For Quick Alerts
ALLOW NOTIFICATIONS  
For Daily Alerts

ಕ್ರಿಸ್‌ಮಸ್ ಹಬ್ಬ: ಕುತೂಹಲ ಕೆರಳಿಸುವ ಆಸಕ್ತಿಕರ ಸಂಗತಿಗಳು

By Jaya Subramanya
|

ಚಳಿಗಾಲ ಮತ್ತು ಕ್ರಿಸ್‌ಮಸ್ ಹಬ್ಬದ ಸಡಗರ ಜೊತೆಯಾಗಿ ಬಂದುಬಿಟ್ಟಿದೆ. ಕೊರೆಯುವ ಚಳಿಯ ನಡುವೆಯೂ ಕ್ರಿಸ್‌ಮಸ್ ಹಬ್ಬದ ತಯಾರಿಯನ್ನು ವಿಶ್ವದೆಲ್ಲೆಡೆ ಎಲ್ಲರೂ ಸಂಭ್ರಮದಿಂದಲೇ ಮಾಡುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಉಡುಗೊರೆಗಳ ವಿನಿಮಯವನ್ನು ಕ್ರೈಸ್ತ ಬಾಂಧವರು ಪರಸ್ಪರ ಮಾಡುತ್ತಾರೆ, ಇದರಿಂದ ಅವರ ನಡುವೆ ಸೌಹಾರ್ದ ಉತ್ತಮವಾಗುತ್ತದೆ ಎಂಬುದು ನಂಬಿಕೆಯಾಗಿದೆ.

ಕ್ರಿಸ್‌ಮಸ್ ಸಮಯದಲ್ಲಿ ಆಚರಣೆ ಮಾಡುವ ಪ್ರತಿಯೊಂದು ಸಂಪ್ರದಾಯ ಕೂಡ ತನ್ನದೇ ಆದ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಬೈಬಲ್‌ನಲ್ಲಿ ಈ ಮಹತ್ವಗಳನ್ನು ವಿವರವಾಗಿ ವಿವರಿಸಿದ್ದು, ಕೈಸ್ತ ಬಾಂಧವರು ಕ್ರಿಸ್‌ಮಸ್‌ನಂದು ಆಚರಿಸುವ ವಿಧಿ ವಿಧಾನಗಳನ್ನು ವಿವರವಾಗಿ ಇಲ್ಲಿ ತೋರಿಸುತ್ತಿದ್ದೇವೆ. ಕ್ರಿಸ್ತನ ಜನನ ಮತ್ತು ಅವರು ಲೋಕಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ನಡೆಸಿರುವುದನ್ನು ನಾವು ಗಮನಿಸಬಹುದಾಗಿದೆ. ಒಟ್ಟು 25 ಗುರುತಗಳು ಕ್ರಿಸ್‌ಮಸ್‌ನ ಪ್ರಾಮುಖ್ಯತೆಯನ್ನು ಸಾರಿದ್ದು ಅದರಲ್ಲಿ ಹದಿನೈದು ಅಂಶಗಳ ಬಗ್ಗೆ ನಾವು ಇಂದಿಲ್ಲಿ ಹೇಳುತ್ತಿದ್ದೇವೆ....

ಕ್ರಿಸ್‌ಮಸ್ ಟ್ರೀ

ಕ್ರಿಸ್‌ಮಸ್ ಟ್ರೀ

ತನ್ನ ಮೇಲೆ ಹಿಮ ರಾಶಿ ಬಿದ್ದರೂ ಕೂಡ ಈ ಮರ ತನ್ನ ನೋಟವನ್ನು ಮಂದಗೊಳಿಸುವುದಿಲ್ಲ. ಸಂತೋಷ ಮತ್ತು ಭರವಸೆಯ ಕಿರಣವಾಗಿ ಇದು ನಿಲ್ಲುತ್ತದೆ. ಕ್ರಿಸ್ತನ ಜನನದ ಮುಂಚೆಯೇ ಈ ಮರದಿಂದ ಕ್ರೈಸ್ತರು ಆಕರ್ಷಿತರಾಗಿದ್ದರು.

