For Quick Alerts
ALLOW NOTIFICATIONS  
For Daily Alerts

ಮೈಕ್ರೋವೇವ್ ಬಳಸುತ್ತಿದ್ದರೆ ಇವುಗಳನ್ನು ಗಮನಿಸಲೇಬೇಕು

|

ದುರಸ್ತಿಪಡಿಸಲು ಸಾಧ್ಯವೇ ಆಗದಷ್ಟರ ಮಟ್ಟಿಗೆ ನಿಮ್ಮ ಮೈಕ್ರೋವೇವ್ ಅನ್ನು ಹಾಳುಗೆಡವಬೇಕೆಂಬುದು ನಿಮ್ಮ ಉದ್ದೇಶವೇ ? ಅಥವಾ ನಿಮ್ಮ ಮನೆಯನ್ನು ಬೆಂಕಿಯ ದುರಂತಕ್ಕೆ ಒಳಪಡಿಸುವುದಕ್ಕೆ ನೀವು ಕಾತರರಾಗಿದ್ದೀರೇನು ?

"ಏನ್ ಮಾತೂಂತಾ ಆಡ್ತಾ ಇದ್ದೀರ್ರೀ ?! ಹೀಗೆಲ್ಲಾ ಮಾಡೋದಕ್ಕೆ ನಮಗೆ ತಲೆಕೆಟ್ಟಿದೆಯೇನು ?" ಎನ್ನುವುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ, ನಿಮಗೆ ಗೊತ್ತಿಲ್ಲದೆಯೇ ಹೀಗೆಲ್ಲಾ ಆಗುವುದನ್ನು ತಪ್ಪಿಸುವುದಕ್ಕೋಸ್ಕರವಾಗಿ ನೀವು ನಮ್ಮ ಮೇಲೆ ವಿಶ್ವಾಸವನ್ನಿರಿಸಲೇಬೇಕು ಹಾಗೂ ನಾವು ಈ ಕೆಳಗೆ ಪ್ರಸ್ತಾಪಿಸಿರುವ ಸಮಸ್ಯೆಗಳ ಬಗ್ಗೆ ನೀವು ತುರ್ತು ನಿಗಾವಹಿಸಲೇಬೇಕು. ಯಾಕೆಂದರೆ, ನಿಮ್ಮ ವಿಚಾರದಲ್ಲಿ ಅಂತಹ ದುರಂತಗಳೆಲ್ಲಾ ಸಂಭವಿಸುವುದು ನಮಗೂ ಖುಶಿ ತರುವ ಸಂಗತಿಗಳೇನಲ್ಲ!!!

ನಿಮ್ಮ ಆ ಪುಟ್ಟ ಗೃಹೋಪಯೋಗೀ ಉಪಕರಣವು ದೊಡ್ಡ ದೊಡ್ಡ ಸಮಸ್ಯೆಗಳನ್ನು ಹೊಂದಿರುವಾಗ

ನೀವದನ್ನು ದಿನನಿತ್ಯವೂ ಬಳಸುತ್ತಿರಬಹುದು ಅಥವಾ ವಾರವೊಂದರಲ್ಲಿ ಕೆಲವೇ ಕೆಲವು ಬಾರಿ ಬಳಸುತ್ತಿರಬಹುದು, ಬಳಕೆಯ ಪ್ರಮಾಣವು ಅದೆಷ್ಟೇ ಆಗಿದ್ದರೂ ಕೂಡಾ, ನಿಮ್ಮ ಬಳಿ ಇರಬಹುದಾದ ಅತ್ಯಂತ ಪ್ರಯೋಜನಕಾರೀ, ಸರಳ ಗೃಹೋಪಕರಣಗಳಲ್ಲಿ ಒಂದು ಈ ಮೈಕ್ರೋವೇವ್.

