For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಒತ್ತಡ ಇರಲೇಬೇಕು, ಅದು ಕೂಡ ಒಳ್ಳೆಯದೇ ಗೊತ್ತಾ!!!

|

ಒತ್ತಡವನ್ನು ಹೆಚ್ಚಾಗಿ ಋಣಾತ್ಮಕ ಆಂಶ ಎಂದು ಪರಿಗಣಿಸುತ್ತೇವೆ. ನಮ್ಮೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಒತ್ತಡವೇ ಪ್ರಮುಖ ಕಾರಣ ಎಂಬುದು ಹಿಂದಿನಿಂದಿಲೂ ಕೇಳಿಕೊಂಡೇ ಬರುತ್ತೀದ್ದೇವೆ. ಅದೂ ಸತ್ಯವಾದ ಮಾತೇ. ಅತಿಯಾದ ಒತ್ತಡವು ನಿಮ್ಮ ಮಾನಸಿಕ ಮನಸ್ಥಿತಿಯನ್ನು ಹಾಳು ಮಾಡುವುದಲ್ಲದೇ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸ್ವಲ್ಪ ಪ್ರಮಾಣದ ಒತ್ತಡವು ಒಳ್ಳೆಯದೇ. ಇದು ನಮ್ಮ ಜೀವನದಲ್ಲಿ ಇಲ್ಲದೇ ಹೋದಲ್ಲಿ ಬದುಕೇ ನಶ್ವರ ಎಂದು ಅನಿಸುವುದು ಮಾತ್ರ ನಿಜ. ನಿಮ್ಮಲ್ಲಿರುವ ಸಣ್ಣ ಪ್ರಮಾಣದ ಒತ್ತಡವು ಬದುಕಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ದೈನಂದಿನವಾಗಿ ನಿರ್ವಹಿಸಬಹುದಾದ ಸಣ್ಣ ಮತ್ತು
ಒತ್ತಡವನ್ನು ಹೆಚ್ಚಾಗಿ ಋಣಾತ್ಮಕ ಆಂಶ ಎಂದು ಪರಿಗಣಿಸುತ್ತೇವೆ. ನಮ್ಮೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಒತ್ತಡವೇ ಪ್ರಮುಖ ಕಾರಣ ಎಂಬುದು ಹಿಂದಿನಿಂದಿಲೂ ಕೇಳಿಕೊಂಡೇ ಬರುತ್ತೀದ್ದೇವೆ. ಅದೂ ಸತ್ಯವಾದ ಮಾತೇ. ಅತಿಯಾದ ಒತ್ತಡವು ನಿಮ್ಮ ಮಾನಸಿಕ ಮನಸ್ಥಿತಿಯನ್ನು ಹಾಳು ಮಾಡುವುದಲ್ಲದೇ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸ್ವಲ್ಪ ಪ್ರಮಾಣದ ಒತ್ತಡವು ಒಳ್ಳೆಯದೇ. ಇದು ನಮ್ಮ ಜೀವನದಲ್ಲಿ ಇಲ್ಲದೇ ಹೋದಲ್ಲಿ ಬದುಕೇ ನಶ್ವರ ಎಂದು ಅನಿಸುವುದು ಮಾತ್ರ ನಿಜ. ನಿಮ್ಮಲ್ಲಿರುವ ಸಣ್ಣ ಪ್ರಮಾಣದ ಒತ್ತಡವು ಬದುಕಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ದೈನಂದಿನವಾಗಿ ನಿರ್ವಹಿಸಬಹುದಾದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಒತ್ತಡವನ್ನು ಯುಸ್ಟ್ರೈಸ್ ಎಂದು ಕರೆಯಲಾಗುತ್ತದೆ. ಸಣ್ಣ ಪ್ರಮಾಣದ ಒತ್ತಡವು ವಾಸ್ತವವಾಗಿ ಕೆಲವು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅವುಗಳು ಯಾವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಸಣ್ಣ ಪ್ರಮಾಣದ ಒತ್ತಡದ ಕೆಲವು ಸಕಾರಾತ್ಮಕ ಪರಿಣಾಮಗಳು ಇಲ್ಲಿವೆ:

