For Quick Alerts
ALLOW NOTIFICATIONS  
For Daily Alerts

ವೀಡಿಯೋ: ಮನೆಯಲ್ಲಿಯೇ ಮಾಸ್ಕ್‌ ತಯಾರಿಸುವುದು ಹೇಗೆ?

|

ಕೊರೊನಾ ವೈರಸ್ ಎಂಬ ಸೋಂಕು ದಿನದಿಂದ ದಿನ ಹೆಚ್ಚುತ್ತಿರುವಾಗ ನಾವು ನಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಸ್ವಲ್ಪ ಯಾಮಾರಿದರೂ ತೊಂದರೆ ತಪ್ಪಿದ್ದಲ್ಲ. ಮನೆಯಲ್ಲಿ ಒಬ್ಬನಿಗೆ ಬಂದರೆ ಆ ಮನೆಯ ಸದಸ್ಯರು ಹಾಗೂ ಆತನ ಸಂಪರ್ಕದಲ್ಲಿರುವವರಿವಗೆ ಅಪಾಯ ಇರುವುದರಿಂದ ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವುದು ಪರಿಣಾಮಕಾರಿ ವಿಶ್ವ ಆರೋಗ್ಯ ತಜ್ಞರು ಹೇಳಿದ್ದಾರೆ.

Don't Do These Things While Making A Mask At Home And Wearing It | Boldsky Kannada
How To Make Face Mask At Home In Kannada

ಕೆಲವು ದೇಶಗಳಲ್ಲಿ ಈಗಾಗಲೇ ಮಾಸ್ಕ್‌ಗಳಿಗೆ ಕೊರತೆ ಉಂಟಾಗಿದೆ. ಕೊರೊನಾ ಸೋಂಕಿತರನ್ನು ಚಿಕಿತ್ಸೆ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೇ ಮಾಸ್ಕ್‌ ಕೊರತೆ ಉಂಟಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಸ್ಪತ್ರೆಗಳಲ್ಲಿ ಬಳಸುವ ಸರ್ಜಿಕಲ್ ಮಾಸ್ಕ್‌ಗಳನ್ನು ಜನರು ಕೊಂಡು ಬಳಸುತ್ತಿರುವುದು.

ಮಾಸ್ಕ್ ಗಿಫ್ಟ್‌ ನೀಡಿ ಎಂದಿದ್ದೇಕೆ ಮೋದಿ?

ಮಾಸ್ಕ್ ಗಿಫ್ಟ್‌ ನೀಡಿ ಎಂದಿದ್ದೇಕೆ ಮೋದಿ?

ಭಾರತದಲ್ಲಿ ಮಾಸ್ಕ್‌ಗಳಿಗೆ ಕೊರತೆ ಉಂಟಾಗದಿರಲು ಪ್ರಧಾನಿ ಮೋದಿಯೇ ಉತ್ತಮ ಪರಿಹಾರ ಸೂಚಿಸಿದ್ದಾರೆ. ಅದೇನೆಂದರೆ ನಿತ್ಯ ಬಳಕೆಗಾಗಿ ಮನೆಯಲ್ಲಿಯೇ ಮಾಸ್ಕ್‌ ತಯಾರಿಸಿ ಎಂಬ ಸಲಹೆ ನೀಡಿದ್ದಾರೆ. ಜೊತೆಗೆ 5 ಜನಕ್ಕೆ ಮಾಸ್ಕ್‌ ಗಿಫ್ಟ್‌ ಮಾಡಿ ಎಂದಿದ್ದಾರೆ. ಹೀಗೆ ಮಾಡುವುದರಿಂದ ಜನರು ಮೆಡಿಕಲ್‌ ಶಾಪ್‌ಗಳಿಗೆ ಮುಗಿ ಬೀಳುವುದನ್ನು ತಪ್ಪಿಸಬಹುದು ಹಾಗೂ ಮಾಸ್ಕ್‌ಗಳ ಕೊರತೆ ಉಂಟಾಗುವುದಿಲ್ಲ, ಜನರು ಕೂಡ ಮಾಸ್ಕ್‌ ಧರಿಸುವ ಮೂಲಕ ಕೊರೊನಾವೈರಸ್ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

ಭಾರತದ ಬಹುತೇಕ ಮನೆಗಳಲ್ಲಿ ಟೈಲರಿಂಗ್‌ ಮೆಷಿನ್‌ಗಳು ಇದ್ದೇ ಇರುತ್ತದೆ. ತಮ್ಮ ಮನೆಯ ಬಟ್ಟೆಗಳ ಸಣ್ಣ-ಪುಟ್ಟ ಸ್ಟಿಚ್ಚಿಂಗ್‌ ಮಾಡಲು ಕೆಲವರು ಮೆಷಿನ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಮಾಸ್ಕ್‌ ಸ್ಟಿಚ್‌ ಮಾಡಬಹುದು ಹಾಗೂ ಸ್ಟಿಚ್ ಮಾಡಿದವರು 5 ಜನರಿಗೆ ಹಂಚಿದರೆ ಮೆಷಿನ್‌ ಇಲ್ಲದ ಮನೆಯವರಿಗೂ ಮಾಸ್ಕ್‌ ದೊರೆತಂದಾಗುವುದು, ಐಡಿಯಾ ಸೂಪರ್‌ ಆಗಿದೆ ಅಲ್ವಾ?