ಇಂತಹ ಉಪಯುಕ್ತ ಸಾಧನವು ಅದ್ಯಾವಾಗ ನಿಮಗೆ ಅನುಕೂಲಕರವಾಗಿರುವುದನ್ನು ಬಿಟ್ಟು, ನಿಮಗೆ ತಲೆನೋವು ನೀಡಲಾರಂಭಿಸುತ್ತದೆಯೋ, ಆ ಕ್ಷಣವೇ ನೀವದರ ತೊಂದರೆಯ ಕುರಿತು ಗಮನಹರಿಸಬೇಕು - ನೀವು ಪಾಪ್ಕಾರ್ನ್ ಅನ್ನು ತಯಾರಿಸಬೇಕಾಗಿದೆ ಅಥವಾ ಉಳಿದಿರುವ ಆಹಾರಪದಾರ್ಥಗಳನ್ನು ಬಿಸಿ ಮಾಡಬೇಕಾಗಿದೆ ಎಂಬುದಷ್ಟೇ ಇದಕ್ಕೆ ಕಾರಣವಲ್ಲ, ಬದಲಿಗೆ ಆ ನಿಮ್ಮ ಉಪಕರಣವನ್ನು ಮರಳಿ ಸರಿಪಡಿಸಲಾರದಂತಹ ಗಂಭೀರಸ್ವರೂಪದ ಹಾನಿಯ ಸಂಕೇತವು ಅದಾಗಿರಬಹುದು ಇಲ್ಲವೇ ಅದು ಅಗ್ನಿ ಅವಘಡಕ್ಕೂ ದಾರಿಮಾಡಿ ಕೊಟ್ಟೀತು.

ಆದ್ದರಿಂದ, ತಜ್ಞರು ಹೇಳುವ ಪ್ರಕಾರ, ಇವೆಲ್ಲವೂ ನೀವು ನಿರ್ಲಕ್ಷಿಸಬಹುದಾದ ಸಂಗತಿಗಳಂತೂ ಅಲ್ಲವೇ ಅಲ್ಲ. ಮಾರುಕಟ್ಟೆಯಲ್ಲಿ ಒಂದು ಹೊಸ ಮೈಕ್ರೋವೇವ್ ನ ಹುಡುಕಾಟದಲ್ಲಿ ನೀವಿರುವಿರೆಂದಾದರೆ, ಗೃಹೋಪಯೋಗಿ ಉಪಕರಣಗಳ ಯಾವ ಬ್ರ್ಯಾಂಡ್ ಗಳು ಅತ್ಯಂತ (ಹಾಗೂ ಅತ್ಯಲ್ಪ) ವಿಶ್ವಾಸಾರ್ಹವಾದವುಗಳು ಎಂಬುದು ನಿಮಗೆ ತಿಳಿದಿರುವುದನ್ನು ಖಾತರಿಪಡಿಸಿಕೊಳ್ಳಿರಿ.

ಸುಟ್ಟವಾಸನೆ

ಸುಟ್ಟವಾಸನೆ

"ಸುಟ್ಟವಾಸನೆ (ಮತ್ತು ಹೊಗೆ) ಯು ನಿಮ್ಮ ಮೈಕ್ರೋವೇವ್ ನಲ್ಲಿರಬಹುದಾದ ಯಾವುದೋ ಒಂದು ದೋಷದ/ನ್ಯೂನತೆಯ ಸೂಚಕವಾಗಿರುತ್ತದೆ ಮತ್ತು ಹೀಗಾದಾಗ, ನೀವು ಕೂಡಲೇ ಮೈಕ್ರೋವೇವ್ ಅನ್ನು ಸ್ವಿಚ್-ಆಫ಼್ ಮಾಡಬೇಕು ಮತ್ತು ಅದರ ಪ್ಲಗ್ ಅನ್ನು ಪವರ್ ಜೌಟ್ಲೆಟ್ ನಿಂದ ತಪ್ಪಿಸಿಡಬೇಕು.

ಆಹಾರ ಪದಾರ್ಥವನ್ನು ಕುರುಕುಲಾಗಿಸುವ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ ಸುಟ್ಟವಾಸನೆಯಂತಹ ಸಣ್ಣ ಸಂಗತಿಯೂ ಇದಾಗಿರಬಹುದು ಇಲ್ಲವೇ ಉಪಕರಣದ ವಯರಿಂಗ್ ಗೆ ಅಥವಾ ವಿದ್ಯುತ್ತಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಗಂಭೀರಸ್ವರೂಪದ ಚಿಹ್ನೆಯೂ ಆಗಿರಬಹುದು ಈ ಸುಟ್ಟವಾಸನೆ. ಎರಡೂ ಪ್ರಕರಣಗಳಲ್ಲಿಯೂ ಸರಿಯಾಗಿ ಗಮನಿಸದೇ ನಿಮ್ಮ ಉಪಕರಣವನ್ನು ಹಾಗೆಯೇ ಉಪೇಕ್ಷಿಸಿದರೆ ಕಟ್ಟಕಡೆಗೆ ಉಪಕರಣಕ್ಕೇ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.

