For Quick Alerts
ALLOW NOTIFICATIONS  
For Daily Alerts

2020 ಸಂಕಷ್ಟಿ ಚತುರ್ಥಿಯ ದಿನಗಳು, ಉಪವಾಸದ ಮಹತ್ವ ಹಾಗೂ ಶ್ಲೋಕ

|

ಹಿಂದೂ ಧರ್ಮ ಮತ್ತು ವೈದಿಕ ಜ್ಯೋತಿಷ್ಯದಲ್ಲಿ ಉಪವಾಸ, ಹಬ್ಬಗಳು, ಪಂಚಾಂಗ ಮತ್ತು ಮುಹೂರ್ತಗಳಿಗೆ ವಿಶೇಷ ಮಹತ್ವವಿದೆ. ಇವುಗಳಿಲ್ಲದೆ ಹಿಂದೂ ಧರ್ಮದಲ್ಲಿ ಯಾವುದೇ ಆಚರಣೆಯನ್ನು ಊಹಿಸಿಕೊಳ್ಳಲಾಗುವುದಿಲ್ಲ.

ಮುಕ್ಕೋಟಿ ದೇವತೆಗಳಿರುವ ಹಿಂದೂ ಧರ್ಮದಲ್ಲಿ ವಿಘ್ನ ನಿವಾರಕ ಗಣೇಶನಿಗೆ ವಿಶೇಷ ಸ್ಥಾನ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಆ ದಿನಕ್ಕೆ ಸಂಕಷ್ಟ ಹರ ಚತುರ್ಥಿ ಎನ್ನುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ ಪ್ರತೀ ತಿಂಗಳ ಕೃಷ್ಣಪಕ್ಷದ ನಾಲ್ಕನೇ ದಿನವನ್ನು ಚತುರ್ಥಿ ಎಂದು ಕರೆಯಲಾಗುತ್ತದೆ. ಇದನ್ನು ಭಾರತದೆಲ್ಲೆಡೆಯಲ್ಲಿ ಸಂಕಷ್ಟಿ ಚತುರ್ಥಿ ಎಂದು ಆಚರಿಸುತ್ತಾರೆ. ಆದರೆ, ಭಾರತದ ಪ್ರತಿಯೊಂದು ರಾಜ್ಯದಲ್ಲಿ ತಮ್ಮದೇ ವಿಭಿನ್ನ ಆಚರಣೆಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.

ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. 'ಸಂಕಷ್ಟಿ' ಎನ್ನುವುದು ಸಂಸ್ಕೃತ ಪದವಾಗಿದ್ದು, ಇದರರ್ಥ ಕಷ್ಟ ಮತ್ತು ಕೆಟ್ಟ ಸಮಯಗಳಿಂದ ವಿಮೋಚನೆ ಅಥವಾ ಸ್ವಾತಂತ್ರ್ಯ ಮತ್ತು 'ಚತುರ್ಥಿ' ಎಂದರೆ ನಾಲ್ಕನೇ ರಾಜ್ಯ. ಆದ್ದರಿಂದ, ಈ ದಿನವನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದು ಶಾಂತಿ, ಸಮೃದ್ಧಿ, ಜ್ಞಾನ ಮತ್ತು ನಾಲ್ಕನೇ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

2020ನೇ ಸಾಲಿನಲ್ಲಿ ಸಂಕಷ್ಟಿ ಚತುರ್ಥಿಯ ದಿನಗಳು ಇಂತಿವೆ:

2020ನೇ ಸಾಲಿನಲ್ಲಿ ಸಂಕಷ್ಟಿ ಚತುರ್ಥಿಯ ದಿನಗಳು ಇಂತಿವೆ:

