For Quick Alerts
ALLOW NOTIFICATIONS  
For Daily Alerts

ಲಕ್ಷ್ಮೀ ದೇವಿಯನ್ನು ಆಕರ್ಷಿಸುವ 10 ವಸ್ತುಗಳು

By Deepak M
|

ಯಥೇಚ್ಛವಾದ ಹಣ ಮತ್ತು ಸಂಪತ್ತನ್ನು ಸಂಪಾದಿಸುವ ಆಲೋಚನೆ ಯಾರಿಗೆ ತಾನೇ ಹಿಡಿಸುವುದಿಲ್ಲ ? ಬಹುತೇಕ ನಾವೆಲ್ಲರು ಅದನ್ನೆ ನಿತ್ಯ ಜಪ ಮಾಡುತ್ತಿರುತ್ತೇವೆ. ದಿನ ನಿತ್ಯ ಈ ಗುರಿಯನ್ನು ಈಡೇರಿಸಿಕೊಳ್ಳಲು ನಾವು ನಾನಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ನಮ್ಮ ಬದುಕಿಗೆ ಅಗತ್ಯವಾದ ಹಣವನ್ನು ಸಂಪಾದಿಸಲು ಸಿಕ್ಕಾ ಪಟ್ಟೆ ಕಷ್ಟವನ್ನು ಪಡುತ್ತೇವೆ. ಹಣ ಸಂಪಾದಿಸುವುದು ಕಡು ಕಷ್ಟದ ಕೆಲಸ ಆದರೆ ಸಂಪಾದಿಸಿದ ಹಣವನ್ನು ಉಳಿಸಿಕೊಳ್ಳುವುದು ಮತ್ತೂ ಕಷ್ಟ. ಹಿಂದೂಗಳು ತಮ್ಮ ಹಣ ಮತ್ತು ಐಶ್ವರ್ಯವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಲಕ್ಷ್ಮೀ ದೇವಿಯನ್ನು ಆರಾಧಿಸುತ್ತಾರೆ. ಆಕೆಯ ಆಶೀರ್ವಾದ ಲಭಿಸಿದರೆ ಸಾಕು ಅಷ್ಟೈಶ್ವರ್ಯಗಳು ನಮ್ಮ ಮನೆಯಲ್ಲಿಯೇ ನೆಲೆಸುತ್ತದೆ ಎಂಬ ನಂಬಿಕೆ ಮನೆ ಮಾಡಿದೆ.

ಲಕ್ಷ್ಮೀ ದೇವಿಯು ಹಣ ಮತ್ತು ಸಂಪತ್ತಿನ ಅಧಿ ದೇವತೆ ಎಂದು ಪರಿಗಣಿಸಲ್ಪಟ್ಟಿದ್ದಾಳೆ. ಲಕ್ಷ್ಮೀ ದೇವಿ ನೆಲೆಸಿರುವ ಮನೆಯಲ್ಲಿ ಅಷ್ಟೈಶ್ವರ್ಯಗಳು ನೆಲೆಸಿರುತ್ತವೆ ಎಂಬ ನಂಬಿಕೆ ನಮ್ಮ ಪುರಾಣಗಳಲ್ಲಿ ವ್ಯಕ್ತವಾಗಿದೆ. ಆದರೆ ಲಕ್ಷ್ಮೀ ಚಂಚಲೆ, ನಿಂತಲ್ಲಿ ನಿಲ್ಲಲಾರಳು. ತನ್ನನ್ನು ಆರಾಧಿಸುವ ಸ್ಥಳ ಮತ್ತು ವ್ಯಕ್ತಿಗಳನ್ನು ಆಕೆ ಹುಡುಕಿಕೊಂಡು ಹೋಗುತ್ತಾ ಇರುತ್ತಾಳೆ ಎಂಬ ಮಾತಿದೆ.

