For Quick Alerts
ALLOW NOTIFICATIONS  
For Daily Alerts

ಶ್ವಾನ ಪ್ರೇಮಿಗಳಿಗಾಗಿ ಇಲ್ಲಿದೆ ಕೆಲವೊಂದು ಸಲಹೆ

|

ಪ್ರಾಣಿಗಳನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಅದರಲ್ಲೂ ದನ, ಬೆಕ್ಕು, ನಾಯಿ, ಮೊಲ ಮುಂತಾದ ಪ್ರಾಣಿಗಳನ್ನು ಮನೆಗಳಲ್ಲಿ ಪ್ರೀತಿಯಿಂದ ಸಾಕುತ್ತಾರೆ ಮಕ್ಕಳಂತೆ ಕಾಪಾಡುತ್ತಾರೆ. ಅವುಗಳೂ ಸಹ ತಮ್ಮ ಮನೆಯ ಯಜಮಾನ ಮತ್ತು ಮನೆಯವರನ್ನು ದೇವರಂತೆ ಕಾಣುತ್ತವೆ. ಹೀಗೆ ದೇವರು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಆತ್ಮೀಯವಾಗಿ ಬೆಸೆದಿದ್ದಾರೆ. ಸಾಕು ಪ್ರಾಣಿಗಳಲ್ಲಿ ನಾಯಿ ಬೆಕ್ಕು ಮನೆಯ ಮುದ್ದಿನ ಪ್ರಾಣಿಗಳು. ನಾಯಿಯನ್ನು ಅತಿಯಾಗಿ ಪ್ರೀತಿಸುವವರು ನಮ್ಮ ಸುತ್ತಮತ್ತಲಿದ್ದಾರೆ.

ಉತ್ತಮ ತಳಿಯ ನಾಯಿಮರಿಯನ್ನು ಎಷ್ಟು ಬೆಲೆ ತೆತ್ತಾದರೂ ಕೊಂಡುಕೊಂಡು ಅದರ ಆರೈಕೆಗಾಗಿ ಸಾವಿರಾರು ಹಣ ವ್ಯಯಿಸುವವರು ಇದ್ದಾರೆ. ಅದೂ ಕೂಡ ಮನೆಯವರಿಗೆ ನಿಷ್ಟೆಯಿಂದಿರುತ್ತದೆ. ನಾಯಿಯನ್ನು ನೋಡಿಕೊಳ್ಳುವುದರೊಂದಿಗೆ ಅವುಗಳ ಆಹಾರ, ಔಷಧಿ, ನೆಲೆಸುವಂತಹ ಗೂಡು ಇದರ ಕಡೆಗೂ ಹೆಚ್ಚು ಗಮನವನ್ನು ನೀಡಬೇಕು. ಪ್ರತಿಯೊಂದು ವಿಧದ ನಾಯಿಗೂ ಸೂಕ್ತವಾದ ಆರೈಕೆಯನ್ನು ಮಾಡಬೇಕಾದ್ದು ಅದರ ಯಜಮಾನನ ಕರ್ತವ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಾಯಿಗಳಿಗೆ ಹಸಿ ಆಹಾರ: ಇದು ಆರೋಗ್ಯಕರವೇ?

ನಾಯಿಗಳ ವಾಸಸ್ಥಾನ ಕೂಡ ಸೌಲಭ್ಯದಿಂದ ಕೂಡಿರಬೇಕಾದ್ದು ಅತ್ಯಗತ್ಯ. ನಾಯಿಗೂ ತಾನಿರುವ ಜಾಗದ ಕಡೆಗೆ ವಿಶೇಷ ಒಲವು ಇರುವಂತೆ ನೋಡಿಕೊಳ್ಳಬೇಕು. ಅದರ ಸ್ವಚ್ಛತೆಗೂ ಪ್ರಮುಖ ಗಮನ ನೀಡಬೇಕು. ನಾಯಿ ಗೂಡನ್ನು ಚೆನ್ನಾಗಿ ಅಲಂಕರಿಸಿ ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕಾದ್ದು ಅವುಗಳ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಅವುಗಳು ತೃಪ್ತಿಯಿಂದ ಅದರಲ್ಲಿ ವಾಸಿಸುವುದು ನಮಗೂ ಖುಷಿ ಅವಕ್ಕೂ ಖುಷಿ. ನಿಮ್ಮ ಮನೆಯಲ್ಲಿರುವ ಫರ್ನೀಚರ್ ತುಂಡುಗಳನ್ನು ಬಳಸಿ ಅವುಗಳ ಮನೆಯನ್ನು ವಿಶೇಷವಾಗಿ ಅಲಂಕರಿಸಬಹುದು. ನಿಮ್ಮ ನಾಯಿ ಪ್ರೀತಿಯನ್ನು ಈ ವಿಧಾನವನ್ನು ಅನುಸರಿಸುವ ಮೂಲಕ ಇನ್ನೂ ಚೆನ್ನಾಗಿ ತೋರ್ಪಡಿಸಿ.

