For Quick Alerts
ALLOW NOTIFICATIONS  
For Daily Alerts

ಸಾಕಿದ ಹೆಬ್ಬಾವನ್ನು ಕಚ್ಚಿ ಅರೆಸ್ಟಾದ ಅಮೆರಿಕನ್!

|
Pet python
ಇದುವರೆಗೂ ಹಾವು ಕಚ್ಚಿ ಅದೆಷ್ಟೋ ಮಂದಿ ಸತ್ತಿರುವುದನ್ನು ಕೇಳಿದ್ದೀರಿ, ನೋಡಿದ್ದೀರಿ. ಆದರೆ ಮನುಷ್ಯನೇ ಹಾವನ್ನು ಕಚ್ಚಿರುವ ಸಂಗತಿಯನ್ನು ಎಂದಾದರೂ ಕೇಳಿದ್ದೀರ? ಅಂತಹ ಅಪರೂಪದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಕ್ಯಾಲಿಫೋರ್ನಿಯಾದ ಡೇವಿಡ್ ಸೆಂಕ್ ಎಂಬ ಭೂಪ ತಾನು ಸಾಕಿದ ಹೆಬ್ಬಾವನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ತಪ್ಪಿಗೆ ಈಗ ಜೈಲಿನಲ್ಲಿದ್ದಾನೆ. ಸುಮಾರು ಮೂರು ಅಡಿ ಉದ್ದವಿರುವ ಹಾವಿನ ಲಿವರ್ ಕಾಣುವಷ್ಟು ಹರಿತವಾಗಿ ಈತ ಎರಡು ಬಾರಿ ಕಚ್ಚಿದ್ದಾನಂತೆ. ಇದರಿಂದ ಹಾವಿನ ಪಕ್ಕೆಲುಬುಗಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ.

ಹಾವನ್ನು ಅಮಾನುಷವಾಗಿ ಅಂಗಹೀನನನ್ನಾಗಿ ಮಾಡಿದ ಅಪರಾಧಕ್ಕೆ ಸೆಂಕ್ ನನ್ನು ಬಂಧಿಸಲಾಗಿದೆ. ಆದರೆ ಜೈಲಿನಲ್ಲಿರುವ ಸೆಂಕ್, ತನಗೆ ಈ ಅವಘಡದ ಬಗ್ಗೆ ನೆನಪಿಲ್ಲ, ನಾನು ಆ ಸಮಯದಲ್ಲಿ ಮದ್ಯಪಾನ ಮಾಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಅದರ ಮಾಲೀಕರು ಸಿಕ್ಕರೆ ಕ್ಷಮೆ ಯಾಚಿಸಿ ಅದರ ಚಿಕಿತ್ಸಾ ಶುಲ್ಕವನ್ನೂ ಭರಿಸುತ್ತೇನೆ ಎಂದಿದ್ದಾನೆ.

ಸದ್ಯ ಹೆಬ್ಬಾವು ನಗರದ ಸಾಕ್ರಮೆಂಟೋ ಪ್ರಾಣಿ ಸಂರಕ್ಷಣಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

English summary

Man arrested for biting pet python | ಸಾಕಿದ ಹೆಬ್ಬಾವನ್ನು ಕಚ್ಚಿದ ವ್ಯಕ್ತಿಯ ಬಂಧನ

A man in the Californian city of Sacramento has been accused of biting a pet snake, leaving the python seriously hurt. While officers were speaking to David Senk, 54, found lying at the scene, a witness accused him of taking two bites out of the snake. The python is recovering after being given emergency surgery.
Story first published: Saturday, September 3, 2011, 11:49 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more