For Quick Alerts
ALLOW NOTIFICATIONS  
For Daily Alerts

ನಿಮ್ಮ ಬೆಕ್ಕು ತಿನ್ನಲೇ ಬಾರದಾದ ತಿನಿಸುಗಳು

By Poornima Heggade
|

ಬೆಕ್ಕು ಬಹಳ ಮುದ್ದಿನ ಸಾಕು ಪ್ರಾಣಿ ಹಾಗೂ ಎಲ್ಲರೂ ಹೆಚ್ಚು ಕಾಳಜಿ ವಹಿಸಿ ನೋಡಿಕೊಳ್ಳುವ ಸಾಕು ಪ್ರಾಣಿ. ಬೆಕ್ಕಿಗೆ ಅನಾರೋಗ್ಯವಾದರೆ ಅಳುವ ಮಂದಿ ಅದೆಷ್ಟೋ. ಹೀಗೆ ಬೆಕ್ಕಿನ ಆರೋಗ್ಯ ಸರಿ ಇರಬೇಕಾದರೆ ಅದು ತಿನ್ನುವ ವಸ್ತುಗಳ ಬಗ್ಗೆ ಗಮನ ಕೊಡಬೇಕಾದ್ದು ಆದ್ಯ ಕೆಲಸ. ಆದರೆ ಬೆಕ್ಕು ಎಲ್ಲವನ್ನೂ ತಿನ್ನುವುದಿಲ್ಲ. ಹಾಗಾಗಿ ಬೆಕ್ಕಿಗೆ ಏನು ತಿನ್ನಬೇಕು ಎನ್ನುವುದರ ಬಗ್ಗೆ ಗೊತ್ತು ಹಾಗೂ ನಾವು ಅದರ ಬಗ್ಗೆ ಕಾಳಜಿ ವಹಿಸಬೇಕಿಲ್ಲ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಅದು ಹಾಗಾಗುವುದಿಲ್ಲ.

ಬೆಕ್ಕು ತಿನ್ನಬಹುದಾದ ಹಲವು ಆಹಾರಗಳಲ್ಲಿ ಅದು ನಿಜವಾಗಿಯೂ ತಿನ್ನಬಾರದಾದ ಆಹಾರಗಳಿವೆ. ಹಾಗಾಗಿ ಬೆಕ್ಕುಗಳಿಗೆ ನೀಡಬಾರದಾದ ಆಹಾರವನ್ನು ನೀವು ಕೊಡುತ್ತಿಲ್ಲ ಎಂದು ಖಾತರಿ ಮಾಡಿಕೊಳ್ಳಿ. ಇಲ್ಲಿ ಅಂತಹ ಆಹಾರಗಳ ಪಟ್ಟಿ ನೀಡಲಾಗಿದೆ. ಇದು ಸಂಪೂರ್ಣವಾದ ಪಟ್ಟಿ ಅಲ್ಲವೇ ಅಲ್ಲ. ಆದರೆ ಇದರಲ್ಲಿ ಎಲ್ಲಾ ಪ್ರಮುಖ ತಿನ್ನಬಾರದಾದ ಆಹಾರಗಳು ಸೇರಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಕುಪ್ರಾಣಿಗಳ ಕಾಳಜಿಗೆ 10 ಸಲಹೆಗಳು

1.ಹಾನಿಕಾರಕ ಚಾಕೋಲೆಟ್ ಗಳು

1.ಹಾನಿಕಾರಕ ಚಾಕೋಲೆಟ್ ಗಳು

ಮನುಷ್ಯರಿಗೆ ಅತಿ ಇಷ್ಟವಾದ ತಿನಿಸುಗಳಲ್ಲಿ ಚಾಕೋಲೆಟ್ ಗಳು ಅಗ್ರ ಸ್ಥಾನದಲ್ಲಿವೆ. ನೀವು ಚಾಕೋಲೆಟ್ ಗಳನ್ನು ತಿನ್ನುವುದರಲ್ಲಿ ಏನು ತೊಂದರೆ ಇಲ್ಲ. ಆದರೆ ನಿಮ್ಮ ಪ್ರೀತಿಯ ಬೆಕ್ಕಿಗೆ ಅದನ್ನು ತಿನ್ನಿಸಬೇಡಿ. ಇದು ಬೆಕ್ಕು ತಿನ್ನಬಾರದಾದ ಪ್ರಮುಖ ತಿನಿಸು. ಥಿಯೋಬ್ರೊಮೈನ್ ಎಂಬ ವಸ್ತು ಚಾಕೋಲೆಟ್ ನಲ್ಲಿದ್ದು ಅದು ಬೆಕ್ಕುಗಳ ಪಾಲಿಗೆ ವಿಷಕಾರಿ ವಸ್ತುವಾಗಿದೆ. ಹಾಗಾಗಿ ನೀವು ನಿಮ್ಮ ಮುದ್ದಿನ ಬೆಕ್ಕಿಗೆ ಚಾಕೋಲೆಟ್ ನೀಡದಂತೆ ಎಚ್ಚರ ವಹಿಸಿ.

2.ಮೀನುಗಳು

2.ಮೀನುಗಳು

ಟ್ಯೂನಾ ಮೀನುಗಳನ್ನು ಮಿತಿಯಲ್ಲಿ ತಿಂದರೆ ಅವುಗಳು ಅಷ್ಟೊಂದು ಹಾನಿಕಾರಕವಲ್ಲ. ಅದರಲ್ಲಿರುವ ಪಾದರಸ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸೇರಿದಂತೆ ತೊಂದರೆಗಳನ್ನು ನೀಡುತ್ತದೆ.