ಕ್ರಿಸ್‌ಮಸ್ ವ್ರೆತ್

ಕ್ರಿಸ್‌ಮಸ್ ವ್ರೆತ್

ಮನೆಯ ಮುಂಭಾಗಿಲಿನಲ್ಲಿ ಈ ವ್ರೆತ್ ಅನ್ನು ನಾವು ಕಾಣುತ್ತೇವೆ. ವೃತ್ತಾಕಾರವಾಗಿ ಇದು ಇದ್ದು, ದೇವರ ಅಂತ್ಯವೇ ಇಲ್ಲದ ಪ್ರೀತಿಯನ್ನು ಇದು ಸಾರುತ್ತದೆ. ಹಸಿರು ಎಲೆಗಳಿಂದ ಮತ್ತು ಬೆರ್ರಿಗಳಿಂದ ಈ ವ್ರೆತ್‌ಗೆ ಅಲಂಕಾರವನ್ನು ಮಾಡುತ್ತಾರೆ. ಕೆಲವರು ಇದನ್ನು ಅಲಂಕಾರವಾಗಿ ಕಂಡರೂ ಇದರ ನಿಜವಾದ ಅರ್ಥ ಬೇರೆಯೆ ಇದೆ. ಕ್ರಿಸ್ತನನ್ನು ಶಿಲುಬೆಗೇರಿಸುವ ಮುಂಚೆ ತಲೆಗೆ ಇಟ್ಟ ಮುಳ್ಳಿನ ಕಿರೀಟವನ್ನು ಇದು ಸಂಕೇತಿಸುತ್ತದೆ. ಇನ್ನು ಕೆಂಪು ಬೆರ್ರಿಗಳು ಕ್ರಿಸ್ತನ ರಕ್ತವನ್ನು ಪ್ರತಿನಿಧಿಸುತ್ತದೆ.

ಸಾಂತಾ ಕ್ಲಾಸ್

ಸಾಂತಾ ಕ್ಲಾಸ್

ಕ್ರಿಸ್‌ಮಸ್ ಹಬ್ಬದ ಸಮಯದಂದು ಉಡುಗೊರೆಗಳನ್ನು ವಿನಿಮಯ ಮಾಡುವ ಕ್ರಮ ಆರಂಭಿಸಿದ್ದು ಸಂತ ನಿಕೊಲಸ್ ಆಗಿದ್ದಾರೆ. ಮೈರಾದ ಬಿಶಪ್ ಇವರಾಗಿದ್ದರು. ಇದೀಗ ಆಧುನಿಕ ಟರ್ಕಿಯಲ್ಲಿದೆ. ಈತ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ತಮ್ಮ ನಿಜವಾದ ಗುರುತನ್ನು ಬಹಿರಂಗಪಡಿಸದೆಯೇ ಅವರು ಹಣ ಮತ್ತು ಉಡುಗೊರೆಗಳನ್ನು ನೀಡುತ್ತಿದ್ದರು. ಸಮಯ ಕಳೆದಂತೆ ಅವರು ಧರಿಸುತ್ತಿದ್ದ ದಿರಿಸು ಸಾಂತಾ ಕ್ಲಾಸ್ ರೂಪದಲ್ಲಿ ಮಾರ್ಪಟ್ಟಿತು. ಮಕ್ಕಳಿಗೆ ಪ್ರೀತಿಯಿಂದ ಉಡುಗೊರೆಗಳನ್ನು ನೀಡುವ ಸಾಂತಾಕ್ಲಾಸ್‌ಗಾಗಿ ಅವರು ಕಾಯುತ್ತಿರುತ್ತಾರೆ.