ಅದಕ್ಕಾಗಿಯೇ ಲಕ್ಷೀಯನ್ನು ಮನೆಗೆ ಆಕರ್ಷಿಸುವ ಹಲವಾರು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಹಿಂದೂ ಪುರಾಣಗಳಲ್ಲಿ ಮತ್ತು ವೇದಗಳಲ್ಲಿ ಲಕ್ಷ್ಮೀ ದೇವಿಯನ್ನು ಸಂತೃಪ್ತಿಪಡಿಸುವ ಹಲವಾರು ವಸ್ತುಗಳು ಉಲ್ಲೇಖಗೊಂಡಿವೆ. ನಂಬಿಕೆಗಳ ಪ್ರಕಾರ ಈ ವಸ್ತುಗಳು ಲಕ್ಷ್ಮೀ ದೇವಿಯನ್ನು ಪ್ರಸನ್ನಗೊಳಿಸಬಲ್ಲವಂತೆ. ಈ ವಸ್ತುಗಳು ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಿ ಸದಾ ಮನೆಯಲ್ಲಿಯೇ ನೆಲೆಗೊಳ್ಳುವಂತೆ ಮಾಡಿ, ಮನೆಯ ಸಂಪತ್ತು ಮತ್ತು ಐಶ್ವರ್ಯವನ್ನು ಹೆಚ್ಚಿಸುತ್ತವೆಯಂತೆ. ಲಕ್ಷ್ಮೀ ದೇವಿಯನ್ನು ಆಕರ್ಷಿಸುವ ಆ 10 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

ತೆಂಗಿನಕಾಯಿ

ತೆಂಗಿನಕಾಯಿ

ತೆಂಗಿನಕಾಯಿಯನ್ನು ಶ್ರೀಫಲ ಎಂದು ಸಹ ಕರೆಯುತ್ತಾರೆ. ಅಂದರೆ ಲಕ್ಷ್ಮೀ ದೇವಿಯ ಫಲ ಎಂದರ್ಥ. ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಲು ತೆಂಗಿನಕಾಯಿಯನ್ನು ಮನೆಯಲ್ಲಿ ಸದಾ ಇಡಬೇಕೆಂದು ಹೇಳುತ್ತಾರೆ. ಇದು ಲಕ್ಷ್ಮೀಯನ್ನು ಆಕರ್ಷಿಸುವ ಅತ್ಯಂತ ಪವಿತ್ರವಾದ ಫಲವೆಂದು ಪರಿಗಣಿಸಲ್ಪಟ್ಟಿದೆ.

ಪಾದರಸದ ಮೂರ್ತಿ

ಪಾದರಸದ ಮೂರ್ತಿ

ಲಕ್ಷ್ಮೀ ಮತ್ತು ಗಣಪತಿಯರ ಪಾದರಸದ ಮೂರ್ತಿಯನ್ನು ಮನೆಯಲ್ಲಿ ಇಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಪಾದರಸವು ಮಹಾಲಕ್ಷ್ಮೀಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಇದರಲ್ಲಿ ಮಾಡಿರುವ ಮೂರ್ತಿಯು ಲಕ್ಷ್ಮೀ ದೇವಿಯನ್ನು ಖಂಡಿತವಾಗಿ ಆಕರ್ಷಿಸುತ್ತದೆ.

ಕವಡೆ

ಕವಡೆ

ಕವಡೆಗಳು ಸಮುದ್ರ ಜನ್ಯ ವಸ್ತುವಾಗಿದೆ. ಲಕ್ಷ್ಮೀ ದೇವಿಯು ಸಹ ಸಮುದ್ರದಲ್ಲಿ ಜನಿಸಿದ ಕಾರಣದಿಂದ ಈಕೆಗೆ ಕವಡೆ ಎಂದರೆ ಪ್ರೀತಿ. ಕವಡೆಗಳನ್ನು ಮನೆಯಲ್ಲಿ ಇಡುವ ಮೂಲಕ ಆಕೆಯನ್ನು ಆಕರ್ಷಿಸಬಹುದು ಎಂದು ಹೇಳಲಾಗುತ್ತದೆ.

ಲಕ್ಷ್ಮೀ ಮತ್ತು ಗಣಪತಿಯರ ಮೂರ್ತಿ

ಲಕ್ಷ್ಮೀ ಮತ್ತು ಗಣಪತಿಯರ ಮೂರ್ತಿ

ನಂಬಿಕೆಗಳ ಪ್ರಕಾರ ಲಕ್ಷ್ಮೀ ಮತ್ತು ಗಣಪತಿಯರ ಮೂರ್ತಿಯನ್ನು ಒಟ್ಟಿಗೆ ಇಟ್ಟು ಪೂಜಿಸುವುದು ಅತ್ಯಂತ ಶುಭವಂತೆ. ಗಣಪತಿಯ ಜೊತೆಗೆ ಲಕ್ಷ್ಮೀಯನ್ನು ಪೂಜಿಸಿದರೆ ಆಕೆಗೆ ಮತ್ತಷ್ಟು ಸಂತೋಷವಾಗುತ್ತದೆಯಂತೆ. ಅದರಲ್ಲೂ ಈ ಎರಡು ಮೂರ್ತಿಗಳು ಬೆಳ್ಳಿಯದಾಗಿದ್ದರಂತು ಆ ಮನೆಯಲ್ಲಿ ಸಂಪತ್ತು ಮತ್ತು ಐಶ್ವರ್ಯವು ಎಂದಿಗು ಕಡಿಮೆಯಾಗುವುದಿಲ್ಲವಂತೆ.

