For Quick Alerts
ALLOW NOTIFICATIONS  
For Daily Alerts

ನಾಯಿಗಳಿಗೆ ಹಸಿ ಆಹಾರ: ಇದು ಆರೋಗ್ಯಕರವೇ?

By Hemanth P
|

ನಾಯಿ ನಿಮ್ಮ ಫೇವರಿಟ್ ಸಾಕುಪ್ರಾಣಿಯೇ? ಅದರ ಆರೈಕೆ ಅತ್ಯುತ್ತಮ ವಿಧಾನದಲ್ಲಿ ಮಾಡಲು ಬಯಸಿದ್ದೀರಿ ಮತ್ತು ಅದನ್ನು ಆರೋಗ್ಯವಾಗಿಡಬಲ್ಲ ಆಹಾರ ಮಾತ್ರ ನೀಡಬೇಕು. ಮನುಷ್ಯರಿಗೆ ಆಹಾರ ಕ್ರಮವಿದ್ದರೆ ನಾಯಿಗಳಿಗೂ ಇದೆ. ಜನಪ್ರಿಯ ಆಹಾರಕ್ರಮಗಳು ಬಂದು ಹೋಗುತ್ತಿರುತ್ತದೆ. ಕೆಲವು ಮಂದಿ ಹಸಿ ಆಹಾರ ನಾಯಿಗೆ ಒಳ್ಳೆಯದೆಂದು ಹೇಳಿದರೆ ಮತ್ತೆ ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗಾಯಗೊಂಡ ನಾಯಿಯ ಆರೈಕೆ

ಪ್ರಾಣಿವೈದ್ಯರು ಹಸಿ ಆಹಾರಗಳನ್ನು ನಾಯಿಗಳಿಗಾಗಿ ತಯಾರಿಸಲಾಗುತ್ತದೆ ಮತ್ತು ಇದು ನಾಯಿಗಳ ಆರೋಗ್ಯಕ್ಕೆ ಒಳ್ಳೆಯದೆಂದು ನಂಬಲಾಗಿದೆ. ಹಸಿ ಮಾಂಸವು ನಾಯಿಗಳ ಹಲವಾರು ಕಾಯಿಲೆಗಳಾದ ಚರ್ಮದ ರೋಗ, ಸಂಧಿವಾತ ಇತ್ಯಾದಿಗಳನ್ನು ನಿವಾರಿಸುತ್ತದೆ ಎಂದು ಪ್ರಾಣಿ ವೈದ್ಯರು ಹೇಳಿದೆ. ಅವುಗಳ ಹಲ್ಲಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಎಂದೂ ಹೇಳಿದೆ.

Raw Food Diet For Dogs: Benefits

ಆದರೆ ಇದರ ಬಗ್ಗೆ ವಿರೋಧಾತ್ಮಕ ಹೇಳಿಕೆಗಳಿವೆ. ಹಸಿ ಮಾಂಸದಿಂದ ನಾಯಿಗೆ ಹಲವಾರು ರೀತಿಯ ರೋಗಗಳು ಬರಬಹುದು ಎಂದು ಹೇಳುತ್ತಾರೆ. ಇದರಿಂದಾಗಿ ನೀವು ತುಂಬಾ ಗೊಂದಲಕ್ಕೆ ಒಳಗಾಗಿದ್ದೀರಿ ಮತ್ತು ನಾಯಿಗೆ ಏನು ತಿನ್ನಿಸಬೇಕು ಎನ್ನುವ ಬಗ್ಗೆ ಚಿಂತಿತರಾಗಿದ್ದೀರಲ್ಲವೇ? ಹಸಿ ಆಹಾರದ ಬಗ್ಗೆ ನೀವು ತುಂಬಾ ಗೊಂದಲಕ್ಕೊಳಗಾಗಿದ್ದರೆ ಇಲ್ಲಿ ಯಾವುದು ಆರೋಗ್ಯಕರ ಮತ್ತು ಯಾವುದು ಆರೋಗ್ಯಕರವಲ್ಲ ಎಂಬ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಕುಪ್ರಾಣಿಗಳ ಕಾಳಜಿಗೆ 10 ಸಲಹೆಗಳು

