For Quick Alerts
ALLOW NOTIFICATIONS  
For Daily Alerts

Women's Day Special: ಮಿಶೆಲ್‌ ಒಬಾಮ ಹೇಳಿದ ಈ 7 ವಿಷಯ ಪಾಲಿಸಿದರೆ ಆ ಮಹಿಳೆಗೆ ಸಕ್ಸಸ್‌ ಗ್ಯಾರಂಟಿ

|

ಮಿಶೆಲ್‌ ಒಬಾಮ ಈ ಹೆಸರು ಕೇಳಿದರೆ ಸಾಕು ಒಂಥರಾ ಗೌರವದ ಭಾವ ಮೂಡುತ್ತದೆ. ಈ ಗೌರವಕ್ಕೆ ಕಾರಣ ಅವರು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಪತ್ನಿ ಎಂಬ ಕಾರಣಕ್ಕೆ ಅಲ್ಲ, ಬದಲಿಗೆ ಅವರ ವ್ಯಕ್ತಿತ್ವದಿಂದ ಇಂದು ಎಲ್ಲರ ಮನದಲ್ಲಿ ಒಂದು ಸ್ಥಾನ ಗಳಿಸಿದ್ದಾರೆ.

ಮಿಶೆಲ್‌ ಒಬಾಮ ಅವರ ವ್ಯಕ್ತಿತ್ವ ಪ್ರತಿಯೊಬ್ಬ ಮಹಿಳೆಗೂ ಮಾದರಿ. ಮಹಿಳಾ ದಿನ ವಿಶೇಷವಾಗಿ ನಾವು ಈ ಲೇಖನದಲ್ಲಿ ಪ್ರತಿಯೊಬ್ಬ ಮಹಿಳೆ ಅಳವಡಿಸಿಕೊಳ್ಳಬೇಕಾಗಿರುವ ಮಿಶೆಲ್‌ನಲ್ಲಿರುವ 7 ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

ಗೆಳೆತನಕ್ಕೆ ಪ್ರಾಮುಖ್ಯತೆ

ಗೆಳೆತನಕ್ಕೆ ಪ್ರಾಮುಖ್ಯತೆ

ನಾವೆಲ್ಲಾ ಮದುವೆ, ಮಕ್ಕಳು ಅಂತ ಆದ ಮೇಲೆ ನಮ್ಮದೇ ಲೋಕದಲ್ಲಿ ಜಂಜಾಟದಲ್ಲಿ, ಜವಾಬ್ದಾರಿಯ ಹೆಸರಿನಲ್ಲಿ ಕಳೆದು ಹೋಗುತ್ತೇವೆ. ಹೀಗೆ ಮಾಡುತ್ತಿರುವವರು ಮಿಶೆಲ್‌ ಅವರ ಈ ಸೂತ್ರ ಅನುಸರಿಸಿದರೆ ಬದುಕಿನಲ್ಲಿ ಮತ್ತಷ್ಟು ಖುಷಿ ಸಿಗುವುದು. ಹೌದು ಮಿಶೆಲ್‌ ಒಬಾಮ ವೈಟ್‌ ಹೌಸ್‌ನಲ್ಲಿ ಇದ್ದಾಗಲೂ ಗೆಳತಿಯರ ಜೊತೆ ವೀಕೆಂಡ್ ಟ್ರಿಪ್ ಮಾಡುತ್ತಿದ್ದರು, ಸಮ್ಮರ್‌ ಕ್ಯಾಂಪ್‌ಗಳನ್ನು ಮಾಡುತ್ತಿದ್ದರು. ಮಹಿಳೆಯ ಈ ಸ್ನೇಹ ಅನೇಕ ಹೊಸ ಚಿಂತನೆ ಮೂಡಿಸುತ್ತದೆ, ಹೊಸ ಹುರುಪು ತರುತ್ತದೆ ಎಂದು ಬಲವಾಗಿ ನಂಬಿದ್ದರು.

