸ್ಥನಾಗುತ್ತಾನೆ.

ಕೋಟಿ- ಕೋಟಿ ಜನರನ್ನು ಆಕರ್ಷಿಸುವ ದೇವಸ್ಥಾನ...

ಕೋಟಿ- ಕೋಟಿ ಜನರನ್ನು ಆಕರ್ಷಿಸುವ ದೇವಸ್ಥಾನ...

ಶಬರಿಮಲೆಯು ಸರ್ಕಾರಿ ಸ್ವಾಮ್ಯದ ತಿರುವಾಂಕೂರ್ ದೇವಸ್ಥಾನ ಮಂಡಳಿಯ ಆಡಳಿತದಲ್ಲಿದ್ದು, ವಾರ್ಷಿಕ 5 ಕೋಟಿ ಜನರನ್ನು ಆಕರ್ಷಿಸುವ ವಿಶ್ವದ ಅತ್ಯಂತ ದೊಡ್ಡ ಯಾತ್ರಾಸ್ಥಳವಾಗಿದೆ.

18 ಬೆಟ್ಟಗಳ ನಡುವೆ ನೆಲೆಗೊಂಡಿದೆ

18 ಬೆಟ್ಟಗಳ ನಡುವೆ ನೆಲೆಗೊಂಡಿದೆ

ಶಬರಿಮಲೆ 18 ಬೆಟ್ಟಗಳ ಮಧ್ಯೆ ನೆಲೆ ನಿಂತಿದ್ದು, ಯಾವೊಬ್ಬ ಭಕ್ತನೂ ಈ ಚಿತ್ರಣವನ್ನು ನೋಡುವುದನ್ನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಶಬರಿಮಲೆಯ ಮೇಲೆ ನೆಲೆಸಿರುವ ದೇವಸ್ಥಾನವು ಸಮುದ್ರಮಟ್ಟದಿಂದ 468 ಮೀಟರ್ (1535 ಅಡಿ) ಎತ್ತರದಲ್ಲಿ ನೆಲೆಗೊಂಡಿದೆ. ಜೊತೆಗೆ ಸುತ್ತಲೂ ಇರುವ ಪರ್ವತಗಳು ಮತ್ತು ದಟ್ಟ ಕಾಡು ಈ ದೇವಾಲಯದ ಗಾಂಭೀರ್ಯವನ್ನು ಹೆಚ್ಚಿಸಿದೆ.

ಮಹಿಳೆಯರಿಗೆ ಪ್ರವೇಶವಿಲ್ಲ

ಮಹಿಳೆಯರಿಗೆ ಪ್ರವೇಶವಿಲ್ಲ

ಅಯ್ಯಪ್ಪ ದೇವರು ಬ್ರಹ್ಮಚಾರಿಯಾಗಿರುವ ಕಾರಣದಿಂದ ಮಹಿಳೆಯರಿಗೆ ಮಂದಿರಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೆ ಹಿಂದೂ ಧರ್ಮದ ಪ್ರಕಾರ ಋತುಮತಿಯಾಗುವ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವಾಲಯದ ಒಳಗೆ ಬರಲು ಅವಕಾಶವಿಲ್ಲ ಎಂಬ ದಂತಕಥೆಯ ಸಲುವಾಗಿ ಈ ವಯಸ್ಸಿನ ಒಳಗಿನ ಹೆಂಗಸರನ್ನು ದೇವಾಲಯದೊಳಗೆ ಬಿಡುವುದಿಲ್ಲ. ಅಲ್ಲದೆ ಅಯ್ಯಪ್ಪ ಸ್ವತಃ ಬ್ರಹ್ಮಚಾರಿಯಾಗಿರುವುದರಿಂದಾಗಿ ಸಹ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರ

ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರ

ಶಬರಿಮಲೆಯು ಎಲ್ಲಾ ರೀತಿಯ ಜನರನ್ನು ಆಕರ್ಷಿಸುವ ಹಿಂದೂ ದೇವಾಲಯವಾಗಿದೆ. ವಿಶೇಷವಾಗಿ ಎಲ್ಲ ವಯಸ್ಸಿನ ಗಂಡಸರು ಈ ಶಬರಿಮಲೆಗೆ ಭೇಟಿ ನೀಡಬಹುದು. ಕಪ್ಪು ಅಥವಾ ನೀಲಿ ಬಣ್ಣದ ವಸ್ತ್ರಗಳನ್ನು ಧರಿಸಿರುವ ಮಾಲಾಧಾರಿಗಳಾದ ಅಯ್ಯಪ್ಪ ಸ್ವಾಮಿಯ ಭಕ್ತರನ್ನು ನಾವು ಈ ಕಾಲದಲ್ಲಿ ಹೆಚ್ಚಾಗಿ ಕಾಣಬಹುದು. ತಮ್ಮ ಹಣೆಗೆ ವಿಭೂತಿ ಅಥವಾ ಚಂದನವನ್ನು ಹಚ್ಚಿಕೊಂಡು, ಮುಖ ಕ್ಷೌರವನ್ನು ಮಾಡಿಸದೆ, ಬೆಳಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಸ್ನಾನ ಮಾಡುತ್ತ ಅಯ್ಯಪ್ಪನ ಆರಾಧನೆ ಮಾಡುವ ಭಕ್ತರು ಸಂಕ್ರಾಂತಿ ಸಮಯದಲ್ಲಿ ಎಲ್ಲರೂ ತಂಡ ತಂಡವಾಗಿ ಗುರುಸ್ವಾಮಿ ಎಂದು ಕರೆಯುವ ನಾಯಕನ ನೇತೃತ್ವದಲ್ಲಿ ಶಬರಿಮಲೆಗೆ ಬಂದು ತಲುಪುತ್ತಾರೆ.

 ನವೆಂಬರ್‌ನಿಂದ ಡಿಸೆಂಬರ್ ನಲ್ಲಿ ಮಂಡಲ ಪೂಜೆ ಶುರುವಾಗುತ್ತದೆ

ನವೆಂಬರ್‌ನಿಂದ ಡಿಸೆಂಬರ್ ನಲ್ಲಿ ಮಂಡಲ ಪೂಜೆ ಶುರುವಾಗುತ್ತದೆ

ದೇವಾಲಯವು ಮಂಡಲ ಪೂಜೆ (ಅಂದಾಜು 15 ನವೆಂಬರ್‌ನಿಂದ ಡಿಸೆಂಬರ್ 26 ರ ಒಳಗೆ ), ಮಕರ ವಿಲಕ್ಕು ಅಥವಾ ಮಕರ ಜ್ಯೋತಿ (14 ಜನವರಿ- ಮಕರ ಸಂಕ್ರಾಂತಿ) ಮತ್ತು ಮಹಾ ವಿಶುವ ಸಂಕ್ರಾಂತಿ(ಏಪ್ರಿಲ್ 14), ಹಾಗೂ ಮಲಯಾಳಂ ತಿಂಗಳ ಮೊದಲ ಐದು ದಿನಗಳ ಕಾಲದಲ್ಲಿ ತೆರೆದಿರುತ್ತದೆ. ಇಲ್ಲಿಗೆ ಆಗಮಿಸುವ ಭಕ್ತಾಧಿಗಳು ಬರುವ ಮುನ್ನ ವ್ರತವನ್ನು ಆಚರಿಸಬೇಕಾಗುತ್ತದೆ (41 -ದಿನಗಳ ಉಪವಾಸ), ಈ ವ್ರತವು ಇದಕ್ಕಾಗಿಯೇ ತಯಾರಿಸಲಾಗಿರುವ ವಿಶೇಷ ಮಾಲೆಯನ್ನು ಧರಿಸುವ ಮೂಲಕ ಆರಂಭಗೊಳ್ಳುತ್ತದೆ ( ಈ ಮಾಲೆಯು ರುದ್ರಾಕ್ಷ ಅಥವಾ ತುಳಸಿ ಬೀಜಗಳಿಂದ

ಮಾಡಲಾಗಿರುತ್ತದೆ).