ಈ ಕಾರಣಕ್ಕಾಗಿಯೇ ಷಿಮೆಕ್ ಅವರು ಹೇಳೋದು, "ಖಂಡಿತವಾಗಿಯೂ ನೀವು ಕೂಡಲೇ ಉಪಕರಣವನ್ನು ದುರಸ್ತಿಪಡಿಸುವ ತಜ್ಞರೋರ್ವರನ್ನು ಕರೆಸಬೇಕು. ಏಕೆಂದರೆ ಅಂತಹ ಸುಟ್ಟವಾಸನೆ (ಮತ್ತು ಹೊಗೆ) ಗೆ ಕರಾರುವಕ್ಕಾದ ಕಾರಣವನ್ನು ಕಂಡುಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ" ಎಂದು. ಅಗ್ನಿ ಅನಾಹುತಕ್ಕೆ ದಾರಿಮಾಡಿಕೊಡಬಲ್ಲಂತಹ ನಿಮ್ಮ ಮನೆಯಲ್ಲಿನ ಇನ್ನಿತರ ಇಂತಹ ಅಗೋಚರ ಸಂಗತಿಗಳ ಕುರಿತು ನಿರ್ಲಕ್ಷ್ಯ ಸಲ್ಲದು.

ಪಟ್ಟುಬಿಡದ ಜಿಡ್ಡು/ತೈಲ ಕಲೆಗಳು

ಪಟ್ಟುಬಿಡದ ಜಿಡ್ಡು/ತೈಲ ಕಲೆಗಳು

ಮೈಕ್ರೋವೇವ್ ಗೆ ಮೆತ್ತಿಕೊಂಡಿರಬಹುದಾದ ಹಠಮಾರೀ ಜಿಡ್ಡಿನ/ತೈಲದ ಕಲೆಗಳನ್ನು ನಿತ್ಯವೂ ತಿಕ್ಕಿ ತಿಕ್ಕಿ ಸ್ವಚ್ಛಗೊಳಿಸುವುದೆಂದರೆ ಅದು ನಿಜಕ್ಕೂ ಸಾಕಷ್ಟು ಸಮಯವನ್ನು ತಿಂದುಹಾಕುವ ಕೆಲಸ.

ಹಾಗಂತ ಈ ಕೆಲಸವನ್ನು ಉಪೇಕ್ಷಿಸುವುದು ನಿಮ್ಮ ಮೈಕ್ರೋವೇವ್ ನ ಆಯಸ್ಸನ್ನು ತಗ್ಗಿಸಿದಂತೆಯೇ ಸರಿ. 'ಮೇಲ್ನೋಟಕ್ಕೆ ಇವು ಹಾನಿಕಾರಕವಲ್ಲದವುಗಳೆಂದೆನಿಸಿದರೂ, ಮೈಕ್ರೋವೇವ್ ಗೆ ಮೆತ್ತಿಕೊಂಡಿರಬಹುದಾದ ಈ ಕಲೆಗಳು ಕಾಲಕ್ರಮೇಣ ಸ್ವಚ್ಛಗೊಳಿಸಲು ಸಾಧ್ಯವಾಗದಷ್ಟು ಬಿಗುವಾಗಿ ಅಂಟಿಕೊಂಡು ಬಿಡಬಹುದು ಹಾಗೂ ನಿಮ್ಮ ಆ ಪುಟ್ಟ ಗೃಹೋಪಕರಣದ ಗೋಡೆಗಳನ್ನೂ ಕೂಡಾ ದಹಿಸಿಬಿಡಬಹುದು.

ನಿಮ್ಮ ಮೈಕ್ರೋವೇವ್ ನ ಆಯುಷ್ಯವನ್ನು ದೀರ್ಘವಾಗಿಸಲು ಮತ್ತು ಅದನ್ನು ಅತ್ಯುನ್ನತ ಮಟ್ಟದಲ್ಲಿ ಕಾರ್ಯಾಚರಿಸುವ ಸ್ಥಿತಿಯಲ್ಲಿಟ್ಟುಕೊಳ್ಳುವ ದಿಶೆಯಲ್ಲಿ, ಅದನ್ನು ಪ್ರತಿದಿನವೂ ಒಂದು ಬೆಚ್ಚಗಿನ ಬಟ್ಟೆಯಿಂದ ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಿರಿ.

