For Quick Alerts
ALLOW NOTIFICATIONS  
For Daily Alerts

ಅಪಾರ್ಟ್‌ಮೆಂಟ್‌ಗಳಲ್ಲಿ ದೇವರಮನೆ ನಿರ್ಮಿಸಲು ಸಿಂಪಲ್‌ ಟಿಪ್ಸ್

|

ಇತ್ತೀಚೆಗೆ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚಾಗುತ್ತಿದೆ, ಜನರು ಸಹ ಹೆಚ್ಚಾಗಿ ಅಪಾರ್ಟ್‌ಮೆಂಟ್‌ ಜೀವನವನ್ನು ಇಷ್ಟಪಡುತ್ತಿದ್ದಾರೆ. ಎಲ್ಲವೂ ಸಿದ್ಧ ಇರುವ ಅಪಾರ್ಟ್‌ಗಳಲ್ಲಿ ಹೆಚ್ಚಾಗಿ ದೇವರಕೋಣೆಗೆ ಪ್ರತ್ಯೇಕ ಸ್ಥಳ ನೀಡಿರುವುದಿಲ್ಲ, ಹಿಂದೂ ಸಂಪ್ರದಾಯದಲ್ಲಿ ದೇವರಕೋಣೆಗೆ ಬಹಳ ದೈವಿಕ ಸ್ಥಾನವಿದೆ.

ಆದ್ದರಿಂದ ಸಿದ್ಧ ದೇವರಕೋಣೆಗಳನ್ನು ಖರೀದಿಸಿ ಇರುವ ಸ್ಥಳದಲ್ಲೇ ಉತ್ತಮ ದಿಕ್ಕನ್ನು ಆಯ್ಕೆ ಮಾಡಿಕೊಂಡು ದೇವರಿಗೆ ಸ್ಥಳವನ್ನು ಮೀಸಲಿಡಬೇಕು.

ನಾವಿಂದು ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ಸ್ಥಳದಲ್ಲೇ ದೇವರ ಮನೆಯನ್ನು ಹೇಗೆ ಆಕರ್ಷಕವಾಗಿ ನಿರ್ಮಿಸಬಹುದು, ಇದಕ್ಕೆ ಪ್ರತ್ಯೇಕ ಸ್ಥಳ ಕಡ್ಡಾಯವಾಗಿ ಅಗತ್ಯವೇ ಎಂಬುದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ:

ಗೋಡೆಗಳ ನಡುವಿನ ಸ್ಥಳ ಅತ್ಯುತ್ತಮ ಆಯ್ಕೆ

ಗೋಡೆಗಳ ನಡುವಿನ ಸ್ಥಳ ಅತ್ಯುತ್ತಮ ಆಯ್ಕೆ

ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಎರಡು ಗೋಡೆಗಳ ನಡುವಿನ ಸ್ಥಳ ಯಾವುದೇ ಬಳಕೆಗೂ ಆಗದೇ ಅನಗತ್ಯವಾಗಿರುತ್ತದೆ. ಆದರೆ ಇಂಥಹ ಸ್ಥಳ ದೇವರ ಕೋಣೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಎರಡು ಗೋಡೆಗಳ ನಡುವೆ ಹಲಗೆಯ ತುಂಡುಗಳನ್ನು ಬಳಸಿ ಆಕರ್ಷಕ ದೇವರ ಕೋಣೆಯನ್ನು ನಿರ್ಮಿಸಿಕೊಳ್ಳಬಹುದು. ಇದನ್ನು ಬಾಗಿಲು ಇಲ್ಲದ ಓಪನ್‌ ದೇವರ ಕೋಣೆಯಾಗಿ ಮಾರ್ಪಡಿಸಿಕೊಳ್ಳಬಹುದು. ಇದನ್ನು ನಿಮಗೆ ಬೇಕಾದಂತೆ ವಿನ್ಯಾಸಗೊಳಿಸಲು ನಿಮಗೆ ಸ್ವಾತಂತ್ರ್ಯವಿದೆ. ಈ ಮೂಲೆಯನ್ನು ಎದ್ದು ಕಾಣುವಂತೆ ಮಾಡುವ ಎಲ್ಲಾ ಸಾಂಪ್ರದಾಯಿಕ ಪೂಜಾ ಅಂಶಗಳೊಂದಿಗೆ ನೀವು ಅದನ್ನು ಚೆನ್ನಾಗಿ ಅಲಂಕರಿಸಬಹುದು.