ಮೇಣದ ಬತ್ತಿಗಳು ಮತ್ತು ಬೆಳಕು

ಮೇಣದ ಬತ್ತಿಗಳು ಮತ್ತು ಬೆಳಕು

ಕ್ರಿಸ್‌ಮಸ್ ನಂಬಿಕೆಗೆ ಇನ್ನೊಂದು ಹೆಸರಾಗಿದೆ ಮೇಣದ ಬತ್ತಿಗಳು. ವಿಶ್ವದ ಬೆಳಕು ಎಂದು ಕರೆಯುವ ಕ್ರಿಸ್ತನ ನೆನಪನ್ನು ಈ ಮೇಣದ ಬತ್ತಿಗಳು ಮಾಡುತ್ತವೆ. ಮಾನವರು ಮಾಡುತ್ತಿರುವ ಪಾಪದ ಕತ್ತಲೆಯಿಂದ ಅವರನ್ನು ಹೊರಕ್ಕೆ ಬರುವಂತೆ ಮಾಡಲು ಕ್ರಿಸ್ತನು ಮಾನವ ರೂಪಿಯಾಗಿ ಜನ್ಮತಾಳುತ್ತಾರೆ. ಮೊದಲಿಗೆ ಮೇಣದ ಬತ್ತಿಗಳನ್ನು ಬಳಸಿ ಅಲಂಕಾರವನ್ನು ಮಾಡುತ್ತಿದ್ದರು. ಈಗ ಆಧುನಿಕ ರೂಪದಲ್ಲಿ ದೀಪಗಳನ್ನು ಉಪಯೋಗಿಸುತ್ತಾರೆ.

ಕ್ರಿಸ್‌ಮಸ್ ಸ್ಟಾರ್

ಕ್ರಿಸ್‌ಮಸ್ ಸ್ಟಾರ್

ಕ್ರಿಸ್‌ಮಸ್ ಟ್ರಿಯಂತೆಯೇ ಸ್ಟಾರ್ ಕೂಡ ಹೆಚ್ಚು ಮುಖ್ಯವಾದುದು ಇದನ್ನು ಕ್ರಿಸ್‌ಮಸ್‌ನ ಸಂಕೇತವೆಂದು ಕರೆಯಲಾಗಿದೆ. ಮನೆ, ಚರ್ಚ್, ರಸ್ತೆಗಳು, ಕ್ರಿಸ್‌ಮಸ್ ಟ್ರಿ, ಹೀಗೆ ಎಲ್ಲೆಡೆ ಕ್ರಿಸ್‌ಮಸ್ ಸ್ಟಾರ್‌ಗಳನ್ನು ನೇತಾಡಿಸಲಾಗುತ್ತದೆ. ಇದು ಕ್ರಿಸ್ತನ ಜನನವನ್ನು ಸಂಕೇತಿಸುತ್ತದೆ. ದೇವ ಪುತ್ರನ ಜನನ ಸಮಯದಲ್ಲಿ ಈ ನಕ್ಷತ್ರಗಳು ಆಕಾಶದಲ್ಲಿ ಕಾಣಿಸಿಕೊಂಡಿದ್ದವು. ಸ್ಟಾರ್ ಆಫ್ ಬೆತ್ಲಹೆಮ್ ಎಂಬುದಾಗಿ ಕೂಡ ಕ್ರಿಸ್ತನ ಜನನವನ್ನು ಇದೇ ಕಾರಣಕ್ಕಾಗಿ ಕರೆಯಲಾಗಿದೆ.

ಬೆಲ್ಸ್

ಬೆಲ್ಸ್

ರಜಾದಿನದ ಸಂಕೇತವಾಗಿ ಈ ಬೆಲ್‌ಗಳನ್ನು ಮೊಳಗಿಸಲಾಗುತ್ತದೆ. ಅಂತೆಯೇ ಋಣಾತ್ಮಕ ಅಂಶಗಳನ್ನು ನಿವಾರಿಸಲು ಕೂಡ ಈ ಬೆಲ್‌ಗಳನ್ನು ಮೊಳಗಿಸಲಾಗುತ್ತದೆ. ಕ್ರಿಶ್ಚಿಯನ್ ಆಚಾರಗಳಿಗೆ ಅನುಸಾರವಾಗಿ ಪವಿತ್ರ ಆಚಣೆಗಳನ್ನು ಈ ಬೆಲ್‌ಗಳು ಸಂಕೇತಿಸುತ್ತವೆ. ಕ್ರಿಸ್ತನ ಇರುವಿಕೆಯನ್ನು ಇವುಗಳು ಸಾರುತ್ತವೆ. ಕ್ರಿಸ್‌ಮಸ್ ಸಮಯದಲ್ಲಿ ಪುಟ್ಟ ಜೀಸಸ್‌ನ ಬರುವಿಕೆಯನ್ನು ಇವುಗಳು ಪ್ರತಿನಿಧಿಸುತ್ತವೆ.