ನೀವು ಕೂಡ ಅಷ್ಟೇ ನಿಮಗಾಗಿ ಸ್ವಲ್ಪ ಸಮಯ ಕಳೆಯಲು ಅಭ್ಯಾಸ ಮಾಡಿ ನೋಡಿ, ಯಾವ ಅಸಮಧಾನ, ಜಿಗುಪ್ಸೆ ಏನೂ ಇಲ್ಲದ ಹೊಸ ವ್ಯಕ್ತಿಯಾಗಿ ಬದುಕನ್ನು ಆನಂದಿಸುತ್ತೀರಿ.

 ಮದುವೆಯ ಬಂಧದಲ್ಲಿ ನಮ್ಮನ್ನು ಖುಷಿಯಾಗಿರಿಸುವುದು ಗಂಡನ ಕರ್ತವ್ಯ ಮಾತ್ರವಲ್ಲ

ಮದುವೆಯ ಬಂಧದಲ್ಲಿ ನಮ್ಮನ್ನು ಖುಷಿಯಾಗಿರಿಸುವುದು ಗಂಡನ ಕರ್ತವ್ಯ ಮಾತ್ರವಲ್ಲ

ನಮ್ಮಲ್ಲಿ ಅನೇಕ ಮಹಿಳೆಯರಿಗೆ ಒಂದು ಸಮಸ್ಯೆ ಇರುತ್ತದೆ, ನನ್ನ ಗಂಡ ನನ್ನನ್ನು ಗಮನಿಸುತ್ತಿಲ್ಲ, ಹೆಚ್ಚು ಪ್ರೀತಿ ತೋರಿಸುತ್ತಿಲ್ಲ ಹೀಗೆ ಪ್ರತಿಯೊಂದು ವಿಷಯಕ್ಕೆ ಅವರತ್ತಲೇ ಬೊಟ್ಟು ಮಾಡುತ್ತಾರೆ, ಆದರೆ ನಮ್ಮನ್ನು ಖುಷಿಯಾಗಿರಿಸಲು ಗಂಡನ ಮಾತ್ರ ಹೊಣೆ ಮಾಡಿದರೆ ಸಾಲದು ಅದಕ್ಕೆ ನಾವು ಕೂಡ ಪ್ರಯತ್ನಿಸಬೇಕು ಎನ್ನುವುದು ಮಿಶೆಲ್ ಅವರ ಅಭಿಪ್ರಾಯವಾಗಿದೆ. ನನ್ನ ಅವಶ್ಯಕತೆ ಏನು ಎಂಬುವುದನ್ನು ಅವರಿಗಿಂತ ಮಿಗಿಲಾಗಿ ನಾವು ಅರ್ಥ ಮಾಡಿಕೊಂಡಿರಬೇಕು ಎಂಬುವುದು ಅವರು ಹೇಳುವ ಕಿವಿ ಮಾತಾಗಿದೆ. ಅದು ನಿ

ನಮ್ಮ ಶಕ್ತಿ ನಾವು ತೋರಬೇಕೇ ಹೊರತು ಬೇರೆಯವರು ನಿಮ್ಮನ್ನು ಬಳಸಿಕೊಳ್ಳುವಂತೆ ಇರಬಾರದು

ನಮ್ಮ ಶಕ್ತಿ ನಾವು ತೋರಬೇಕೇ ಹೊರತು ಬೇರೆಯವರು ನಿಮ್ಮನ್ನು ಬಳಸಿಕೊಳ್ಳುವಂತೆ ಇರಬಾರದು

ನಮ್ಮಲ್ಲಿ ಹೆಚ್ಚಿನವರ ಒಂದು ದೊಡ್ಡ ಸಮಸ್ಯೆ ಅಂದ್ರೆ ಬೇರೆಯವರು ಏನೂ ಯೋಚನೆ ಮಾಡುತ್ತಾರೆ ಎಂದು ಹೆದರಿ ನಮ್ಮಲ್ಲಿರುವ ಶಕ್ತಿಯನ್ನು ಅರಿಯದೇ ಹೋಗುವುದು. ಮಿಶೆಲ್‌ ಹೇಳುತ್ತಾರೆ ಅಂಥದ್ದೆಲ್ಲಾ ಯೋಚಿಸುತ್ತಾ ಕೂತರೆ ನಮ್ಮದೇ ಹೆಜ್ಜೆ ಗುರಿತು ಮೂಡಿಸಲು ಸಾಧ್ಯವಿಲ್ಲ.

