For Quick Alerts
ALLOW NOTIFICATIONS  
For Daily Alerts

ಎಸಿಯಿಂದ ಕೊರೊನಾವೈರಸ್ ಹರಡುವ ಅಪಾಯವಿದೆಯೇ?

|

ಭಾರತದಲ್ಲಿ ಲಾಕ್‌ಡೌನ್‌ ಅವಧಿ ಮುಂದುವರೆದಿದೆ... ಇನ್ನು ಮೂರು ವಾರಗಳು ಮನೆಯಲ್ಲಿಯೇ ಕಾಲ ಕಳೆಯಬೇಕು, ಅದರಲ್ಲಿ ತುಂಬಾ ಸೆಕೆ ಇರುವುದರಿಂದ ಮನೆಯೊಳಗೇ ಕೂರುವುದು ಕೂಡ ಕಷ್ಟವೇ... ತುಂಬಾ ಸೆಕೆ ಇರುವ ಕಡೆ ಮನೆಯಲ್ಲಿ ಎಸಿ ಇದ್ದರೆ ಸ್ವಲ್ಪ ಸಮಧಾನ. ಆದರೆ ಕೆಲವರಿಗೆ ಎಸಿ ಹಾಕಲು ಭಯ ಶುರುವಾಗಿದೆ.' ಏಕೆಂದರೆ ಎಸಿ ಹಾಕಿದರೆ ಕೊರೊನಾವೈರಸ್‌ ಹರಡಬಹುದು ಎಂಬ ಭಯ ಅವರಲ್ಲಿದೆ.

ಕೊರೊನಾವೈರಸ್‌ ಎಸಿ ಮೂಲಕ ಹರಡುತ್ತದೆಯೇ ಎಂದು ನೋಡುವುದಾದರೆ ಮನೆಯಲ್ಲಿ ಯಾರೂ ಸೋಂಕಿತರು ಅಥವಾ ಸೋಂಕಿನ ಲಕ್ಷಣ ಇರುವವರು ಇಲ್ಲದಿದ್ದರೆ ಎಸಿ ಹಾಕಬಹುದು. ಆ ಮನೆಯಲ್ಲಿ ವಾಸಿಸುವವರನ್ನು ಹೊರತು ಪಡಿಸಿ ಬೇರೆ ಯಾರೂ ಆ ಮನೆಗೆ ಬಂದು- ಹೋಗುವುದು ಮಾಡಬಾರದು. ಹಾಗಾದರೆ ಎಸಿ ಬಳಸುವುದರಿಂದ ತೊಂದರೆಯಿಲ್ಲ.

ಎಲ್ಲಿ ಎಸಿ ಅಪಾಯ?

ಎಲ್ಲಿ ಎಸಿ ಅಪಾಯ?

ಮಾಲ್‌ಗಳಲ್ಲಿ, ಅಫೀಸ್‌ಗಳಲ್ಲಿರುವ ಸೆಂಟ್ರಲ್ ಎಸಿ ತುಂಬಾ ಅಪಾಯಕಾರಿ ಎಂದು ಅಧ್ಯಯನ ವರದಿಗಳು ಹೇಳಿವೆ. ಕೋವಿಡ್‌ 19 ಗಾಳಿಯ ಮೂಲಕ ಹರಡುವುದಿಲ್ಲ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೆಂಟ್ರಲೈಸ್ ಎಸಿ ಇರುವ ಕಡೆ ವ್ಯಕ್ತಿ ಕೆಮ್ಮುವುದು, ಸೀನುವುದು ಮಾಡಿದರೆ ವೈರಾಣುಗಳು ಅಲ್ಲಿಯೇ ತುಂಬಾ ಹೊತ್ತು ಉಳಿದುಕೊಳ್ಳುತ್ತದೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು msystems ಜರ್ನಲ್ ಹೇಳಿದೆ.

ಮಾಡರ್ನ್‌ ಅಪಾರ್ಟ್‌ಮೆಂಟ್‌ಗಳಲ್ಲಿ ಎಸಿಯಿಂದ ಸೋಂಕು ಹರಡಬಹುದು

ಮಾಡರ್ನ್‌ ಅಪಾರ್ಟ್‌ಮೆಂಟ್‌ಗಳಲ್ಲಿ ಎಸಿಯಿಂದ ಸೋಂಕು ಹರಡಬಹುದು

ಮಾಡರ್ನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವವರಲ್ಲಿ ಯಾರಿಗಾದರೂ ಕೋವಿಡ್ 19 ಇದ್ದರೆ ಎಸಿಯಿಂದಾಗಿ ರೋಗಾಣು ಅಲ್ಲಿಯೇ ಜೀವಿಸಿರುವುದರಿಂದ, ಕಡಿಮೆ ಅವಧಿಯಲ್ಲಿಯೇ ಹೆಚ್ಚು ಜನರಿಗೆ ಬಾಧಿಸುವ ಸಾಧ್ಯತೆ ಇದೆ.