ಹೀಗೆ ಮಾಡಿದಲ್ಲಿ, ಮೈಕ್ರೊವೇವ್ ನ ಒಳಗೋಡೆಯ ಮೇಲ್ಮೈ ಮೇಲಿನ ಅವಶೇಷಗಳನ್ನು ನಿವಾರಿಸಿದಂತಾಗುತ್ತದೆ ಹಾಗೂ ಆ ಮೂಲಕ ಗಾಳಿಯು ಯಂತ್ರದ ಒಳಭಾಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ಈ ಮೂಲಕವೇ ಯಂತ್ರವು ತನ್ನೊಳಗಿನ ಆಹಾರವಸ್ತುವನ್ನು ಬಿಸಿಮಾಡುವುದಾಗಿರುತ್ತದೆ.

ಅಡುಗೆ ಮಾಡುವಾಗ ಉಪಕರಣದಿಂದ ಹೊರಹೊಮ್ಮುವ ವಿಚಿತ್ರ ಸದ್ದು

ಅಡುಗೆ ಮಾಡುವಾಗ ಉಪಕರಣದಿಂದ ಹೊರಹೊಮ್ಮುವ ವಿಚಿತ್ರ ಸದ್ದು

ಎಲ್ಲಾ ಮೈಕ್ರೋವೇವ್ ಗಳೂ ಕೂಡಾ ಅಡುಗೆಯನ್ನು ಮಾಡುವಾಗ ಒಂದು ತಗ್ಗಿದ ಹಾಗೂ ನಿರಂತರವಾದ "ಹಮ್" ಸದ್ದನ್ನು ಹೊರಹಾಕುತ್ತವೆ. ಆದರೆ, ಒಂದು ವೇಳೆ ನಿಮ್ಮ ಮೈಕ್ರೋವೇವ್ ಏನಾದರೂ ಇದಕ್ಕಿಂತ ಹೊರತಾದ ವಿಚಿತ್ರ ರೀತಿಯ ಸದ್ದನ್ನು ಮಾಡಲಾರಂಭಿಸಿದಲ್ಲಿ, ಅದನ್ನೊಮ್ಮೆ ಪರಿಶೀಲಿಸುವುದೊಳ್ಳೆಯದು.

ಯಾವುದೇ ಬಗೆಯ ನಿರಂತರ ಬಡಿತದ ಸದ್ದು, ಎರಡು ಲೋಹದ ತುಂಡುಗಳನ್ನು ಪರಸ್ಪರ ತಾಡಿಸಿದಾಗ ಉಂಟಾಗುವಂತಹ ಸದ್ದು, ಅಥವಾ ಸಹಜದ್ದಕ್ಕಿಂತಲೂ ಜೋರಾದ ಸದ್ದು ವಿದ್ಯುತ್ತಿನ ಅಥವಾ ಯಂತ್ರದಲ್ಲಿನ ಸಮಸ್ಯೆಯ ಸೂಚಕವಾಗಿರಬಹುದು. ಇಂತಹ ಅಸಹಜತೆಗಳಿಗೆ ತಡಮಾಡುವುದಕ್ಕಿಂತಲೂ ಆದಷ್ಟು ಬೇಗನೇ ಪರಿಹಾರವನ್ನು ಕಂಡುಕೊಳ್ಳುವುದು ಒಳ್ಳೆಯದು.

ಏಕೆಂದರೆ, ಇಂತಹ ಪರಿಸ್ಥಿತಿಗಳಲ್ಲಿ ಮೈಕ್ರೋವೇವ್ ನ ಬಳಕೆಯನ್ನು ಮುಂದುವರೆಸಿದಲ್ಲಿ, ಅದು ಕಿಡಿಗಳು ಆವಿರ್ಭವಿಸುವುದಕ್ಕೆ ಕಾರಣವಾದೀತು ಅಥವಾ ಬೆಂಕಿಯ ಅವಘಡಕ್ಕೆ ದಾರಿ ಮಾಡಿಕೊಟ್ಟೀತು. ಮೈಕ್ರೋವೇವ್ ನಲ್ಲಿ ಬಳಸುವುದಕ್ಕೆ ಅನುಮತಿಯಿಲ್ಲದ ಯಾವುದನ್ನೂ ಇಂತಹ ಪರಿಸ್ಥಿತಿಗಳಲ್ಲಿ ಬಳಸಲು ಮುಂದಾಗಬೇಡಿರಿ.

