For Quick Alerts
ALLOW NOTIFICATIONS  
For Daily Alerts

ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?

|

ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಗೆ ತುಂಬಾನೇ ಮಹತ್ವವಿದೆ, ಇದು ಶುಭ ಸಂಗತಿಯನ್ನು ಸೂಚಿಸುವ ಲಕ್ಷಣವಾಗಿದೆ. ಈ ಚಿಹ್ನೆ ಮನೆಯಲ್ಲಿದ್ದರೆ ಮನೆಗೆ ಶುಭ ಎಂದು ಹೇಳಲಾಗುವುದು. ಇದನ್ನು ಶ್ರೀ ವಿಘ್ನ ನಿವಾರಕ ಗಣಪತಿಯ ಚಿಹ್ನೆ ಎಂದು ಹೇಳಲಾಗುವುದು.

Swastik Symbol At Home

ಮನೆಯಲ್ಲಿ ದೇವರಿಗೆ ಕಳಸ ಇಡುವಾಗ ಸ್ವಸ್ತಿಕ ಚಿಹ್ನೆ ಬರೆದು ಇಡುತ್ತೇವೆ, ಪವಿತ್ರವಾದ ಸ್ವಸ್ತಿಕದಲ್ಲಿ ದೇವತೆಗಳು ನೆಲೆಸುತ್ತಾರೆ. ಸ್ವಿಸ್ತಿಕ ಚಿಹ್ನೆಯ ಎಡ ಭಾಗವನ್ನು ಗಂ ಬೀಜ ಮಂತ್ರವೆಂದು ಹೇಳಲಾಗುವುದು. ಸ್ವಸ್ತಿಕ ಚಿಹ್ನೆ ಬಿಡಿಸುವಾಗ ಅದರ ನಾಲ್ಕು ದಿಕ್ಕುಗಳಲ್ಲಿ ಇಡುವ ಚುಕ್ಕಿ ಮಾತೆ ಗೌರಿ, ಭೂ ತಾಯಿ, ಕೂರ್ಮಾ ಹಾಗೂ ದೇವಾನುದೇವತೆಗಳ ಆವಾಸಸ್ಥಾನವೆಂದು ಪರಿಗಣಿಸಲಾಗಿದೆ.

ಸ್ವಸ್ತಿಕ ಚಿಹ್ನೆಯನ್ನು ಮನೆಯಲ್ಲಿ ಎಲ್ಲೆಲ್ಲಿ ಹಾಕಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

 ಸ್ವಸ್ತಿಕವನ್ನು ಮನೆಯ ಮುಂಭಾಗದಲ್ಲಿ ಹಾಕಿದರೆ

ಸ್ವಸ್ತಿಕವನ್ನು ಮನೆಯ ಮುಂಭಾಗದಲ್ಲಿ ಹಾಕಿದರೆ

ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಮುಂಭಾಗದ ಎರಡೂ ಬದಿಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕಿದರೆ ಒಳ್ಳೆಯದು. ಈ ರೀತಿ ಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುವುದು. ಮನೆಯ ಮುಂಭಾಗದಲ್ಲಿ ಸ್ವಸ್ತಿಕ ಚಿಹ್ನೆ ಬಿಡಿಸುವುದರಿಂದ ಮನೆಗೆ ಶುಭವಾಗುವುದು. ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚುವುದು.

 ಸಗಣಿಯಿಂದ ಮನೆಯ ಮಧ್ಯಭಾಗದಲ್ಲಿ ಸ್ವಸ್ತಿಕ ಚಿಹ್ನೆ ಬರೆದರೆ

ಸಗಣಿಯಿಂದ ಮನೆಯ ಮಧ್ಯಭಾಗದಲ್ಲಿ ಸ್ವಸ್ತಿಕ ಚಿಹ್ನೆ ಬರೆದರೆ

ಮನೆಯ ಮಧ್ಯಭಾಗದಲ್ಲಿ ಸಗಣಿಯಿಂದ ಸ್ವಸ್ತಿಕ ಚಿಹ್ನೆ ಬರೆದರೆ ತುಂಬಾ ಶುಭ.ವಾಸ್ತು ಶಾಸ್ತ್ರದ ಪ್ರಕಾರ ಪಿತೃಪಕ್ಷದ ಸಮಯದಲ್ಲಿ ಈ ರೀತಿ ಬರೆದರೆ ಪೂರ್ವಜರ ಆಶೀರ್ವಾದ ಸಿಗುವುದು. ಅಲ್ಲದೆ ಈ ರೀತಿ ಸ್ವಸ್ತಿಕ ಚಿಹ್ನೆ ಬರೆಯುವುದರಿಂದ ಮನೆಯಲ್ಲಿರುವ ನೆಗೆಟಿವ್‌ ಎನರ್ಜಿ ಹೋಗಲಾಡಿಸಲು ಸಹಕಾರಿ.