ಮಾಲ್, ಥಿಯೇಟರ್‌ ಮುಂತಾದವುಗಳಲ್ಲಿ ಎಸಿ ಇದ್ದರೆ ಅಲ್ಲಿ ರೋಗಾಣುಗಳು ಬೇಗ ಹರಡುವುದರಿಂದ ನಮ್ಮ ಕೇಂದ್ರ ಸರಕಾರ ಎಲ್ಲಾ ಮಾಲ್‌, ಥಿಯೇಟರ್‌ ಮುಚ್ಚುವಂತೆ ಆದೇಶ ನೀಡಿದೆ. ಕೊರೊನಾವೈರಸ್‌ ಲಾಕ್‌ಡೌನ್ ಮುಗಿದ ಮೇಲೂ ಜನರು ಇಂಥ ಕಡೆ ಸ್ವಲ್ಪ ದಿನಗಳವರೆಗೆ ಹೋಗದಿರುವುದೇ ಒಳ್ಳೆಯದು.

ಮನೆಯ ಬಾಗಿಲು, ಕಿಟಕಿ ತೆರೆದಿಡಿ

ಮನೆಯ ಬಾಗಿಲು, ಕಿಟಕಿ ತೆರೆದಿಡಿ

ಸೂರ್ಯನ ಬೆಳಕು, ಗಾಳಿ ಮನೆಯೊಳಗೆ ಚೆನ್ನಾಗಿ ಬೀಳುವಂತೆ ಇರಬೇಕು, ಆಗ ವೈರಾಣುಗಳು ಮನೆಯೊಳಗೇ ಹೆಚ್ಚು ಹೊತ್ತು ಇರುವುದಿಲ್ಲ. ಮನೆಯಲ್ಲಿ ಹೆಚ್ಚು ಮುfಟುವ ವಸ್ತುಗಳ ಶುಚಿತ್ವ ಕಡೆ ಹೆಚ್ಚಿನ ಗಮನ ನೀಡಿ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ನೆಲವನ್ನು ಸೋಪ್‌ ನೀರು ಹಾಕಿ ಒರೆಸಿ. ಕೆಲವು ಕಡೆ ಪುಟ್ಟ ಕೋಣೆಗಳಿರುತ್ತದೆ, ಅಂಥ ಕೋಣೆಗಳಲ್ಲಿ ಕಿಟಕಿ ಮುಚ್ಚಿದ್ದರೆ ಗಾಳಿ-ಬೆಳಕು ಬರುವುದಿಲ್ಲ. ಗಾಳಿ, ಬೆಳಕು ಬೀಳುವಂತೆ ಕಿಟಕಿಯನ್ನು ತೆರೆದಿಡಿ. ಗಾಳಿ, ಬೆಳಕು ಚೆನ್ನಾಗಿ ಮನೆಯೊಳಗೆ ಬೀಳುವುದರಿಂದ ಸೋಂಕಾಣು ತುಂಬಾ ಹೊತ್ತು ಮನೆಯೊಳಗೆ ಇರುವುದಿಲ್ಲ, ಅದು ಬೇಗನೆ ಸತ್ತು ಹೋಗುತ್ತದೆ, ಈ ಮೂಲಕ ವೈರಸ್‌ ಹರಡದಂತೆ ತಡೆಯಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಲಾಕ್‌ಡೌನ್‌ ಮುಗಿದ ಮೇಲೆ ಭಯವಿಲ್ಲ ಎಂದು ಭಾವಿಸಬೇಡಿ

ಲಾಕ್‌ಡೌನ್‌ ಮುಗಿದ ಮೇಲೆ ಭಯವಿಲ್ಲ ಎಂದು ಭಾವಿಸಬೇಡಿ

ಮೇ.3ರವರೆಗೆ ಲಾಕ್‌ಡೌನ್‌ ಇರುವುದೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಂತ ಮೇ 3ರ ಬಳಿಕ ಮೊದಲಿನಂತೆ ಓಡಾಡಿಕೊಂಡು ಆರಾಮವಾಗಿ ಇರಬಹುದು ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಲಾಕ್‌ಡೌನ್‌ ಬಳಿಕ ಕೂಡ, ದೇಶದಲ್ಲಿ ಒಂದೂ ಕೊರೊನಾಕೇಸ್‌ ಪತ್ತೆಯಾಗದೇ ಇರುವವರಿಗೆ ತುಂಬಾ ಮುನ್ನೆಚ್ಚರಿಕೆವಹಿಸಬೇಕಾಗಿದೆ.