ಖಾಲಿ ಗೋಡೆಯನ್ನು ಪೂಜಾ ಕೊಠಡಿಯಾಗಿ ಪರಿವರ್ತಿಸಬಹುದು

ಖಾಲಿ ಗೋಡೆಯನ್ನು ಪೂಜಾ ಕೊಠಡಿಯಾಗಿ ಪರಿವರ್ತಿಸಬಹುದು

ಚಿಕ್ಕ ಅಪಾರ್ಟ್‌ಮೆಂಟ್‌ಗಳಲ್ಲಿ ಕನಿಷ್ಠ ಒಂದು ಗೋಡೆಯಾದರೂ ಖಾಲಿಯಾಗಿರುತ್ತದೆ. ಮತ್ತು ಇಲ್ಲಿ ನೀವು ನಿಮ್ಮ ತೆರೆದ ಪೂಜಾ ಕೊಠಡಿಯನ್ನು ಸ್ಥಾಪಿಸಬಹುದು. ನೀವು ಮಾಡಬೇಕಾಗಿರುವುದು ಆ ನಿರ್ದಿಷ್ಟ ಗೋಡೆಯನ್ನು ವಾಸ್ತು-ಅನುಸಾರವಾಗಿರುವ ಶುಭ ಬಣ್ಣದಲ್ಲಿ ಚಿತ್ರಿಸುವುದು ಮತ್ತು ಸಣ್ಣ ಪೂಜಾ ಕೊಠಡಿ ಖರೀದಿಸಿ ಅಲಂಕರಿಸಬಹುದು.

ಮನೆಯ ಯಾವುದೇ ಮೂಲೆ ಪೂಜಾ ಕೊಠಡಿಗೆ ಸೂಕ್ತ

ಮನೆಯ ಯಾವುದೇ ಮೂಲೆ ಪೂಜಾ ಕೊಠಡಿಗೆ ಸೂಕ್ತ

ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಾಗಿ ನೆಲದ ಮೇಲೆ ಇಡಲು ಸ್ಥಳಾವಕಾಶ ಇಲ್ಲವಾದಾಗ ಇರುವ ಮೂಲೆಯ ದಿಕ್ಕನ್ನು ಪೂಜಾ ಕೊಠಡಿಯಾಗಿ ಮಾರ್ಪಡಿಸಬಹುದು. ಈ ಅನನ್ಯ ಜಾಗವನ್ನು ರಚಿಸಲು ನಿಮಗೆ ಬೇಕಾಗಿರುವುದು ಮರದ ದೇವರ ಕೊಠಡಿ ಅಥವಾ ಕೆಲವು ಮರದ ಚಪ್ಪಡಿಗಳು. ನೀವು ಮೂಲೆಯನ್ನು ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಸೂಕ್ತವಾದ ಎತ್ತರವನ್ನು ಹೊಂದಿರುವ ಮರದ ತುಂಡನ್ನು ಮೂಲೆಗೆ ಹೊಂದಿಸಿ ಅದರ ಮೇಲೆ ದೇವರ ವಿಗ್ರಹ ಅಥವಾ ಫೋಟೋ ಇಡಬಹುದು. ಇವುಗಳು ಗೋಡೆಗೆ ಹೊಂದಿಕೊಳ್ಳುತ್ತವೆ ಮತ್ತು ಹೆಚ್ಚು ಜಾಗವನ್ನು ಸಹ ತೆಗೆದುಕೊಳ್ಳುವುದಿಲ್ಲ.

