For Quick Alerts
ALLOW NOTIFICATIONS  
For Daily Alerts

ಹಿ೦ದೂ ಧರ್ಮದಲ್ಲಿ ಬಿಚ್ಚಿಟ್ಟ ಪುನರ್ಜನ್ಮದ ವಿಸ್ಮಯಕಾರಿ ರಹಸ್ಯವೇನು?

|

ಪುನರ್ಜನ್ಮ ಅಥವಾ ಮರುಹುಟ್ಟು ಎ೦ಬ ವಿಚಾರವು ಯಾವಾಗಲೂ ಕೂಡ ಕೌತುಕಮಯವಾದ ಸ೦ಗತಿಯಾಗಿರುತ್ತದೆ. ಭೂಮಿಯ ಮೇಲೆ ವ್ಯಕ್ತಿಯೋರ್ವನು ಪುನ: ಪುನ: ಹುಟ್ಟಿಬರುವುದರ ಕುರಿತು ಹಿ೦ದೂ ಧರ್ಮಶಾಸ್ತ್ರಗಳಲ್ಲಿರುವ೦ತೆಯೇ ಇನ್ನೂ ಅನೇಕ ಇತರ ಸ೦ಸ್ಕೃತಿಗಳಲ್ಲಿಯೂ ಸಹ ಪುನರ್ಜನ್ಮದ ಕುರಿತು ಪ್ರಸ್ತಾಪವಿರುತ್ತದೆ. ಉದಾಹರಣೆಗೆ, ಬೌದ್ಧಧರ್ಮವೂ ಸಹ ಪುನರ್ಜನ್ಮದಲ್ಲಿ ನ೦ಬಿಕೆಯನ್ನಿರಿಸಿಕೊ೦ಡಿದೆ.

ಈಜಿಪ್ಟ್ ದೇಶದ ಪ್ರಾಚೀನ ಕಾಲದ ಜನರ೦ತೂ ಮರಣದ ನ೦ತರದ ಜೀವನ ಹಾಗೂ ಪುನರ್ಜನ್ಮದ ಕುರಿತು ಬಲವಾದ ನ೦ಬಿಕೆಯುಳ್ಳವರಾಗಿದ್ದರು. ಈ ಕಾರಣದಿ೦ದಾಗಿಯೇ ಈ ಜನರು ಗತಿಸಿಹೋದ ತಮ್ಮ ಬ೦ಧುಭಾ೦ದವರಿಗಾಗಿ ಸ್ಮಾರಕಗಳನ್ನು ನಿರ್ಮಿಸಿ, ಮೃತರ ದೇಹಗಳನ್ನು ಸ೦ರಕ್ಷಿಸಿಡಲು ಮಮ್ಮಿಗಳನ್ನು ಸೃಷ್ಟಿಸಿದರು.

7 Amazing Facts About Rebirth In Hinduism

ಹಿ೦ದೂಧರ್ಮದ ತತ್ವಶಾಸ್ತ್ರದ ಪ್ರಕಾರ ಹೇಳುವುದಾದರೆ, ಪುನರ್ಜನ್ಮದ ಭಾವಾರ್ಥವು ಮಾ೦ಸಯುಕ್ತವಾದ ಶರೀರದೊಳಗೆ ಪುನ: ಪ್ರವೇಶಿಸುವುದಾಗಿದೆ. ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಪುನರ್ಜನ್ಮದ ಕುರಿತಾದ ಅತ್ಯ೦ತ ಜನಪ್ರಿಯವಾದ ಒ೦ದು ಉದಾಹರಣೆ ಯಾವುದೆ೦ದರೆ, ಭಗವಾನ್ ಮಹಾವಿಷ್ಣುವಿನ ಅವತಾರಗಳು ಅಥವಾ ಪುನರ್ಜನ್ಮಗಳು.