ದಿನಾಂಕ- ಮಾಸ- ಉಪವಾಸ ಆರಂಭ- ಉಪವಾಸ ಅಂತ್ಯ- ಚಂದ್ರ ದರ್ಶನ

ಸೋಮವಾರ, 13 ಜನವರಿ- ಮಾಘ- ಜ.13: ಸಂಜೆ 5.32- ಜ.14: ಮಧ್ಯಾಹ್ನ 2.48- ರಾತ್ರಿ 8.33

ಬುಧವಾರ, 12 ಫೆಬ್ರವರಿ- ಫಲ್ಗುಣ- ಫೆ.12: ಬೆಳಗ್ಗೆ 2.52- ಫೆ.12: ಬೆಳಗ್ಗೆ 11.39- ರಾತ್ರಿ 9.37

ಗುರುವಾರ, 12 ಮಾರ್ಚ್- ಚೈತ್ರ- ಮಾ.12: ಬೆಳಗ್ಗೆ 11.58- ಮಾ.13: ಬೆಳಗ್ಗೆ 8.50- ರಾತ್ರಿ 9.31

ಶನಿವಾರ, 11 ಏಪ್ರಿಲ್- ವೈಶಾಖ- ಏ.10: ರಾತ್ರಿ11.58- ಏ.11: ರಾತ್ರಿ7.01- ರಾತ್ರಿ 10.31

ಭಾನುವಾರ, 10 ಮೇ- ಜೇಷ್ಠ- ಮೇ 10: ಬೆಳಗ್ಗೆ 8.04- ಮೇ 11: ಬೆಳಗ್ಗೆ 6.35- ರಾತ್ರಿ 10.19

ಸೋಮವಾರ, 08 ಜೂನ್- ಆಶಾಢ- ಜೂ.8: ರಾತ್ರಿ 7.56- ಜೂ.9: ರಾತ್ರಿ 7.38- ರಾತ್ರಿ 9.57

ಬುಧವಾರ, 08 ಜುಲೈ- ಶ್ರಾವಣ- ಜು.8: ಬೆಳಗ್ಗೆ 9.18- ಜು.9: ಬೆಳಗ್ಗೆ 10.11- ರಾತ್ರಿ 10.00

ಶುಕ್ರವಾರ, 07 ಆಗಸ್ಟ್- ಬಾಧ್ರಪದ- ಆ.7: ಬೆಳಗ್ಗೆ 12.14- ಆ.8: ಮಧ್ಯರಾತ್ರಿ 2.06- ರಾತ್ರಿ 9.37

ಶನಿವಾರ, 05 ಸೆಪ್ಟೆಂಬರ್- ಅಶ್ವಿನಿ- ಸೆ.5: ಸಂಜೆ 4.38- ಸೆ.6: ಸಂಜೆ 7.06- ರಾತ್ರಿ 8.37

ಸೋಮವಾರ, 05 ಅಕ್ಟೋಬರ್- ಕಾರ್ತಿಕ- ಅ.5: ಬೆಳಗ್ಗೆ 10.02- ಅ.6: ರಾತ್ರಿ 12.31- ರಾತ್ರಿ 8.12

ಬುಧವಾರ, 04 ನವೆಂಬರ್- ಕಾರ್ತಿಕ - ನ.4: ಬೆಳಗ್ಗೆ 3.24- ನ.5: ಬೆಳಗ್ಗೆ 5.14- ರಾತ್ರಿ 8.12

ಗುರುವಾರ, 03 ಡಿಸೆಂಬರ್- ಮಾರ್ಗಶಿರ- ಡಿ.3: ರಾತ್ರಿ 7.26- ಡಿ.4: ರಾತ್ರಿ 8.03- ರಾತ್ರಿ 7.51

ಸಂಕಷ್ಟಿಯ ಆಚರಣೆ ಹೇಗೆ ಮಾಡಬೇಕು?

ಸಂಕಷ್ಟಿಯ ಆಚರಣೆ ಹೇಗೆ ಮಾಡಬೇಕು?

