For Quick Alerts
ALLOW NOTIFICATIONS  
For Daily Alerts

ಸಾಕುಪ್ರಾಣಿಗಳ ಮೂತ್ರ ದುರ್ವಾಸನೆಗೆ ಅಂತ್ಯ ಹೇಗೆ?

By hemanth
|

ಕೆಲವರಿಗೆ ಸಾಕು ಪ್ರಾಣಿಗಳೆಂದರೆ ಪಂಚಪ್ರಾಣ. ಪ್ರಾಣಿಗಳನ್ನು ಸಾಕುವುದೇ ಅವರಿಗೆ ಹವ್ಯಾಸವಾಗಿರುತ್ತದೆ. ಮತ್ತೆ ಕೆಲವರು ತೋರಿಕೆಗೋಸ್ಕರವಾದರೂ ಮನೆಯಲ್ಲಿ ಒಂದೆರಡು ಒಳ್ಳೆಯ ಜಾತಿಯ ನಾಯಿಗಳು, ಕೆಲವೊಂದು ಪಕ್ಷಿಗಳು ಮತ್ತು ಬೆಕ್ಕನ್ನು ಸಾಕುತ್ತಾರೆ. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವು ನಮಗೆ ಖುಷಿ ಮತ್ತು ಸಂತೋಷವನ್ನು ಉಂಟು ಮಾಡುತ್ತದೆ.

ಈ ಸಂತೋಷದೊಂದಿಗೆ ಸಾಕುವಂತಹ ಪ್ರಾಣಿ ಹಾಗೂ ಪಕ್ಷಿಗಳಿಂದ ಹೊರಬರುವಂತಹ ವಾಸನೆಯನ್ನು ದೂರ ಮಾಡುವುದು ಒಂದು ದೊಡ್ಡ ಸಮಸ್ಯೆ. ನಿಮ್ಮ ಸಾಕುಪ್ರಾಣಿಗಳು ಉಂಟು ಮಾಡುವ ವಾಸನೆಯಿಂದ ನಿಮಗೆ ಚಿಂತೆಯಾಗಿದೆಯಾ? ಇಲ್ಲಿರುವ ಕೆಲವೊಂದು ಟ್ರಿಕ್ಸ್ ಗಳನ್ನು ಬಳಸಿಕೊಂಡು ನೀವು ವಾಸನೆಯನ್ನು ದೂರ ಮಾಡಬಹುದಾಗಿದೆ.

ಮನೆಯಲ್ಲಿ ಸಾಕುಪ್ರಾಣಿಗಳಿದ್ದಾಗ ಮನೆಯ ವಾತಾವರಣ ಹಟ್ಟಿಯಂತಾಗಿರದೆ ಒಳ್ಳೆಯ ರೀತಿಯ ಸುವಾಸನೆ ಬರುತ್ತಿರಬೇಕು ಮತ್ತು ಸ್ಚಚ್ಛವಾಗಿರಬೇಕು. ಸಾಕುಪ್ರಾಣಿಗಳು ಮನೆಯ ಒಳಗಡೆ ಮಣ್ಣು ತಂದು ಹಾಕುತ್ತವೆ ಮತ್ತು ಕಾರ್ಪೆಟ್ ಇದ್ದರೆ ಅದು ವಾಸನೆಯುಂಟು ಮಾಡಬಹುದು. ನಿಮ್ಮ ಮನೆಯಿಂದ ವಾಸನೆ ಕಡಿಮೆ ಮಾಡಲು ಅಥವಾ ನಿವಾರಿಸಲು ಕೆಲವೊಂದು ಸರಳ ಟಿಪ್ಸ್ ಗಳು ಇಲ್ಲಿವೆ.

ನೀವು ಸಾಕುಪ್ರಾಣಿಗಳನ್ನು ತುಂಬಾ ಚೆನ್ನಾಗಿ ಆರೈಕೆ ಮಾಡಿ ಅದನ್ನು ಬೆಳೆಸಿರಬಹುದು. ಆದರೂ ಅದರಿಂದ ವಾಸನೆ ಹೊರಬರುವುದು ಸಾಮಾನ್ಯ. ನಮ್ಮ ಕೆಲವೊಂದು ಟಿಪ್ಸ್ ಗಳನ್ನು ಪಾಲಿಸಿ ಮತ್ತು ಸಾಕುಪ್ರಾಣಿಗಳಿಂದ ಹೊರಬರುವ ವಾಸನೆಯನ್ನು ಕಡಿಮೆ ಮಾಡಿ. ಲೇಖನವನ್ನು ಓದಿ...ಇದರ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ.