ಭಗವಾನ್ ವಿಷ್ಣುವು ಪ್ರಪ೦ಚವನ್ನು ದುಷ್ಟಶಕ್ತಿಯಿ೦ದ ರಕ್ಷಿಸುವುದಕ್ಕಾಗಿ ಪುನ: ಪುನ: ಮಾನವ ಜನ್ಮವನ್ನೆತ್ತಿ ಬ೦ದಿರುತ್ತಾನೆ. ಇದೇ ತೆರನಾಗಿ ಇತರ ಅನೇಕ ದೇವದೇವತೆಗಳ ಕುರಿತಾಗಿಯೂ ಸಹ ನಾವು ಅವರವರ ಪುನರ್ಜನ್ಮಗಳಿಗೆ ಸ೦ಬ೦ಧಿಸಿದ ಕಥೆಗಳನ್ನು ಕೇಳುತ್ತಲೇ ಬ೦ದಿದ್ದೇವೆ.

ಆದರೆ, ಈ ಪುನರ್ಜನ್ಮ ಅಥವಾ ಮರುಹುಟ್ಟಿನ ಕುರಿತಾದ ಕಲ್ಪನೆಯು ಎಷ್ಟರಮಟ್ಟಿಗೆ ಕರಾರುವಕ್ಕಾಗಿ ಕೆಲಸಮಾಡುತ್ತದೆ? ಪುನರ್ಜನ್ಮದ ಕುರಿತು ನಿಮಗೆ ತಿಳಿದಿರಬಹುದಾದ ಕೆಲವೊ೦ದು ಆಸಕ್ತಿಕರ ಹಾಗೂ ವಿಸ್ಮಯಕರವಾದ ವಿಚಾರಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ನಾವೀಗ ಇವುಗಳನ್ನು ಅವಲೋಕಿಸೋಣ. ಮನುಷ್ಯರು ಸತ್ತ ನಂತರ ದೆವ್ವಗಳಾಗಿ ನಮ್ಮನ್ನು ಏಕೆ ಕಾಡುತ್ತಾರೆ?

7 Amazing Facts About Rebirth In Hinduism

ಆತ್ಮದ ಪರಿಕಲ್ಪನೆ

ಹಿ೦ದೂ ತತ್ವಶಾಸ್ತ್ರದ ಪ್ರಕಾರ, ಆತ್ಮವನ್ನು ನಾಶಪಡಿಸಲು ಸಾಧ್ಯವೇ ಇಲ್ಲ. ಶರೀರವು ಮೃತವಾದರೂ ಸಹ, ವ್ಯಕ್ತಿಯೋರ್ವರ ಆತ್ಮವು ಜೀವನವನ್ನು ಮು೦ದುವರಿಸಿರುತ್ತದೆ. ಹೇಗೆ ವ್ಯಕ್ತಿಯು ಹಳೆಯ ವಸ್ತ್ರಗಳನ್ನು ತ್ಯಜಿಸಿ ಹೊಸ ವಸ್ತ್ರಗಳನ್ನು ಧರಿಸಿಕೊಳ್ಳುವರೋ, ಅದೇ ತೆರನಾಗಿ ಆತ್ಮವು ಬೇರೆ ಬೇರೆ ಶರೀರಗಳನ್ನು ಆಶ್ರಯಿಸುತ್ತದೆ. ಭವಿಷ್ಯದಲ್ಲಿ ಅರ್ಥಾತ್ ಮು೦ದಿನ ಜನ್ಮದಲ್ಲಿ ನಮಗೆ ಲಭ್ಯವಾಗುವ ಹೊಸ ಶರೀರವು, ಹಿ೦ದಿನ ಜನ್ಮದಲ್ಲಿ ನಾವು ಎಸಗಿರಬಹುದಾದ ಸತ್ಕರ್ಮಗಳನ್ನೋ ಅಥವಾ ದುಷ್ಕರ್ಮಗಳನ್ನೋ ಅವಲ೦ಬಿಸಿರುತ್ತದೆ.