ನೀವು ನಾಯಿಯನ್ನು ಇಷ್ಟಪಡುತ್ತೀರಿ ಮತ್ತು ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೀರಿ ಎಂದು ನಮಗೆ ತಿಳಿದಿದೆ. ಅದು ಆರೋಗ್ಯ ಮತ್ತು ಸಂತೋಷದಿಂದ ಇರಲು ಚೆನ್ನಾಗಿ ಆರೈಕೆ ಮಾಡಿ. ಇದಕ್ಕಾಗಿ ಇಲ್ಲಿ ಕೆಲವೊಂದು ಟಿಪ್ಸ್ ಗಳನ್ನು ನೀಡಲಾಗಿದೆ. ನಾಯಿಯನ್ನು ಪ್ರೀತಿಸುವವರು ಇದನ್ನು ಓದಿ ಮತ್ತು ನಿಮಗೆ ತುಂಬಾ ಆಸಕ್ತಿದಾಯಕ ವಿಷಯಗಳು ಸಿಗಲಿದೆ.

ಹಸಿ ಆಹಾರದ ಅನುಕೂಲಗಳು
ನಾಯಿಗಳಿಗೆ ಹಸಿ ಆಹಾರ ಕ್ರಮದಿಂದ ಸಾಕಷ್ಟು ಲಾಭಗಳಿವೆ. ಇಲ್ಲಿ ಕೆಲವೊಂದು ಹಸಿ ಆಹಾರಗಳ ಬಗ್ಗೆ ನಾವು ವಿಶ್ಲೇಷಣೆ ನಡೆಸಿದ್ದೇವೆ.

* ನಾಯಿಗಳಿಗೆ ಹಸಿ ಆಹಾರ ನೀಡುವುದರಿಂದ ಅವುಗಳ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಸಿ ಆಹಾರ ನಿಮ್ಮ ನಾಯಿಗೆ ಒಳ್ಳೆಯದಾ ಎಂದು ನೀವು ಚಿಂತಿಸುತ್ತಿದ್ದೀರಾ? ನಿಮ್ಮ ಕೈಯಲ್ಲಿರುವ ಒಂದು ತುಂಡು ಹಸಿ ಮಾಂಸವನ್ನು ನಾಯಿಗೆ ನೀಡಲು ಹಿಂಜರಿಬೇಡಿ. ಹಸಿ ಆಹಾರವು ನಾಯಿಯ ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ನೀವು ಭಾವಿಸಿದ್ದಕ್ಕಿಂತ ಹೆಚ್ಚು ಅದು ಆರೋಗ್ಯಕರವಾಗಿರುತ್ತದೆ.

* ನಿಮ್ಮ ನಾಯಿಗೆ ಆಹಾರ ನೀಡುವಾಗ ನಿಮ್ಮ ಯೋಚನೆಗೆ ಬರುವುದು ಹಸಿ ಆಹಾರ ನಾಯಿಗೆ ಒಳ್ಳೆಯದಾ ಎಂದು. ಇದು ಸ್ವಾಭಾವಿಕ, ಹಸಿ ಆಹಾರವು ನಾಯಿಗಳಲ್ಲಿ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ ಎಂದು ತಿಳಿದುಕೊಳ್ಳಿ. ನಿಮ್ಮ ನಾಯಿ ಯಾವಾಗಲೂ ಚಟುವಟಿಕೆಯಿಂದ ಇರಬೇಕೆಂದು ನೀವು ಬಯಸುವುದಿಲ್ಲವೇ? ನಿಮ್ಮೊಂದಿಗೆ ಅದು ಆಡಬೇಕು ಮತ್ತು ಪ್ರತೀ ದಿನ ಬೆಳಗ್ಗೆ ದಿನಪತ್ರಿಕೆ ತರಬೇಕೆಂದು ನೀವು ಬಯಸುವುದಿಲ್ಲವೇ? ನೀವು ನಿಜವಾಗಿಯೂ ಇದನ್ನು ಬಯಸುತ್ತಿದ್ದರೆ ಇದು ರಹಸ್ಯ. ಮುಂದಿನ ಸಲ ಹಸಿ ಆಹಾರ ನಾಯಿಗೆ ಹಾಕುವಾಗ ಅದು ಒಳ್ಳೆಯದೇ ಎಂದು ಯೋಚಿಸಬೇಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ನಾಯಿಯ ಅಭ್ಯಾಸ ಬದಲಿಸಿ

