For Quick Alerts
ALLOW NOTIFICATIONS  
For Daily Alerts

ಗಾಯಗೊಂಡ ನಾಯಿಯ ಆರೈಕೆ

By Poornima heggade
|

ಸಾಕು ಪ್ರಾಣಿಗಳನ್ನು ಸಾಕುವುದು ಬಹಳ ಜನರ ಪ್ಯಾಷನ್ ಆಗಿದೆ. ಬೇರೆ ಬೇರೆ ಜನರ ಉದ್ದೇಶ ಬೇರೆ ಬೇರೆ ರೀತಿ ಇರಬಹುದು ಆದರೆ ಸಾಕು ಪ್ರಾಣಿಗಳನ್ನು ಸಾಕುವವರು ಅದನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಅದರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಬಹಳ ಕಾಳಜಿ ವಹಿಸುತ್ತಾರೆ. ಹೀಗೆ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಬಹಳ ಪ್ರಾಣಿಗಳಿವೆ. ಅವುಗಳಲ್ಲಿ ಹೆಚ್ಚಿನವರ ಮೆಚ್ಚಿನ ಪ್ರಾಣಿ ನಾಯಿ. ಇವು ನಂಬಿಕೆಯ ವಿಷಯದಲ್ಲೂ ಬಹಳ ಮೇಲ್ದರ್ಜೆಯನ್ನು ಪಡೆದಿವೆ. ಆದರೆ ನಾಯಿಗಳಿಗೆ ಸ್ವಲ್ಪ ಅನಾರೋಗ್ಯ ಬಾಧಿಸಿದರೂ ಬಹಳ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಗಾಯವಾದ ನಾಯಿ ಮರಿಯನ್ನು ಸಣ್ಣ ಮಗುವಿನಂತೆ ನೋಡಿಕೊಳ್ಳಬೇಕು.

ಇಂತಹ ಗಾಯಗಳು ಏನಾದರೂ ಅವಘಡದಿಂದ ಆಗಬಹುದು ಅಥವಾ ಇತರ ನಾಯಿಗಳೊಂದಿಗಿನ ಕಚ್ಚಾಟದಿಂದ ಆಗಿರಬಹುದು. ಆದರೆ ಏನೇ ಆದರೂ ನಿಮ್ಮ ನಾಯಿಯ ಆರೋಗ್ಯವನ್ನು ನೋಡಿಕೊಳ್ಳಲು ನಿಮಗೆ ತಿಳಿದಿರಬೇಕು. ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬ ಬಗ್ಗೆ ಸರಿಯಾಗಿ ತಿಳಿದುಕೊಂಡಿರಿ.

Take care of injured dog: Guide

ನಾಯಿಯ ಗಾಯವನ್ನು ಚಿಕಿತ್ಸೆ ಮಾಡಲು ಕೆಲವು ಹಂತಗಳಿವೆ ಇವನ್ನು ಪಾಲಿಸುವುದು ಮುಖ್ಯ. ಅವುಗಳು ಹೀಗಿವೆ.

1. ಗಾಯವಾದ ನಾಯಿಯ ಕಡೆ ಪ್ರೀತಿ ಇರಲಿ: ಗಾಯಗೊಂಡ ನಾಯಿ ಬಹಳ ಆಘಾತದಲ್ಲಿರುತ್ತದೆ ಮತ್ತು ಹೆದರಿರುತ್ತದೆ. ಹೀಗಾಗಿ ಬಹಳ ಕಾಳಜಿಯಿಂದ ಇದರ ಸಮೀಪ ಹೋಗಬೇಕಾಗುತ್ತದೆ. ನೀವು ಸಿಟ್ಟಿನಲ್ಲಿ ಅಥವಾ ವೇಗವಾಗಿ ಬಳಿ ಹೋದರೆ ಅದು ಮತ್ತಷ್ಟು ಹೆದರುವ ಸಾಧ್ಯತೆಗಳಿವೆ. ನಿಧಾನವಾಗಿ ನಾಯಿಯ ಬಳಿ ಹೋಗಿ ಏನು ಗಾಯವಾಗಿದೆ ಎಂದು ತಿಳಿಯಲು ಮುಂದಾಗಿ. ನಿಮ್ಮ ಬಳಿ ಸುರಕ್ಷಿತವಾಗಿದೆ ಎಂಬ ಭಾವನೆ ನಾಯಿಗೆ ಬರುವಂತೆ ಮಾಡಿ.