ಒತ್ತಡವು ಪ್ರೇರಣೆ ನೀಡುತ್ತದೆ:

ಒತ್ತಡವು ಪ್ರೇರಣೆ ನೀಡುತ್ತದೆ:

ಒತ್ತಡವು ಉತ್ತುಂಗಕ್ಕೇರಿದಾಗ ನಿಮ್ಮ ಪ್ರೇರಣೆಯು ಇಳಿಕೆಯಾಗಬಹುದು. ಆಗ ನೀವು ನಿಮ್ಮ ಕೆಲಸಕ್ಕೆ ಹಿಂಜರಿಯಬಹುದು. ಆದರೆ ಮಧ್ಯಮ ಮಟ್ಟದ ಒತ್ತಡವು ನಿಮ್ಮನ್ನು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಉದಾಹರಣೆಗೆ, ಕೆಲಸಕ್ಕೆ ನೀಡುವ ಗಡುವು ಒತ್ತಡವನು ಸೃಷ್ಟಿಸುತ್ತದೆ. ಇದು ಜನರು ತಮ್ಮ ಕೆಲಸದತ್ತ ಹೆಚ್ಚು ಗಮನಹರಿಸುವಂತೆ ಮಾಡುತ್ತದೆ. ಏಕೆಂದರೆ ಸಮಯ ಮುಗಿಯುವ ಹಂತಕ್ಕೆ ಬಂದಿರುವಾಗ , ನಾನು ಅಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಯೋಚಿಸುತ್ತೇವೆ. ಆದರೆ ನಾವು ಒತ್ತಡಕ್ಕೊಳಗಾಗುವವರೆಗೂ ಪ್ರೇರಣೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಒತ್ತಡವು ಬೆಳವಣಿಗೆಯನ್ನು ಉತ್ತೇಜಿಸುತ್ತದೆ:

ಒತ್ತಡವು ಬೆಳವಣಿಗೆಯನ್ನು ಉತ್ತೇಜಿಸುತ್ತದೆ:

ನಿಮ್ಮ ಒತ್ತಡವು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒತ್ತಡದಿಂದ ಸಮಸ್ಯೆಯನ್ನು ಪರಿಹರಿಸುವ ಮಾರ್ಗವನ್ನು ಹುಡುಕುತ್ತೇವೆ ಜೊತೆಗೆ ಅದನ್ನು ನಿವಾರಿಸುವ ಆತ್ಮವಿಶ್ವಾಸವು ನಿಮ್ಮಲ್ಲಿ ಮೂಡುತ್ತದೆ. ನಿಮ್ಮಲ್ಲಿರುವ ಭಯ ಅಥವಾ ಸವಾಲುಗಳನ್ನು ಎದುರಿಸಲು ಒತ್ತಡವನ್ನು ಬಳಕೆ ಮಾಡಬೇಕು ಒಮ್ಮೆ ಭಯವನ್ನು ಎದುರಿಸಿದ ಮೇಲೆ, ಭವಿಷ್ಯದಲ್ಲಿ ಅಂತಹ ಸವಾಲುಗಳನ್ನು ನಿಭಾಯಿಸಲು ತಯಾರಾಗಿರುತ್ತೀರಿ. ಏಕೆಂದರೆ ನೀವು ಅದನ್ನು ಈಗಾಗಲೇ ಅನುಭವಿಸಿರುತ್ತೀರಿ. ಈ ಮೂಲಕ ನಿಮ್ಮ ಬೆಳವಣಿಗೆಯಾಗುತ್ತದೆ.