ಗೋದಲಿ

ಗೋದಲಿ

ಏಸುವಿನ ಜನನವನ್ನು ಸಾರುವ ಗೋದಲಿಯನ್ನು ಕ್ರಿಸ್‌ಮಸ್ ಸಮಯದಲ್ಲಿ ಸಿದ್ಧಪಡಿಸಲಾಗುತ್ತದೆ. ಕೆಲವರು ಬೊಂಬೆಗಳನ್ನು ಬಳಸಿ ಇದನ್ನು ಸಿದ್ಧಪಡಿಸಿದರೆ ಇನ್ನು ಕೆಲವರು ಜೀವಂತವಾಗಿರುವ ಅಂಶಗಳನ್ನು ಬಳಸಿ ಕ್ರಿಸ್ತನ ಜನನವನ್ನು ಸಾರುತ್ತಾರೆ. ಕ್ರಿಸ್‌ಮಸ್ ಹಬ್ಬದಲ್ಲಿ ಇದು ಬಹುಮುಖ್ಯ ಅಂಶವಾಗಿದ್ದು ಇದನ್ನು ವಿಧ ವಿಧವಾಗಿ ಅಲಂಕಾರ ಮಾಡಲಾಗುತ್ತದೆ. ಮೇರಿ, ಜೋಸೆಫ್, ಬಾಲ ಏಸು, ಮೇಕೆಗಳು, ಜನರು, ಪ್ರಾಣಿಗಳು ಹೀಗೆ ಮೊದಲಾದವುಗಳನ್ನು ಗೊದಲಿ ಸಿದ್ಧಪಡಿಸಲು ಬಳಸುತ್ತಾರೆ.

ಸ್ನೋಫ್ಲೇಕ್‌ಗಳು

ಸ್ನೋಫ್ಲೇಕ್‌ಗಳು

ಕ್ರಿಸ್ಮಸ್ ಆಗಮನವು ಅಧಿಕೃತವಾಗಿ ಪ್ರಾರಂಭವಾಗುವ ನಾಲ್ಕು ದಿನಗಳ ನಂತರ, ಇದು ಉತ್ತರಾರ್ಧಗೋಳದಲ್ಲಿ ಈ ವರ್ಷದ ಸಮಯದಲ್ಲಿ ಕಂಡುಬರುತ್ತದೆ ಮತ್ತು ಸ್ನೋಫ್ಲೇಕ್ಗಳು ಕ್ರಿಸ್ಮಸ್‌ಗೆ ಸಂಬಂಧಿಸಿವೆ ಎಂಬುದು ಸ್ಪಷ್ಟವಾಗಿದೆ. ಮಂಜಿನ ಚಕ್ಕೆಗಳಂತಹ ಒಂದು ಸುಂದರವಾದ ಸೃಷ್ಟಿಯಾಗಿದ್ದು, ಇದು ಬರಿಗಣ್ಣಿಗೆ ಕಾಣಿಸದಿದ್ದರೂ, ಸ್ನೋಫೇಕ್ನ ಸೌಂದರ್ಯವನ್ನು ಪ್ರಶಂಸಿಸಲು ಪ್ರತಿಯೊಬ್ಬರೂ ವಿಫಲರಾಗಿದ್ದಾರೆ, ಇದು ವಿಜ್ಞಾನದಿಂದ ಹೊರಬಂದಿದೆ, ಇದು ಸಾಮಾನ್ಯವಾಗಿ ಆರು-ತಲೆಯ ರಚನೆಯಲ್ಲಿ ಕಂಡುಬರುತ್ತದೆ, ಬಹುತೇಕ ನಕ್ಷತ್ರಗಳಂತೆ ಇದು ಇದೆ.