2. ಪರೀಕ್ಷಿಸಿ: ನಾಯಿಯ ಬಳಿ ಹೋದ ಕೂಡಲೆ ಗಾಯದ ಬಳಿ ಕೈ ಹಾಕಬೇಡಿ. ನಾಯಿಯನ್ನು ಮೊದಲು ಸಾವಧಾನಮಾಡಿಕೊಳ್ಳಲು ಬಿಡಿ. ನಾಯಿ ಬೊಗಳುತ್ತಿದ್ದರೆ ಹೆಚ್ಚು ಸಮೀಪ ಹೊಗದಿರಿ. ಎಷ್ಟು ಆಳವಾಗಿ ಆ ಗಾಯವಿದೆ ಎಂದು ನೋಡಿ.

3. ನಾಯಿಯನ್ನು ಕಟ್ಟಿಹಾಕಿ: ಮುಖ್ಯವಾದ ಕೆಲಸವೆಂದರೆ ನಾಯಿಯನ್ನು ಬೇಗನೆ ಕಟ್ಟಿಹಾಕಿ. ಇದು ನಿಮಗೂ ಸುರಕ್ಷಿತ ಮತ್ತು ನಾಯಿಗೂ ಸುರಕ್ಷಿತ ಮತ್ತು ಅದರ ಗಾಬರಿಯನ್ನು ಕಡಿಮೆ ಮಾಡುತ್ತದೆ. ನಾಯಿಯನ್ನು ಕಟ್ಟುವ ತನಕ ಗಾಯವನ್ನು ಮುಟ್ಟಲು ಹೋಗದಿರಿ. ಮುಟ್ಟಲು ಹೋದರೆ ಗಾಯ ಮತ್ತಷ್ಟು ನೊವಾಗಬಹುದು. ಬಹಳ ಕಾಳಜಿಯಿಂದ ನಾಯಿಯನ್ನು ನೋಡಿಕೊಳ್ಳಿ.

4. ಪ್ರಥಮ ಚಿಕಿತ್ಸೆ: ನಾಯಿ ಸಂಪೂರ್ಣವಾಗಿ ಶಾಂತವಾದ ಬಳಿಕ ಪ್ರಥಮ ಚಿಕಿತ್ಸೆಯನ್ನು ಆರಂಭಿಸಿ. ಗಾಯ ಸ್ಪಷ್ಟವಾಗಿ ನಿಮಗೆ ಕಾಣಿಸುವಂತೆ ನಾಯಿಯನ್ನು ಮಲಗಿಸಿಡಿ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹತ್ತಿಯಲ್ಲಿ ಹಚ್ಚಿ ಗಾಯಕ್ಕೆ ನಿಧಾನಕ್ಕೆ ಹಚ್ಚಿ. ಹೀಗೆ ಹಚ್ಚುವಾಗ ನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ಇದಕ್ಕೆ ಯಾರ ನೆರವಾದರೂ ತೆಗೆದುಕೊಳ್ಳಿ. ಗಾಯವನ್ನು ಸ್ವಚ್ಛಗೊಳಿಸಲು ಆಂಟಿಸೆಪ್ಟಿಕ್ ಅನ್ನು ಬಳಸಿ.

5. ಬ್ಯಾಂಡೇಜ್ ಹಚ್ಚಿ: ಗಾಯವನ್ನು ಸ್ವಚ್ಛಗೊಳಿಸಿದ ಬಳಿಕ ಅದು ಎಷ್ಟು ಗಂಭೀರವಾಗಿದೆ ಎಂದು ನಿಮಗೆ ತಿಳಿಯುತ್ತದೆ. ಬಹಳ ಆಳದ ವರಗೆ ಗಾಯವಾಗಿದ್ದರೆ ವೈದ್ಯರ ನೆರವು ಪಡೆಯಿರಿ ಇಲ್ಲದಿದ್ದರೆ ನೀವೇ ಅದಕ್ಕೆ ಬ್ಯಾಂಡೇಜ್ ಹಚ್ಚಬಹುದು. ಹತ್ತಿ ಮತ್ತು ಬ್ಯಾಂಡೇಜ್ ಅನ್ನು ಬಳಸಿ ಗಾಯಕ್ಕೆ ಮದ್ದನ್ನು ಹಚ್ಚಿ ಸರಿಯಾಗಿ ಗಾಯ ಮುಚ್ಚುವಂತೆ ಬ್ಯಾಂಡೇಜ್ ಮಾಡಿ.

English summary

Take care of injured dog: Guide

Dogs are the most lovable pets to have. Even if they are not pets, dogs can be very friendly sometimes. They are honest, fun and helpful. But dogs are very sensitive to injuries.
Story first published: Wednesday, January 8, 2014, 14:26 [IST]
X
Desktop Bottom Promotion