ಅಸಮರ್ಪಕ ಕಾರ್ಯಾಚರಣೆಯ ಕುರಿತ ಸೂಚನೆ

ಅಸಮರ್ಪಕ ಕಾರ್ಯಾಚರಣೆಯ ಕುರಿತ ಸೂಚನೆ

ನಿಮ್ಮ ಮೈಕ್ರೋವೇವ್ ನ ಡಿಸ್ಪ್ಲೇ ಪರದೆಯು ಬ್ಲಿಂಕ್ ಆಗುತ್ತಿದ್ದರೆ ಅಥವಾ ಬಟನ್ ಗಳು ಸಿಕ್ಕಿಹಾಕಿಕೊಂಡಿರುವಂತೆ ಇಲ್ಲವೇ ಅಸಮರ್ಪಕವಾಗಿರುವಂತೆ ಕಂಡುಬಂದಲ್ಲಿ, ಇರಬಹುದಾದ ಸಮಸ್ಯೆಯ ತಪಾಸಣೆಗೆ ಅದು ಸಕಾಲವೆಂದರ್ಥ.

ಅದು ಕೇವಲ ಸರ್ಕ್ಯೂಟ್ ಫಲಕದ ಒಂದು ತಾತ್ಕಾಲಿಕ ಸಮಸ್ಯೆಯಾಗಿರಬಹುದಾಗಿದ್ದು, ಮೈಕ್ರೋವೇವ್ ನ ಪ್ಲಗ್ ಅನ್ನು ತಪ್ಪಿಸಿ, ಬಳಿಕ ಪುನ: ಪ್ಲಗ್-ಇನ್ ಮಾಡುವುದರ ಮೂಲಕ ಸಹಜ ಸ್ಥಿತಿಗೆ ತರಲು ಸಾಧ್ಯವೆನ್ನುತ್ತದೆ ಉಪಕರಣದ ಸೇವಾ ಕೇಂದ್ರ. ಇಲ್ಲವೇ ಇದು ವಿದ್ಯುತ್ತಿನ ಹರಿವಿಗೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು, ಇದಂತೂ ಕಾಳಜಿವಹಿಸಬೇಕಾದಂತಹದ್ದೇ ಆಗಿರುತ್ತದೆ.

ಏಕೆಂದರೆ, ಅದನ್ನು ಹಾಗೆಯೇ ಉಪೇಕ್ಷಿಸಿದರೆ ಅದು ಉಪಕರಣದಿಂದ ಕಿಡಿಗಳ ಹೊರಹೊಮ್ಮುವಿಕೆಗೆ ಅಥವಾ ಹೊಗೆಯ ಹೊರಹೊಮ್ಮುವಿಕೆಗೆ ಕಾರಣವಾಗುತ್ತದೆ ಎಂದೆನ್ನುತ್ತಾರೆ ಎಸ್.ಎಫ಼್. ಗೇಟ್. ಅಂದ ಹಾಗೆ, ನಿಮ್ಮ ಉಪಕರಣಗಳು ಬಹುತೇಕ ಕೈಕೊಡುವುದು ಇಂತಹ ಸಂದರ್ಭಗಳಲ್ಲೇ.

ಸಂಪೂರ್ಣವಾಗಿ ಮುಚ್ಚಲ್ಪಡದೇ ಇರುವ ದ್ವಾರ

ಸಂಪೂರ್ಣವಾಗಿ ಮುಚ್ಚಲ್ಪಡದೇ ಇರುವ ದ್ವಾರ

ಮೈಕ್ರೋವೇವ್ ನ ಬಾಹ್ಯ ಭಾಗದ ಕುರಿತು ಹೇಳುವುದಾದರೆ, ಮೈಕ್ರೋವೇವ್ ನ ದ್ವಾರವು ಸರಿಯಾಗಿ ಮುಚ್ಚಲ್ಪಡುವುದಿಲ್ಲವೆಂದಾದಲ್ಲಿ, ಆ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಳ್ಳುವುದು ಬಹಳ ಒಳ್ಳೆಯದು.