ಮೋತಿ ಶಂಖ

ಮೋತಿ ಶಂಖ

ಇದೊಂದು ಬಗೆಯ ವಿಶೇಷವಾದ ಶಂಖವಾಗಿದ್ದು, ಮನೆಯಲ್ಲಿ ಇಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.

ಲಕ್ಷ್ಮೀ ದೇವಿಯ ಹೆಜ್ಜೆಗುರುತುಗಳು

ಲಕ್ಷ್ಮೀ ದೇವಿಯ ಹೆಜ್ಜೆಗುರುತುಗಳು

ಲಕ್ಷ್ಮೀ ದೇವಿಯ ಬೆಳ್ಳಿಯ ಹೆಜ್ಜೆ ಗುರುತುಗಳನ್ನು ಮನೆಯಲ್ಲಿ ಇಡುವುದರಿಂದ ಆಕೆಯನ್ನು ಮನೆಗೆ ಆಕರ್ಷಿಸಬಹುದು. ಈ ಹೆಜ್ಜೆ ಗುರುತುಗಳನ್ನು ನೀವು ಹಣವಿಡುವ ದಿಕ್ಕಿಗೆ ಮುಖಮಾಡಿ ಇಡಿ. ಇದರಿಂದ ಅಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.

ಕಮಲದ ಬೀಜಗಳ ಜಪಮಾಲೆ

ಕಮಲದ ಬೀಜಗಳ ಜಪಮಾಲೆ

ಸಾಕ್ಷಾತ್ ಲಕ್ಷ್ಮೀ ದೇವಿಯು ಕಮಲದ ಹೂವಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲಿ ಮನೆ ಮಾಡಿದೆ. ಅದರಲ್ಲೂ ನೀವು ಕಮಲದ ಬೀಜಗಳ ಜಪಮಾಲೆಯನ್ನು ಮನೆಯಲ್ಲಿ ಇರಿಸುವುದರಿಂದ ಆಕೆಯನ್ನು ಮನೆಗೆ ಆಹ್ವಾನಿಸಬಹುದು ಎಂದು ಹೇಳಲಾಗುತ್ತದೆ.

ದಕ್ಷಿಣ ಮುಖಿ ಶಂಖ

ದಕ್ಷಿಣ ಮುಖಿ ಶಂಖ

ಶಂಖದಲ್ಲಿ ನೀರನ್ನು ತುಂಬಿ ಅದನ್ನು ದಕ್ಷಿಣಾಭಿಮುಖವಾಗಿ ಇಡುವ ಮೂಲಕ ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಬಹುದು.

ಶ್ರೀ ಯಂತ್ರ

ಶ್ರೀ ಯಂತ್ರ

ಈ ಯಂತ್ರವು ಸಂಪತ್ತನ್ನು ಆಕರ್ಷಿಸುವ ಅದ್ಭುತ ಶಕ್ತಿಯನ್ನು ತನ್ನಲ್ಲಿ ಹೊಂದಿದೆ. ಈ ಯಂತ್ರವನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಮನೆಗೆ ಸಂಪತ್ತನ್ನು ಆಕರ್ಷಿಸಬಹುದು.

ಏಕಾಕ್ಷಿ ತೆಂಗಿನಕಾಯಿ

ಏಕಾಕ್ಷಿ ತೆಂಗಿನಕಾಯಿ

ಇದೊಂದು ವಿಶೇಷ ಬಗೆಯ ತೆಂಗಿನಕಾಯಿ. ಇದನ್ನು ತಂತ್ರ ಶಾಸ್ತ್ರದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಮನೆಯಲಿ ಇಡುವುದರಿಂದ ತುಂಬಾ ಒಳ್ಳೆಯ ಫಲಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

English summary

10 Things To Attract Goddess Lakshmi

These things to attract Goddess Lakshmi ensures that the Goddess stays in the house and blesses the family with sufficient wealth and prosperity. Take a look at these 10 things to attract Goddess Lakshmi.
Story first published: Saturday, July 26, 2014, 16:47 [IST]
X
Desktop Bottom Promotion