ಸಂಕಷ್ಟಿಯ ದಿನದಂದು ಉಪವಾಸ ಮಾಡಬೇಕು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು. ಪೂಜೆ ಅಂತ್ಯವಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನವನ್ನು ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಸಂಕಷ್ಟಿ ಚತುರ್ಥಿಯ ಮಹತ್ವ

ಸಂಕಷ್ಟಿ ಚತುರ್ಥಿಯ ಮಹತ್ವ

ಇಂದು ಸಂಕಷ್ಟಿ ಮಾಡುವುದರಿಂದ ನಿಮ್ಮ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು. ಗಣೇಶನು ಬುದ್ಧಿವಂತಿಕೆ, ಸದ್ಗುಣ ಮತ್ತು ಜ್ಞಾನದ ಸಾಕಾರ. ಆದ್ದರಿಂದ, ಸರ್ವೋಚ್ಚ ದೇವತೆಯು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆ ಇದೆ.

ಈ ಶುಭ ದಿನದಂದು ಒಬ್ಬರು ಶುದ್ಧ ಹೃದಯ ಮತ್ತು ಆತ್ಮದಿಂದ ಪ್ರಾರ್ಥಿಸಿದರೆ ಎಲ್ಲಾ ಆಸೆಗಳನ್ನು ಮತ್ತು ಕನಸುಗಳು ನನಸಾಗುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಸಂಕಷ್ಟ ಚತುರ್ಥಿಯಲ್ಲಿ ಉಪವಾಸ ಮತ್ತು ಆಚರಣೆಗಳನ್ನು ಆಚರಿಸುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗುತ್ತದೆ. ಈ ದಿನದ ಮತ್ತೊಂದು ವಿಶೇಷವೆಂದರೆ, ಈ ದಿನದಂದು ಶಿವನು ತನ್ನ ಮಗ ಗಣೇಶ ಎಲ್ಲಾ ದೇವರುಗಳಲ್ಲಿ ಶ್ರೇಷ್ಠನೆಂದು ಘೋಷಿಸಿದ ದಿನ.

ಸಂಕಷ್ಟಿ ಚತುರ್ಥಿಯ ಪ್ರಾರ್ಥನೆಗಳು

ಸಂಕಷ್ಟಿ ಚತುರ್ಥಿಯ ಪ್ರಾರ್ಥನೆಗಳು

ವಕ್ರ-ತುಂಡಾ ಮಹಾ-ಕಾಯಾ ಸೂರ್ಯ-ಕೋಟಿ ಸಮಪ್ರಭ I.

ನಿರ್ವಿಘ್ನಮ್ ಕುರು ಮಿ ದೇವ ಸರ್ವ-ಕಾರ್ಯೆಷು ಸರ್ವಾದಾ II

ಸಂಕಟ ಹರ ಗಣೇಶ ಸ್ತೋತ್ರ: ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ

ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ

ಲಂಬೋಧರಂ ಪಂಚಮಂ ಚ ಷಷ್ಠಂ ವಿಕಟಮೇವಚ ಸಪ್ತಮಂ ವಿಘ್ನ ರಾಜಂಚ ಧೂಮ್ರವರ್ಣಂ ತಥಾಷ್ಠಕಂ

ನವಮಂ ಫಲ ಚಂದ್ರಂಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ

ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ

ವಿದ್ಯಾರ್ಥಿ ಲಭತೆ ವಿದ್ಯಂ ವಿದ್ಯಾಂ ಧನಾರ್ಥಿ ಲಭತೆ ಧನಂ ಪುತ್ರಾರ್ಥಿ ಲಭತೆ ಪುತ್ರಂ ಮೋಕ್ಷಾರ್ಥಿ

ಲಭತೆ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಮಸ್ಯಾಃ

ಅಷ್ಟಾಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ

ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||

English summary

2020 Sankshti Dates, shloka And Importance Of The Day

Here we are discussing about 2020 sankshti dates and importance of the day. Each lunar month in Hindu calendar has two Chaturthi Tithis. The one after Purnimasi or full moon during Krishna Paksha is known as Sankashti Chaturthi and the one after Amavasya or new moon during Shukla Paksha is known as Vinayaka Chaturthi. Read more
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X