ನಿಮ್ಮಲ್ಲಿ ಏನಾದರೂ ಸಾಧಿಸುವ ಛಲ ಇದ್ದರೆ ಬೇರೆಯವರು ಏನು ಹೇಳುತ್ತಾರೆ ಎಂದು ಚಿಂತಿಸುವ ಬದಲು ನಿಮ್ಮ ಮನಸ್ಸು ಹೇಳಿದಂತೆ ಕೇಳಿ.

ನಮ್ಮಲ್ಲಿರುವ ಅವಿಶ್ವಾಸ ಮೆಟ್ಟಿ ನಿಲ್ಲುವುದನ್ನು ಹೇಳಿದ ಮಿಶೆಲ್

ನಮ್ಮಲ್ಲಿರುವ ಅವಿಶ್ವಾಸ ಮೆಟ್ಟಿ ನಿಲ್ಲುವುದನ್ನು ಹೇಳಿದ ಮಿಶೆಲ್

ಅವರು ಹೇಳುತ್ತಾರೆ ಕೆಲವೊಮ್ಮೆ ನಮ್ಮ ಸಾಮರ್ಥ್ಯದ ಬಗ್ಗೆ ನಮ್ಮಲ್ಲೇ ನಂಬಿಕೆ ಇರುವುದಿಲ್ಲ, ನಮ್ಮ ಶಕ್ತಿಯೇನು ಎಂದು ತಿಳಿಯಲು ಹೋಗುವುದಿಲ್ಲ. ನಮ್ಮಲ್ಲಿರುವ ಈ ಅವಿಶ್ವಾಸವನ್ನು ಮೆಟ್ಟಿ ನಿಂತರೆ ಮಾತ್ರ ಸಾಧನೆಯ ಹಾದಿ ಕಾಣುವುದು, ಈ ಮಾತು ಎಷ್ಟು ಸತ್ಯವಲ್ಲವೇ?

 ಪುರುಷ ಹಾಗೂ ಮಹಿಳೆಯ ಡ್ರೆಸ್ಸಿಂಗ್ ಬಗ್ಗೆ ನಮ್ಮ ಯೋಚನೆ ಬದಲಾಗಬೇಕು ಎಂದು ಹೇಳಿದ ಮಿಶೆಲ್

ಪುರುಷ ಹಾಗೂ ಮಹಿಳೆಯ ಡ್ರೆಸ್ಸಿಂಗ್ ಬಗ್ಗೆ ನಮ್ಮ ಯೋಚನೆ ಬದಲಾಗಬೇಕು ಎಂದು ಹೇಳಿದ ಮಿಶೆಲ್

ಮಿಶೆಲ್‌ ಒಬಾಮ ಒಂದು ಸಂದರ್ಶನದಲ್ಲಿ ಹೇಳುತ್ತಾರೆ, ನಾನು ಯಾವ ಡ್ರೆಸ್‌ ಹಾಕಿದೆ, ಯಾವ ಬ್ರಾಸ್‌ಲೆಟ್ ಧರಿಸಿದರೆ ಎಂದೆಲ್ಲಾ ಗಮನಿಸಿ ಸುದ್ದಿ ಮಾಡುತ್ತಾರೆ. ಆದರೆ ಅವರು(ಒಬಾಮ) 8 ವರ್ಷದಿಂದ ಒಂದೇ ಶೂ ಧರಿಸುತ್ತಿದ್ದಾರೆ, ಅದನ್ನು ಯಾರೂ ಗಮನಿಸುತ್ತಿಲ್ಲ. ಪುರುಷ ಹಾಗೂ ಮಹಿಳೆ ಬಗ್ಗೆ ಈ ತಾರತಮ್ಯ ಏಕೆ? ಎಂದು ಕೇಳಿದ್ದಾರೆ.