ಸ್ಟಾಕಿಂಗ್ಸ್

ಸ್ಟಾಕಿಂಗ್ಸ್

ಹೆಚ್ಚಾಗಿ ಕ್ರಿಸ್‌ಮಸ್ ಉಡುಗೊರೆಗಳನ್ನು ಸ್ಟಾಕಿಂಗ್‌ಗಳಲ್ಲಿ ಇಡಲಾಗುತ್ತದೆ. ಸಂತ ನಿಕೊಲಸದ ಈ ಕ್ರಮವನ್ನು ಜಾರಿಗೆ ತಂದರು. ಮೂರು ಮಹಿಳೆಯರ ಸಾಕ್ಸ್‌ನಲ್ಲಿ ಚಿನ್ನದ ನಾಣ್ಯಗಳನ್ನು ತುಂಬಿ ಅವರು ಅದನ್ನು ಬೆಂಕಿಯ ಬಳಿ ಆರಲು ಹಾಕುತ್ತಾರೆ. ಅವರನ್ನು ವೇಶ್ಯಾವಾಟಿಕೆ ದಂಧೆಯಿಂದ ರಕ್ಷಿಸಲು ಸಂತರು ಹೀಗೆ ಮಾಡುತ್ತಾರೆ. ಆದ್ದರಿಂದಲೇ ಚಿಮಣಿಯ ಬಳಿ ಸಾಕ್ಸ್‌ಗಳಲ್ಲಿ ತೂಗು ಹಾಕಿದ ರೀತಿ ಉಡುಗೊರೆಗಳನ್ನು ನೀಡಲಾಗುತ್ತದೆ.

ಕ್ಯಾಂಡಿ ಕೇನ್ಸ್

ಕ್ಯಾಂಡಿ ಕೇನ್ಸ್

ಈ ಖಾದ್ಯ ಕ್ರಿಸ್‌ಮಸ್ ರಜಾದಿನಗಳಲ್ಲಿ ಎಲ್ಲರ ಅಚ್ಚುಮೆಚ್ಚಿನದಾಗಿದೆ. ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಪ್ರತಿಯೊಬ್ಬರೂ ಈ ಕ್ಯಾಂಡಿಯನ್ನು ಆಸ್ವಾದಿಸುತ್ತಾರೆ. ಕ್ರಿಸ್ತರು ಲೋಕದ ಒಳಿತಿಗಾಗಿ ತಮ್ಮ ರಕ್ತವನ್ನು ಹರಿಸಿದ್ದನ್ನು ಇದು ಸಂಕೇತಿಸುತ್ತದೆ.

ಹೋಲಿ

ಹೋಲಿ

ಹೋಲಿ ಎಂಬುದು ಕ್ರಿಸ್ತ ಮುಳ್ಳುಗಳಾಗಿದೆ. ಈ ಸಸ್ಯ ಮುಳ್ಳುಗಳನ್ನು ಹೊಂದಿದ್ದು ಕೆಂಪು ಹಣ್ಣನ್ನು ಹೊಂದಿದೆ. ತಮ್ಮ ಮರಣ ಸಮಯದಲ್ಲಿ ಮುಳ್ಳಿನ ಕಿರೀಟವನ್ನು ಧರಿಸಿದ ಏಸುವನ್ನು ಇದು ಸಂಕೇತಿಸುತ್ತದೆ. ಜನರ ಒಳಿತಿಗಾಗಿ ಅವರು ಹರಿಸಿದ ರಕ್ತವನ್ನು ಈ ಕೆಂಪು ಬೆರ್ರಿ ಸಂಕೇತಿಸುತ್ತದೆ. ಕ್ರಿಸ್‌ಮಸ್ ಮರಗಳನ್ನು ಅಲಂಕರಿಸಲು ಹೋಲಿಯನ್ನು ಬಳಸುತ್ತಾರೆ.

ಮಿಸ್ಟಲ್‌ಟೊ

ಮಿಸ್ಟಲ್‌ಟೊ

ಮರಗಳಲ್ಲಿ ಬೆಳೆಯುವ ಮಿಸ್ಟಲ್ ಟೊ ಚಳಿಗಾದಲ್ಲಿ ಇತರ ಮರಗಳಿಂದ ಇದು ಪೋಷಣೆಯನ್ನು ಪಡೆದುಕೊಂಡು ತಾನು ಉಳಿಯುತ್ತದೆ. ಹೋಸ್ಟ್ ಟ್ರಿ ಇಲ್ಲದೆ ಮಿಸ್ಟಲ್ ಟೊ ಬದುಕುವುದಿಲ್ಲ. ಈ ಮರದ ಸಹಾಯದಿಂದ ಮಾತ್ರವೇ ಈ ಸಸ್ಯ ಹೆಚ್ಚು ಚಳಿಗಾಲದಲ್ಲಿ ಕೂಡ ಬೆಳೆಯುತ್ತದೆ. ದೇವರ ಪ್ರೀತಿಯಿಲ್ಲದೆ ಹುಲುಮಾನವರು ಬದುಕಲು ಸಾಧ್ಯವಿಲ್ಲ ಎಂಬುದನ್ನು ಇದು ತಿಳಿಸುತ್ತದೆ.