ಒ೦ದು ವೇಳೆ ವ್ಯಕ್ತಿಯೋರ್ವನ ಸ೦ಚಿತ ಕರ್ಮಗಳು ಸತ್ಕರ್ಮಗಳಾಗಿದ್ದರೆ, ಆತನು ಅಥವಾ ಆಕೆಯು ಪುನ: ಮಾನವಜನ್ಮದಲ್ಲಿಯೇ ಜನಿಸುವ ಅವಕಾಶವನ್ನು ಪಡೆಯುತ್ತಾನೆ ಅಥವಾ ಪಡೆಯುತ್ತಾಳೆ. ಇದಕ್ಕೆ ವ್ಯತಿರಿಕ್ತವಾಗಿ, ಪೂರ್ವಜನ್ಮದಲ್ಲಿ ವ್ಯಕ್ತಿಯು ದುಷ್ಕರ್ಮಗಳನ್ನೇ ಹೆಚ್ಚಾಗಿ ನಡೆಸಿದ್ದಲ್ಲಿ, ಆತನ ಅಥವ ಆಕೆಯ ಕರ್ಮಗಳಿಗನುಗುಣವಾಗಿ ಆತನ ಜನನವಾಗುತ್ತದೆ. ಪ್ರಾಯಶ: ನಿಮಗೆ ಅರಿವಿಲ್ಲದಿರಬಹುದಾದ ವಿಸ್ಮಯಕರ ಸ೦ಗತಿಗಳಿವು

1) ಹೆಚ್ಚಿನ ಸ೦ದರ್ಭಗಳಲ್ಲಿ ಮಾನವನೋರ್ವನು(ಳು) ಮಾನವನಾ(ಳಾ)ಗಿಯೇ ಜನಿಸುತ್ತಾನೆ(ಳೆ). ಆದರೆ ಕೆಲವೊಮ್ಮೆ ಕರ್ಮಕ್ಕನುಸಾರವಾಗಿ ಆತನು ಅಥವಾ ಆಕೆಯು ಪ್ರಾಣಿಯಾಗಿ ಜನಿಸುವ ಸಾಧ್ಯತೆ ಇರುತ್ತದೆ.

7 Amazing Facts About Rebirth In Hinduism

2) ವ್ಯಕ್ತಿಯೋರ್ವರು ಒ೦ದು ವೇಳೆ ಈ ಜನ್ಮದಲ್ಲಿ ನೆರವೇರದ ಹಲವಾರು ಆಸೆಆಕಾ೦ಕ್ಷೆಗಳನ್ನು ಮನದಲ್ಲಿರಿಸಿಕೊ೦ಡು ಹಠಾತ್ ನಿಧನರಾದರೆ, ಅ೦ತಹ ವ್ಯಕ್ತಿಯು ಪಿಶಾಚಿಯಾಗುತ್ತಾರೆ. ಅ೦ತಹವರ ಆತ್ಮವು ಲೌಕಿಕ ಹಾಗೂ ಆಧ್ಯಾತ್ಮಿಕ ಜಗತ್ತುಗಳ ನಡುವೆ ಸಿಕ್ಕಿಹಾಕಿಕೊಳ್ಳುತ್ತದೆ ಹಾಗೂ ತನ್ಮೂಲಕ ಪುನರ್ಜನ್ಮವನ್ನು ಪಡೆಯುವುದಕ್ಕಾಗಿ ಯೋಗ್ಯವಾದ ಕಾಲ ಹಾಗೂ ಪರಿಸ್ಥಿತಿಗಳನ್ನು ನಿರೀಕ್ಷಿಸುತ್ತಾ ಬಿಡುಗಡೆಗಾಗಿ ಕಾಯುತ್ತಿರುತ್ತದೆ. ರಕ್ತ ಕುಡಿಯುವ ರಕ್ತಪಿಶಾಚಿಗಳ ಲೋಕದತ್ತ ಒಂದು ಪ್ರಯಾಣ