Home Decor Tips For Dog Lovers

ನಾಯಿಗಾಗಿ ಸೋಫಾ:

ನಾಯಿ ಗೂಡಿನಲ್ಲಿ ಸಣ್ಣದಾದ ಸೋಫಾವನ್ನು ನಿಮ್ಮ ಪ್ರೀತಿಯ ನಾಯಿಗಾಗಿ ಇರಿಸಬಹುದು. ಅವುಗಳು ವಿಶ್ರಾಂತಿ ತೆಗೆದುಕೊಳ್ಳುವಾಗ ಅಥವಾ ಏನನ್ನಾದರೂ ಸೇವಿಸುವಾಗ ಈ ಸೋಫಾ ಅವುಗಳ ಸಹಾಯಕ್ಕೆ ಬರಬಹುದು. ಇದು ನಾಯಿಗೆ ನಿಜವಾದ ಆರೈಕೆಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ನಾಯಿಯ ಅಭ್ಯಾಸ ಬದಲಿಸಿ

ನಾಯಿ ಗೂಡಿನ ಒಳಾಂಗಣ:

ಹೊರಗೆ ನಾಯಿ ಗೂಡನ್ನು ರಚಿಸುವ ಬದಲು, ಡೋಮ್ ವಿನ್ಯಾಸದೊಂದಿಗೆ ಒಳಗಡೆ ನಾಯಿ ಗೂಡನ್ನು ರಚಿಸಬಹುದು. ಅಂದರೆ ಟೋಮ್ ಮತ್ತು ಜೆರ್ರಿಯ ಮನೆಗಳಂತೆ. ದೊಡ್ಡ ಡೋಮ್‌ನ ಸುಂದರ ನಿಮ್ಮ ನಾಯಿಗೆ ಆರಾಮದಾಯಕವಾಗಿರುವ ನಾಯಿ ಗೂಡನ್ನು ನಿರ್ಮಿಸಬಹುದು.

ನೀವು ಹಾಗೂ ರೋಕಿಂಗ್ ಚೇರ್:

ಹೌದು! ಇದೊಂದು ಒಳ್ಳೆಯ ವಿಚಾರ! ನಿಮಗೆ ಮತ್ತು ನಿಮ್ಮ ನಾಯಿಗಾಗಿ ಒಂದು ಚೇರ್ ಅನ್ನು ವ್ಯವಸ್ಥೆ ಮಾಡಿ. ನಿಮ್ಮ ಸೀಟಿನ ಅಡಿಯಲ್ಲಿ ನಿಮ್ಮ ನಾಯಿ ಬಂದು ಕುಳಿತುಕೊಳ್ಳುತ್ತದೆ ನೀವು ಹಾಗೂ ನಿಮ್ಮ ನಾಯಿ ಜೊತೆಗೆ ವಿಶ್ರಾಂತಿ ತೆಗೆದುಕೊಳ್ಳಬಹುದು. ಇದು ಒಂದು ಉತ್ತಮ ವಿಶ್ರಾಂತಿ ವಿಧಾನವಾಗಿದೆ.

ವಾಲ್ ಬೆಡ್ಸ್:

ಇಂತಹ ಫರ್ನೀಚರ್ ಅನ್ನು ನಿಮ್ಮ ನಾಯಿ ತುಂಬಾ ಇಷ್ಟಪಡಬಹುದು. ವಾಲ್‌ ಬೆಡ್ಸ್‌ಗಳನ್ನು ನಾಯಿ ತುಂಬಾ ಇಷ್ಟಪಡಬಹುದು. ಅದನ್ನು ಏರಿಕೊಂಡು ಹೋಗಿ ಅದರಲ್ಲಿ ಮಲಗುವುದು ನಾಯಿಗೆ ತುಂಬಾ ಪ್ರಿತಿದಾಯಕವಾಗಿರುತ್ತದೆ. ಆದರೆ ಅವುಗಳಿಗೆ ಆರಾಮದಾಯಕವಾಗಿರುವ ಬೆಡ್ ಅನ್ನು ನೀವು ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಕುಪ್ರಾಣಿಗಳ ಕಾಳಜಿಗೆ 10 ಸಲಹೆಗಳು

ಬೆಡ್ ಸಮೀಪದ ನಾಯಿ ಗೂಡು:

ನಿಮ್ಮ ನಾಯಿ ಗೂಡು ನಿಮ್ಮ ಹಾಸಿಗೆಯ ಪಕ್ಕದಲ್ಲಿ ಇದ್ದರೆ ಆಹಾ ಒಳ್ಳೆಯ ವಿಚಾರವಾಗಿದೆ! ಕೆಲವರಿಗೆ ಬೆಡ್ ಪಕ್ಕದಲ್ಲಿ ನಾಯಿ ಇರುವುದು ಅಷ್ಟೊಂದು ಖುಷಿಯ ವಿಚಾರವಾಗಿರುವುದಿಲ್ಲ ಆದರೆ ನಿಮ್ಮ ಕೋಣೆಯ ಒಂದು ಬದಿಯಲ್ಲಿ ನಿಮ್ಮ ನಾಯಿಯ ಗೂಡನ್ನು ವ್ಯವಸ್ಥೆಗೊಳಿಸಬಹುದು. ನಾಯಿಗೆ ನಿಮ್ಮ ಕೋಣೆಯನ್ನು ಹಂಚಿಕೊಂಡ ಖುಷಿಯಾಗಿದ್ದರೆ ಉತ್ತಮ ಆರಾಮದಾಯಕ ವಾಸಸ್ಥಾನ ನಾಯಿಗೆ ದೊರಕಿದೆ ಎಂಬ ಸಂಭ್ರಮ ನಿಮ್ಮದಾಗಿರುತ್ತದೆ.

English summary

Home Decor Tips For Dog Lovers

In this time and age, there are a lot of dog lovers and owners. You would find a lot of dog owners walking along the lanes while their dogs are busy digging out of the mud. Yes, it is a pretty sight indeed.
Story first published: Monday, March 17, 2014, 18:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more