ಹೌದಲ್ವಾ ಸೆಲೆಬ್ರಿಟಿ ಮಹಿಳೆಯರೆಂದರೆ ಬರೀ ಮೇಕಪ್‌, ಡ್ರೆಸ್ಸಿಂಗ್‌ ಗಮನಿಸುತ್ತಾರೆ, ಬದಲಿಗೆ ಅವರ ಪ್ರತಿಭೆ ಬಗ್ಗೆ ಹೇಳುವುದು ಒಳ್ಳೆಯದಲ್ಲವೇ?

ಮಹಿಳೆಯರ ಸಬಲೀಕರಣದ ಪ್ರಾಮುಖ್ಯತೆ ತಿಳಿಸಿದ ಮಿಶೆಲ್ ಒಬಾಮ

ಮಹಿಳೆಯರ ಸಬಲೀಕರಣದ ಪ್ರಾಮುಖ್ಯತೆ ತಿಳಿಸಿದ ಮಿಶೆಲ್ ಒಬಾಮ

ಮಹಿಳೆಯರ ಸಬಲೀಕರಣದ ಬಗ್ಗೆ ಧ್ವನಿ ಎತ್ತುವ ಮಿಶೆಲ್ ' ನನ್ನ ಇಬ್ಬರು ಹೆಣ್ಮಕ್ಕಳಿಗೆ 'ನೀವು ಏನು ಬಯಸುತ್ತೀರೋ ಅದಾಗಿ ಎಂದು ಹೇಳುತ್ತಿರುತ್ತೀನಿ, ಮಹಿಳೆಯರು ಏನು ಮಾಡಬೇಕು ಎಂಬುವುದಕ್ಕೆ ಯಾವುದೇ ನಿರ್ಬಂಧ ಇರಬಾರದು' ಎಂದು ಹೇಳುತ್ತಾರೆ.

ಮಹಿಳೆಯರ ದಿನ ಆಚರಿಸುವ ಉದ್ದೇಶ ಕೂಡ ಅದೇ ಅಲ್ಲವೇ.

ಸೋಲುವುದರಲ್ಲಿ ತಪ್ಪೇನಿಲ್ಲ ಎಂದ ಮಿಶೆಲ್

ಸೋಲುವುದರಲ್ಲಿ ತಪ್ಪೇನಿಲ್ಲ ಎಂದ ಮಿಶೆಲ್

ಒಂದು ಸಂದರ್ಶನದಲ್ಲಿ ಮಿಶೆಲ್ ಹೇಳುತ್ತಾರೆ 'ನನ್ನ ಜೀವನದಲ್ಲಿ ಅನೇಕ ಬಾರಿ ಸೋತಿದ್ದೇನೆ, ಆದರೆ ಅದರಿಂದ ತುಂಬಾ ಕಲಿಯಲು ಸಾಧ್ಯವಾಗಿದೆ. ಆದ್ದರಿಂದ ಸೋತೆ ಎಂದು ಕೂರುವ ಬದಲು ಮತ್ತಷ್ಟು ಪ್ರಯತ್ನ ಮಾಡಬೇಕು. ಮೊದಲು ಭಯ ಪಡುವುದು ನಿಲ್ಲಿಸಬೇಕು' ಎಂದಿದ್ದಾರೆ.

ಮಿಶೆಲ್‌ ಅವರು ನೀಡಿರುವ ಈ 7 ಸಂದೇಶಗಳನ್ನು ಅಳವಡಿಸಿದ್ದೇ ಆದರೆ ಆ ಮಹಿಳೆ ಕೂಡ ಪವರ್‌ ಫುಲ್ ಮಹಿಳೆ ಎನಿಸಿಕೊಳ್ಳುವುದರಲ್ಲಿ ಯಾವುದೇ ಡೌಟಿಲ್ಲ.

English summary

Inspiring Lessons Taught by Michelle Obama in Kannada

Inspiring Lessons Taught by Michelle Obama in Kannada, Read on,
X