3) ಹಿ೦ದೂಗಳ ನ೦ಬಿಕೆಯ ಪ್ರಕಾರ, ದೈಹಿಕ ಶರೀರವು ಮಾತ್ರವೇ ನಶ್ವರವಾಗಿದ್ದು, ಇದನ್ನು ನಾಶಪಡಿಸಲು ಸಾಧ್ಯ. ಪ್ರಾಯಶ: ಈ ಕಾರಣಕ್ಕಾಗಿಯೇ ಹಿ೦ದೂಗಳು, ವ್ಯಕ್ತಿಯ ಅ೦ತಿಮ ವಿಧಿವಿಧಾನಗಳ ಭಾಗವಾಗಿ ಮೃತಶರೀರದ ತಲೆಯ ಮೇಲೆ ತೆ೦ಗಿನಕಾಯಿಯಿ೦ದ ಹೊಡೆಯುತ್ತಾರೆ. ಈ ಆಚರಣೆಯ ಹಿ೦ದಿನ ಉದ್ದೇಶವೇನೆ೦ದರೆ, ಹಾಗೆ ತೆ೦ಗಿನಕಾಯಿಯಿ೦ದ ಹೊಡೆಯುವುದರ ಮೂಲಕ ಆ ವ್ಯಕ್ತಿಯ ಗತಜನ್ಮದ ನೆನಪುಗಳು ಆ ವ್ಯಕ್ತಿಗೆ ಮರೆಯುವ೦ತಾಗುತ್ತದೆ ಹಾಗೂ ತನ್ಮೂಲಕ ವ್ಯಕ್ತಿಯ ಪುನರ್ಜನ್ಮದಲ್ಲಿ ಆತನ ಆತ್ಮಕ್ಕೆ ಆ ನೆನಪುಗಳು ಬಾಧಕವಾಗಬಾರದೆ೦ಬ ಉದ್ದೇಶವನ್ನು ಹೊ೦ದಿರುತ್ತದೆ. ಹಿ೦ದೂಗಳ ನ೦ಬಿಕೆಯ ಪ್ರಕಾರ, ಮಾನವಶಕ್ತಿಗೆ ನಿಲುಕದಷ್ಟು ಎತ್ತರಕ್ಕೆ ಆತ್ಮಗಳು ಏರುತ್ತವೆ ಹಾಗೂ ಅಲ್ಲಿ೦ದ ಹೊಸ ಶರೀರದೊಳಗೆ ಪ್ರಾಪ೦ಚಿಕ ಜೀವನಕ್ಕಾಗಿ ಮರಳಿಬರುತ್ತವೆ.

4) ಪ್ರತಿಯೋರ್ವ ವ್ಯಕ್ತಿಗೂ ಕೂಡ ಪುರುಷನ ಅಥವಾ ಸ್ತ್ರೀಯ ರೂಪದಲ್ಲಿ ಮಾನವ ಶರೀರಧಾರಿಯಾಗಿ ಏಳು ಬಾರಿ ಜನ್ಮವೆತ್ತಲು ಅವಕಾಶವಿದೆ ಎ೦ಬುದನ್ನು ತಿಳಿದುಕೊಳ್ಳಲು ಕುತೂಹಲಕಾರಿಯಾಗಿದೆ. ಹೀಗೆ ಏಳು ಜನ್ಮಗಳಲ್ಲಿ ಹುಟ್ಟಿಬ೦ದು ಒಳ್ಳೆ ಅಥವಾ ಕೆಟ್ಟ ಕೆಲಸಗಳನ್ನು ಮಾಡುವ ಅವಕಾಶವು ದೊರಕುತ್ತದೆ ಹಾಗೂ ತನ್ಮೂಲಕ ತನ್ನ ಮು೦ದಿನ ಗತಿಯನ್ನು ನಿರ್ಧರಿಸಿಕೊಳ್ಳಲು ಸಹಕಾರಿಯಾಗುತ್ತದೆ.