3.ಕಚ್ಚಾ ಮೊಟ್ಟೆಗಳು

3.ಕಚ್ಚಾ ಮೊಟ್ಟೆಗಳು

ಕಚ್ಚಾ ಮೊಟ್ಟೆಗಳು ನಿಮ್ಮ ಬೆಕ್ಕಿನ ಪಾಲಿನ ಶತ್ರುಗಳಾಗಬಲ್ಲವು. ಇವುಗಳಲ್ಲಿ ಇ ಕಾಯ್ಲ್ ಅಥವಾ ಇನ್ನಿತರ ಬಾಕ್ಟೀರಿಯಾಗಳಿದ್ದು ಇವು ಬೆಕ್ಕಿನ ಆರೋಗ್ಯಕ್ಕೆ ಹಾನಿಕರ.

4.ಅಣಬೆಗಳ ಬಗ್ಗೆ ಜಾಗೃತೆ ಇರಲಿ

4.ಅಣಬೆಗಳ ಬಗ್ಗೆ ಜಾಗೃತೆ ಇರಲಿ

ಮನುಷ್ಯರಿಗೆ ಅಣಬೆಗಳು ಅಥವಾ ಮಷ್ ರೂಮ್ ಬಹಳ ಇಷ್ಟ ಆದರೆ ನಮ್ಮ ದೇಹದಲ್ಲಿ ಇವನ್ನು ಸಹಿಸಲಿಕ್ಕಿರುವ ಸಾಮರ್ಥ್ಯ ನಿಮ್ಮ ಮುದ್ದಿನ ಬೆಕ್ಕುಗಳಲ್ಲಿ ಇರಲಿಕ್ಕಿಲ್ಲ. ಹಾಗಾಗಿ ಹೆಚ್ಚು ಅಣಬೆಗಳನ್ನು ತಿನ್ನದಂತೆ ಎಚ್ಚರ ವಹಿಸಿ.

5.ಹಸಿರು ಟೊಮೆಟೊಗಳು

5.ಹಸಿರು ಟೊಮೆಟೊಗಳು

ನಿಮ್ಮ ಬೆಕ್ಕಿಗೆ ಹಣ್ಣಾದ ಟೊಮೇಟೊಗಳು ಇಷ್ಟ ಇರಬಹುದು. ಅವು ನಿಮ್ಮ ಬೆಕ್ಕಿಗೆ ಯಾವುದೇ ರೀತಿಯ ತೊಂದರೆ ನೀಡವು. ಆದರೆ ಹಸಿರು ಟೊಮೊಟೆಗಳು ಹಾಗಲ್ಲ. ಇವು ನಿಮ್ಮ ಬೆಕ್ಕಿಗೆ ಉದರದ ಸಮಸ್ಯೆಯನ್ನು ತರಬಲ್ಲವು. ಹಾಗಾಗಿ ಹಸಿರು ಟೊಮೆಟೊಗಳನ್ನು ಆದಷ್ಟು ಬೆಕ್ಕುಗಳಿಂದ ದೂರವಿಡಿ.

6.ಬೆಳ್ಳುಳ್ಳಿ ಹಾಗೂ ಈರುಳ್ಳಿ

6.ಬೆಳ್ಳುಳ್ಳಿ ಹಾಗೂ ಈರುಳ್ಳಿ

ಈ ಎರಡು ವಸ್ತುಗಳು ನಿಮಗೆ ರುಚಿ ಹಾಗೂ ಸುವಾಸನೆ ನೀಡುತ್ತವೆ ಹಾಗೆಂದು ಇದನ್ನು ನಿಮ್ಮ ಬೆಕ್ಕು ಗಳಿಗೂ ತಿನ್ನಿಸಿಬಿಟ್ಟೀರಿ ಜೋಕೆ. ಇವನ್ನು ಸ್ವಲ್ಪ ಹೆಚ್ಚು ಸೇವನೆ ಮಾಡಿದ ಬೆಕ್ಕುಗಳಲ್ಲಿ ರಕ್ತಹೀನತೆ ಬರಬಹುದು. ಇವು ಹಸಿ ಇರಲಿ ಅಥವಾ ಬೇಯಿಸಿದ್ದಾಗಿರಲಿ ನೀಡಬೇಡಿ.

7.ಮಿತಿ ಮೀರಿ ಕುಡಿಸಬೇಡಿ

7.ಮಿತಿ ಮೀರಿ ಕುಡಿಸಬೇಡಿ

ನಿಮಗೆ ವಾರಾಂತ್ಯದಲ್ಲಿ ಪಾರ್ಟಿ ಮಾಡುವ ಆಸೆ ಇರಬಹುದು ನಿಮ್ಮ ದೇಹ ಅದನ್ನು ಸಹಿಸಬಹುದು. ಆದರೆ ಇವುಗಳು ನಿಮ್ಮ ಬೆಕ್ಕುಗಳಿಗೆ ಸಿಗದ ಹಾಗೆ ಇಡಿ. ಇವುಗಳಿಂದ ನಿಮ್ಮ ಬೆಕ್ಕಿನ ಯಕೃತ್ತು ಹಾಗೂ ಮೆದುಳಿಗೆ ಬಹಳ ಹಾನಿ ಇದೆ.

English summary

Foods Your Cat Should Never Eat

Your cat is your beloved pet and it is obvious you would be cautious about what she eats! Her well-being really matters to you! she might be a picky-eater and you might end up thinking that she knows what is good for her.
Story first published: Friday, January 24, 2014, 15:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more