 • ಹೊರಗಡೆ ಓಡಾಡುವಾಗ ಮಾಸ್ಕ್‌ ಧರಿಸಬೇಕು.
 • ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
 • ಮುಖ, ಕಣ್ಣು, ಮೂಗು ಇವುಗಳನ್ನು ಆಗಾಗ ಮುಟ್ಟಬಾರದು.
 • ಹೊರಗಡೆ ಧರಿಸಿ ಹೋದ ಬಟ್ಟೆಯನ್ನು ಒಗೆಯಲು ಹಾಕಬೇಕು.
 • ಧರಿಸಿದ್ದ ಬಟ್ಟೆ ಮಾಸ್ಕ್ ಅನ್ನು ಬಿಸಿ ನೀರಿನಲ್ಲಿ ಒಗೆದು ಹಾಕಬೇಕು. ಸರ್ಜಿಕಲ್ ಮಾಸ್ಕ್ ಆದರೆ 8 ಗಂಟೆಗಳಿಗಿಂತ ಹೆಚ್ಚು ಸಮಯ ಬಳಸಬೇಡಿ. ಅದನ್ನು ಅಲ್ಲಲ್ಲಿ ಬಿಸಾಡದೆ ಕಸದ ಬುಟ್ಟಿಗೆ ಹಾಕಬೇಕು.
ಶುಚಿತ್ವ ಕಡೆ ಗಮನ ನೀಡಿ

ಶುಚಿತ್ವ ಕಡೆ ಗಮನ ನೀಡಿ

 • ಸೋಪ್ ಹಚ್ಚಿ ಆಗಾಗ ಕೈ ತೊಳೆಯಬೇಕು.
 • ಆಹಾರ ತಯಾರಿಸುವ ಮುನ್ನ ಹಾಗೂ ನಂತರ ಕೈಗಳನ್ನು ಸೊಪ್ ಹಚ್ಚಿ ತೊಳೆಯಬೇಕು.
 • ಕೆಮ್ಮು, ಸೀನು ಬಂದರೆ ಅಂಗೈ ಬದಲಿಗೆ ಮೊಣಕೈ ಅಡ್ಡ ಹಿಡಿಯಿರಿ.
 ವೈದ್ಯಕೀಯ ಸಲಹೆ:

ವೈದ್ಯಕೀಯ ಸಲಹೆ:

 • ಕೆಮ್ಮು-ಶೀತ ಇರುವವರಿಂದ ದೂರವಿರಿ.
 • ಕೋವಿಡ್‌ ಲಕ್ಷಣ ಕಂಡು ಬಂದರೆ ತಕ್ಷಣವೇ ಇತರರಿಂದ ಅಂತರಕಾಯ್ದುಕೊಂಡು, ವೈದ್ಯರಿಗೆ ಮಾಹಿತಿ ನೀಡಬೇಕು.
 • ಗ್ಲೌಸ್ ಬಳಸಬೇಡಿ, ಗ್ಲೌಸ್‌ಗೆ ಸೋಂಕಾಣುಗಳು, ಬ್ಯಾಕ್ಟರಿಯಾ ಬೇಗನೆ ಅಂಟಿಕೊಳ್ಳುತ್ತದೆ. ಹ್ಯಾಂಡ್‌ ಸ್ಯಾನಿಟೈಸರ್ ಬಳಸಿ.

ಮನೆಯಲ್ಲಿಯೇ ಇದ್ದು ನೀವು ಆರೋಗ್ಯವಾಗಿರಿ, ಇತರರ ಆರೋಗ್ಯ ಕಾಪಾಡಿ.

English summary

Study Says AIR CONDITIONING APPEARS TO SPREAD CORONAVIRUS

Opening windows in buildings, including our homes, may prevent the spread of the coronavirus, scientists believe.Read on.
Story first published: Thursday, April 16, 2020, 18:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X