* ನಾಯಿಗಳಿಗೆ ಹಸಿ ಆಹಾರ ಒಳ್ಳೆಯದೇ ಎಂದು ಕೆಲವರಿಗೆ ಸಂಶಯವಿದೆ. ಆದರೆ ಹಸಿ ಆಹಾರ ನಾಯಿಗೆ ನೀಡುವುದರಿಂದ ಸಿಗುವ ಲಾಭದ ಬಗ್ಗೆ ತಿಳಿದುಕೊಂಡಾಗ ಅವರಿಗೆ ಮನವರಿಕೆಯಾಗುತ್ತದೆ. ಹಸಿ ಆಹಾರವು ನಾಯಿಗಳಿಗೆ ತುಂಬಾ ಮುಖ್ಯ. ಯಾಕೆಂದರೆ ಇದರಿಂದ ನಾಯಿಗಳಿಗೆ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ. ಹಸಿ ಆಹಾರವು ನಿಮ್ಮ ನಾಯಿಗಳಿಗೆ ಒಳ್ಳೆಯದೇ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಹೌದು. ಹಸಿ ಆಹಾರವು ನಾಯಿಗಳಲ್ಲಿ ತಾಜಾ ಉಸಿರನ್ನು ಉಂಟುಮಾಡುತ್ತದೆ.

* ಹಸಿ ಆಹಾರವು ನಾಯಿಗಳಿಗೆ ಒಳ್ಳೆಯದೇ? ಇದು ಯಾವಾಗಲೂ ನಿಮ್ಮ ತಲೆ ತಿನ್ನುತ್ತಿದೆಯಾ ಮತ್ತು ಪ್ರತೀ ಸಲ ನಾಯಿಗೆ ಆಹಾರ ನೀಡುವಾಗ ಈ ಒಂದು ಪ್ರಶ್ನೆ ನಿಮ್ಮ ತಲೆಯಲ್ಲಿ ಸುತ್ತುತ್ತಾ ಇರುತ್ತದೆಯಾ? ನಾಯಿಗಳಿಗೆ ಹಸಿ ಆಹಾರವು ತುಂಬಾ ಒಳ್ಳೆಯದು. ಇದನ್ನು ನಂಬಿ. ಇದರಿಂದ ನಾಯಿಯ ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಅವುಗಳ ಹಲ್ಲು ಹಾಗೂ ಒಸಡು ಬಲಿಷ್ಠವಾಗುತ್ತದೆ.

* ನಾಯಿಗಳಿಗೆ ಹಸಿ ಆಹಾರ ನೀಡುವ ಬಗ್ಗೆ ನಿಮ್ಮಲ್ಲಿ ಇನ್ನೂ ಸಂಶಯಗಳಿದ್ದರೆ ಅವುಗಳ ಅಲರ್ಜಿ ಮುಕ್ತ ಚರ್ಮವನ್ನು ನೋಡಿ ನಿಮಗೆ ಹಸಿ ಆಹಾರದ ಲಾಭಗಳ ಮನವರಿಕೆಯಾಗಿರಬಹುದು. ನಾಯಿಗಳಿಗೆ ಇದರಿಂದ ಆರೋಗ್ಯಕರ ಜೀರ್ಣಾಂಗ ಜೀವಕೋಶ ಸಿಗುತ್ತದೆ. ಅದು ತನ್ನ ತೂಕದ ಮೇಲೆ ನಿಯಂತ್ರಣ ಸಾಧಿಸಿ ಚಟುವಟಿಕೆಯಿಂದ ಇರಲಿದೆ. ಹಸಿ ಆಹಾರ ನಾಯಿಗಳಿಗೆ ಆರೋಗ್ಯಕರವೇ ಎನ್ನುವುದಕ್ಕಿಂತ ಇದಕ್ಕಿಂತ ಹೆಚ್ಚಿನ ವಿವರ ಬೇಕೇ?

English summary

Raw Food Diet For Dogs: Benefits

Your dog is your favorite pet! You wish to take care of him in the best possible way and you would only give foods that make him healthy. If humans have a fad diet, so do dogs. Popular diets come and go! Some say raw foods are healthy for your pet while others disagree with it.
Story first published: Friday, March 7, 2014, 15:07 [IST]
X
Desktop Bottom Promotion