ಇನ್ನು ಮಾಸ್ಕ್‌ ಸ್ಟಿಚ್‌ ಮಾಡಲು ಟೈಲರಿಂಗ್‌ ಗೊತ್ತಿರಲೇಬೇಕು ಎಂದೇನು ಇಲ್ಲ, ಟೈಲರಿಂಗ್‌ ಮೆಷಿನ್‌ನ ಸ್ವಲ್ಪ ಬೇಸಿಕ್ ಗೊತ್ತಿದ್ದರೆ ಸಾಕು. ಮಾಸ್ಕ್‌ ಹೊಲಿಯುವುದು ಹೇಗೆ ಎಂದು ಕರ್ನಾಟಕ ಪೊಲೀಸ್ ವೀಡಿಯೋ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮಾಸ್ಕ್‌ ಸ್ಟಿಚ್‌ಗೆ ಯಾವ ಬಟ್ಟೆ ಒಳ್ಳೆಯದು?

ಮಾಸ್ಕ್‌ ಸ್ಟಿಚ್‌ಗೆ ಯಾವ ಬಟ್ಟೆ ಒಳ್ಳೆಯದು?

ಮಾಸ್ಕ್‌ ಧರಿಸಿಲು ಶುದ್ಧ ಹತ್ತಿಯ ಬಟ್ಟೆಗಳನ್ನು ಬಳಸಿ. ಪಾಲಿಸ್ಟಾರ್‌, ನೈಲಾನ್‌ ಬಳಸಿದರೆ ಸೆಕೆಯಾಗುವುದು. ಹತ್ತಿಯ ಬಟ್ಟೆಯಾದರೆ ಬೆಳಕನ್ನು ಬೇಗ ಹೀರುವುದಿಲ್ಲ, ಧರಿಸಿದಾಗ ಕಿರಿಕಿರಿಯಾಗುವುದಿಲ್ಲ, ಬೆಳಕನ್ನು ಬೇಗ ಹೀರಿಕೊಳ್ಳುವುದರಿಂದ ಹತ್ತಿಯ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

ಇನ್ನು ಮಾಸ್ಕ್‌ಗೆ ಯಾವ ಬಣ್ಣದ ಬಟ್ಟೆ ಒಳ್ಳೆಯದು?

ಇನ್ನು ಮಾಸ್ಕ್‌ಗೆ ಯಾವ ಬಣ್ಣದ ಬಟ್ಟೆ ಒಳ್ಳೆಯದು?

ಮಾಸ್ಕ್‌ ತಯಾರಿಸಲು ಇಂಥದ್ದೇ ಬಣ್ಣದ್ದು ಬಟ್ಟೆ ಅಂತೇನು ಇಲ್ಲ, ಯಾವ ಬಣ್ಣದ್ದು ಬೇಕಾದರೂ ಬಳಸಿ. ಬಿಳಿ ಬಣ್ಣದಾಗಿದ್ದರೆ ಅದರ ಸ್ವಚ್ಛತೆ ಕಣ್ಣಿಗೆ ಕಾಣುವುದು, ಆದ್ದರಿಂದ ಈ ಬಣ್ಣ ಸೂಕ್ತ.

ಮನೆಯಲ್ಲಿಯೇ ಮಾಡುವ ಮಾಸ್ಕ್ ಯಾಕೆ ಒಳ್ಳೆಯದು?

ಮನೆಯಲ್ಲಿಯೇ ಮಾಡುವ ಮಾಸ್ಕ್ ಯಾಕೆ ಒಳ್ಳೆಯದು?

ಆರೋಗ್ಯವಂತರು ಮನೆಯಲ್ಲಿಯೇ ಮಾಡಿದ ಮಾಸ್ಕ್‌ ಧರಿಸುವುದು ಒಳ್ಳೆಯದು. ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ ಹಾಗೂ ಎರಡು ಮಾಸ್ಕ್ ಇದ್ದರೆ ಒಂದು ಒಗೆಯುವಾಗ ಒಂದು ಬಳಸುವುದರಿಂದ ಸ್ವಚ್ಛವಾಗಿ ಇಡಬಹುದು.

ಮಾಸ್ಕ್‌ ತಯಾರಿಸುವುದು ಹೇಗೆ?

ಮಾಸ್ಕ್‌ ತಯಾರಿಸುವುದು ಹೇಗೆ?

ಮಾಸ್ಕ್‌ ತಯಾರಿಸಲು ದೊಡ್ಡ ಕರ್ಚೀಫ್ ಅಷ್ಟು ಅಗಲವಾಗಿರುವ ಬಟ್ಟೆ ಸಾಕು, ಅದನ್ನು ಕತ್ತರಿಸಿ ಡಬಲ್ ಲೇಯರ್‌ ಆಗಿ ಹೊಲಿದು ಅದಕ್ಕೆ ಕಿವಿಗೆ ಹಾಕಿಕೊಳ್ಳಲು ದಾರವಿಟ್ಟರೆ ಸಾಕು.

ಮಾಸ್ಕ್‌ ತಯಾರಿಸುವಾಗ ಮಾಸ್ಕ್ ಗಾತ್ರ ಒಬ್ಬರ ಮುಖಕ್ಕೆ ಫಿಟ್‌ ಆಗುವಂತೆ ಇರಲಿ, ಮಾಸ್ಕ್ ಸಡಿಲವಿರಬಾರದು ಹಾಗೂ ಮೂಗು, ಬಾಯಿ, ಕೆನ್ನೆ ಮುಚ್ಚುವಂತೆ ಇರಲಿ.

English summary

How To Make Face Mask At Home In Kannada

PM Midi has suggested preparing face mask at home only, here are video how to prepare face mask at home, watch it.
X
Desktop Bottom Promotion