For Quick Alerts
ALLOW NOTIFICATIONS  
For Daily Alerts

ನಾಯಿಯ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರ

|
Remedies To Cure Dog
ನಮ್ಮಂತೆ ನಾಯಿಗಳಿಗೂ ಕೆಲವೊಂದು ಆಹಾರಗಳನ್ನು ತಿಂದರೆ ಹೊಟ್ಟೆನೋವಿನ ಸಮಸ್ಯೆ ಕಂಡುಬರುತ್ತದೆ. ಕೆಲವೊಮ್ಮೆ ಅಜೀರ್ಣ ಸಮಸ್ಯೆಯಿಂದ ಕೂಡ ಹೊಟ್ಟೆ ನೋವು ಉಂಟಾಗುತ್ತದೆ.

ಅದರಲ್ಲೂ ಜಾತಿ ನಾಯಿಯಂತೂ ಆಹಾರ ವಿಷಯದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತದೆ. ಆಹಾರದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಹೊಟ್ಟೆನೋವು, ವಾಂತಿ, ಬೇಧಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಈ ರೀತಿ ಉಂಟಾದರೆ ಮನೆ ಗಲೀಜಾಗುತ್ತದೆ. ಅಲ್ಲದೆ ನಾಯಿ ಸುಸ್ತಾಗಿ ಹೊರಳಾಡುತ್ತಾ ಒಂದು ಕಡೆ ಮಲಗಿ ಬಿಡುತ್ತದೆ. ನಾಯಿಗೆ ಈ ರೀತಿಯ ಸಮಸ್ಯೆ ಕಾಣಿಸಿದರೆ ಕೆಳಗಿನ ಮನೆಮದ್ದಿನಿಂದ ನಾಯಿಯ ಹೊಟ್ಟೆ ನೋವಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

ನೀರು: ವಾಂತಿ ಮತ್ತು ಬೇಧಿ ಹಿಡಿದರೆ ನಾಯಿಗೆ ನೀರನ್ನು ಕುಡಿಯಲು ಕೊಟ್ಟು ನಾಯಿಯ ದೇಹದಲ್ಲಿ ತೇವಾಂಶವನ್ನು ಕಾಪಾಡಬೇಕು.

ತೆಳು ಆಹಾರ: ಚಾಕಲೇಟ್, ಚಿಕನ್, ಖಾರ, ತರಕಾರಿಗಳನ್ನು ಕೊಡಲು ಹೋಗಬಾರದು. ಚಿಕನ್ ಕೊಡುವುದಾದರೆ ಬೋನ್ ಲೆಸ್ ಚಿಕನ್ ಅನ್ನು ತುಂಬಾ ಬೇಯಿಸಿ ಕೊಡಬೇಕು. ಹಸಿಮಾಂಸ ಮತ್ತು ಹಸಿ ತರಕಾರಿ ತಿನ್ನಲು ಕೊಡಬಾರದು.

ಹೊಸ ಬಗೆಯ ಆಹಾರ ಕೊಡುವುದಾದರೆ ಆ ಆಹಾರ ನಾಯಿಗೆ ಮೊದಲು ಸ್ವಲ್ಪ ಕೊಟ್ಟು ನೋಡಬೇಕು. ಒಂದು ವೇಳೆ ನಾಯಿಗೆ ಆ ಆಹಾರ ಸೇರದೆ ವಾಂತಿ ಮಾಡಿದರೆ ಅಥವಾ ಹೊಟ್ಟೆ ನೋವು ಕಾಣಿಸಿಕೊಂಡರೆ ಆ ಬಗೆಯ ಆಹಾರಕೊಡಬಾರದು. ನಾಯಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ಹುಲ್ಲು ಅಥವಾ ಎಲೆ ತಿನ್ನುತ್ತದೆ. ಹೀಗೆ ತಿನ್ನಲು ಬಿಡಬೇಡಿ. ನಾಯಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ಕಡಿಮೆಯಾಗಬಹುದೆಂದು ಹಾಗೇ ಬಿಡದೆ ವೈದ್ಯರನ್ನು ತೋರಿಸುವುದು ಒಳ್ಳೆಯದು.

English summary

Remedies To Cure Dog | Tips To Pet Care | ನಾಯಿಯ ಹೊಟ್ಟೆ ನೋವಿನ ಸಮಸ್ಯೆ ಪರಿಹಾರ | ಸಾಕುಪ್ರಾಣಿಗಳ ಆರೈಕೆಗೆ ಕೆಲ ಸಲಹೆಗಳು

Dogs are sensitive towards few food items. There are foods that can cause stomach problems for your dog. Vomiting and diarrhoea are some symptoms of an upset stomach.
X
Desktop Bottom Promotion