 ಕಲ್ಲುಮುಲ್ಲುಗಳಿಂದ ಕೂಡಿರುವ ಕಾಡುದಾರಿ

ಕಲ್ಲುಮುಲ್ಲುಗಳಿಂದ ಕೂಡಿರುವ ಕಾಡುದಾರಿ

ಸಾವಿರಾರು ಭಕ್ತರು ಅಂದಾಜು 61 ಕಿ.ಮೀ ಗಳ ದೂರದ ಕಾಲ್ನಡಿಗೆಯ ಯಾತ್ರೆಯನ್ನು ಮಾಡುತ್ತಾರೆ. ಇದು ಕಾಡುಮೇಡುಗಳಿಂದ ಕೂಡಿದ ದುರ್ಗಮ ದಾರಿಯಾಗಿದ್ದು, ಇಂದಿಗೂ ಮಾಲಾಧಾರಿಗಳು ಇದೇ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸುವುದು ವಾಡಿಕೆಯಾಗಿದೆ. ಈ ಹಾದಿಯು ಎರುಮಲೆನಿಂದ ವಂಡಿಪೆರಿಯಾರ್‌ಗೆ 12.8 ಕಿ.ಮೀ ಮತ್ತು ಚಾಲಕ್ಯಂನಿಂದ 8 ಕಿ.ಮೀ ಆಗುತ್ತದೆ. ನಂಬಿಕೆಗಳ ಪ್ರಕಾರ ಅಯ್ಯಪ್ಪ ಶಬರಿಮಲೆಗೆ ಬಂದು ನೆಲೆಸುವ ಮುನ್ನ ಇದೇ ಹಾದಿಯಲ್ಲಿ ಬಂದನೆಂದು ಹೇಳಲಾಗುತ್ತದೆ.

"ತಳಮೊನ್ ಮಡೊಮ್"

"ತಳಮೊನ್ ಮಡೊಮ್" ಎಂಬ ಸಾಂಪ್ರದಾಯಿಕ ಆರ್ಚಕ ಕುಟುಂಬವು ಈ ದೇವಾಲಯದ ಹಾಗು-ಹೋಗುಗಳನ್ನು ನೋಡಿಕೊಳ್ಳುತ್ತದೆ. ಈ ದೇವಾಲಯದಲ್ಲಿ ನಡೆಯುವ ಎಲ್ಲ ಕಾರ್ಯಗಳ ಕುರಿತಾಗಿ ನಿರ್ಧಾರವನ್ನು ಈ ಕುಟುಂಬದವರು ತೆಗೆದುಕೊಳ್ಳುತ್ತಾರೆ. ತಂತ್ರಿ ಎನ್ನುವವರು ಈ ದೇವಾಲಯದ ಪ್ರಧಾನ ಅರ್ಚಕರಾಗಿರುತ್ತಾರೆ. ಅಲ್ಲದೆ ಶಬರಿ ಮಲೆ ಯಾತ್ರ ಸ್ಥಳದ ರೀತಿ ರಿವಾಜುಗಳು ಮತ್ತು ಕಾರ್ಯಗಳನ್ನು ನಡೆಸುವ ಸಮಸ್ತ ಹೊಣೆಯನ್ನು ಈ ಕುಟುಂಬಕ್ಕೆ ನೀಡಿರುವುದು ನಿಜಕ್ಕೂ ಹೆಚ್ಚುಗಾರಿಕೆಯೆ, ಇದು ತಲೆ ತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ತುಪ್ಪದ ನೆಯ್ಯಭಿಷೇಕಂ

ತುಪ್ಪದ ನೆಯ್ಯಭಿಷೇಕಂ

ಅಯ್ಯಪ್ಪ ಮೂರ್ತಿಯ ಮೇಲೆ ತುಪ್ಪದ ಅಭಿಷೇಕ ಮಾಡುವುದು ಇಲ್ಲಿನ ಆಚರಣೆಗಳಲ್ಲಿ ಒಂದಾಗಿದೆ. ಭಕ್ತಾಧಿಗಳು ತಮ್ಮ ಪಲ್ಲಿಕೆಟ್ಟು ಅಥವಾ ಇರುಮುಡಿಯಲ್ಲಿ ( ಎರಡು ಭಾಗವಿರುವ ಹತ್ತಿ ಬಟ್ಟೆಯ ಜೋಳಿಗೆ, ಇದರಲ್ಲಿ ಸ್ವಾಮಿಗೆ ಅರ್ಪಿಸಲು ತೆಂಗಿನಕಾಯಿಯಲ್ಲಿ ತುಪ್ಪ, ಅಕ್ಕಿ ಇತರೆ ಪೂಜೆ ಸಾಮಾನುಗಳನ್ನು ತರಲಾಗುತ್ತದೆ) ತರುವ ತುಪ್ಪವನ್ನು ಸ್ವಾಮಿಗೆ ಅರ್ಪಿಸಲಾಗುತ್ತದೆ. ಇದರಿಂದ ಮಾಡುವ ಅಭಿಷೇಕವೇ ನೆಯ್ಯಭಿಷೇಕಂ ಸೇವೆ.