ಯು.ಎಸ್. ಫ಼ುಡ್ ‌& ಡ್ರಗ್ ಆಡ್ಮಿನಿಷ್ಟ್ರೇಶನ್ (ಎಫ಼್.ಡಿ.ಎ) ನ ಪ್ರಕಾರ, ಮೈಕ್ರೋವೇವ್ ನ ದ್ವಾರವು ಭದ್ರವಾಗಿ ಮುಚ್ಚಲ್ಪಟ್ಟಿದ್ದಲ್ಲಿ ಅದು ಎಲ್ಲಾ ಸೂಕ್ಷ್ಮವಿಕಿರಣಗಳೂ ಉಪಕರಣದ ಒಳಗಡೆಯೇ ಉಳಿದುಕೊಳ್ಳುವುದನ್ನು ಖಚಿತಪಡಿಸುತ್ತದೆ. ದ್ವಾರವು ಸರಿಯಾಗಿ ಮುಚ್ಚಲ್ಪಡದೇ ಇರುವುದಕ್ಕೆ ಕಾರಣವು ಸಡಿಲಕೊಂಡಿರುವ ಒಂದು ಸ್ಕ್ರೂ ಆಗಿದ್ದಿರಬಹುದು ಅಥವಾ ಬಾಗಿಲನ್ನು ಮುಚ್ಚುವುದಕ್ಕೆ ತಡೆಯೊಡ್ಡುವ ಒಂದು ಆಹಾರದ ತುಣುಕು ಕಾರಣವಾಗಿರಬಹುದು, ಇಲ್ಲವೇ ನಿಮ್ಮ ಮೈಕ್ರೋವೇವ್ ಅನ್ನೇ ಬದಲಾಯಿಸಲು ಇದು ಸೂಕ್ತ ಸಮಯವಾಗಿರಲೂ ಬಹುದು.

ಆಹಾರವಸ್ತುವನ್ನು ಬೇಯಿಸುವುದಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದು:

ಆಹಾರವಸ್ತುವನ್ನು ಬೇಯಿಸುವುದಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದು:

ಮೈಕ್ರೋವೇವ್ ನಲ್ಲಿರಿಸಲಾಗಿರುವ ನಿಮ್ಮ ಆಹಾರ ಪದಾರ್ಥವು ಸಾಮಾನ್ಯವಾಗಿ ಎಷ್ಟು ಬೇಗನೇ ಬಿಸಿಯಾಗಬೇಕೋ, ಅಷ್ಟು ಬೇಗನೇ ಆಗುತ್ತಿಲ್ಲವೆಂದಾದಲ್ಲಿ, ಅಥವಾ ಅಸಮಾನವಾಗಿ ಆಹಾರವನ್ನು ಬಿಸಿಮಾಡುತ್ತಿದೆಯೆಂದಾದಲ್ಲಿ, ನಿಮ್ಮ ಮೈಕ್ರೋವೇವ್ ಸಮರ್ಪಕವಾಗಿ ಕಾರ್ಯಾಚರಿಸುತ್ತಿಲ್ಲವೆಂಬುದರ ಸಂಕೇತವದು. "ನಿಮ್ಮ ಆಹಾರಪದಾರ್ಥವು ತೀರಾ ನಿಧಾನವಾಗಿ ಬೇಯುತ್ತಿದೆ ಎಂದೆನಿಸಿದಲ್ಲಿ, ನಿಮ್ಮ ಮೈಕ್ರೋವೇವ್ ನ ಒಳಗೆ ಒಂದು ಲೋಟದಷ್ಟು ನೀರನ್ನಿರಿಸಿ, ಮೈಕ್ರೋವೇವ್ ಅನ್ನು ಎರಡು ನಿಮಿಷಗಳವರೆಗೆ ಸ್ವಿಚ್-ಆನ್ ಮಾಡುವುದರ ಮೂಲಕ, ನಿಮ್ಮ ಮೈಕ್ರೋವೇವ್ ನ ಸಾಮರ್ಥ್ಯವನ್ನು ಪರಿಶೀಲಿಸಿರಿ.

ಎರಡು ನಿಮಿಷಗಳ ಬಳಿಕ ನೀವು ನೀರನ್ನು ಹೊರತೆಗೆದು ನೋಡಿದಾಗ ಅದು ಬೆಚ್ಚಗಾಗಿಲ್ಲದಿದ್ದಲ್ಲಿ, ಪ್ರಾಯಶ: ನಿಮ್ಮ ಮೈಕ್ರೋವೇವ್ ಅನ್ನು ಬದಲಾಯಿಸುವುದಕ್ಕೆ ಅದು ಸಕಾಲ" ಎಂದು ಷೆಮಿಕ್ ಅವರು ಹೇಳುತ್ತಾರೆ.