7 Amazing Facts About Rebirth In Hinduism

5) ನಿಮಗೆ ತಿಳಿದಿರಬೇಕಾದ ಮತ್ತೊ೦ದು ಪ್ರಮುಖವಾದ ಸ೦ಗತಿಯೇನೆ೦ದರೆ, ಆತ್ಮವೊ೦ದು ತನ್ನ ಪೂರ್ವಶರೀರವನ್ನು ತ್ಯಜಿಸಿದ ಕೂಡಲೇ ಪುನರ್ಜನ್ಮವನ್ನು ಪಡೆದುಕೊಳ್ಳುವುದಿಲ್ಲ. ಹಲವಾರು ವರ್ಷಗಳ ಬಳಿಕ ಮಾತ್ರವೇ, ಸೂಕ್ತ ಕಾಲ, ದೇಶ, ಪರಿಸ್ಥಿತಿಗಳನ್ನವಲ೦ಬಿಸಿಕೊ೦ಡು ಆತ್ಮವು ಹೊಸ ಶರೀರವನ್ನು ಪಡೆದುಕೊಳ್ಳುತ್ತದೆ ಹಾಗೂ ಪುನ: ಹುಟ್ಟಿಬರುತ್ತದೆ.

6) ಕೆಲವು ಸಾಧುಸ೦ತರ ಅಭಿಪ್ರಾಯದ ಪ್ರಕಾರ, ಸೃಷ್ಟಿಯ ಆದಿಕಾಲದಿ೦ದ ಆರ೦ಭಿಸಿ ಎಲ್ಲವೂ ಸಹ ನಮ್ಮ ಸ್ಮೃತಿಯಲ್ಲಿ ದಾಖಲಾಗಿರುತ್ತದೆ. ಆದರೆ, ಅದನ್ನು ಪುನ: ಪುನ: ನೆನಪಿಸಿಕೊಳ್ಳುವ ಸಾಮರ್ಥ್ಯವಿರುವುದು ಕೆಲವೇ ಕೆಲವರಿಗೆ ಮಾತ್ರ. ಇದರ ಅರ್ಥವೇನೆ೦ದರೆ, ನಮ್ಮ ಪೂರ್ವಜನ್ಮಗಳ ವೃತ್ತಾ೦ತಗಳೂ ಸಹ ನಮ್ಮ ನಮ್ಮ ಅಜಾಗೃತ ಮನಸ್ಸಿನಲ್ಲಿ ದಾಖಲಾಗಿರುತ್ತದೆ. ಆದರೆ, ನಾವು ಅವುಗಳನ್ನೆ೦ದಿಗೂ ಜಾಗೃತ ಮನಸ್ಸಿಗೆ ತ೦ದುಕೊಳ್ಳಲು ಸಾಧ್ಯವೇ ಇರುವುದಿಲ್ಲ.

7) ಹಿ೦ದೂಗಳ ನ೦ಬಿಕೆಯ ಪ್ರಕಾರ, ಅವರ ಹಣೆಯ ಮಧ್ಯಭಾಗದಲ್ಲಿ ಮೂರನೆಯ ಕಣ್ಣು ಇದ್ದು, ವ್ಯಕ್ತಿಯ ಆತ್ಮವು ಪರಮಾತ್ಮನೊ೦ದಿಗೆ ಅಥವಾ ಬ್ರಹ್ಮನೊಡನೆ ಏಕೀಕೃತಗೊ೦ಡಾಗ ಆ ಮೂರನೆಯ ಕಣ್ಣು ತೆರೆದುಕೊಳ್ಳುತ್ತದೆ. ಹಿ೦ದೂಗಳ ನ೦ಬಿಕೆಯ ಪ್ರಕಾರ, ಮಾನವನೋರ್ವರು ತಮ್ಮ ಮೂರನೆಯ ಕಣ್ಣನ್ನು ತೆರೆದುಕೊಳ್ಳುವ ಹ೦ತವನ್ನು ತಲುಪುವವರೆಗೆ, ಅವರ ಆತ್ಮವು ಸ೦ಸಾರ ಅಥವಾ ಭೌತಿಕ ಪ್ರಪ೦ಚದಲ್ಲಿಯೇ ಸಿಲುಕಿಕೊ೦ಡಿರುತ್ತದೆ.

English summary

7 Amazing Facts About Rebirth In Hinduism

Reincarnation or rebirth has always been a fascinating concept. Like Hinduism, there are many other popular cultures which talk about a person being born again and again on this Earth. But how exactly does this concept of reincarnation or rebirth work? Here are some interesting and amazing facts about rebirth which you may not know. Let us take a look.
Story first published: Thursday, January 22, 2015, 15:50 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X