 ತತ್ ತ್ವಂ ಅಸಿ

ತತ್ ತ್ವಂ ಅಸಿ

ಈ ದೇವಾಲಯವು ನೀಡುವ ಪ್ರಮುಖ ಸಂದೇಶವೆಂದರೆ ತಮ್ಮತನವನ್ನು ಗುರುತಿಸಿಕೊಳ್ಳುವಿಕೆಯಾಗಿರುತ್ತದೆ. ಹೌದು ಸಂಸ್ಕೃತದಲ್ಲಿ ತತ್ ತ್ವಂ ಅಸಿ ಎಂಬ ಉಲ್ಲೇಖವಿದೆ. ಅದರರ್ಥ "ಅದು ನೀನು" ಎಂದಾಗುತ್ತದೆ. ಈ ದೇವಾಲಯಕ್ಕೆ ಭಕ್ತಿಯಿಂದ ನಡೆದುಕೊಳ್ಳುವ ಮತ್ತು ವ್ರತವನ್ನು ಆಚರಿಸುವವರು 'ತಮ್ಮಲ್ಲಿರುವ ದಿವ್ಯತೆಯ ಕುರಿತು ಅರಿತುಕೊಳ್ಳುತ್ತಾರೆ', ಹಾಗಾಗಿ ಈ ಶಬರಿಮಲೆಗೆ ಹೋಗುವ ಮಾಲಾಧಾರಿಗಳನ್ನು ಅಥವಾ ವ್ರತಾಧಾರಿಗಳನ್ನು ಸ್ವಾಮಿ ಎಂದು ಸಂಭೋದಿಸಲಾಗುತ್ತದೆ.

 18 ಮೆಟ್ಟಿಲುಗಳ ಪ್ರಾಮುಖ್ಯತೆ

18 ಮೆಟ್ಟಿಲುಗಳ ಪ್ರಾಮುಖ್ಯತೆ

ಮೊದಲ ಐದು ಮೆಟ್ಟಿಲುಗಳು ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳು. ನಮ್ಮ ದೇಹದಲ್ಲಿರುವ ಮೂಗು, ಕಣ್ಣು, ಕಿವಿ, ಬಾಯಿ ಮತ್ತು ಸ್ಪರ್ಶವನ್ನು ಈ ಪಂಚೇಂದ್ರಿಯಗಳೆನ್ನಾಗುತ್ತದೆ. ಮೊದಲ ಐದು ಮೆಟ್ಟಿಲುಗಳು ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳು. ನಮ್ಮ ದೇಹದಲ್ಲಿರುವ ಮೂಗು, ಕಣ್ಣು, ಕಿವಿ, ಬಾಯಿ ಮತ್ತು ಸ್ಪರ್ಶವನ್ನು ಈ ಪಂಚೇಂದ್ರಿಯಗಳೆನ್ನಾಗುತ್ತದೆ.

ಪಂಚೇಂದ್ರಿಯಗಳು

ಪಂಚೇಂದ್ರಿಯಗಳು

ಮಾನವನ ಕಣ್ಣುಗಳು ಯಾವಾಗಲು ಒಳ್ಳೆಯದನ್ನು ನೋಡಬೇಕು ಮತ್ತು ಅಶುಭವನ್ನು ನೋಡುವುದರಿಂದ ದೂರವಿರುತ್ತದೆ ಎನ್ನಲಾಗಿದೆ. ಒಳ್ಳೆಯ ವಿಷಯಗಳನ್ನು ಕೇಳಬೇಕು ಮತ್ತು ಗಾಳಿಸುದ್ದಿಗಳಿಗೆ ಕಿವಿಕೊಡಬಾರದು. ನಾಲಗೆ ಯಾವಾಗಲೂ ಒಳ್ಳೆಯದನ್ನು ಮಾತನಾಡಬೇಕು. ಇದಕ್ಕಾಗಿಯೇ ಅಯ್ಯಪ್ಪನ ಧ್ಯಾನವನ್ನು ಮಾಡುತ್ತಾ ಇರಬೇಕು ಎನ್ನುವುದು ಇದರರ್ಥ. ಯಾವಾಗಲೂ ತಾಜಾ ಗಾಳಿಯನ್ನು ಉಸಿರಾಡಬೇಕು ಮತ್ತು ದೇವರಿಗೆ ಅರ್ಪಿಸುವಂತಹ ಪುಷ್ಪಗಳ ಸುಗಂಧವನ್ನು ತೆಗೆದುಕೊಳ್ಳಬೇಕು. ಸ್ಪರ್ಶಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನು ಯಾವಾಗಲೂ ಜಪಮಾಲೆಯೊಂದಿಗೆ ದೇವರ ಧ್ಯಾನ ಮಾಡುತ್ತಿರಬೇಕು.