ಒತ್ತಡವು ಬಂಧವನ್ನು ಉತ್ತೇಜಿಸುತ್ತದೆ:

ಒತ್ತಡವು ಬಂಧವನ್ನು ಉತ್ತೇಜಿಸುತ್ತದೆ:

ಒತ್ತಡದ ಅತ್ಯಂತ ಆಶ್ಚರ್ಯಕರ ಪ್ರಯೋಜನವೆಂದರೆ ಅದು ಪರಸ್ಪರ ಸಂಬಂಧಗಳನ್ನು ಬೆಸೆಯಲು ಸಹಾಯ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಾಮಾಜಿಕ ಮಾತುಕತೆಯು ಒಂದಾಗಿದೆ. ತನ್ನನ್ನು ಯಾರಾದರೂ ಪ್ರೀತಿಸುತ್ತಾರೆ ಅಥವಾ ನಂಬುತ್ತಾರೆ ಎಂಬ ಭಾವನೆ ಮೂಡಿದಾದ, ಅವರು ತಮ್ಮ ಒತ್ತಡವನ್ನು ಅವರಲ್ಲಿ ಹೇಳಿಕೊಳ್ಳುತ್ತಾರೆ. ಇದು ಅವರ ಒಂಟಿತನ ಕಡಿಮೆ ಮಾಡುತ್ತದೆ. ಉದಾಹರಣೆಗೆ, ಜನರು ತಮ್ಮ ಒತ್ತಡಗಳ ಬಗ್ಗೆ ಇತರರೊಂದಿಗೆ ಮಾತನಾಡಿದಾಗ, ಸಹಾನುಭೂತಿಯನ್ನು ಬೆಳೆಸುತ್ತದೆ ಜೊತೆಗೆ ಭಾಂದವ್ಯವನ್ನು ಮೂಡಿಸುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡುವುದರಿಂದ ಸಂಬಂಧ ಉತ್ತಮವಾಗುತ್ತದೆ.

ಒತ್ತಡವು ಅರ್ಥಪೂರ್ಣ ಜೀವನದ ಒಂದು ಭಾಗವಾಗಿದೆ:

ಒತ್ತಡವು ಅರ್ಥಪೂರ್ಣ ಜೀವನದ ಒಂದು ಭಾಗವಾಗಿದೆ:

ಒತ್ತಡವಿಲ್ಲದ ಜೀವನವು ಉತ್ತಮವಾಗಿರುವುದಿಲ್ಲ. ಉದಾಹರಣೆಗೆ, ಡಿಗ್ರಿ ವಿದ್ಯಾರ್ಥಿಯನ್ನು ತೆಗೆದುಕೊಳ್ಳಿ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೊಳ್ಳೆ ಉದ್ಯೋಗ ಪದೇಯುವುದೇ ಆಅನಿಗಿರುವ ಸವಾಲು. ಅದಕ್ಕಾಗಿ ಆತ ಚೆನ್ನಾಗಿ ಓದುತ್ತಾನೆ. ಈ ಓದಬೇಕು ಎನ್ನುವುದೇ ಅವನಿಗಿರುವ ಸದ್ಯದ ಒತ್ತಡ. ಅದರಂತೆ ಓದಿ ಒಂದೊಳ್ಳೆ ಕೆಲಸವನ್ನೂ ಪಡೆಯುತ್ತಾನೆ. ಹೀಗೆ ಒತ್ತಡವು ಜೀವನದ ಭಾಗವಾಗಿದೆ. ಒತ್ತಡವಿಲ್ಲದೇ ಬದುಕಿದರೆ ನಮ್ಮಿಂದ ಏನೂ ಮಾಡಲು ಸಾಧ್ಯವಾಗದು. ನಾವು ಹೆಚ್ಚು ಹೆಮ್ಮೆಪಡುವ ಮತ್ತು ನಮ್ಮ ಜೀವನದಲ್ಲಿ ಹೆಚ್ಚು ಅರ್ಥವನ್ನು ತರುವ ವಿಷಯಗಳು ಯಾವಾಗಲೂ ಒತ್ತಡದಿಂದಲೇ ಸಾಧಿಸಿರುತ್ತೇವೆ.

English summary

How Some Stress Can Actually Be Good for You In kannada

here we told about How Some Stress Can Actually Be Good for You in kannada, read on
X
Desktop Bottom Promotion