ದೋಷಪೂರಿತವಾಗಿ ಕಾರ್ಯಾಚರಿಸುವ ಮ್ಯಾಗ್ನೆಟ್ರಾನ್ ಅಥವಾ ಸರ್ಕ್ಯೂಟ್ ಬೋರ್ಡ್ ನ ಫಲಿತಾಂಶವೇ ಸರ್ವೇಸಾಮಾನ್ಯವಾಗಿ ಮೈಕ್ರೋವೇವ್ ನೊಳಗೆ ಶಾಖವು ತಗ್ಗಲು ಕಾರಣವಾಗಿರುತ್ತದೆ. ಇದರ ದುರಸ್ತಿಗೆ ಓರ್ವ ತಂತ್ರಜ್ಞನ ನೆರವಿನ ಅಗತ್ಯವಿರುತ್ತದೆ. ಆದರೆ, ರಿಪೇರಿ ಮಾಡಿಸಲೆಂದು ನೀವು ಖರ್ಚು ಮಾಡಲು ಮುಂದಾಗುವುದಕ್ಕೆ ಮೊದಲು, ರಿಪೇರಿ ಮಾಡುವುದಕ್ಕೆ ಬದಲಾಗಿ, ರಿಪೇರಿ ಖರ್ಚಿಗಿಂತಲೂ ಅಗ್ಗದ ದರದಲ್ಲಿ ಹೊಸ ಬೇರೆ ಸಾಧನವನ್ನೇನಾದರೂ ಕೊಂಡುಕೊಳ್ಳಲು ಸಾಧ್ಯವಿದೆಯೇ ಎಂಬುದನ್ನೂ ತಿಳಿದುಕೊಳ್ಳುವುದು ಒಳಿತು.

ಸಹಜಕ್ಕಿಂತಲೂ ಆಹಾರಪದಾರ್ಥವು ಬೇಗನೇ ಬೇಯುವುದು:

ಸಹಜಕ್ಕಿಂತಲೂ ಆಹಾರಪದಾರ್ಥವು ಬೇಗನೇ ಬೇಯುವುದು:

ಮೇಲಿನ ವಿವರಿಸಿರುವ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ನಿಮ್ಮ ಆಹಾರವಸ್ತುವು ಆಶ್ಚರ್ಯವೆನಿಸುವಂತೆ ಕ್ಷಣಾರ್ಧದಲ್ಲೇ ಬಿಸಿಯಾಗುತ್ತದೆಯೆಂದಾದರೆ, ಅದೂ ಕೂಡಾ ನಿಮ್ಮ ಮೈಕ್ರೋವೇವ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂಬುದರ ಸಂಕೇತವೇ ಆಗಿರಬಹುದೆಂದು ಷಿಮೆಕ್ ಅವರು ಹೇಳುತ್ತಾರೆ.

ಇದಕ್ಕೂ ಕೂಡಾ ಮ್ಯಾಗ್ನೆಟ್ರಾನ್ ಅಥವಾ ಸರ್ಕ್ಯೂಟ್ ಬೋರ್ಡ್ ನಲ್ಲಿನ ತೊಂದರೆಯೇ ಕಾರಣವಾಗಿರಬಹುದು ಹಾಗೂ ಇದಕ್ಕೂ ಸಹ ಓರ್ವ ತಂತ್ರಜ್ಞರದ್ದೇ ನೆರವಿನ ಅಗತ್ಯವಿರುತ್ತದೆ. ಪ್ರಾಯಶ: ನೀವು ಅತ್ಯಧಿಕ ಶಾಖವನ್ನು ಹೀರಿಕೊಳ್ಳುವಂತಹ ನಾನ್-ಹೀಟ್ ಪ್ರೂಫ಼್ ಅಥವಾ ನಾನ್-ಮೈಕ್ರೋವೇವ್ ಸೇಫ಼್ ಆಹಾರವಸ್ತುಗಳನ್ನೂ ಕೂಡಾ ನಿಮ್ಮ ಮೈಕ್ರೋವೇವ್ ನಲ್ಲಿ ಬಳಸುತ್ತಿರಬಹುದಾದ ಸಾಧ್ಯತೆಯಿರಬಹುದು.