 ಮನೆಯ ಪೂಜಾ ಸ್ಥಳದಲ್ಲಿ ಸ್ವಸ್ತಿಕ ಇಟ್ಟರೆ

ಮನೆಯ ಪೂಜಾ ಸ್ಥಳದಲ್ಲಿ ಸ್ವಸ್ತಿಕ ಇಟ್ಟರೆ

ಮನೆಯ ಪೂಜಾ ಕೋಣೆಯಲ್ಲಿ ಸ್ವಸ್ತಿಕ ಚಿಹ್ನೆ ಬಿಡಿಸಿದರೆ ತುಂಬಾನೇ ಶುಭ. ದೇವರ ಕೋಣೆಯಲ್ಲಿ ಸ್ವಸ್ತಿಕ ಇಡುವುದರಿಂದ ದೇವರ ಕೃಪೆಯಿಂದ ತುಂಬಾನೇ ಒಳಿತಾಗುವುದು.

ಇನ್ನು ದೇವರಿಗೆ ಕಳಸ ಇಡುವಾಗ ಸ್ವಸ್ತಿಕ ಚಿಹ್ನೆ ಬರೆದ ಬಳಿಕವಷ್ಟೇ ಇಡಬೇಕು.

ಮನೆಯ ಕಬೋರ್ಡ್‌ನಲ್ಲಿ ಸ್ವಸ್ತಿಕ ಚಿಹ್ನೆ

ಮನೆಯ ಕಬೋರ್ಡ್‌ನಲ್ಲಿ ಸ್ವಸ್ತಿಕ ಚಿಹ್ನೆ

ಮನೆಯ ಕಬೋರ್ಡ್‌ನಲ್ಲಿ ಸ್ವಸ್ತಿಕ ಚಿಹ್ನೆ ಇಡುವುದು ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ. ದೀಪಾವಳಿಯಲ್ಲಿ ಕಬೋರ್ಡ್‌ನಲ್ಲಿ ಸ್ವಸ್ತಿಕ ಚಿಹ್ನೆ ಬರೆಯುವುದರಿಂದ ಸಂಪತ್ತು ವೃದ್ಧಿಸಲಿದೆ ಎಂಬುವುದು ನಂಬಿಕೆ.

ಮನೆಯ ಮುಂಬಾಗಿಲಿನ ಎರಡೂ ಬದಿಯಲ್ಲಿ ಸ್ವಸ್ತಿಕ ಚಿಹ್ನೆ

ಮನೆಯ ಮುಂಬಾಗಿಲಿನ ಎರಡೂ ಬದಿಯಲ್ಲಿ ಸ್ವಸ್ತಿಕ ಚಿಹ್ನೆ

ಬೆಳಗ್ಗೆ ಎದ್ದು ಮನೆಯನ್ನು ಶುದ್ಧ ಮಾಡಿದ ಬಳಿಕ ಮನೆಯ ಎರಡೂ ಬದಿಯಲ್ಲಿ ಸ್ವಸ್ತಿಕ ಚಿಹ್ನೆ ಹಾಕಿದರೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುವುದು. ಮನೆ ಬಾಗಿಲಿಗೆ ಸ್ವಸ್ತಿಕ ಚಿಹ್ನೆ ಹಾಕುವುದರಿಂದ ನಕಾರಾತ್ಮಕ ಶಕ್ತಿ ಹೋಗಲಾಡಿಸಬಹುದು

* ಸ್ವಸ್ತಿಕ ಚಿಹ್ನೆ ಮನೆಗೆ ಧನಾತ್ಮಕ ಶಕ್ತಿಯನ್ನು ತುಂಬುವುದು.

* ಸ್ವಸ್ತಿಕ ಚಿಹ್ನೆ ಮನೆ ಮುಂದುಗಡೆ ಇದ್ದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಇರುತ್ತದೆ.

* ಈ ಸ್ವಸ್ತಿಕ ಚಿಹ್ನೆ ಆರ್ಥಿಕ ಸಂಕಷ್ಟ ಹೋಗಲಾಡಿಸುತ್ತೆ

* ವ್ಯಕ್ತಿಯ ಏಳಿಗೆಗೆ ಧನಾತ್ಮಕ ಶಕ್ತಿ ತುಂಬುವುದು.

English summary

How and Where to Place the Swastik Symbol At Home In Kannada

Vastu Tips: How and Where to Place the Swastik Symbol At Home, read on...
Story first published: Wednesday, January 25, 2023, 11:18 [IST]
X
Desktop Bottom Promotion