Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಡಪಾಯಿ ಶ್ವಾನವೇ, ಇನ್ನೇಕೆ ಭೀತಿ ನಿನಗೆ ಪಟಾಕಿಯಿಂದ?
ಎಲ್ಲರ ಮನೆಯಲ್ಲಿ ಈಗ ದೀಪಾವಳಿಯ ಹೇಳತೀರಲಾರದಷ್ಟು ಸಂಭ್ರಮ. ಹಿರಿಯರು, ಕಿರಿಯರು ಎಲ್ಲರೂ ಸಾಲು ಸಾಲು ಬಣ್ಣ ಬಣ್ಣದ ಹಣತೆ ಹಚ್ಚಿ ಆನಂದಿಸುತ್ತಾರೆ. ಶಿವನಬುಟ್ಟಿ, ದೀಪದ ಸರ ಹಾಕಿ ಸಂಭ್ರಮಾಚರಣೆಯಲ್ಲಿ ಮೈಮರೆಯುತ್ತಾರೆ. ಚಿಣ್ಣರು, ಯುವಕ, ಯುವತಿಯರು ಸಿಹಿತಿಂಡಿಗಳ ಜೊತೆಗೆ ಮತ್ತೇನನ್ನು ಎದುರು ನೋಡುತ್ತಾರೆ ಹೇಳಿ? ಪಟಾಕಿಗಲ್ಲವೇ? 'ಓಮ್ ಅಸತೋಮಾಮ್ ಸದ್ಗಮಯ ತಮಸೋಮಾಮ್ ಜ್ಯೋತಿರ್ಗಮಯ...' ಎಂಬ ಸಂಸ್ಕೃತದ ಶ್ಲೋಕ ಹೇಳಿರುವಂತೆ, ನಮ್ಮ ಜೀವನದಲ್ಲಿಯ ಅಜ್ಞಾನ ಎಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನ ಎಂಬ ಬೆಳಕಿನ ದೀವಿಗೆಯನ್ನು ಬೆಳಗಿಸಲು ಪಟಾಕಿ ಹಚ್ಚುವದು ಸಂಪ್ರದಾಯವೂ ಹೌದು, ಸಂಭ್ರಮವೂ ಹೌದು. ಕೆಲವರು ಕೈಯಿಂದ ಹಚ್ಚಿ ಖುಷಿ ಪಟ್ಟರೆ ಇನ್ನು ಕೆಲವರು ನಮಗೆ ನೋಡುವದೇ ಸಾಕಪ್ಪ ಎಂದು ದೂರದಿಂದಲೇ ಆನಂದಿಸುತ್ತಾರೆ.
ಈ ವರ್ಷದ ದೀಪಾವಳಿ ಹಬ್ಬ 25ರಿಂದ ಆರಂಭವಾಗಿ 29ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಹಬ್ಬದ ಸಮಯದಲ್ಲಿ ದೀಪಗಳ ಬೆಳಕಿಗಿಂತ ಪಟಾಕಿಯ ಅಬ್ಬರವೇ ಹೆಚ್ಚಿರುತ್ತದೆ.
ಇಷ್ಟೆಲ್ಲ ಆಚರಣೆಯ ಮಧ್ಯ ನಮ್ಮ ಸುತ್ತಮುತ್ತಲೂ ಓಡಾಡಿಕೊಂಡಿರುವ ಪ್ರಾಣಿಗಳ ಮೇಲೆ ಪಟಾಕಿಗಳ ಹಾವಳಿಯ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರ? ಮುಖ್ಯವಾಗಿ ನಾಯಿಗಳಿಗೆ ಅತಿ ಸೂಕ್ಷ್ಮ ಗ್ರಹಣ ಶಕ್ತಿ ಇರುತ್ತದೆ. ಪಟಾಕಿಗಳ ಶಬ್ದ ಅವುಗಳಲ್ಲಿ ಭಯಂಕರ ಭೀತಿಯನ್ನುಂಟುಮಾಡುತ್ತದೆ ಎಂದರೆ ನಂಬುವಿರಾ? ಪಾಪದ ಪ್ರಾಣಿಗಳು ಪಟಾಕಿ ಸಿಡಿದ ಕೂಡಲೆ ಎದೆ ಒಡೆದುಕೊಂಡು ಸತ್ತೇನೋ ಕೆಟ್ಟೇನೋ ಎಂದು ದಿಕ್ಕು ತಪ್ಪಿ ಚೆಲ್ಲಾಪಿಲ್ಲಿಯಾಗಿ ಓಡುತ್ತವೆ.