ಪೊಯಿನ್‌ಸೆಟಿಯಾ

ಪೊಯಿನ್‌ಸೆಟಿಯಾ

ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಕಂಡುಬರುವ ಹೂವು ಇದಾಗಿದೆ. ಇದರ ಮೂಲ ಮೆಕ್ಸಿಕೊ ಆಗಿದೆ. ಅಂತೆಯೇ ತೀಕ್ಷ್ಣ ಚಳಿಗಾದಲ್ಲಿ ಕೂಡ ಇದು ಬದುಕುತ್ತದೆ. ಇದು ಹೊಸ ಜೀವನದ ಗುರುತಾಗಿದೆ. ರಕ್ತ, ಶುದ್ಧತೆ ಮತ್ತು ಗೌರವದ ಸಂಕೇತವಾಗಿದೆ.

ಯೂಲ್ ಲಾಗ್

ಯೂಲ್ ಲಾಗ್

ಪಾಗನ್ ಸಂಪ್ರದಾಯಗಳಲ್ಲಿ ಇದು ಕಂಡುಬರುತ್ತದೆ. ಯೂಲ್ ಸೂರ್ಯ ಅಥವಾ ಬೆಳಕನ್ನು ಪ್ರತಿನಿಧಿಸುತ್ತದೆ. ಲಾಗ್‌ ಅನ್ನು ಉರಿಸುವುದು ಕ್ರಿಸ್ತನ ಮರಣವನ್ನು ಪ್ರತಿನಿಧಿಸುತ್ತದೆ. ಇದು ನಂಬಿಕೆಯ ಬೆಳಕಾಗಿದ್ದು, ಉತ್ತಮ ಆರೋಗ್ಯ, ಸಮೃದ್ಧಿ ಮತ್ತುಶಾಂತಿಯನ್ನು ಪ್ರತಿನಿಧಿಸುತ್ತದೆ. ಇದು ಕ್ರಿಸ್ತನು ಮರಣ ಹೊಂದಿದ ಶಿಲುಬೆಯನ್ನು ಸೂಚಿಸುತ್ತದೆ.

ಜಿಂಜರ್‌ಬ್ರೆಡ್ ಮ್ಯಾನ್

ಜಿಂಜರ್‌ಬ್ರೆಡ್ ಮ್ಯಾನ್

ಇದನ್ನು ಬೇಕ್ ಮಾಡಿ ಇಲ್ಲವೇ ತಯಾರಿಸಿ ಸಿದ್ಧಪಡಿಸಲಾಗುತ್ತದೆ. ಆಡಮ್ ಮತ್ತು ಈವ್‌ರ ಹುಟ್ಟನ್ನು ಇದು ಸಾರುತ್ತದೆ. ಧೂಳಿನಿಂದ ದೇವರು ಇವರಿಬ್ಬರನ್ನು ನಿರ್ಮಿಸಿರುತ್ತಾರೆ. ಇದನ್ನು ಸೇವಿಸುವುದರಿಂದ ಮಾನವ ಜೀವನವು ನಶ್ವರವಾಗಿದ್ದು ಇದ್ದಷ್ಟು ದಿನ ಶಾಂತಿ ಸಮಾಧಾನದಿಂದ ದೇವರ ದಯೆಯೊಂದಿಗೆ ಬದುಕಿ ಎಂಬುದನ್ನು ತಿಳಿಸುತ್ತದೆ.

English summary

15-interesting-facts-about-christmas

The tradition is only growing on a larger scale among everyone, irrespective of the religion. Christianity, as a whole, is fully embedded with symbols that have been derived from the Holy Bible; and many of the symbols have become a part of Christmas too. Other than the Bible as a source, people have come to recognize many other symbols that were a part of daily life too.
X
Desktop Bottom Promotion