ವಿನೇಗರ್-ಬೇಕಿಂಗ್ ಸೋಡಾ ಸ್ಪ್ರೇ

Tricks To Get Rid Of Pet Odour

ಮನೆಯೊಳಗೆ ಸಾಕುಪ್ರಾಣಿಗಳ ವಾಸನೆ ನಿವಾರಿಸಲು ನೈಸರ್ಗಿಕವಾಗಿ ಸಿಗುವಂತಹ ಮಿಶ್ರಣವೊಂದನ್ನು ಬಳಸಬಹುದು. ಅದೆಂದರೆ ಬೇಕಿಂಗ್ ಸೋಡಾ ಮತ್ತು ವಿನೇಗರ್ ಅನ್ನು ಮಿಶ್ರಣ ಮಾಡಿ ಇದನ್ನು ಏರ್ ಫ್ರೆಶ್ನರ್ ಆಗಿ ಬಳಸಬಹುದು. ಇಷ್ಟು ಮಾತ್ರವಲ್ಲದೆ ಫ್ಯಾಬ್ರಿಕ್ಸ್, ಫರ್ನಿಚರ್ ಮತ್ತು ಸಾಕು ಪ್ರಾಣಿಗಳ ಕಸದ ಪೆಟ್ಟೆಗೆಯ ವಾಸನೆಯನ್ನು ಕೂಡ ದೂರ ಮಾಡಲು ಈ ಸ್ಪ್ರೇ ಬಳಸಬಹುದು. ಹಾಗಾಗಿ ವಿನೇಗರ್ ಮತ್ತು ಬೇಕಿಂಗ್ ಸೋಡಾದ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ. ಮನೆ ಮತ್ತು ಸಾಕುಪ್ರಾಣಿಗಳನ್ನು ಸ್ವಚ್ಛಗೊಳಿಸಿದ ಬಳಿಕ ಇದನ್ನು ಸ್ಪ್ರೇ ಮಾಡಿ ಉತ್ತಮವಾದ ಫಲಿತಾಂಶವನ್ನು ಕಾಣಬಹುದು.

ಹೈಡ್ರೋಜನ್ ಪೆರಾಕ್ಸೈಡ್/ ಬೇಕಿಂಗ್ ಸೋಡಾ ಮಿಶ್ರಣ

ನಿಮ್ಮ ಸಾಕುಪ್ರಾಣಿಯ ಮೂತ್ರವು ತುಂಬಾ ವಾಸನೆಯನ್ನು ಉಂಟುಮಾಡುತ್ತದೆ. ಮೂತ್ರದಲ್ಲಿರುವ ಹರಳುಗಳೇ ಈ ವಾಸನೆಗೆ ಮೂಲ ಕಾರಣ. ಈ ಹರಳುಗಳನ್ನು ಹೈಡ್ರೋಜನ್ ಪೆರಾಕ್ಸೈಡ್ ನಾಶ ಮಾಡುವುದರ ಜೊತೆಗೆ ಇದು ಯಾವುದೇ ಕಲೆಯನ್ನು ತೆಗೆಯಬಲ್ಲದು. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬೇಕಿಂಗ್ ಸೋಡಾದೊಂದಿಗೆ ಮಿಶ್ರಣ ಮಾಡಿ ಕಲೆ ಇರುವ ಸ್ಥಳಲ್ಲಿ ಹಾಕಿ ಉಚ್ಚಿಕೊಳ್ಳಿ. ಅಲ್ಲದೆ ಈ ಮಿಶ್ರಣವು ದುರ್ವಾಸನೆಯನ್ನು ದೂರ ಮಾಡಿ ಆ ಜಾಗವು ಸುವಾಸನೆ ಉಂಟು ಮಾಡುವಂತೆ ಮಾಡುತ್ತದೆ.

ಸಿಟ್ರಸ್-ಎನ್ಜೈಮಾ ಕ್ಲೀನರ್

ಲಿಂಬೆ ಮತ್ತು ಕಿತ್ತಳೆಯ ಸಿಪ್ಪೆ, ಸಕ್ಕರೆ ಮತ್ತು ನೀರನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಕುದಿಸಿ ಮತ್ತು ನಿಮ್ಮ ಕೋಣೆಗೆ ಸ್ಪ್ರೇಯಂತೆ ಬಳಸಿ. ಇದು ತುಂಬಾ ಸುವಾಸನೆ ಹೊರಸೂಸುತ್ತದೆ. ಸಾಕುಪ್ರಾಣಿಗಳ ದುರ್ವಾಸನೆಯಿಂದ ದೂರವಾಗಲು ಸಾಕುಪ್ರಾಣಿ ತಿರುಗಾಡುವ ಮತ್ತು ಕುಳಿತುಕೊಳ್ಳುವ ಜಾಗಕ್ಕೆ ಇದನ್ನು ಸ್ಪ್ರೇ ಮಾಡಿಕೊಳ್ಳಿ.

ಸಾರಭೂತ ತೈಲದ ಮ್ಯಾಜಿಕ್


ಲಿಂಬೆ ಮತ್ತು ಸಾರಭೂತ ತೈಲವನ್ನು ಸಮಪ್ರಮಾಣದಲ್ಲಿ ಹಾಕಿ. ಇದಕ್ಕೆ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಅಲುಗಾಡಿಸಿ. ಸಾಕುಪ್ರಾಣಿಯಿಂದ ದುರ್ವಾಸನೆ ಉಂಟಾದ ಪ್ರದೇಶಕ್ಕೆ ಇದನ್ನು ಸಿಂಪಡಿಸಿ ಮತ್ತು ಒಣಗಲು ಬಿಡಿ. ಇದು ನಿಮ್ಮ ಮನೆಗೆ ಸುವಾಸನೆಯನ್ನು ಉಂಟುಮಾಡುತ್ತದೆ. ನೈಸರ್ಗಿಕವಾಗಿ ಸಾಕುಪ್ರಾಣಿಯ ದುರ್ವಾಸನೆ ದೂರ ಮಾಡಲು ಇದು ಅತ್ಯುತ್ತಮ ವಿಧಾನ.
English summary

Tricks To Get Rid Of Pet Odour

Having pets is a great thing as they bring in joy and happiness. Along with this fun, maintaining a clean home which smells fresh is a tedious job. Are you worried about the odour created from the mess made by your pets? Well, we here to help you with tricks to get rid of pet odour.
X
Desktop Bottom Promotion