ದೀಪಾವಳಿ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ಪಟಾಕಿ ಸಿಡಿಸುತ್ತಾರೆ. ಇದರಿಂದ ಭಯಭೀತಿಗೊಳ್ಳುವ ಬೀದಿನಾಯಿ, ಸಾಕು ನಾಯಿಗಳ ರಕ್ಷಣೆ ಮಾಡುವದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವಲ್ಲವೆ? ಇಲ್ಲಿರುವ ಕೆಲವು ಸಲಹೆಗಳನ್ನು ಪಾಲಿಸಿ ನಾಯಿಗಳು ಕೂಡ ದೀಪಾವಳಿಯನ್ನು ನಿಶ್ಚಿಂತೆಯಿಂದ ಕಳೆಯುವಂತೆ ಮಾಡಲು ಪ್ರಯತ್ನಿಸೋಣ ಬನ್ನಿ.
ಪಟಾಕಿ ಹಚ್ಚುವ ಮುನ್ನ ನಿಮ್ಮ ಸಾಕು ನಾಯಿಯನ್ನು ಒಂದು ಚಿಕ್ಕ ವಾಯುವಿಹಾರಕ್ಕೆ ಕರೆದುಕೊಂಡು ಹೋಗಿ, ಮೈ ನೇವರಿಸಿ ಪ್ರೀತಿ ವ್ಯಕ್ತಪಡಿಸಿ. ಹೊಟ್ಟೆ ತುಂಬ ತಿಂಡಿ ತಿನ್ನಲು ಕೊಟ್ಟು ಯಾವುದೇ ಭಯ ಬೇಡ ಎಂಬ ಭರವಸೆ ಕೊಡಿ. ಸಾಕು ನಾಯಿಗಳು ನಮ್ಮ ಮಕ್ಕಳಿಗಿಂತ ಸೂಕ್ಷ್ಮ, ನಾವು ಸ್ವಲ್ಪ ಪ್ರೀತಿ, ವಿಶ್ವಾಸ ತೋರಿಸಿದರೂ ಸಾಕು ಅವುಗಳಿಗೆ ತುಂ ಭರವಸೆ, ಧೈರ್ಯ ಮೂಡುತ್ತದೆ.
ಪಟಾಕಿಗಳನ್ನು ನಾಯಿಯ ಕೈಗೆಟುಕದಂತೆ ದೂರವಿಡಿ. ನಿಮಗೇ ಗೊತ್ತಿರುವಂತೆ ಪಟಾಕಿಯಲ್ಲಿ ಅತ್ಯಂತ ವಿಷಭರಿತ ರಾಸಾಯನಿಕಗಳಿರುತ್ತವೆ. ನಾಯಿಯು ತಿಳಿಯದೆ ಪಟಾಕಿಯನ್ನು ನೆಕ್ಕಿದರೆ, ಬಡಪಾಯಿಯ ಪ್ರಾಣಾಕ್ಕೇ ಹಾನಿಯಾಗುವ ಸಂಭವವಿರುತ್ತದೆ.
ದೀಪಾವಳಿಯಲ್ಲಿ ಮಾಡುವ ಅಥವ ಹೊರಗಡೆಯಿಂದ ತಂದಿರುವ ಅನೇಕ ತರಹದ ಸಿಹಿತಿಂಡಿಗಳನ್ನು ನಾಯಿಯ ಕೈಗೆಟುಕದಂತೆ ಇಡಬೇಕು. ಅವೆಲ್ಲ ನಾಯಿಯ ಆರೋಗ್ಯಕ್ಕೆ ಬಹಳ ಹಾನಿಕಾರಕವಾದವು, ತಿಂದರೆ ಜೀವಕ್ಕೇ ಅಪಾಯವಾಗುವ ಸಾಧ್ಯತೆಗಳಿರುತ್ತವೆ.