 ಮುಂದಿನ 8 ಮೆಟ್ಟಿಲುಗಳು ಅಷ್ಟರಾಗ

ಮುಂದಿನ 8 ಮೆಟ್ಟಿಲುಗಳು ಅಷ್ಟರಾಗ

ಅಷ್ಟರಾಗವೆಂದರೆ ಕಾಮ, ಕ್ರೋಧ, ಲೋಭ, ಮೋಹ, ಮಧ, ಮತ್ಸರ, ಅಸೂಯೆ ಮತ್ತು ಉಕ್ತಿ. ಅಷ್ಟರಾಗದ ಅರ್ಥವೆಂದರೆ ಮನುಷ್ಯನಿಗೆ ಅಂಹಕಾರವಿರಬಾರದು ಮತ್ತು ಅಸೂಯೆಯನ್ನು ಬಿಡಬೇಕು. ದೇವರ ಧ್ಯಾನ ಮಾಡುತ್ತಿರಬೇಕು ಮತ್ತು ಜೀವನದಲ್ಲಿ ಯಾವುದಕ್ಕೂ ದುರಾಸೆ ಪಡಬಾರದು. ಕೆಟ್ಟ ಜನರು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಆತ ಮಾಡಬೇಕು.

ಮುಂದಿನ ಮೂರು ಮೆಟ್ಟಿಲುಗಳು ತ್ರಿಗುಣಗಳು

ಮುಂದಿನ ಮೂರು ಮೆಟ್ಟಿಲುಗಳು ತ್ರಿಗುಣಗಳು

ತ್ರಿಗುಣಗಳೆಂದರೆ ಸತ್ವ, ರಾಜಸ ಮತ್ತು ಥಮಸ. ತ್ರಿಗುಣಗಳ ಅರ್ಥವೆಂದರೆ ವ್ಯಕ್ತಿಯೊಬ್ಬನು ಯಾವಾಗಲೂ ಚಟುವಟಿಕೆಯಿಂದ ಇರಬೇಕು ಮತ್ತು ಉದಾಸೀನವನ್ನು ಬಿಡಬೇಕು. ಯಾವುದೇ ಅಂಹಕಾರ ಆತನಲ್ಲಿ ಇರಬಾರದು ಮತ್ತು ಅಯ್ಯಪ್ಪ ದೇವರಿಗೆ ಆತ ಶರಣಾಗಬೇಕು. ಕೊನೆಯ ಎರಡು ಮೆಟ್ಟಿಲುಗಳು ವಿದ್ಯ ಮತ್ತು ಅವಿದ್ಯೆ. ವಿದ್ಯೆಯೆಂದರೆ ಜ್ಞಾನ. ಅಂಹನ್ನು ತ್ಯಜಿಸಿ ನಾವು ವಿದ್ಯೆಯನ್ನು ಪಡೆಯಬೇಕಾಗಿದೆ ಮತ್ತು ಮೋಕ್ಷದೆಡೆಗೆ ಸಾಗಬೇಕು.

18 ಮೆಟ್ಟಿಲುಗಳನ್ನು ಹತ್ತಿದ ಬಳಿಕ

18 ಮೆಟ್ಟಿಲುಗಳನ್ನು ಹತ್ತಿದ ಬಳಿಕ

ಶಬರಿಮಲೆಯಲ್ಲಿ 18 ಮೆಟ್ಟಿಲುಗಳನ್ನು ಹತ್ತಿದ ಬಳಿಕ ಭಕ್ತರಿಗೆ ಜೀವನದ ಬಗ್ಗೆ ಮನವರಿಕೆಯಾಗುತ್ತದೆ. ಜೀವನದ ಜ್ಞಾನ ಅವರಿಗೆ ಸಿಗುತ್ತದೆ ಮತ್ತು ಜೀವನದ ಗುರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ.

English summary

All you need to know about Sabarimala Temple

Sabarimala is a Hindu pilgrimage center located in the Western Ghat mountain ranges of Pathanamthitta District, Perunad grama panchayat in Kerala.
Please Wait while comments are loading...
Subscribe Newsletter