ನಡುಮನೆ ಅಥವಾ ಹಾಲ್‌ನಲ್ಲಿ ಸಹ ಪೂಜಾ ಕೊಠಡಿಯನ್ನು ಹೊಂದಬಹುದು

ನಡುಮನೆ ಅಥವಾ ಹಾಲ್‌ನಲ್ಲಿ ಸಹ ಪೂಜಾ ಕೊಠಡಿಯನ್ನು ಹೊಂದಬಹುದು

ನಿಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪೂಜಾ ಕೋಣೆಯನ್ನು ಹೊಂದಲು ನಿಮ್ಮ ನಡುಮನೆಯನ್ನುಸಹ ಆಯ್ಕೆ ಮಾಡಬಹುದು. ಅಂದರೆ ಲಿವಿಂಗ್ ರೂಮ್ ನಲ್ಲಿ ಪೂಜಾ ಮೂಲೆಗಾಗಿ, ಜಾಗವನ್ನು ಬಹು-ಕ್ರಿಯಾತ್ಮಕವಾಗಿಸಲು ಮಾಡಿಕೊಳ್ಳಬಹುದಾಗಿದೆ. ಗಮನವನ್ನು ಸೆಳೆಯಲು, ದೇವರ ಕೋಣೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಸೂಕ್ತವಾದ ಬೆಳಕನ್ನು ಹೊಂದಿರುವ ಪ್ರದೇಶವನ್ನು ಹೈಲೈಟ್ ಮಾಡಿ. ಅಪಾರ್ಟ್ಮೆಂಟ್ಗಳಲ್ಲಿ ಸಣ್ಣ ಪೂಜಾ ಕೋಣೆಯ ವಿನ್ಯಾಸಗಳನ್ನು ರಚಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.

ನಿಮ್ಮ ಅಡುಗೆಮನೆ ಸಹ ಪೂಜಾ ಕೋಣೆಗೆ ಅತ್ಯುತ್ತಮ ಸ್ಥಳ ಎಂದು ನಿಮಗೆ ತಿಳಿದಿದೆಯೇ?

ನಿಮ್ಮ ಅಡುಗೆಮನೆ ಸಹ ಪೂಜಾ ಕೋಣೆಗೆ ಅತ್ಯುತ್ತಮ ಸ್ಥಳ ಎಂದು ನಿಮಗೆ ತಿಳಿದಿದೆಯೇ?

ಅಡುಗೆಮನೆಯಲ್ಲಿ ನೀವು ಪೂಜಾ ಕೊಠಡಿಯನ್ನು ಹೊಂದಬಹುದೇ ಎಂಬ ಸಂಶಯ ನಿಮಗಿದೆಯೇ? ಖಂಡಿತವಾಗಿ ನಿರ್ಮಿಸಬಹುದು. ನಿಮ್ಮ ವಿಗ್ರಹವನ್ನು ಇರಿಸಲು ಮನೆಯಲ್ಲಿ ಬೇರೆ ಯಾವುದೇ ಸ್ಥಳವಿಲ್ಲದಿದ್ದರೆ ನಿಮ್ಮ ಅಡುಗೆಮನೆ ಅತ್ಯುತ್ತಮ ಆಯ್ಕೆ. ನಿಮ್ಮ ಅಡುಗೆ ಕೋಣೆಯಉತ್ತಮ ದಿಕ್ಕನ್ನು ಆಯ್ಕೆ ಮಾಡಿಕೊಂಡು ದೇವರ ಪೂಜೆಗೆ ಸ್ಥಳವನ್ನು ಮೀಸಲಿಡಬಹುದು. ಕನ್ನಡಿ ಫಲಕಗಳು ಮತ್ತು ಹ್ಯಾಂಗಿಂಗ್ ಲ್ಯಾಂಪ್‌ಗಳೊಂದಿಗೆ, ಈ ಸ್ಥಳವು ನಿಜವಾಗಿಯೂ ಪ್ರಕಾಶಮಾನವಾಗಿ ಕಾಣುತ್ತದೆ.

English summary

Small Space Pooja Room Ideas for Apartments in Kannada

Here we are discussing about Small Space Pooja Room Ideas for Apartments in Kannada. Read more.
Story first published: Thursday, September 23, 2021, 12:04 [IST]
X
Desktop Bottom Promotion