ಪಟಕಿಯ ಸಿಡಿಸುವದು ಶುರುವಾದಕೂಡಲೆ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಡಿ, ಶಬ್ದವೂ ಕಡಿಮೆಯಾಗುವದು, ಅಲ್ಲದೆ ನಾಯಿ ಹೆದರಿ ಹೊರಗೋಡಿಹೋಗುವದನ್ನು ತಪ್ಪಿಸಬಹುದು, ಇಲ್ಲದಿದ್ದರೆ ಪಟಾಕಿ ಸಿಡಿತಕ್ಕೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಹೆದರಿ ಖುರ್ಚಿ ಅಥವ ಮೇಜಿನ ಕೆಳಗೆ ಹೋಗಿ ಕುಳಿತರೆ, ಸುಮ್ಮನೆ ಬಿಟ್ಟುಬಿಡಿ. ಅದನ್ನು ತಡವಲು ಹೋಗಬೇಡಿ. ಕೋಪದಿಂದ ನಿಮಗೇ ಕಚ್ಚಿದರೂ ಕಚ್ಚಬಹುದು, ಎಷ್ಟಾದರೂ ಪ್ರಾಣಾಭೀತಿಯಲ್ಲವೆ.
ದೀಪಾವಳಿ ಸಮಯದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಯಾವಾಗಲೂ ತಯಾರಿಟ್ಟಿರಿ. ಮಕ್ಕಳು ಅಥವ ಪ್ರಾಣಿಗಳಿಗೆ ಏನಾದರು ಸುಟ್ಟ ಗಾಯಗಳಾದರೆ ಕೂಡಲೆ ಚಿಕಿತ್ಸೆ ಕೊಡಬಹುದು. ಅಷ್ಟೆ ಅಲ್ಲ ಪಶುವೈದ್ಯರನ್ನು ಸಂಪರ್ಕಿಸಿ, ನಾಯಿಗಳ ಗಾಭರಿ ಕಡಿಮೆಗೊಳಿಸುವ ಔಷಧಿ ತಂದಿಟ್ಟುಕೊಳ್ಳಿ. ತುರ್ತುಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರುತ್ತವೆ.
ಸ್ವಲ್ಪ ಹತ್ತಿಯ ತುಂಡನ್ನು ನಾಯಿಯ ಕಿವಿಯಲ್ಲಿ ಅದಕ್ಕೆ ತಿಳಿಯದಂತೆ ತೂರಿಸಿಡಿ. ಇದರಿಂದ ಶಬ್ದಬಾಧೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಬಹುದು. ನಾಯಿಗೆ ತೊಂದರೆಯೆನಿಸಿದರೆ ಒತ್ತಾಯ ಬೇಡವೇ ಬೇಡ. ಅನೇಕ ಪುಂಡು ಪೋಕರಿಗಳು ಪ್ರಾಣಿಗಳ ಹಿಂಸೆ ಮಾಡಿ ಆನಂದಿಸುತ್ತಾರೆ. ನಿಮ್ಮ ನಾಯಿಯ ಮೇಲೆ ಗಮನವಿಟ್ಟಿರಿ. ಯಾರಾದರು ತುಂಟಾಟ ಮಾಡಲು ಬಂದರೆ ಅವರಿಗೆ ಖಡಾಖಂಡಿತವಾಗಿ ತಾಕೀತು ಮಾಡಿ. ಅದರಿಂದಾಗುವ ದುಷ್ಪರಿಣಾಮಗಳ ಮನವರಿಕೆ ಮಾಡಿಕೊಡಿ.
ಇನ್ನು ಬೀದಿನಾಯಿಗಳ ಗತಿ ದೇವರಿಗೇ ಪ್ರೀತಿ, ಪಾಪ ಅವು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡುವದು ನೋಡಿದರೆ ಹೊಟ್ಟೆ ಉರಿಯುತ್ತದೆ.ಜನರಿಗೆ ಸುರಕ್ಷತೆಯ ಮನವರಿಕೆ ಮಾಡಿಕೊಟ್ಟರೆ ಆಗುವ ಅನಾಹುತಗಳನ್ನು ತಪ್ಪಿಸಬಹುದು. ಈ ಕೆಲವು ಶ್ವಾನ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಈ ವರ್ಷದ ದೀಪಾವಳಿಯನ್ನು ನಮ್ಮ ಸಾಕುಪ್ರಾಣಿಗಳ ಜೊತೆಗೆ ಸುಗಮವಾಗಿ ಕಳೆಯುವ ಪ್ರಯತ್ನ ಮಾಡೋಣ ಬನ್ನಿ....



Click it and Unblock the Notifications