ಇಲ್ಲವೇ ಮೈಕ್ರೋವೇವ್ ನಲ್ಲಿ ಬಳಸಬಾರದ ಆಹಾರವಸ್ತುಗಳನ್ನೂ ಬಳಸುತ್ತಿರುವ ಸಾಧ್ಯತೆಯೂ ಇದ್ದು, ಇವೆಲ್ಲವೂ ಮೈಕ್ರೋವೇವ್ ನ ಉಷ್ಣಾಂಶದ ಹೆಚ್ಚಳಕ್ಕೆ ಕಾರಣವಾಗುತ್ತವೆ. ಎರಡೂ ಪ್ರಕರಣಗಳಲ್ಲಿಯೂ, ಸ್ವತ: ನೀವೇ ಬೆಂಕಿಯ ಅನಾಹುತಕ್ಕೀಡಾಗುವ ಸಾಧ್ಯತೆ ಇರುತ್ತದೆ ಇಲ್ಲವೇ ಇವು ಒಂದು ಸಣ್ಣ ಆಹಾರ ಸ್ಫೋಟಕ್ಕೂ ದಾರಿಮಾಡಿಕೊಟ್ಟಾವು.

ನಿಮ್ಮ ಮೈಕ್ರೋವೇವ್ ಗೆ ವಯಸ್ಸಾದಂತೆ ಕಂಡುಬರುತ್ತಿದೆ:

ನಿಮ್ಮ ಮೈಕ್ರೋವೇವ್ ಗೆ ವಯಸ್ಸಾದಂತೆ ಕಂಡುಬರುತ್ತಿದೆ:

ಮೈಕ್ರೋವೇವ್ ಗಳ ಆಯುರ್ಮಾನವು ಏಳರಿಂದ ಹತ್ತು ವರ್ಷಗಳದ್ದಾಗಿರುತ್ತವೆ. ಹೀಗಾಗಿ, ಒಂದು ವೇಳೆ ನಿಮ್ಮ ಮೈಕ್ರೋವೇವ್ ಕೂಡಾ ತನ್ನ ಅಂತ್ಯಕಾಲವನ್ನು ಸಮೀಪಿಸುತ್ತಿದ್ದಲ್ಲಿ, ಅದನ್ನು ಬದಲಾಯಿಸಲು ಇದು ಸಕಾಲವಾಗಿರಬಹುದು.

ಹಳೆಯ ಮೈಕ್ರೋವೇವ್ ಅನ್ನು, ಅದರಲ್ಲೂ ವಿಶೇಷವಾಗಿ, ನಾವು ಈ ಮೇಲೆ ವಿವರಿಸಿದ ಯಾವುದಾದರೊಂದು ವ್ಯತ್ಯಯವನ್ನು ಅದು ಹೊರಗೆಡಹುತ್ತಿದ್ದಲ್ಲಿ, ಖಂಡಿತವಾಗಿಯೂ ಅದರ ಬಳಕೆಯನ್ನು ಮುಂದುವರೆಸುತ್ತಾ ಗಂಭೀರ ಅನಾಹುತವನ್ನು ಆಮಂತ್ರಿಸುವುದು ಸರಿಯಲ್ಲ.

ಅದೃಷ್ಟವಶಾತ್, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿನೂತನ ಮೈಕ್ರೋವೇವ್ ಗಳು ಸಾಪೇಕ್ಷವಾಗಿ ಅಗ್ಗದ ದರದವುಗಳೇ ಆಗಿರುತ್ತವೆ ಹಾಗೂ ಜೊತೆಗೆ, ಹೇರಳವಾಗಿ ಲಭ್ಯವಿರುವ ಬ್ರ್ಯಾಂಡ್ ಗಳಲ್ಲಿ ನಿಮಗೆ ಸೂಕ್ತವೆನಿಸಿದ್ದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವೂ ನಿಮ್ಮದಾಗಿರುತ್ತದೆ. ನಿಮ್ಮ ಮೈಕ್ರೋವೇವ್ ಅನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಇದು ಸಕಾಲವಾಗಿದ್ದಲ್ಲಿ, ಕನಿಷ್ಟ 10 ವರ್ಷಗಳವರೆಗಾದರೂ ಬಾಳಿಕೆ ಬರುವ, ನಾವು ಈ ಕೆಳಗೆ ಸೂಚಿಸಿರುವ ಉಪಕರಣಗಳನ್ನೊಮ್ಮೆ ಪರಿಶೀಲಿಸಿರಿ.

Read more about: microwave
English summary

microwave problem you should not neglect

Microwave cooking is very easy. But If you are using microwave please don't neglect this signs.
X
Desktop Bottom Promotion